ತಾಯಿ ಲಕ್ಷ್ಮಿ ದೇವಿ ಯಾರ ಬಳಿ ನೆಲೆಸುವುದಿಲ್ಲ ಎಂದು ವಿಧುರರು ತಿಳಿಸಿರುವುದು ಹೇಗೆ ಗೊತ್ತೇ?

ನಮಸ್ಕಾರ ಸ್ನೇಹಿತರೇ, ಮಹಾಭಾರತ ಕಾಲದ ಪ್ರಭಾವಿ ಜನರಲ್ಲಿ ವಿಧುರ ರವರ ಹೆಸರನ್ನು ಮೊದಲು ನೆನಪಿಸಿಕೊಳ್ಳಲಾಗುತ್ತದೆ. ವಿಧುರ ಅವರು ಪ್ರತಿ ವಿಷಯದ ಬಗ್ಗೆ ಅತ್ಯಂತ ನಿಖರವಾದ ಜ್ಞಾನವನ್ನು ಹೊಂದಿದ್ದರು, ನಿಕವಾದ ಅಭಿಪ್ರಾಯವನ್ನು ನೀಡುತ್ತಿದ್ದರು ಮತ್ತು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಆಲೋಚನೆ ಮಾಡಿ ಎಲ್ಲರಿಗೂ ಮಾರ್ಗದರ್ಶಿಯಾಗಿದ್ದರು ಎಂದು ಪುರಾಣಗಳು ಹೇಳಿವೆ. ಸಾಕ್ಷಾತ್ ಶ್ರೀ ಕೃಷ್ಣನವು ಕೂಡ ಇವರ ಜ್ಞಾನ ಹಾಗೂ ಸದಾಚಾರವನ್ನು ಮೆಚ್ಚಿಕೊಂಡಿದ್ದರು. ಅಷ್ಟೇ ಅಲ್ಲಾ, ಮಹಾಭಾರತದಲ್ಲಿ ಪಾಂಡವರ ವಿಜಯಕ್ಕೆ ಒಂದು ಪ್ರಮುಖ ಕಾರಣವೆಂದರೆ ವಿಧುರ ಅವರ ರಾಜತಾಂತ್ರಿಕತೆ ಎಂದು ಕೆಲವು ವಿದ್ವಾಂಸರು ನಂಬುತ್ತಾರೆ. ಅದಕ್ಕಾಗಿಯೇ ಇಂದಿಗೂ ಜನರು ವಿವಿಧ ವಿಷಯಗಳ ಬಗ್ಗೆ ವಿಧುರ ರವರ ಅಭಿಪ್ರಾಯವನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಅದೇ ವಿಧುರರು ಲಕ್ಷ್ಮಿ ದೇವಿಯ ಬಳಿಗೆ ಎಂದಿಗೂ ಬಾರದ 5 ಜನರು ಬಗ್ಗೆ ವಿಧುರ ನೀತಿಯಲ್ಲಿ ತಿಳಿಸಿದ್ದಾರೆ. ತಾಯಿ ಮಹಾಲಕ್ಷ್ಮಿ ಅಂತಹ ಜನರಿಂದ ಎಂದಿಗೂ ಆಶೀರ್ವದಿಸುವುದಿಲ್ಲ. ಈ ಜನರು ಹಣದ ಕೊರತೆಯಿಂದ ಮಾತ್ರ ಜೀವನವನ್ನು ನಡೆಸಬೇಕಾಗಿದೆ ಎಂದು ತಿಳಿಸಿದ್ದಾರೆ. ಬನ್ನಿ ಈ ಕುರಿತು ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ.

