ಆಮ್ಲೀಯತೆಗೆ/ಅಸಿಡಿಟಿಗೆ ವಿಶೇಷವೇನು ಬೇಡ ಈ ಸುಲಭ ಮನೆಮದ್ದುಗಳನ್ನು ಅನುಸರಿಸಿ ! ಜೀವನಪೂರ್ತಿ ಮಾತ್ರೆಗಳ ಮೊರೆ ಹೋಗುವುದನ್ನು ತಪ್ಪಿಸಿ.

ನಮಸ್ಕಾರ ಸ್ನೇಹಿತರೇ, ಇಂದಿನ ಆಧುನಿಕ ಜೀವನದಲ್ಲಿ ಸರಿಯಾದ ಸಮಯದಲ್ಲಿ ಊಟ ಮಾಡದೆ ಅಥವಾ ಹೊರಗಿನ ಆಹಾರಗಳು ಹೆಚ್ಚಾಗಿ ನೂರಕ್ಕೆ ಶೇಕಡ 99ರಷ್ಟು ವ್ಯಕ್ತಿಗಳಲ್ಲಿ ಒಮ್ಮೆಯಾದರೂ ಆಮ್ಲತೆಯ ಅನುಭವ ಆಗಿರುತ್ತದೆ. ಇನ್ನು ಇದಕ್ಕೆ ಕಾರಣಗಳನ್ನು ಹುಡುಕುವುದಾದರೆ ನಿಮ್ಮ ಹೊಟ್ಟೆಯಲ್ಲಿ ಉಂಟಾಗುವ ಆಮ್ಲ ನಿಮಗೆ ವಿಚಿತ್ರ ರೀತಿಯ ಅನುಭವವನ್ನು ನೀಡುತ್ತದೆ. ಆಮ್ಲ ಹೆಚ್ಚಾದಾಗ ನಿಮಗೆ ಆಸಿಡಿಟಿ ಕಾಣಿಸಿಕೊಳ್ಳುತ್ತದೆ. ಇನ್ನು ಹೀಗೆ ಆಮ್ಲೀಯತೆ ಹೆಚ್ಚಾದಲ್ಲಿ ಸಾಮಾನ್ಯವಾಗಿ ಎದೆಯುರಿ ಅನುಭವ ಆಗುತ್ತದೆ. ನಮ್ಮ ಜೀವನ ಶೈಲಿಯನ್ನು ಮಾರ್ಪಡಿಸಿಕೊಂಡರೇ ಖಂಡಿತ ನಾವು ಆಮ್ಲೀಯತೆಯನ್ನು ಬಹಳ ಸುಲಭವಾಗಿ ಮಾತ್ರೆಗಳ ಮೊರೆಹೋಗದೇ ತಡೆಯಬಹುದು. ಮೊದಲಿಗೆ ನಾವು ಆಮ್ಲೀಯತೆ ಕಾರಣಗಳು ತದನಂತರ ಲಕ್ಷಣಗಳನ್ನು ತಿಳಿಸಿಕೊಟ್ಟು ಆಮ್ಲೀಯತೆಗೆ ಮನೆಮದ್ದುಗಳನ್ನು ಕೂಡ ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಮೊದಲನೆಯದಾಗಿ ನಾವು ಆಮ್ಲೀಯತೆಗೆ ಕಾರಣಗಳ ಕುರಿತು ನಾವು ಗಮನಹರಿಸಿದರೇ ಬೊಜ್ಜು, ಕಡಿಮೆ ದೈಹಿಕ ಪರಿಶ್ರಮ, ಧೂ’ಮಪಾನ, ಒತ್ತಡ, ಅನಿಯಮಿತ ಊಟ ಮತ್ತು ನಿದ್ರೆ, ಹೆಚ್ಚು ಮಸಾಲೆಯುಕ್ತ ಆಹಾರ, ಕಡಿಮೆ ಫೈಬರ್ ಇರುವ ಆಹಾರ ಹಾಗೂ ಹೆಚ್ಚಾಗಿ ಉಪ್ಪು ಬಳಕೆ ಮಾಡಿದರೇ ಆಮ್ಲೀಯತೆ ಕಾಣಿಸಿಕೊಳ್ಳುತ್ತದೆ. ಇನ್ನು ಲಕ್ಷಣಗಳ ಕುರಿತು ಗಮನಹರಿಸುವುದಾದರೆ ತೂಕ ನಷ್ಟ, ಹುಳಿ ರುಚಿ, ಅಜೀರ್ಣತೆ, ಹೊಟ್ಟೆಯ ಹುಬ್ಬರ, ಹುಳಿತೇಗು ಗಳು, ಎದೆಯುರಿ ಮುಂತಾದ ಲಕ್ಷಣಗಳು ಕಾಣಿಸಿಕೊಂಡರೆ ನಿಮಗೆ ಆಮ್ಲಿಯತೆ ಇದೆ ಎಂದರ್ಥ.

