ಹೆಚ್ಚು ಜನರನ್ನು ಇಹಲೋಕ ತ್ಯಜಿಸುವಂತೆ ಮಾಡುತ್ತಿರುವ ಮೌನ ಹೃದಯಘಾತವನ್ನು ತಿಳಿದುಕೊಂಡು ಬಚಾವಾಗುವುದು ಹೇಗೆ ಗೊತ್ತಾ?

ಹೆಚ್ಚು ಜನರನ್ನು ಇಹಲೋಕ ತ್ಯಜಿಸುವಂತೆ ಮಾಡುತ್ತಿರುವ ಮೌನ ಹೃದಯಘಾತವನ್ನು ತಿಳಿದುಕೊಂಡು ಬಚಾವಾಗುವುದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಯುವಕರಿಂದ ಹಿಡಿದು ವಯಸ್ಕರವರೆಗೆ ಹೃದಯಾಘಾತಗಳು ಸಾಮಾನ್ಯವಾಗಿಬಿಟ್ಟಿವೆ. ಎಷ್ಟೋ ಜನರು ರಾತ್ರಿ ಆರೋಗ್ಯವಾಗಿ ಮಲಗಿದ ಬಳಿಕ ಬೆಳಗ್ಗೆ ಎದ್ದೇಳುವುದು ಕೂಡ ಇಲ್ಲ, ರಾತ್ರೋರಾತ್ರಿ ಮೌನ ಹೃದಯಾಘಾತವನ್ನು ತಡೆದುಕೊಳ್ಳಲು ಸಾಧ್ಯವಾಗದೇ ಇಹಲೋಕ ತ್ಯಜಿಸಿದ್ದಾರೆ. ಕೆಲವು ಅಂಕಿ ಅಂಶಗಳ ಪ್ರಕಾರ ಶೇಕಡ 45 ರಷ್ಟು ಹೃದಯಾಘಾತ ಪ್ರಕರಣಗಳಲ್ಲಿ‌ ಜನರಿಗೆ ತಮಗೆ ಹೃದಯಾಘಾತವಾಗಿದೆ ಎಂದು ತಿಳಿಯುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಅವರ ಸುತ್ತಮುತ್ತ ಇರುವ ಜನರಿಗೆ ಕೂಡ ಇವರಿಗೆ ಏನು ಆಗಿದೆ ಎಂಬುದರ ಅರಿವು ಕೂಡ ಇರುವುದಿಲ್ಲ. ಇದನ್ನು ವೈದ್ಯಶಾಸ್ತ್ರದಲ್ಲಿ ಮೌನ ಹೃದಯಾಘಾತ ಎನ್ನುತ್ತಾರೆ. ಹಾಗಿದ್ದರೆ ಮೌನ ಹೃದಯಾಘಾತದಿಂದ ಬಚಾವ್ ಆಗಲು ಸಾಧ್ಯವಿಲ್ಲವೇ? ಅಸಲಿಗೆ ಮೌನ ಹೃದಯಾಘಾತವಾಗಿದೆ ಎಂಬುದನ್ನು ನಾವು ಹೇಗೆ ತಿಳಿದುಕೊಳ್ಳಬೇಕು ಹಾಗೂ ಹೇಗೆ ಬಚಾವಾಗಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಸ್ನೇಹಿತರೇ ಸಾಮಾನ್ಯವಾಗಿ ನಾವು ಮೌನ ಹೃದಯಾಘಾತದ ಲಕ್ಷಣಗಳು ಕುರಿತು ಮಾತನಾಡುವುದಾದರೇ ಎದೆ ನೋ’ವು ಕಾಣಿಸಿಕೊಳ್ಳುವುದಿಲ್ಲ, ಬದಲಾಗಿ ದವಡೆ, ಕುತ್ತಿಗೆ, ಕೈಗಳು, ಹೊಟ್ಟೆ ಅಥವಾ ಬೆನ್ನಿನಲ್ಲಿ ನೋ’ವು ಕಾಣಿಸಿಕೊಳ್ಳುತ್ತದೆ. ಇದೇ ಸಮಯದಲ್ಲಿ ನಿಮಗೆ ಉಸಿರಾಟದ ಯಾವುದೇ ತೊಂದರೆಗಳು ಇಲ್ಲದೆ ಇದ್ದರೂ ಉಸಿರಾಟದ ತೊಂದರೆ ಕಾಣಿಸಿಕೊಂಡು ನಿಮಗೆ ಸುಸ್ತಾದ ಅನುಭವ ಆಗುತ್ತದೆ. ಇನ್ನು ಈ ಲಕ್ಷಣಗಳ ಜೊತೆಗೆ ನಿಮಗೆ ವಾಂತಿ, ತಲೆತಿರುಗುವಿಕೆ ಮತ್ತು ಸುತ್ತಮುತ್ತಲಿನ ಹವಾಮಾನ ತಿಳಿಯಾಗಿ ಇದ್ದರೂ ಕೂಡ ಬೆವರು ಕಾಣಿಸುತ್ತದೆ. ಹೃದಯದಲ್ಲಿ ಏನೋ ಚಡಪಡಿಕೆ ಕಾಣಿಸುತ್ತದೆ. ಈ ಲಕ್ಷಣಗಳ ಅರ್ಥವೇನೆಂದರೆ ನಿಮ್ಮ ದೇಹವು ತಡೆದುಕೊಳ್ಳಲಾಗದಂಥ ಹೃದಯಾಘಾತವನ್ನು ನಿಮ್ಮ ದೇಹ ಅನುಭವಿಸಿದೆ ಎಂದರ್ಥ.