ವಿಧುರ ನೀತಿಯಲ್ಲಿ ಮೊದಲನೆಯದಾಗಿ, ತಾನು ಒಬ್ಬ ಅತ್ಯಂತ ಒಳ್ಳೆಯ ವ್ಯಕ್ತಿ ಎಂದು ಭಾವಿಸಿರುವ ವ್ಯಕ್ತಿಯ ಬಳಿ ಲಕ್ಷಿ ದೇವಿ ನೆಲೆಸುವುದಿಲ್ಲ. ಅವನು ನಿಜವಾಗಲೂ ಒಳ್ಳೆಯವನಾಗಿದ್ದರೂ ಆತನ ಬಳಿ ತಾಯಿ ಲಕ್ಷ್ಮಿ ನೆಲೆಸುವುದಿಲ್ಲ. ಯಾಕೆಂದರೆ ಅಂತಹ ವ್ಯಕ್ತಿಯು ತನ್ನ ಶ್ರೇಷ್ಠತೆಯ ಮೇಲೆ ಅಹಂ ಹೊಂದಲು ಪ್ರಾರಂಭಿಸುತ್ತಾನೆ ಮತ್ತು ಲಕ್ಷ್ಮಿ ದೇವಿಯು ಅಹಂಕಾರದ ವ್ಯಕ್ತಿಯ ಮೇಲೆ ಎಂದಿಗೂ ಸಂತೋಷವಾಗುವುದಿಲ್ಲ, ಆದ ಕಾರಣ ಒಳ್ಳೆಯವರಾಗಿದ್ದರೂ ಕೂಡ ಸದಾಚಾರದಿಂದ ಜೀವನ ನಡೆಸಿ ಎಂಬುದು ವಿಧುರರು ಹೇಳುವ ಕಿವಿ ಮಾತು.

ತಾಯಿ ಮಹಾಲಕ್ಷ್ಮಿ ಅತಿಯಾದ ದಾನ ಮಾಡಿ ಅದನ್ನು ತೋರಿಸಿಕೊಳ್ಳುವ ವ್ಯಕ್ತಿಯ ಬಳಿಗೆ ಹೋಗುವುದಿಲ್ಲ. ಹೌದು ಸ್ನೇಹಿತರೇ, ವಿದುರ ನೀತಿಯಲ್ಲಿ, ಹೆಚ್ಚು ದಾನ ಮಾಡುವ ಮೊದಲು ಅವನ ಮತ್ತು ಅವನ ಕುಟುಂಬದ ಭವಿಷ್ಯಕ್ಕಾಗಿ ಏನಾದರೂ ಉಳಿದಿದೆಯೇ ಎಂದು ಯೋಚಿಸುವುದಿಲ್ಲ, ಕೇವಲ ತೋರಿಸಿಕೊಳ್ಳುವುದ್ದಕ್ಕಾಗಿ ಆತ ದಾನ ಮಾಡುತ್ತಾನೆ, ಆದ ಕಾರಣ ಲಕ್ಷಿ ದೇವಿಯು ಆತನ ಬಳಿಗೆ ಹೋಗುವುದಿಲ್ಲ ಎಂದು ವಿಧುರರು ಹೇಳುತ್ತಾರೆ.

ಇನ್ನು ಲಕ್ಷಿ ದೇವಿಯು ತುಂಬಾ ಧೈ;ರ್ಯಶಾ’ಲಿ ವ್ಯಕ್ತಿಯ ಬಳಿಗೆ ಹೋಗುವುದಿಲ್ಲ ಎಂದು ವಿಧುರರು ಹೇಳುತ್ತಾರೆ. ಯಾಕೆಂದರೆ ಒಬ್ಬ ಧೈ’ರ್ಯಶಾ’ಲಿ ವ್ಯಕ್ತಿಯು ತನ್ನ ಶಕ್ತಿಯಿಂದ ಇಡೀ ಜಗತ್ತನ್ನು ಗೆಲ್ಲಬಹುದು ಎಂದು ಜಗತ್ತನ್ನು ಗೆಲ್ಲಲು ಹೊರಡುತ್ತಾರೆ, ಆತನಿಗೆ ಅಹಂ ಹೆಚ್ಚಾಗಿರುತ್ತದೆ, ಅದೇ ನನ್ನ ಕೈಯಲ್ಲಿ ಶಕ್ತಿ ಇದ್ದರೂ ಕೂಡ ಜಗತ್ತನ್ನು ಲಘುವಾಗಿ ಪರಿಗಣಿಸದೆ ಜಯಿಸಲು ಮುಂದಾದರೇ ಖಂಡಿತ ಲಕ್ಷ್ಮಿ ತಾಯಿ ಜೊತೆಗಿರುತ್ತಾರೆ ಎಂದು ವಿಧುರರು ಹೇಳುತ್ತಾರೆ.