ಇನ್ನು ಆಮ್ಲೀಯತೆಗೆ ಬಹುತೇಕ ಜನರು ಮಾತ್ರೆಗಳ ಮೊರೆಹೋಗುತ್ತಾರೆ, ಇತ್ತೀಚಿಗೆ ಮಾರುಕಟ್ಟೆಗಳಲ್ಲಿ ಹಲವಾರು ವಿವಿಧ ರೀತಿಯ ಪೌಡರ್ ಗಳು ಕೂಡ ಆಮ್ಲೀಯತೆಗೆ ಮದ್ದು ಎಂದು ಬಿಡುಗಡೆಯಾಗಿವೆ. ಆದರೆ ಸ್ನೇಹಿತರೇ ಮಾತ್ರೆಗಳ ಆಗಲಿ ಅಥವಾ ಇನ್ಯಾವುದೇ ವಿಧಾನಗಳಲ್ಲಿ ಆಮ್ಲೀಯತೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಿಲ್ಲ. ನಿಮಗೆ ತಕ್ಷಣ ಪರಿಹಾರ ನೀಡಬಹುದು, ಆದರೆ ಕೆಲವೇ ಬೆರಳೆಣಿಕೆಯ ದಿನಗಳ ನಂತರ ಮತ್ತೆ ನಿಮಗೆ ಆಮ್ಲೀಯತೆ ಕಾಣಿಸಿಕೊಳ್ಳುತ್ತದೆ. ಈ ಮಾತ್ರೆಗಳ ಮೊರೆಹೋಗುವ ಬದಲು ನೀವು ಬಹಳ ಸುಲಭವಾದ ಕ್ರಮಗಳ ಮೂಲಕ ಆಮ್ಲೀಯತೆಯನ್ನು ಸಂಪೂರ್ಣವಾಗಿ ತೊಡೆದು ಹಾಕಬಹುದಾಗಿದೆ. ಬನ್ನಿ ಈ ಕುರಿತು ನಿಮಗೆ ವಿವಿಧ ರೀತಿಯ ಮಾಹಿತಿಗಳನ್ನು ಇಂದು ನಾವು ನೀಡುತ್ತೇವೆ. ನಿಮ್ಮ ಮನೆಯಲ್ಲಿ ಸಿಗುವ ವಸ್ತುಗಳ ಅನುಕೂಲತೆಗೆ ತಕ್ಕಂತೆ ನೀವು ಯಾವುದಾದರೂ ಒಂದು ಕ್ರಮವನ್ನು ಅನುಸರಿಸಬಹುದಾಗಿದೆ.

