ಈ ಐಪಿಎಲ್ ನ ಶ್ರೇಷ್ಠ ತಂಡ ಘೋಷಿಸಿದ ಬ್ರಾಡ್ ಹಾಗ್ ! ಆಯ್ಕೆಯಾದ ಆಟಗಾರರು ಯಾರ್ಯಾರು ಗೊತ್ತಾ??

ಈ ಐಪಿಎಲ್ ನ ಶ್ರೇಷ್ಠ ತಂಡ ಘೋಷಿಸಿದ ಬ್ರಾಡ್ ಹಾಗ್ ! ಆಯ್ಕೆಯಾದ ಆಟಗಾರರು ಯಾರ್ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಆಸ್ಟ್ರೇಲಿಯ ತಂಡದ ಖ್ಯಾತ ಮಾಜಿ ಬೌಲರ್ ಬ್ರಾಡ್ ಹಾಗ್ ಅವರು ಇದೀಗ ಐಪಿಎಲ್ ಟೂರ್ನಿಯ ಕುರಿತು ಮಾತನಾಡಿದ್ದು ಲೀಗ್ ಹಂತಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಆಟಗಾರರನ್ನು ಗಣನೆಗೆ ತೆಗೆದುಕೊಂಡು ಐಪಿಎಲ್ ಟೂರ್ನಿಯ ನಿಯಮಗಳನ್ನು ಪಾಲಿಸಿ ಅಂದರೇ ಒಂದು ತಂಡದಲ್ಲಿ ನಾಲ್ಕು ವಿದೇಶಿಗರಿಗೆ ಮಾತ್ರ ಅವಕಾಶ ನೀಡಿ ಈ ಬಾರಿಯ ಐಪಿಎಲ್ ಟೂರ್ನಿಯ ಶ್ರೇಷ್ಠ ತಂಡವನ್ನು ಆಯ್ಕೆ ಮಾಡಿದ್ದಾರೆ. ಈ ತಂಡದಲ್ಲಿ ಅಚ್ಚರಿಯೆಂಬಂತೆ ಕೆಲವೊಂದು ಆಟಗಾರರು ಸ್ಥಾನ ಪಡೆದಿಲ್ಲ, ಇನ್ನು ಕೆಲವು ಆಟಗಾರರು ಅಚ್ಚರಿಯೆಂಬಂತೆ ಸ್ಥಾನ ಪಡೆದಿದ್ದು ನೆಟ್ಟಿಗರು ಬ್ರಾಡ್ ಹಾಗ್ ರವರ ತಂಡದ ಪರ ಹಾಗೂ ವಿ’ರೋಧದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಯಲ್ಲಿ ತೊಡಗಿಕೊಂಡಿದ್ದಾರೆ. ಬನ್ನಿ ಇಂದು ಬಡವರು ಆಯ್ಕೆ ಮಾಡಿರುವ ತಂಡ ಹೇಗಿದೆ ಎಂಬುದನ್ನು ನೋಡೋಣ.

ಎಲ್ಲಾ ತಂಡಗಳ ಆಟಗಾರರನ್ನು ಗಣನೆಗೆ ತೆಗೆದುಕೊಂಡು ಶ್ರೇಷ್ಠ ತಂಡ ರಚನೆ ಮಾಡಿರುವ ಬ್ರಾಡ್ ಹಾಗ್ ರವರು ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಶಿಖರ್ ಧವನ್ ಹಾಗೂ ಕಿಂಗ್ಸ್ ಇಲೆವೆನ್ ತಂಡದ ಮತ್ತೊಬ್ಬ ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ರವರನ್ನು ಆರಂಭಿಕ ರನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ ಕಿಂಗ್ಸ್ ಇಲೆವೆನ್ ತಂಡದ ನಾಯಕ ಹಾಗೂ ಆರಂಭಿಕ ಆಟಗಾರ ರನ್ಗಳ ಶಿಖರವನ್ನು ಗಳಿಸಿದ್ದರೂ ಕೂಡ ಅವರು ರಾಹುಲ್ ರವರಿಗೆ ಆರಂಭಿಕ ಸ್ಥಾನವನ್ನು ನೀಡಿಲ್ಲ. ಅಚ್ಚರಿಯೆಂಬಂತೆ ರಾಹುಲ್ ಅವರಿಗಿಂತ ಕಡಿಮೆ ರನ್ ಗಳಿಸಿರುವ ಆಟಗಾರರಿಗೆ ಮಣೆ ಹಾಕಲಾಗಿದೆ.

ಇನ್ನು ಮೂರನೇ ಕ್ರಮಾಂಕಕ್ಕೆ ಮುಂಬೈ ಇಂಡಿಯನ್ಸ್ ತಂಡದ ಸೂರ್ಯ ಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಿರುವ ಬ್ರಾಡ್ ಹಾಗ್ ರವರು ನಾಲ್ಕನೇ ಕ್ರಮಾಂಕಕ್ಕೆ ಆರ್ಸಿಬಿ ತಂಡದ ಆಪತ್ಬಾಂಧವ ನಮ್ಮ ನಿಮ್ಮೆಲ್ಲರ ನೆಚ್ಚಿನ ಎಬಿ ಡಿವಿಲಿಯರ್ಸ್ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಐದನೇ ಕ್ರಮಾಂಕಕ್ಕೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಮಾರ್ಗನ್ ರವರನ್ನು ಆಯ್ಕೆ ಮಾಡಿದ್ದು ಇಬ್ಬರು ವಿದೇಶಿ ಆಟಗಾರರು ನಾಲ್ಕು ಹಾಗೂ ಐದನೇ ಕ್ರಮಾಂಕದ ಆಟಗಾರರಾಗಿ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನು ಫಿನಿಶರ್ ಆಗಿ ಭಾರತ ಕ್ರಿಕೆಟ್ ತಂಡದ ಆಟಗಾರ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಫಿನಿಶರ್ ಹಾರ್ದಿಕ್ ಪಾಂಡ್ಯ ರವರು ಆಯ್ಕೆಯಾಗಿದ್ದಾರೆ. ಇನ್ನು ಮೊದಲನೇ ವೇಗದ ಬೌಲರ್ ಆಗಿ ರಾಜಸ್ಥಾನದ ಪರವಾಗಿ ಟೂರ್ನಿಯಲ್ಲಿ ಭಾಗವಹಿಸಿದ್ದ ಜೋಪ್ರಾ ರವರು ಸ್ಥಾನ ಪಡೆದುಕೊಂಡಿದ್ದು, ಮೊದಲನೇ ಸ್ಪಿನರ್ ಆಗಿ ಸನ್ ರೈಸರ್ಸ್ ತಂಡದ ರಶೀದ್ ಖಾನ್ ರವರು ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಮೂರು ಬೌಲರ್ಗಳಿಗೆ ಸ್ಥಾನ ನೀಡಿರುವ ಬ್ರಾಡ್ ಹಾಗ್ ಅವರು ಮತ್ತೊಬ್ಬ ಸ್ಪಿನ್ನರ್ ಆಗಿ ಯುಜ್ವೇಂದ್ರ ಚಾಹಲ್ ರವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ವೇಗದ ಬೌಲರ್ ಗಳ ಕೋಟಾದಲ್ಲಿ ಜಸ್ಟೀಸ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ರವರು ಸ್ಥಾನ ಪಡೆದುಕೊಂಡಿದ್ದು ಈ ತಂಡ ಇದೀಗ ಇಂಟರ್ನೆಟ್ ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.