ಸರಿಯಾದ ಸಂದರ್ಭದಲ್ಲಿಯೇ ಚೀನಾ ದೇಶಕ್ಕೆ ಮತ್ತೊಂದು ಶಾಕ್ ! ನೌಕಾಪಡೆಗೆ ಆನೆಬಲ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ತಿಂಗಳುಗಳಿಂದ ಭಾರತದ ಚೀನಾ ದೇಶದ ನಡುವೆ ಗಡಿಯಲ್ಲಿ ಪರಿಸ್ಥಿತಿ ಸರಿಯಿಲ್ಲ. ಯಾವುದೇ ಕ್ಷಣ ಏನು ಬೇಕಾದರೂ ಆಗಬಹುದಾದ ಸಂದರ್ಭ ಎದುರಾಗಿದೆ. ಒಂದೆಡೆ ಚೀನಾ ದೇಶವು ಗಡಿಯಲ್ಲಿ ತನ್ನ ಸೇನೆಯನ್ನು ಹೆಚ್ಚಿಸುತ್ತಿದೆ, ಮತ್ತೊಂದೆಡೆ ಭಾರತ ದೇಶವು ಕೂಡ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಹಲವು ಪ್ರದೇಶಗಳಿಗೆ ಮುನ್ನುಗ್ಗಿ ತನ್ನ ಸೇನೆಯನ್ನು ಜಮಾವಣೆ ಮಾಡಿ ಚೀನಾ ದೇಶದಿಂದ ಯಾವುದೇ ರೀತಿಯ ಪರಿಸ್ಥಿತಿಗಳು ಎದುರಾದರೂ ಕೂಡ ತಕ್ಕ ಉತ್ತರ ನೀಡಲು ಸಿದ್ಧತೆ ನಡೆಸಿದೆ.

ಹೀಗಿರುವಾಗ ಭಾರತೀಯ ನೌಕಾಪಡೆಗೆ ಮತ್ತೊಂದು ಸಿಹಿಸುದ್ದಿ ದೊರಕಿದ್ದು, ಭಾರತೀಯ ನೌಕಾಪಡೆ ಮತ್ತಷ್ಟು ಬಲಿಷ್ಠವಾಗಿದೆ, ಅಷ್ಟೇ ಅಲ್ಲದೇ ಬಹಳ ವಿಶೇಷವಾದ ಸುದ್ದಿಯಾಗಿದೆ. ಹೌದು ಸ್ನೇಹಿತರೇ ಹಲವಾರು ವರ್ಷಗಳಿಂದ ಭಾರತೀಯ ನೌಕಾಪಡೆ ತುದಿಗಾಲಲ್ಲಿ ಕಾಯುತ್ತಿದ್ದ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನಿಗ್ರಹ ನೌಕೆ ಐಎಂಎಸ್ ಕವರತ್ತಿ ನೌಕೆ ಇಂದು ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ. ಈ ವಿಶೇಷ ನೌಕಾ ಹಡಗನ್ನು ಸೇನಾ ಮುಖ್ಯಸ್ಥರಾದ ನರವಣೆ ರವರು ಭಾರತೀಯ ನೌಕಾಪಡೆಗೆ ನಿಯೋಜಿಸಿದ್ದಾರೆ, ಇದರಿಂದ ಈಗಾಗಲೇ ಹಿಂದೂ ಮಹಾಸಾಗರದಲ್ಲಿ ಹಾಗೂ ಮತ್ತೊಂದೆಡೆ ಪಾಕಿಸ್ತಾನದ ಬಂದರುಗಳಲ್ಲಿ ಜಲಾಂತರ್ಗಾಮಿ ನೌಕೆಗಳನ್ನು ನಿಲ್ಲಿಸಿಕೊಂಡು ಭಾರತಕ್ಕೆ ಏನೋ ಮಾಡಿಬಿಡುತ್ತೇವೆ ಎಂದು ಬಿಲ್ಡಪ್ ಕೊಡುತ್ತಿರುವ ಚೀನಾ ದೇಶಕ್ಕೆ ಭಾರತದ ಕಡೆಯಿಂದ ಮತ್ತೊಂದು ತಕ್ಕ ಉತ್ತರ ದೊರೆತಿದೆ.

ಹೌದು ಸ್ನೇಹಿತರೇ, ಚೀನಾ ನೌಕಾಪಡೆಯು ಭಾರತದ ಜೊತೆ ಸಮುದ್ರದಲ್ಲಿ ಸುಖಾಸುಮ್ಮನೆ ಕ್ಯಾತೆ ತೆಗೆಯುತ್ತಿದೆ, ಯಾಕೆಂದರೆ ಭಾರತೀಯ ಭೂಸೇನೆಯು ಲಡಾಕ್ ಗಡಿಯಲ್ಲಿ ನೀಡುತ್ತಿರುವ ಉತ್ತರವನ್ನು ಕಂಡು ಚೀನಾ ದೇಶಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದೇ ಕಾರಣಕ್ಕಾಗಿ ಸಮುದ್ರದಲ್ಲಿಯೂ ಕೂಡ ಕ್ಯಾತೆ ತೆಗೆಯಲು ಆರಂಭಿಸಿದ್ದು, ಇದೇ ಸಮಯದಲ್ಲಿ ಸಾಗರದ ಆಳದಲ್ಲಿ ಅವಿತು ಕುಳಿತಿರುವ ಜಲಂತರ್ಗಾಮಿ ನೌಕೆಗಳನ್ನು ಬಹಳ ಸುಲಭವಾಗಿ ಪತ್ತೆ ಹಚ್ಚಿ ಅವುಗಳನ್ನು ಕ್ಷಣಮಾತ್ರದಲ್ಲಿ ಉಡೀಸ್ ಮಾಡಬಹುದಾದ ಕ್ಷಮತೆಯನ್ನು ಹೊಂದಿರುವ ಐಎಂಎಸ್ ಕವರತ್ತಿ ಇದೀಗ ಭಾರತೀಯ ನೌಕಾಪಡೆಗೆ ಸೇರಿಕೊಂಡಿದೆ. ಇದು ಕೇವಲ ಜಲಂತರ್ಗಮಿ ನೌಕೆಗಳನ್ನು ಉಡೀಸ್ ಮಾಡುವುದಷ್ಟೇ ಅಲ್ಲದೆ ತನ್ನನ್ನು ತಾನು ರ’ಕ್ಷಿಸಿಕೊಳ್ಳುವ ಸಾಮರ್ಥ್ಯವನ್ನೂ ಕೂಡ ಹೊಂದಿದ್ದು ಶೇಕಡ 90 ರಷ್ಟು ಭಾಗ ಸ್ವದೇಶಿ ಯಾಗಿದೆ, ಈ ಮೂಲಕ ಇಡೀ ವಿಶ್ವಕ್ಕೆ ಭಾರತ ಮಿಲಿಟರಿ ಉತ್ಪನ್ನಗಳ ಕ್ಷೇತ್ರದಲ್ಲಿಯೂ ಕೂಡ ಉತ್ತಮ ಹೆಜ್ಜೆ ಇಡುತ್ತಿದೆ ಎಂಬುದನ್ನು ಸಾಬೀತು ಪಡಿಸಿ ದಂತಾಗಿದೆ.

Post Author: Ravi Yadav