ಜೈ’ಲಿನಿಂದ ವಾಪಾಸ್ ಬಂದ ಮೇಲೆ ತನ್ನ ಸ್ಟಾರ್ ಪಟ್ಟ ‌ಬಹುತೇಕ ಕಳೆದು ಹೋದರೂ ನೂರಾರು ಯೋಧರ ಕುಟುಂಬಗಳಿಗೆ ನಟ ಸುಮನ್ ಮಾಡಿದ್ದೇನು ಗೊತ್ತಾ??

ಜೈ’ಲಿನಿಂದ ವಾಪಾಸ್ ಬಂದ ಮೇಲೆ ತನ್ನ ಸ್ಟಾರ್ ಪಟ್ಟ ‌ಬಹುತೇಕ ಕಳೆದು ಹೋದರೂ ನೂರಾರು ಯೋಧರ ಕುಟುಂಬಗಳಿಗೆ ನಟ ಸುಮನ್ ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಒಂದೆಡೆ ಪಾಕಿಸ್ತಾನ ಮತ್ತೊಂದೆಡೆ ಚೀನಾ ದೇಶಗಳಿಂದ ಭಾರತ ಮಾತೆಯನ್ನು ರಕ್ಷಿಸಲು ನಮ್ಮ ಸೈನಿಕರು ‌ಹಿಮಾಲಯದಲ್ಲಿ ‌ಮಾತ್ರವಲ್ಲದೇ ದೇಶದ ಎಲ್ಲಾ ಗಡಿಗಳಲ್ಲಿಯೂ ಕೂಡ ಎಂತಹ ವಾತಾವರಣವಿದ್ದರೂ ಕೂಡ ಸದೃಢವಾಗಿ ನಿಂತು ನಮ್ಮೆಲ್ಲರನ್ನು ರಕ್ಷಿಸುತ್ತಿದ್ದಾರೆ. ರಾಜಸ್ಥಾನದಲ್ಲಿ 50 ಡಿಗ್ರಿ ಗೂ ಹೆಚ್ಚು ತಾಪಮಾನ ವಿರುವ ಸಂದರ್ಭ ಸೇರಿದಂತೆ ಹಿಮಾಲಯದಲ್ಲಿ ‌ಮೈನಸ್ ಡಿಗ್ರಿಗಳ ವಾತಾವರಣವೂ ಕೂಡ ನಮ್ಮ ದೇಶದ ಸೈನಿಕರನ್ನು ತಡೆಯುವಲ್ಲಿ ವಿಫಲವಾಗಿವೆ. ಇನ್ನು ಪಾಕಿಸ್ತಾನ, ಚೀನಾ ಎನ್ನುತ್ತೀರಾ, ಆ ದೇಶಗಳ ಸೈನಿಕರಿಗೆ ಭಾರತೀಯ ಸೇನೆಯ ಸೈನಿಕರ ತಾಕತ್ತು ಕಂಡರೇ ನಿಂತಲ್ಲಿ ಒಂದು ಕ್ಷಣ ನ’ಡುಕ ಹುಟ್ಟಿಸುತ್ತದೆ. ಇದಕ್ಕೆ ಸ್ಪಷ್ಟ ಸಾಕ್ಷಿ ಎಂದರೆ ಕೆಲವೇ ಕೆಲವು ದಿನಗಳ ಹಿಂದೆ ಚೀನಾ ಸೈನಿಕರು ಭಾರತದ ಗಡಿಯಲ್ಲಿ ನಿಯೋಜನೆಯಾದಾಗ ಕಣ್ಣಲ್ಲಿ ನೀರು ಹಾಕಿಕೊಂಡು ಬರುತ್ತಿದ್ದ ವಿಡಿಯೋ ತುಣುಕುಗಳು ಸಾಕಷ್ಟು ಸಿಕ್ಕಿವೆ.

ಇಷ್ಟೆಲ್ಲಾ ಕಷ್ಟಪಟ್ಟು ನಮ್ಮನ್ನು ರಕ್ಷಿಸುವ ಸೈನಿಕರಿಗೆ ನಾವು ಧನ್ಯವಾದಗಳನ್ನು ಬಿಟ್ಟರೆ ಬೇರೆ ಏನು ಹೇಳಲು ಸಾಧ್ಯವಿದೆ ಅಲ್ಲವೇ. ಇನ್ನೂ ಹೆಚ್ಚೆಂದರೇ ಅವರು ಗಡಿಯಲ್ಲಿ ನಮ್ಮನ್ನು ರಕ್ಷಣೆ ಮಾಡುವಂತೆ ಅವರಿಗೇನಾದರೂ ಆದರೆ ಅವರ ಕುಟುಂಬವನ್ನು ದೇಶದ ಜನರು ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ನೀಡಿದರೇ ಸಾಕು ಎಂದೆನಿಸುತ್ತದೆ.‌ ಇದೇ ಧೈರ್ಯವನ್ನು ದೇಶದ ಹಲವಾರು ಸೆಲೆಬ್ರಿಟಿಗಳು ಸೇರಿದಂತೆ ಸಾಮಾನ್ಯ ಜನರೂ ಕೂಡ ಹಲವಾರು ಬಾರಿ ನೀಡಿದ್ದಾರೆ. ಇಂದು ಅದೇ ರೀತಿ ಯೋಧರ ಕುಟುಂಬದ ಪರವಾಗಿ ನಿಂತ ಒಬ್ಬ ನಟನ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ. ಇವರ ವಿಷಯದಲ್ಲಿ ಒಂದು ವಿಶೇಷತೆ ಕೂಡ ಇದೆ, ಆ ವಿಶೇಷತೆಯನ್ನು ಕೂಡ ನಾವು ನಿಮಗೆ ತಿಳಿಸಿಕೊಡುತ್ತೇವೆ. ಬನ್ನಿ ನಟ ಸುಮನ್ ರವರು ಯಾವ ರೀತಿ ಮಾನವೀಯತೆ ಮೆರೆದಿದ್ದಾರೆ ಎಂಬುದನ್ನು ನೋಡೋಣ.