ಇನ್ನು ಸಾಮಾನ್ಯದಲ್ಲಿ ಈ ರೀತಿಯ ಮೌನ ಹೃದಯಘಾತ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಯಾಕೆಂದರೆ ನಮ್ಮ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಅಂದರೆ ನಮ್ಮ ದೇಹವನ್ನು ಸುತ್ತಮುತ್ತಲಿನ ಚಳಿಯಿಂದ ರಕ್ಷಿಸಲು ನಮ್ಮ ಹೃದಯ ಎರಡು ಪಟ್ಟು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಈ ಕಾರಣದಿಂದ ರ’ಕ್ತದೊತ್ತಡ ಹೆಚ್ಚಾಗುತ್ತದೆ ಮತ್ತು ರ’ಕ್ತಹೆಪ್ಪುಗಟ್ಟಲು ಆರಂಭಿಸುತ್ತದೆ. ಅಷ್ಟೇ ಅಲ್ಲದೇ ಸಾಮಾನ್ಯವಾಗಿ ಚಳಿಗಾಲದ ಅವಧಿಯಲ್ಲಿ ರ’ಕ್ತನಾಳಗಳು ಉಬ್ಬುತ್ತವೆ, ಇದರಿಂದ ರ’ಕ್ತದ ಹರಿವು ಕೊಂಚ ಕಷ್ಟವೇ ಸರಿ. ಹೀಗಿರುವಾಗ ಹೃದಯದಲ್ಲಿ ಆಮ್ಲಜನಕಕ್ಕೆ ಹೆಚ್ಚಿನ ಬೇಡಿಕೆ ಬಂದು, ನಿಮ್ಮ ದೇಹದ ಉಷ್ಣತೆ ಅಸಹಜವಾಗಿ ಕಡಿಮೆಯಾಗುತ್ತದೆ ಎಂದು ವೈದ್ಯಶಾಸ್ತ್ರ ಹೇಳುತ್ತದೆ.

ಇನ್ನು ಈ ಮೌನ ಹೃದಯಘಾತ ಕಾಣಿಸಿಕೊಂಡರೇ ಹಿರಿಯ ವ್ಯಕ್ತಿಗಳು ತಡೆದುಕೊಳ್ಳುವುದು ಬಹಳ ತೀರಾ ಕಡಿಮೆ, ಯಾಕೆಂದರೆ ಹೃದಯದ ಮೇಲೆ ಬಹಳ ಪ್ರಚಂಡವಾದ ಒತ್ತಡ ಉಂಟುಮಾಡುತ್ತದೆ. ಒಂದು ವೇಳೆ ಮೇಲಿನ ಎಲ್ಲ ಲಕ್ಷಣಗಳು ನಿಮಗೆ ಕಾಣಿಸಿಕೊಂಡು ಎದೆನೋ’ವು ಕಾಣಿಸಿಕೊಳ್ಳದೆ ಇದ್ದರೂ ಕೂಡ ದಯವಿಟ್ಟು ವೈದ್ಯರ ಬಳಿ ತಪಾಸಣೆಗೆ ತೆರಳಿ. ಯಾಕೆಂದರೆ ಮೌನ ಹೃದಯಘಾತದಲ್ಲಿ ನಿಮಗೆ ಎದೆ ನೋ’ವು ಕಾಣಿಸಿಕೊಳ್ಳುವುದಿಲ್ಲ. ಇನ್ನು ಮೌನ ಹೃದಯಾಘಾತವನ್ನು ತಡೆಗಟ್ಟುವುದು ಹೇಗೆ ಎಂದರೇ, ನೀವು ಮುಂಜಾನೆ ವಾಕಿಂಗ್ ತೆರಳುವ ಸಂದರ್ಭದಲ್ಲಿ ದಯವಿಟ್ಟು ಶೀತದ ವಾತಾವರಣದಲ್ಲಿ ನಡೆಯಬೇಡಿ. ಇದರಿಂದ ನಿಮ್ಮ ರ’ಕ್ತದೊತ್ತಡ ಹೆಚ್ಚಾಗುತ್ತದೆ. ಬದಲಾಗಿ ಸೂರ್ಯನ ಎಳೆಬಿಸಿಲಲ್ಲಿ ನಡೆದರೆ ನಿಮ್ಮ ದೇಹಕ್ಕೆ ಉಷ್ಣತೆ ಹಾಗೂ ಅಗತ್ಯವಿರುವ ವಿಟಮಿನ್ ಡಿ ಸಿಗುತ್ತದೆ. ಇನ್ನು ಮನೆಯಲ್ಲಿ ಎಲ್ಲವೂ ವ್ಯಾಯಾಮ ಮಾಡಿ, ಪ್ರಾಣಾಯಾಮ ಮಾಡಿ ಹಾಗೂ ನೀವು ಹಿರಿಯರಾಗಿದ್ದರೆ ಕಾಲಕಾಲಕ್ಕೆ ನಿಮ್ಮ ರ’ಕ್ತದೊತ್ತಡವನ್ನು ಪರೀಕ್ಷಿಸಿ. ಚಳಿಗಾಲದಲ್ಲಿ ಎಣ್ಣೆ ಮತ್ತು ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ ಹಾಗೂ ಸರಳ ಆಹಾರವನ್ನು ಸೇವಿಸುವ ಮೂಲಕ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.