ಮೊದಲನೆಯದಾಗಿ ಮಜ್ಜಿಗೆ. ಸ್ನೇಹಿತರೇ ಆಮ್ಲೀಯತೆಗೆ ಅತ್ಯುತ್ತಮ ಔಷಧ ಎಂದರೆ ಅದು ಮಜ್ಜಿಗೆ. ಇದು ನೈಸರ್ಗಿಕ ಶೀತಕವು ಆಗಿದೆ. ಒಂದು ವೇಳೆ ನಿಮಗೆ ಎದೆಯುರಿ ಹಠಾತ್ ಕಾಣಿಸಿಕೊಂಡರೇ ಒಂದು ಲೋಟ ತಂಪಾದ ಮಜ್ಜಿಗೆಯಿಂದ ನೀವು ನಿವಾರಣೆ ಪಡೆಯಬಹುದಾಗಿದೆ. ಮಜ್ಜಿಗೆ ಯಲ್ಲಿರುವ ಲ್ಯಾಕ್ಟಿಕ್ ಆಮ್ಲವು ನಿಮ್ಮ ಹೊಟ್ಟೆಯಲ್ಲಿರುವ ಆಮ್ಲವನ್ನು ತಟಸ್ಥಗೊಳಿಸುತ್ತದೆ. ಇದರಿಂದ ನಿಮ್ಮ ಆಮ್ಲೀಯತೆಗೆ ಲಕ್ಷಣಗಳು ಕಡಿಮೆಯಾಗುತ್ತವೆ. ಅಷ್ಟೇ ಅಲ್ಲದೆ ಮಚ್ಚಿ ಕೈಯಲ್ಲಿರುವ ಪ್ರೋಬಯಾಟಿಕ್ ಎಂಬ ಅಂಶ ನಿಮ್ಮ ಜೀವನ ಕ್ರಿಯೆಗೆ ಬಹಳ ಸಹಾಯ ಮಾಡುತ್ತದೆ. ಇದರಿಂದ ಹೊಟ್ಟೆ ಉಬ್ಬುವಿಕೆ ಕೂಡ ಕಡಿಮೆಯಾಗುತ್ತದೆ. ಇನ್ನು ನೀವು ಶಾಶ್ವತವಾಗಿ ಕಡಿಮೆ ಮಾಡಿಕೊಳ್ಳಬೇಕು ಅಂದರೆ ಕೆಲವು ದಿನಗಳ ಕಾಲ ನಿಮ್ಮ ಊಟದ ಜೊತೆ ಒಂದು ಕ್ಲಾಸ್ ಮಜ್ಜಿಗೆ ಕುಡಿಯಿರಿ, ಕ್ರಮೇಣ ನಿಮ್ಮ ಆಮ್ಲೀಯತೆ ಸಂಪೂರ್ಣ ಕಡಿಮೆಯಾಗುತ್ತದೆ. ಸಾಧ್ಯವಾದರೆ ಚಿಟಿಕೆ ಕರಿಮೆಣಸು ಪುಡಿಯನ್ನು ಮಜ್ಜಿಗೆಯಲ್ಲಿ ಸೇರಿಸಿ ಇದು ಬಹಳ ಪ್ರಯೋಜನಕಾರಿ ಆಗುತ್ತದೆ.

ಇನ್ನು ಎರಡನೆಯದಾಗಿ ಬಾದಾಮಿ, ಸ್ನೇಹಿತರೇ ಬಾದಾಮಿಯಲ್ಲಿ ವಿಟಮಿನ್ ಎ ಬಹಳ ಹೇರಳವಾಗಿ ಸಿಗುತ್ತದೆ. ಉತ್ಕರ್ಷಣ ನಿರೋಧಕಗಳು ಮತ್ತು ನೈಸರ್ಗಿಕ ಎಣ್ಣೆಗಳು ಹೇರಳವಾಗಿ ಬಾದಾಮಿಯಲ್ಲಿ ಸಿಗುತ್ತದೆ. ಇದರಿಂದ ನೀವು ಬಾದಾಮಿ ಸೇವಿಸಿದರೇ ಆಮ್ಲೀಯತೆ ಮತ್ತು ಹುಣ್ಣುಗಳನ್ನು ನೈಸರ್ಗಿಕವಾಗಿ ಕಡಿಮೆ ಮಾಡುತ್ತದೆ. ನಿಮ್ಮ ಹೊಟ್ಟೆಯಲ್ಲಿರುವ ಆಮ್ಲ ತಟಸ್ಥ ವಾಗುತ್ತದೆ. ಇವುಗಳಲ್ಲಿ ಹೆಚ್ಚಿನ ನಾರಿನಂಶ ಇರುವ ಕಾರಣ ಜೀರ್ಣಕ್ರಿಯೆ ಪ್ರಕ್ರಿಯೆ ಬಹಳ ಸುಲಭವಾಗುತ್ತದೆ.

