5 ನಿಮಿಷದಲ್ಲಿ ಪಲಾವ್ ಮಾಡುವ ಅದ್ಬುತ ರೆಸಿಪಿ ತುಂಬಾ ಚೆನ್ನಾಗಿದೆ ಎಲ್ಲರೂ ಟ್ರೈ ಮಾಡಿ, ಬ್ಯಾಚುಲರ್ಸ್ಗೆ ಪರ್ಫೆಕ್ಟ್

5 ನಿಮಿಷದಲ್ಲಿ ಪಲಾವ್ ಮಾಡುವ ಅದ್ಬುತ ರೆಸಿಪಿ ತುಂಬಾ ಚೆನ್ನಾಗಿದೆ ಎಲ್ಲರೂ ಟ್ರೈ ಮಾಡಿ, ಬ್ಯಾಚುಲರ್ಸ್ಗೆ ಪರ್ಫೆಕ್ಟ್

ನಮಸ್ಕಾರ ಸ್ನೇಹಿತರೇ, ನಮ್ಮ ಭಾರತ ದೇಶದಲ್ಲಿ ಪಲಾವ್ ಮಾಡುವ ರೆಸಿಪಿ ಎಲ್ಲಾ ಕಡೆಯಲ್ಲೂ ತುಂಬಾ ಫೇಮಸ್ ಮತ್ತು ಎಲ್ಲರೂ ತುಂಬಾ ಇಷ್ಟಪಡುತ್ತಾರೆ ಈಗ ನಾವು ಈ ವೆಜಿಟೇಬಲ್ ಪಲಾವ್ ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ ಬನ್ನಿ, ಮತ್ತು ಇದಕ್ಕೆ ಬೇಕಾಗಿರೋ ಪದಾರ್ಥವನ್ನು ನೋಡೋಣ ಬನ್ನಿ, ಮೊದಲನೆಯದಾಗಿ ಮಸಾಲೆ ಮಾಡುವುದಕ್ಕೆ 6 ಹಸಿಮೆಣಸಿನಕಾಯಿ ಒಂದು ಬೆಳ್ಳುಳ್ಳಿ, ಎರಡಿಂಚು ಶುಂಠಿ, ಹಾಗೆ ಒಂದು ಕಪ್ ನಷ್ಟು ಕೊತ್ತಂಬರಿ ಮತ್ತು ಪುದಿನ ಸೊಪ್ಪು. ಹಾಗೆ ತರಕಾರಿಗಳು ಒಂದು ಈರುಳ್ಳಿಯನ್ನು ಕಟ್ ಮಾಡಿ ಇಟ್ಟುಕೊಳ್ಳಿ ಹಾಗೆ ಒಂದು ನೂಕಲ್, ಒಂದು ಸ್ವಲ್ಪ ಬಟಾಣಿ ಮತ್ತು ಒಂದು ಟಮೊಟೊ, ಹಾಗೆ 2 ಕ್ಯಾರೆಟ್ ಮತ್ತು ಒಂದಷ್ಟು, ಬೀನ್ಸ್ ಎಲ್ಲವನ್ನು ಚಿಕ್ಕದಾಗಿ ಕಟ್ ಮಾಡಿಕೊಳ್ಳಬೇಕು.