ಸ್ನೇಹಿತರೇ ನಟ ಸುಮನ್ ರವರು ಒಂದು ಕಾಲದಲ್ಲಿ ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ನಟಿಸಿ, ಹಲವಾರು ಪಾತ್ರಗಳಿಗೆ ಜೀವ ತುಂಬಿ ಅದ್ಭುತ ನಟನೆ ಮಾಡುತ್ತಾರೆ ಎಂದು ಅನಿಸಿಕೊಂಡಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ವಿಪರ್ಯಾಸವೆಂಬಂತೆ ಯಾವುದು ಕಾಣದ ಕೈಗಳಿಗೆ ಸಿಲುಕಿ ಒಂದು ವರ್ಷ ಕಂಬಿ ತಿಳಿಸಿದರು. ಇದರಿಂದ ಅವರ ಜೀವನವು ಬಹುತೇಕ ತಿರುವು ಪಡೆದುಕೊಂಡಿತು, ಜೈ’ಲಿನಿಂದ ವಾಪಸ್ಸಾದ ಮೇಲೆ ಮೊದಲಿನಷ್ಟು ಅವಕಾಶಗಳು ಬರುತ್ತಿರಲಿಲ್ಲ. ಆದರೂ ಕೂಡ ಎಂದಿಗೂ ಸುಮನ್ ರವರು ಯಾವುದಕ್ಕೂ ತಲೆ ಕೆ’ಡಿಸಿಕೊಳ್ಳಲಿಲ್ಲ. ಇಂತಹ ಸಂದರ್ಭದಲ್ಲಿ ಎಲ್ಲರೂ ಹಣಗಳಿಸುವ ಬಗ್ಗೆ ಯೋಚನೆ ಮಾಡುತ್ತಾರೆ. ಆದರೆ ನಟ ಸುಮಂತ್ ಅವರು ಹಣದ ಬಗ್ಗೆ ಯೋಚನೆ ಮಾಡಿಲ್ಲ, ಬದಲಾಗಿ ಯೋಧರ ಕುಟುಂಬಗಳ ಬಗ್ಗೆ ಯೋಚನೆ ಮಾಡಿ ಹೈದರಾಬಾದಿನ ಭುವನಗಿರಿ ಬಳಿ ಒಂದು ಎಕರೆಗೆ ಕೋಟಿಗಳಷ್ಟು ಬೆಲೆಬಾಳುವ ಬರೋಬ್ಬರಿ 170 ಎಕರೆ ಜಮೀನನ್ನು ಯೋಧರ ಕುಟುಂಬಗಳಿಗೆ ಬಿಟ್ಟುಕೊಟ್ಟಿದ್ದರು. ಈ ಜಮೀನಿನ ಬೆಲೆ ಪಕ್ಕದಲ್ಲೇ ಮೆಟ್ರೋ ರೈಲು ಕಾಮಗಾರಿ ಆರಂಭವಾಗುತ್ತದೆ ಎಂಬ ಸುದ್ದಿ ಕೇಳಿ ಬರುತ್ತಿದ್ದ ಕಾರಣ ಇನ್ನೂ ನೂರಾರು ಕೋಟಿಗಳಷ್ಟು ಹೆಚ್ಚಾಗುವ ಲೆಕ್ಕಾಚಾರಗಳು ಕೇಳಿಬರುತ್ತಿದ್ದವು.

ಆದರೆ ನಟ ಸುಮಂತ್ ಅವರು ಅದ್ಯಾವುದಕ್ಕೂ ತಲೆಕೆ’ಡಿಸಿಕೊಳ್ಳದ ಯೋಧರ ಕುಟುಂಬಗಳಿಗೆ ಬೆಂಬಲ ನೀಡುವ ಸಲುವಾಗಿ ತನ್ನ ಜಮೀನನ್ನು ದಾನಮಾಡಿದರು. ಇನ್ನೊಂದು ವಿಶೇಷತೆ ಏನೆಂದರೆ ಇವರು ತಾವು ಯೋಧರ ಕುಟುಂಬಗಳಿಗೆ ಜಮೀನು ನೀಡಿದ್ದಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಅಲ್ಲಿ ಕ್ರಮೇಣ ಯೋಧರ ಕುಟುಂಬಗಳು ಹೆಚ್ಚಾದಾಗ ಜನರನ್ನು ಪ್ರಶ್ನೆ ಮಾಡಿದರೇ ಈ ವಿಷಯ ಬಯಲಾಯಿತು. ಕೆಲವು ಆಪ್ತ ವರ್ಗಗಳಿಗೆ ಹಾಗೂ ಕೆಲವೊಂದು ಚಿಕ್ಕ ಮೀಡಿಯಾಗಳಲ್ಲಿ ಮಾತ್ರ ಈ ವಿಷಯ ಪ್ರಸಾರವಾಗಿತ್ತು. ಅವುಗಳನ್ನು ಹೊರತುಪಡಿಸಿದರೇ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸತ್ಯ ಬಯಲಾಗಿದೆ. ಈ ರೀತಿಯ ಜನ ಸಿಗುವುದು ಬಹಳ ಅಪರೂಪ ಯೋಧರ ಕುಟುಂಬಗಳಿಗೆ ನೆರವಾದ ಸುಮಂತ್ ಅವರಿಗೆ ನಮ್ಮ ತಂಡದ ಪರವಾಗಿ ದೊಡ್ಡದೊಂದು ಸೆಲ್ಯೂಟ್.