ಇನ್ನು ಬೆಲ್ಲ, ಸ್ನೇಹಿತರೇ ನಮ್ಮ ಹಿರಿಯರು ಊಟ ಮುಗಿಸಿದ ತಕ್ಷಣ ಒಂದು ಚಿಕ್ಕ ಪ್ರಮಾಣದಲ್ಲಿ ಬೆಲ್ಲ ಸೇವಿಸುತ್ತಿದ್ದರು. ನಿಮಗೂ ಕೂಡ ಬೆಲ್ಲ ಸೇವಿಸಿ ಎಂದು ಹೇಳಿರುತ್ತಾರೆ, ಆದರೆ ನಾವು ಅಭ್ಯಾಸವನ್ನು ಬಿಟ್ಟಿದ್ದೇವೆ. ನಿಮಗೆ ಒಂದು ವೇಳೆ ಆಮ್ಲೀಯತೆ ಕಾಣಿಸಿಕೊಳ್ಳುತ್ತಿದ್ದರೇ, ದಯವಿಟ್ಟು ಊಟದ ಬಳಿಕ ಚಿಕ್ಕ ಪ್ರಮಾಣದಲ್ಲಿ ಬೆಲ್ಲವನ್ನು ಸೇವಿಸಿ. ಯಾಕೆಂದರೆ ಬೆಲ್ಲದಲ್ಲಿರುವ ಮೆಗ್ನೀಷಿಯಂ ಶಕ್ತಿಯನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಿಂದ ನಿಮ್ಮ ಅಜೀರ್ಣತೆಯ ಪ್ರಮಾಣ ಕಡಿಮೆಯಾಗುತ್ತದೆ. ಇದು ಬಹಳ ಸುಲಭ ವಿಧಾನ ಎಂದು ಹೇಳಬಹುದಾಗಿದೆ.

ಇನ್ನು ನಾಲ್ಕನೆಯದಾಗಿ ಬಾಳೆಹಣ್ಣುಗಳು, ಸ್ನೇಹಿತರೇ ಬಾಳೆಹಣ್ಣನ್ನು ಸೇವಿಸಿದರೇ ಆಮ್ಲೀಯತೆ ಕಡಿಮೆಯಾಗುತ್ತದೆ ಎಂದು ಹಲವಾರು ಜನ ಸಲಹೆ ಸಲಹೆ ನೀಡಿರುವುದನ್ನು ನೀವು ಕೇಳಿರಬಹುದು. ನಾವು ಕಾರಣವನ್ನು ಕೂಡ ನೀಡುತ್ತೇವೆ. ಸ್ನೇಹಿತರೇ ಬಾಳೆಹಣ್ಣು ಗಳಲ್ಲಿ ಸಾಕಷ್ಟು ಪ್ರಮಾಣದ ನಾರಿನ ಅಂಶ ಇರುವ ಕಾರಣ ನಿಮ್ಮ ಕರುಳು ಮತ್ತು ಹೊಟ್ಟೆ ಬಾಳೆ ಹಣ್ಣು ಸೇವಿಸುವುದರಿಂದ ಆರೋಗ್ಯವಾಗಿರುತ್ತದೆ. ಅಷ್ಟೇ ಅಲ್ಲದೆ ಈ ಬಾಳೆಹಣ್ಣಿನಲ್ಲಿ ಪೊಟಾಶಿಯಂ ಹೆಚ್ಚಿರುವ ಕಾರಣ ನಿಮ್ಮ ಹೊಟ್ಟೆಯಲ್ಲಿ ಲೋಳೆಯ ಪೀಳಿಗೆಯನ್ನು ನಿಭಾಯಿಸುತ್ತದೆ. ಹೊಟ್ಟೆಯಲ್ಲಿ ಅತಿಯಾದ ಆಮ್ಲಗಳ ರಚನೆಯನ್ನು ಕಡಿಮೆ ಮಾಡಲು ಲೋಳೆಯು ಸಹಾಯ ಮಾಡುತ್ತದೆ ಎಂದು ವೈದ್ಯ ಶಾಸ್ತ್ರ ಹೇಳುತ್ತದೆ.