ಇನ್ನು ಅಷ್ಟೇ ಅಲ್ಲದೇ, ಹೆಚ್ಚು ಉಪವಾಸ ಮತ್ತು ನಿಯಮಗಳನ್ನು ಅನುಸರಿಸುವವರಿಗೆ ಲಕ್ಷ್ಮಿ ದೇವಿಯು ಒಲವು ತೋರಿಸುವುದಿಲ್ಲ ಎಂದು ವಿಧುರ ನೀತಿ ಹೇಳುತ್ತದೆ. ಏಕೆಂದರೆ ಅಂತಹ ಜನರಿಗೆ ಹೆಚ್ಚಿನ ಹಣವೂ ಅಗತ್ಯವಿಲ್ಲ, ತಾವು ಸದಾ ಕಾಲ ನಿಯಮಗಳನ್ನು ಅನುಸರಿಸುವುದರಿಂದ ನನಗೆ ಹೆಚ್ಚಿನ ಫಲ ಸಿಗುತ್ತದೆ ಎಂದು ಕೆಲಸ ಮಾಡುವುದಿಲ್ಲ ಎಂಬುದು ವಿಧುರರ ಲೆಕ್ಕಾಚಾರ. ಇದರ ಬದಲು ದೇವರ ಮೇಲೆ ನಂಬಿಕೆಯಿಂದ ಶ್ರದ್ದೆಯಿಂದ ಕೆಲಸ ಮಾಡಬೇಕು ಎಂದು ವಿಧುರರು ಹೇಳುತ್ತಾರೆ.

ಇನ್ನು ಕೊನೆಯದಾಗಿ ತನ್ನ ಬುದ್ಧಿವಂತಿಕೆ ಬಗ್ಗೆ ಹೆಮ್ಮೆಯಿಂದ ಬದುಕುವ ವ್ಯಕ್ತಿಯು ಅಂತಹ ವ್ಯಕ್ತಿಗೆ ಎಂದಿಗೂ ತಾಯಿ ಲಕ್ಷ್ಮಿ ದೇವಿ ಹೋಗುವುದಿಲ್ಲ ಎಂದು ವಿಧುರರು ಹೇಳುತ್ತಾರೆ. ಯಾಕೆಂದರೆ ಅಂತಹ ವ್ಯಕ್ತಿಯು ತಾನು ತುಂಬಾ ಬುದ್ಧಿವಂತನೆಂಬ ಹೆಮ್ಮೆಯನ್ನು ಯಾವಾಗಲೂ ಹೊಂದಿರುತ್ತಾನೆ, ಇದರಿಂದ ಇತರರನ್ನು ಲಘುವಾಗಿ ಪರಿಗಣಿಸಲು ಆರಂಭಿಸುತ್ತಾನೆ. ಅದೇ ತನ್ನ ಬುದ್ಧಿವಂತಿಕೆಯ ಮೇಲೆ ನಂಬಿಕೆಯಿಟ್ಟು, ಕೆಲಸದಲ್ಲಿ ನಿರತರಾದರೇ ಗೆಲುವು ನಿಷ್ಚಿತ, ಹಾಗೇ ಮಾಡಿದರೇ ಹಣವನ್ನು ಕೂಡ ಗಳಿಸಬಹುದು ಎಂದು ವಿಧುರರ ಲೆಕ್ಕಾಚಾರ.

Facebook Comments

Post Author: Ravi Yadav