ಹಾಗೆಯೇ 2 ಗ್ಲಾಸ್ ಅಷ್ಟು ಸೋನಾ ಮಸೂರಿ ಅಕ್ಕಿ/ ಅಥವಾ ಸಾಮನ್ಯ ಅಕ್ಕಿಯಾದರೂ ಪರವಾಗಿಲ್ಲ ತಗೋಬೇಕು, ರುಚಿಗೆ ತಕ್ಕಷ್ಟು ಉಪ್ಪು ಹಾಗೆ ಒಂದು ಅರ್ಧ ನಿಂಬೆಹಣ್ಣು, ಪಲಾವ್ ಎಲೆ, ಮರಾಠಿ ಮೊಗ್ಗು ಮತ್ತು ಒಗ್ಗರಣೆಗೆ ಎಣ್ಣೆ. ಇಷ್ಟು ವೆಜಿಟೇಬಲ್ ಪಲಾವ್ ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು. ಒಂದು ಮಿಕ್ಸಿ ಜಾರಿಗೆ ಶುಂಠಿ,ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಮತ್ತು ಪುದಿನಾ ಹಾಕಿ ಚೆನ್ನಾಗಿ ಗ್ರೌಂಡ್ ಮಾಡಿಕೊಳ್ಳಿ. ಈಗ ಮಸಾಲೆ ರೆಡಿಯಾಗಿದೆ. ಒಂದು ಕುಕ್ಕರಿಗೆ ತೆಗೆದಿಟ್ಟಿದ್ದ 2 ಟೇಬಲ್ ಸ್ಪೂನ್ ನಷ್ಟು ಎಣ್ಣೆ ಹಾಕಿ, ನಂತರ ಚೆಕ್ಕೆ, ಏಲಕ್ಕಿ, ಪಲಾವ್ ಎಲೆ ಎಲ್ಲವನ್ನು ಹಾಕಿಕೊಳ್ಳಿ.

ಚೆನ್ನಾಗಿ ಫ್ರೈ ಆದ ನಂತರ ಕಟ್ ಮಾಡಿ ಇಟ್ಟಿದ್ದ ಈರುಳ್ಳಿಯನ್ನು ಹಾಕಿ, ನಂತರ ಅದಕ್ಕೆ ಮಾಡಿದ್ದ ಮಸಾಲೆಯನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿದನಂತರ ಕ’ಟ್ ಮಾಡಿ ಇಟ್ಟಿದ್ದ ತರಕಾರಿಗಳನ್ನು ಹಾಕಿ, ಕ್ಯಾರೆಟ್, ಬೀನ್ಸ್ ನಿಮಗೆ ಎಷ್ಟು ಬೇಕೋ ಅಷ್ಟು ಹಾಕಿಕೊಳ್ಳಬಹುದು, ಹಾಗೆ ಟೊಮೊಟೊ ಒಂದು ಹಾಕಿ ಸಾಕು. ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿದ ಬಳಿಕ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರನ್ನು ಹಾಕಿ ಬಳಿಕ ನೆನೆಸಿಟ್ಟ ಅಕ್ಕಿಯನ್ನು ಸೇರಿಸಬೇಕು. ನೆನಪಿರಲಿ 2 ಗ್ಲಾಸ್ ಅಕ್ಕಿಗೆ 4 ಗ್ಲಾಸ್ ನೀರು ಹಾಕಿಕೊಳ್ಳಬೇಕು. ಮಸಾಲೆ ಕುದಿಯಲು ಶುರುವಾದ ನಂತರ ಮುಚ್ಚಳವನ್ನು ಮುಚ್ಚಬೇಕು.

ನಂತರ ಎರಡು ವಿಜಿಲ್ ಬಂದನಂತರ ರುಚಿರುಚಿಯಾದ ವೆಜಿಟೇಬಲ್ ಪಲಾವ್ ತಿನ್ನಲು ಸಿದ್ಧವಾಗುತ್ತದೆ‌. ಇದನ್ನು ನೀವು ಬೆಳಗ್ಗೆ ನಾಷ್ಟಕ್ಕೆ ಸುಲಭವಾಗಿ ಮಾಡಿಕೊಳ್ಳಬಹುದು, ಹಾಗೆ ಇದನ್ನು ಮೊಸರುಬಜ್ಜಿಯ ಜೊತೆ ತಿಂದರೆ ತುಂಬಾನೇ ಟೇಸ್ಟಿ ಯಾಗಿರುತ್ತದೆ ಹಾಗೂ ಹೊಟ್ಟೆ ತುಂಬಾ ತಿನ್ನಬಹುದು, ಮತ್ಯಾಕೆ ತಡ ಖಂಡಿತ ಈ ರೆಸಿಪಿಯನ್ನು ಒಮ್ಮೆ ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನೋಡಿ.