ಹೃದಯಾಘಾತವನ್ನು ಬರದಂತೆ ತಡೆಯಲು ಜಸ್ಟ್ ನಿಮ್ಮ ದಿನಚರಿಯಲ್ಲಿ ಹೀಗೆ ಮಾಡಿ ಸಾಕು !

ಹೃದಯಾಘಾತವನ್ನು ಬರದಂತೆ ತಡೆಯಲು ಜಸ್ಟ್ ನಿಮ್ಮ ದಿನಚರಿಯಲ್ಲಿ ಹೀಗೆ ಮಾಡಿ ಸಾಕು !

ನಮಸ್ಕಾರ ಸ್ನೇಹಿತರೇ, ನೀವು ಹೃದಯಾಘಾತವಾದ ಮೇಲೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಕ್ಕಿಂತ ನೀವು ಕ್ರಮೇಣ ನಿಮ್ಮ ದಿನಚರಿಯಲ್ಲಿ ಕೆಲವು ಚಿಕ್ಕ ಚಿಕ್ಕ ಬದಲಾವಣೆಗಳನ್ನು ಮಾಡಿಕೊಂಡರೆ ಹೃದಯಾಘಾತ ಬರದಂತೆ ನೀವು ತಡೆಯಬಹುದಾಗಿದೆ. ಬಂದಮೇಲೆ ಕಾಳಜಿ ವಹಿಸುವುದರ ಬದಲು ಬರದಂತೆ ತಡೆಯಲು ನಿಮ್ಮ ದಿನಚರಿಯಲ್ಲಿ ಕೆಲವೊಂದು ಚಿಕ್ಕ ಚಿಕ್ಕ ಬದಲಾವಣೆಗಳನ್ನು ಮಾಡಿಕೊಂಡರೇ ಸಾಕು ಹೃದಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ನಿಮಗೆ ಕಾಣಿಸುವುದಿಲ್ಲ. ಬನ್ನಿ ಹಾಗಿದ್ದರೆ ಯಾವ ರೀತಿ ನೀವು ಹೃದಯದ ಸಮಸ್ಯೆಗಳಿಂದ ಹೇಗೆ ದೂರವಿರಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ.

ಸ್ನೇಹಿತರೇ, ಸಾಮಾನ್ಯವಾಗಿ ಕೊಲೆಸ್ಟ್ರಾಲ್ ನಮ್ಮ ಯಕೃತ್ತಿನಲ್ಲಿರುವ ರಾಸಾಯನಿಕ ಸಂಯುಕ್ತವಾಗಿದ್ದು ನಮ್ಮ ದೇಹದಲ್ಲಿ ಹೊಸ ಜೀವಕೋ’ಶಗಳು ಮತ್ತು ಹಾರ್ಮೋನುಗಳನ್ನು ಸಂಘಟಿಸಲು ಸಹಾಯ ಮಾಡುತ್ತದೆ. ನಮ್ಮ ದೇಹಕ್ಕೆ ಕೊಬ್ಬಿನ ಅಗತ್ಯವಿದ್ದಾಗಲೆಲ್ಲಾ ಯಕೃತ್ತು ಅದನ್ನು ಒದಗಿಸುತ್ತದೆ. ದೇಹವು ಇದನ್ನು ಬಳಸಿಕೊಂಡು ಅಗತ್ಯವಿರುವ ಕೆಲಸವನ್ನು ಮಾಡಿ ಮುಗಿಸುತ್ತದೆ, ಆದರೆ ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಯಾವುದೇ ಹೆಚ್ಚುವರಿ ಕೊಲೆಸ್ಟ್ರಾಲ್ ದೇಹಕ್ಕೆ ಒಳ್ಳೆಯದಲ್ಲ. ಅಷ್ಟೇ ಅಲ್ಲದೇ, ರ’ಕ್ತದೊ’ತ್ತಡದ ದಿಂದ ಹೃದಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಆದ ಕಾರಣ ನಾವು ಹೃದಯದ ಸಮಸ್ಯೆಗಳಿಂದ ದೂರವಿರಬೇಕು ಎಂದರೇ, ದೇಹದಲ್ಲಿನ ಕ್ಯಾಲೊರಿ, ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಪ್ರಮಾಣವನ್ನು ಮತ್ತು ರ’ಕ್ತದೊ’ತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಆದ್ದರಿಂದ ನೀವು ತುಪ್ಪ, ಬೆಣ್ಣೆ ಮತ್ತು ಹುರಿದ ವಸ್ತುಗಳ ಸೇವನೆಯನ್ನು ಕಡಿಮೆ ಮಾಡಬೇಕು, ಸಂಪೂರ್ಣವಾಗಿ ನಿಲ್ಲಿಸಿ ಎಂದಲ್ಲ, ಕ್ರಮೇಣ ನಿಮ್ಮ ದೇಹದ ಶಕ್ತಿ ನೋಡಿಕೊಂಡು ಸೇವಿಸಿ. ಅಷ್ಟೇ ಅಲ್ಲದೇ, ಮುಂಜಾನೆ ಅಥವಾ ಸಂಜೆ ಇಲ್ಲವಾದಲ್ಲಿ ಎರಡು ಸಮಯದಲ್ಲಿ ಲಘು ವ್ಯಾಯಾಮದೊಂದಿಗೆ ನಡೆಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಇನ್ನು ಇಷ್ಟೇ ಅಲ್ಲಾ, ಹೆಚ್ಚಿನ ಒ’ತ್ತಡ ಅಥವಾ ಖಿ’ನ್ನತೆಯು ಕೂಡ ಹೃದಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಯಾವುದೇ ಟೆನ್ಶನ್ ಇಲ್ಲದೇ, ಜೀವನವನ್ನು ನಡೆಸಿ, ಎಲ್ಲರ ಜೀವನದಲ್ಲೂ ಸಮಸ್ಯೆ ಇರುತ್ತವೆ. ನಾವು ಟೆನ್ಶನ್ ತೆಗೆದುಕೊಂಡರೇ ಅವು ಕಡಿಮೆ ಆಗುವುದಿಲ್ಲ. ಆದ್ದರಿಂದ ಟೆನ್ಶನ್ ರಹಿತವಾಗಿ ಸಮಸ್ಯೆ ಹಾಗೂ ಜೇವನವನ್ನು ಎದುರಿಸಿ.