ಕೇವಲ ರೋಗನಿರೋಧಕ ಶಕ್ತಿ ಅಷ್ಟೇ ಅಲ್ಲ ನಿಂಬೆಹಣ್ಣು ಹೀಗೆಲ್ಲಾ ಬಳಸಿದರೇ ಎಷ್ಟು ಲಾಭಗಳಿವೆ ಗೊತ್ತಾ?

ಕೇವಲ ರೋಗನಿರೋಧಕ ಶಕ್ತಿ ಅಷ್ಟೇ ಅಲ್ಲ ನಿಂಬೆಹಣ್ಣು ಹೀಗೆಲ್ಲಾ ಬಳಸಿದರೇ ಎಷ್ಟು ಲಾಭಗಳಿವೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಕೋರೋಣ ಕಾಣಿಸಿಕೊಂಡ ಕ್ಷಣದಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಸಿ ಹೇರಳವಾಗಿ ಸಿಗುವ ನಿಂಬೆ ಹಣ್ಣನ್ನು ಬಳಸಿ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆಯುರ್ವೇದ ಶಾಸ್ತ್ರದಿಂದ ಹಿಡಿದು ಎಲ್ಲಾ ವೈದ್ಯರು ಕೂಡ ನಿಂಬೆಹಣ್ಣು ಬಳಸುವಂತೆ ಜನರಿಗೆ ಮನವಿ ಮಾಡುತ್ತಿದ್ದಾರೆ. ಆದರೆ ಕೇವಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಒಂದು ನಿಂಬೆ ಹಣ್ಣಿನಿಂದ ನೀವು ಹಲವಾರು ಸಮಸ್ಯೆಗಳಿಗೆ ಮುಕ್ತಿ ಪಡೆಯಬಹುದಾಗಿದೆ. ಹಲವಾರು ಸಮಸ್ಯೆಗಳಿಗೆ ನಿಂಬೆಹಣ್ಣು ರಾಮಬಾಣ ಎಂದರೆ ತಪ್ಪಾಗಲಾರದು. ಬನ್ನಿ ನಾವು ಇಂದು ನಿಂಬೆ ಹಣ್ಣಿನ ಲಾಭಗಳು ಹಾಗೂ ಯಾವ ರೀತಿ ಸೇವಿಸಿದರೆ ಯಾವೆಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಮೊದಲನೇದಾಗಿ ಸ್ನೇಹಿತರೇ ನೀವು ಒಂದು ವೇಳೆ ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದರೇ ನೀವು ಒಂದು ಲೋಟ ಬಿಸಿ ನೀರಿಗೆ ನಿಂಬೆ ಹಣ್ಣಿನ ರಸವನ್ನು ಮಿಶ್ರಣ ಮಾಡಿಕೊಂಡು ಅದಕ್ಕೆ ಚಿಟಿಕೆಯಷ್ಟು ಅಡುಗೆ ಸೋಡಾ ಬೆರೆಸಿ ಸೇವಿಸಿದರೆ ಶೀಘ್ರವೇ ಅಜೀರ್ಣ ಸಮಸ್ಯೆಯಿಂದ ಮುಕ್ತಿ ಹೊಂದುವಿರಿ. ಇನ್ನು ಅಷ್ಟೇ ಅಲ್ಲದೇ ನಿಂಬೆ ಹಣ್ಣಿನ ವಾಸನೆ ಅಥವಾ ನಿಂಬೆಹಣ್ಣಿನ ರಸಕ್ಕೆ ಸಕ್ಕರೆ ಮಿಶ್ರಣ ಮಾಡಿ ಸ್ವಲ್ಪ ಸೇವನೆ ಮಾಡಿದರೆ ನಿಮಗೆ ವಾಂತಿ ಬರುವ ಭಾವನೆ ದೂರವಾಗಿ ವಾಂತಿ ನಿಲ್ಲುತ್ತದೆ.

ಇನ್ನೂ ನಿಂಬೆಹಣ್ಣಿನ ರಸಕ್ಕೆ, ಅದರ ಅರ್ಧ ಭಾಗದಷ್ಟು ಹರಳೆಣ್ಣೆಯನ್ನು ಸೇರಿಸಿ ನೀವು ಕುಡಿಯುವುದರಿಂದ ಹೊಟ್ಟೆ ನುಲುಯುವಿಕೆಯಿಂದ ಪರಿಹಾರ ಪಡೆದುಕೊಳ್ಳ ಬಹುದಾಗಿದೆ. ಇನ್ನೂ ಒಂದು ವೇಳೆ ನೀವು ದೀರ್ಘಕಾಲದಿಂದ ಅಜೀರ್ಣತೆ ಸಮಸ್ಯೆಯಿಂದ ಬಳಲುತ್ತಿದ್ದರೆ ನೀವು ನೀರಿಗೆ ಉಪ್ಪು ಮತ್ತು ನಿಂಬೆ ಹಣ್ಣಿನ ರಸ ಮಿಶ್ರಣ ಮಾಡಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಕೆಲವೇ ಕೆಲವು ದಿನಗಳಲ್ಲಿ ಎಂತಹ ದೀರ್ಘಕಾಲದ ಅಜೀರ್ಣ ಸಮಸ್ಯೆ ಆಗಿದ್ದರೂ ಕೂಡಾ ನಿವಾರಣೆಯಾಗುತ್ತದೆ. ಇನ್ನು ನೀವು ನಿಂಬೆಹಣ್ಣಿನ ರಸವನ್ನು ನೇರವಾಗಿ ಸೇವಿಸುವುದರಿಂದ ನಿಮಗೆ ಹುಳಿತೇಗು ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅಷ್ಟೇ ಅಲ್ಲ ಒಂದು ಲೋಟ ಕುರಿಯ ಹಾಲಿಗೆ ನಿಂಬೆಹಣ್ಣಿನ ರಸ ಸೇವಿಸುವುದರಿಂದ ಆಮಶಂಕೆ ಸಮಸ್ಯೆ ನಿವಾರಣೆಯಾಗುತ್ತದೆ. ಇಷ್ಟೇ ಅಲ್ಲ ನೀವು ಹತ್ತು ದಿನಗಳ ಕಾಲ ಹಾಲು ಕರೆದ ಕೆಲವೇ ನಿಮಿಷಗಳಲ್ಲಿ ಹಾಲಿಗೆ ನಿಂಬೆ ಹಣ್ಣಿನ ರಸ ಸೇರಿಸಿ ಕುಡಿಯುವುದರಿಂದ ಮೂಲವ್ಯಾದಿ ನಿವಾರಣೆಯಾಗುತ್ತದೆ. ಇನ್ನು ಕೊನೆಯದಾಗಿ ನಿಂಬೆಹಣ್ಣಿನ ನಿಮ್ಮ ದೈನಂದಿನ ಪಾಕಪದ್ಧತಿಯಲ್ಲಿ ಬಳಸಲು ಪ್ರಾರಂಭಿಸಿದರೇ ನಿಮ್ಮ ಮುಖದ ಮೇಲೆ ಕಂಡುಬರುವ ಸುಕ್ಕುಗಳು ಕಡಿಮೆಯಾಗುತ್ತವೆ.