ತಂದೆಯಾದ ಕೆಲವೇ ದಿನಗಳಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ನಟರಾಜನ್ ಗೆ ಗುಡ್ ನ್ಯೂಸ್ ! ವರುಣ್ ಗೆ ಕೈ ಕೊಟ್ಟ ಅದೃಷ್ಟ !

ತಂದೆಯಾದ ಕೆಲವೇ ದಿನಗಳಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ನಟರಾಜನ್ ಗೆ ಗುಡ್ ನ್ಯೂಸ್ ! ವರುಣ್ ಗೆ ಕೈ ಕೊಟ್ಟ ಅದೃಷ್ಟ !

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಐಪಿಎಲ್ ಟೂರ್ನಿಯ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಕ್ರಿಕೆಟ್ ತಂಡ ಏಕದಿನ, ಟಿ-ಟ್ವೆಂಟಿ ಹಾಗೂ ಟೆಸ್ಟ್ ಸರಣಿಗಳನ್ನು ಆಡಲಿದೆ. ಇತ್ತೀಚೆಗಷ್ಟೇ ಇದಕ್ಕಾಗಿ ಮೂರು ತಂಡಗಳನ್ನು ಕೂಡ ಆಯ್ಕೆ ಸಮಿತಿ ಆಯ್ಕೆ ಮಾಡಿ ಹಲವಾರು ಯುವ ಆಟಗಾರರಿಗೆ ಮಣೆಹಾಕಿತ್ತು. ಹೀಗೆ ಆಯ್ಕೆಯಾದ ತಂಡ ಹಲವಾರು ವಿವಾದಗಳನ್ನು ಸೃಷ್ಟಿಮಾಡಿತ್ತು. ಎಷ್ಟರಮಟ್ಟಿಗೆ ಎಂದರೇ ಕರ್ನಾಟಕದಿಂದ ಹಲವಾರು ಆಟಗಾರರು ಆಯ್ಕೆಯಾದ ತಕ್ಷಣ ರಾಜ್ಯಗಳ ನಡುವೆ ಲೆಕ್ಕಾಚಾರಗಳು ಆರಂಭವಾಗಿ ಕರ್ನಾಟಕದಿಂದ ಹೆಚ್ಚು ಜನ ಆಯ್ಕೆಯಾಗಿದ್ದಾರೆ. ಮುಂಬೈ ನಿಂದ ಯಾವೊಬ್ಬ ಆಟಗಾರನೂ ಆಯ್ಕೆಯಾಗಿಲ್ಲ ಎಂದೆಲ್ಲ ವಿಚಿತ್ರ ಮಾತುಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಜನರು ಅಭಿಪ್ರಾಯಗಳನ್ನು ಮಂಡಿಸಿದರು.

ಅಸಲಿಗೆ ಯಾವ ರಾಜ್ಯದ ಆಟಗಾರನಾಗಿರಲಿ ಭಾರತ ಕ್ರಿಕೆಟ್ ತಂಡವನ್ನು ಸೇರಿಕೊಳ್ಳುವುದು ರಾಜ್ಯದ ಆಟಗಾರನಾಗಿ ಅಲ್ಲ ಬದಲಾಗಿ ಭಾರತೀಯನಾಗಿ ಎಂಬುದನ್ನು ಜನ ಮರೆತುಬಿಟ್ಟಿದ್ದರು. ಇಷ್ಟೆಲ್ಲಾ ವಿವಾದಗಳನ್ನು ಸೃಷ್ಟಿಸಿದ ತಂಡದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್ರೌಂಡರ್ ಅದರಲ್ಲಿಯೂ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ವರುಣ್ ಚಕ್ರವರ್ತಿ ರವರು ಟಿ-ಟ್ವೆಂಟಿ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದು ನಿಜಕ್ಕೂ ವರುಣ್ ಚಕ್ರವರ್ತಿ ರವರ ಅದೃಷ್ಟ ಎಂದೇ ಭಾವಿಸಲಾಗಿತ್ತು. ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಹಾಗೂ ಐಪಿಎಲ್ ಟೂರ್ನಿಗಳಲ್ಲಿ ಆಫ್ ಸ್ಪಿನ್ ಹಾಗೂ ಲೆಗ್ ಸ್ಪಿನ್ ಎರಡು ಶೈಲಿಯಲ್ಲಿ ಬೌಲಿಂಗ್ ಮಾಡಬಲ್ಲ ಆಟಗಾರನಾಗಿದ್ದ ಕಾರಣ ವರುಣ್ ಚಕ್ರವರ್ತಿ ರವರು ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ವಿಪರ್ಯಾಸವೆಂಬಂತೆ ಇದೀಗ ಸುದ್ದಿ ತಡವಾಗಿ ಬೆಳಕಿಗೆ ಬಂದಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಟೂರ್ನಿಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ ವರುಣ್ ಚಕ್ರವರ್ತಿ ರವರು ಇಂಜುರಿ ಸಮಸ್ಯೆಗೆ ಒಳಗಾಗಿದ್ದಾರೆ.

ಇದರ ಕುರಿತು ಇದೀಗ ಬಿಸಿಸಿಐ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು ವರುಣ್ ಚಕ್ರವರ್ತಿ ರವರು ಇಂಜುರಿಯಿಂದ ಬಳಲುತ್ತಿರುವುದನ್ನು ಖಚಿತಪಡಿಸಿಕೊಂಡ ನಂತರ ಟಿ ಟ್ವೆಂಟಿ ತಂಡದಲ್ಲಿ ವರುಣ್ ಚಕ್ರವರ್ತಿ ರವರಿಗೆ ಬದಲಿ ಆಟಗಾರನಾಗಿ ಈ ಬಾರಿಯ ಐಪಿಎಲ್ ನಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಗಳಲ್ಲಿ ಒಬ್ಬರಂತೆ ಅತ್ಯುತ್ತಮವಾಗಿ ಕೊನೆಯ ವರ್ಗಗಳಲ್ಲಿ ಬೌಲಿಂಗ್ ಮಾಡಿ ಸೈ ಎನಿಸಿಕೊಂಡಿದ್ದ ಹಾಗೂ ಕೆಲವೇ ಕೆಲವು ದಿನಗಳ ಹಿಂದಷ್ಟೇ ತಂದೆಯಾಗಿ ಮನೆಗೆ ಹೊಸ ಅತಿಥಿಯನ್ನು ಆಗಮಿಸಿದ್ದ ನಟರಾಜನ್ ಅವರು ಆಯ್ಕೆಯಾಗಿದ್ದಾರೆ. ಇಂದು ಇವರು ಅನೇಕ ವರ್ಷಗಳ ಕಾಲ ಪಟ್ಟ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಹೇಳುತ್ತಿದ್ದಾರೆ. ಏನೇ ಆಗಲಿ ಅಥವಾ ಯಾವುದೇ ಆಟಗಾರನಾಗಲಿ ಭಾರತ ಕ್ರಿಕೆಟ್ ತಂಡದಲ್ಲಿ ಮಿಂಚಿ ಭಾರತ ಕ್ರಿಕೆಟ್ ತಂಡವನ್ನು ಗೆಲ್ಲಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಭಾರತ ತಂಡದ ಕೀರ್ತಿಪತಾಕೆಯನ್ನು ಆರಿಸಬೇಕು ಎಂಬುದು ಕ್ರಿಕೆಟ್ ಅಭಿಮಾನಿಗಳ ಬಯಕೆ.