ಟೈಗರ್ ಪ್ರಭಾಕರ್ ಕೊನೆಯುಸಿರೆಳೆದ ಮೇಲೆ ಸಹಾಯಕ್ಕೆ ನಿಂತು ಮಾನವೀಯತೆ ಮೆರೆದಿದ್ದು ಯಾರು ಗೊತ್ತಾ? ನಿಜಕ್ಕೂ ಗ್ರೇಟ್ !

ಟೈಗರ್ ಪ್ರಭಾಕರ್ ಕೊನೆಯುಸಿರೆಳೆದ ಮೇಲೆ ಸಹಾಯಕ್ಕೆ ನಿಂತು ಮಾನವೀಯತೆ ಮೆರೆದಿದ್ದು ಯಾರು ಗೊತ್ತಾ? ನಿಜಕ್ಕೂ ಗ್ರೇಟ್ !

ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಇಂದಿಗೂ ಕನ್ನಡದ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ಟೈಗರ್ ಪ್ರಭಾಕರ್ ರವರ ನಟನೆಯ ಹಾಗೂ ಕೌಶಲ್ಯದ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲದೆ ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿ ಟೈಗರ್ ಎಂಬ ಖ್ಯಾತಿ ಪಡೆದುಕೊಂಡಿರುವ ಪ್ರಭಾಕರ್ ಅವರು ಹಲವಾರು ಚಿತ್ರಗಳಲ್ಲಿ ನಟನಾಗಿ ಮತ್ತು ಬಹುತೇಕ ಚಿತ್ರಗಳಲ್ಲಿ ಖಳ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಸರಿಸುಮಾರು ಎಲ್ಲಾ ಚಿತ್ರರಂಗಗಳಲ್ಲಿ ಸೇರಿದಂತೆ 450ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ವಿವಿಧ ರೀತಿಯ ಚಿತ್ರರಂಗಗಳಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇನ್ನು ಇವರು ನಟನೆ ಮಾಡುತ್ತಿದ್ದ ರೀತಿಯ ಬಗ್ಗೆ ಹೇಳುವುದಾದರೆ ಆ ಗತ್ತು, ಡೈಲಾಗ್ ಮತ್ತು ಫೈಟಿಂಗ್ ಸೀನ್ ಗಳಲ್ಲಿ ಅದ್ಭುತ ನಟನೆ ಮಾಡುತ್ತಿದ್ದರು.

ಇನ್ನು ಇವರು ಚಿತ್ರರಂಗಕ್ಕೆ ಕಾಲಿಡುವ ಸಂದರ್ಭದಲ್ಲಿ ಯಾರ ಬೆಂಬಲವೂ ಇಲ್ಲದೇ ತನ್ನ ಪರಿಶ್ರಮದಿಂದಲೇ ಇಷ್ಟೆಲ್ಲಾ ಸಾಧನೆ ಮಾಡಿದರು. ಕ್ರಮೇಣ ಟೈಗರ್ ಪ್ರಭಾಕರ್ ರವರಿಗೆ ಹಲವಾರು ಚಿತ್ರಗಳಲ್ಲಿ ನಾಯಕನಾಗಿ ನಟಿಸುವಂತೆ ಅವಕಾಶಗಳು ಕೂಡ ದೊರೆತವು. ಹೀಗೆ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಪ್ರಭಾಕರ್ ಅವರ ಕೊನೆಯ ದಿನಗಳು ಅವರು ಊಹಿಸಿದಂತೆ ಇರಲು ಸಾಧ್ಯವಾಗಲಿಲ್ಲ. ಪ್ರಭಾಕರ್ ಅವರಿಗೆ ಅನಾರೋಗ್ಯ ಕಾಡಲು ಆರಂಭವಾದ ಬಳಿಕ ಇವರು ದುಡಿದಿದ್ದ ಎಲ್ಲಾ ಹಣವೂ ಕೇವಲ ಆರೋಗ್ಯವನ್ನು ಕಾಪಾಡಿಕೊಳ್ಳಲು ಖಾಲಿಯಾಗಿತ್ತು. ಆದರೂ ಕೂಡ ಇವರು ಸಂಪೂರ್ಣ ಗುಣಮುಖರಾಗಲಿಲ್ಲ, ಕೊನೆಯದಾಗಿ ಮಾರ್ಚ್ 25, 2011 ರಂದು ಇಹಲೋಕ ತ್ಯಜಿಸಿದರು. ಈ ವಿಷಯ ಕೇಳಿದ ಚಿತ್ರರಂಗ ಕಣ್ಣೀರಿನಲ್ಲಿ ಮುಳುಗಿತು. ಆದರೆ ಇದು ಇಷ್ಟಕ್ಕೇ ನಿಲ್ಲಲಿಲ್ಲ, ಯಾಕೆಂದರೆ ಬಹು ಅಂಗಾಂಗ ವೈಫಲ್ಯದಿಂದ ಇಹಲೋಕ ತ್ಯಜಿಸಿದ ಪ್ರಭಾಕರ್ ರವರ ಆಸ್ಪತ್ರೆಯ ಬಿಲ್ ಕಟ್ಟದೆ ದೇಹವನ್ನು ಕೊಡಲು ಸಾಧ್ಯವೇ ಇಲ್ಲ ಎಂದು ಆಸ್ಪತ್ರೆಯವರು ಪಟ್ಟುಹಿಡಿದರು.

ಸಂಪೂರ್ಣ ಹಣ ಕಾಲಿಯಾಗಿರುವ ಸಂದರ್ಭದಲ್ಲಿ ಈ ವಿಷಯ ಕನ್ನಡದ ಮತ್ತೊಬ್ಬ ಹಿರಿಯ ನಟ ಅಂಬರೀಶ್ ರವರನ್ನು ತಲುಪಿತು. ಹಿಂದೆ ಮುಂದೆ ಆಲೋಚನೆ ಮಾಡಿದೆ ಅಂಬರೀಶ್ ಅವರು ನೇರವಾಗಿ ಆಸ್ಪತ್ರೆಗೆ ತೆರಳಿದ ತಕ್ಷಣವೇ ಡಾಕ್ಟರ್ಗಳು ಅಂಬರೀಶರವರ ಮುಖ ನೋಡಿ ದೇಹವನ್ನು ನೀಡಲು ಒಪ್ಪಿದರು, ಆಸ್ಪತ್ರೆಯವರ ಸಂಪೂರ್ಣ ಹಣವನ್ನು ಅಂಬರೀಶ್ ರವರು ತಲುಪಿಸಿದರು. ತದನಂತರ ತಾವೇ ಮುಂದೆ ನಿಂತು ಎಲ್ಲಾ ಜವಾಬ್ದಾರಿಗಳನ್ನು ಹೊತ್ತುಕೊಂಡ ಅಂಬರೀಶರವರ ಅಭಿಮಾನಿಗಳಿಗೆ ಟೈಗರ್ ಪ್ರಭಾಕರ್ ಅವರ ಅಂತಿಮ ದರ್ಶನ ನೀಡಲು ಎಲ್ಲಾ ಸಿದ್ಧತೆಗಳನ್ನು ಮಾಡಿ ತಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸಿದರು. ನಿಜಕ್ಕೂ ಇಂತಹ ಉತ್ತಮ ಕಾರ್ಯಗಳಿಗೆ ಹೆಸರುವಾಸಿಯಾಗಿರುವ ಅಂಬರೀಶ್ ರವರಿಗೆ ಧನ್ಯವಾದಗಳನ್ನು ನಾವು ತಿಳಿಸಲೇಬೇಕು.