ಸ್ನೇಹಿತರೇ ನಮಗೆಲ್ಲರಿಗೂ ತಿಳಿದಿರುವಂತೆ ಪುದೀನ ಒಂದು ಶೀತಕ ಪದಾರ್ಥವಾಗಿದೆ. ಆಮ್ಲೀಯತೆಯು ನಿಮ್ಮ ದೇಹದಲ್ಲಿ ಹೆಚ್ಚಾದಾಗ ಪುದೀನ ಎಲೆಗಳು ಎದೆಯುರಿಯನ್ನು ಕಡಿಮೆ ಮಾಡುತ್ತವೆ. ಇನ್ನು ಅಸಿಡಿಟಿಗೆ ಪ್ರಮುಖ ಕಾರಣವಾದ ಅಜೀರ್ಣತೆಯನ್ನು ಪುದಿನ ನಿವಾರಿಸುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೇ, ಕೆಲವು ಪುದೀನ ಎಲೆಗಳನ್ನು ನೀರಿನಲ್ಲಿ ಕುದಿಸಿ, ತಡ ನಂತರ ಆ ನೀರನ್ನು ನಿಮ್ಮ ದೇಹಕ್ಕೆ ಅನುಗುಣವಾದ ತಾಪಮಾನದಲ್ಲಿ ಕುಡಿಯಿರಿ. ಇದರಿಂದ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ.

ಸ್ನೇಹಿತರೇ , ಈ ಮೇಲಿನ ಎಲ್ಲಾ ಮಾಹಿತಿಗಳು ನಿಮಗೆ ಆಮ್ಲೀಯತೆ ಕಾಣಿಸಿಕೊಂಡರೇ ಹೇಗೆ ನಿವಾರಣೆ ಮಾಡಬೇಕು ಎಂದು ತಿಳಿಸುತ್ತವೆ. ಆದರೆ ನೀವು ಆಮ್ಲಿಯತೆ ಬರದ ಹಾಗೇ ನಿಲ್ಲಿಸಬೇಕು ಎಂದರೇ ಸುಲಭವಾದ ವಿಧಾನವೆಂದರೇ ನಿಮ್ಮ ಹೊಟ್ಟೆಯನ್ನು ಆರೋಗ್ಯವಾಗಿಡುವುದು. ಒಂದು ವೇಳೆ ನೀವು ನಿಮ್ಮ ಹೊಟ್ಟೆಯನ್ನು ಆರೋಗ್ಯವಾಗಿ ಇಡಬೇಕು ಎಂದರೇ ಎಳನೀರು ಉತ್ತಮ ಆಯ್ಕೆಯಾಗಿದೆ. ಈ ನೈಸರ್ಗಿಕ ಪಾನೀಯದಲ್ಲಿ ಫೈಬರ್ ಅಂಶಗಳು ಹೇರಳವಾಗಿವೆ, ಇದರಿಂದ ನಿಮ್ಮ ಕರುಳು ಕೆಲಸ ನಿರ್ವಹಿಸಲು ಸಹಾಯವಾಗುತ್ತದೆ, ಇದರಿಂದ ನಿಮ್ಮ ದೇಹದಲ್ಲಿ ಆಮ್ಲ ಉತ್ಪಾದನೆ ಯಾಗುವುದಿಲ್ಲ. ಆದರಿಂದ ಒಂದು ವೇಳೆ ನೀವು ಎಳನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೇ ನಿಮಗೆ ಆಮ್ಲಿಯತೆ ಕಾಣಿಸಿಕೊಳ್ಳುವುದಿಲ್ಲ.

Post Author: Ravi Yadav