ಈ ಸುಲಭ ಮನೆಮದ್ದಿನಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು, ಕನ್ನಡಕ ಧರಿಸುವ ಪರಿಸ್ಥಿತಿ ಬರದಂತೆ ತಪ್ಪಿಸಬಹುದು !

ಈ ಸುಲಭ ಮನೆಮದ್ದಿನಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು, ಕನ್ನಡಕ ಧರಿಸುವ ಪರಿಸ್ಥಿತಿ ಬರದಂತೆ ತಪ್ಪಿಸಬಹುದು !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ನಾವು ದೇಹದ ಆರೋಗ್ಯ ಕಾಪಾಡಿಕೊಂಡಂತೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ಬಹಳ ಅಗತ್ಯವಾಗಿದೆ. ಅದರಲ್ಲಿಯೂ ಇಂದಿನ ಆಧುನಿಕ ಜೀವನದಲ್ಲಿ ಸಾಮಾನ್ಯವಾಗಿ ಜನರು ತಮ್ಮ ದಿನಚರಿಯ ಬಹುತೇಕ ಅವಧಿಯನ್ನು ಕಂಪ್ಯೂಟರ್ ಅಥವಾ ಮೊಬೈಲ್ ಗಳ ಮುಂದೆ ಕಳೆಯುತ್ತಾರೆ. ಇದರಿಂದ ಕಣ್ಣಿಗೆ ಒತ್ತಡ ಹೆಚ್ಚಾಗಲಿದೆ. ಆದ ಕಾರಣ ನಾವು ಕಣ್ಣಿನ ಆರೋಗ್ಯದ ಕುರಿತು ಗಮನ ಹರಿಸಬೇಕಾದ ಉತ್ತಮ ಸಮಯ ಮತ್ತೊಂದಿಲ್ಲ. ಈಗಾಗಲೇ ಚಿಕ್ಕ ಪುಟ್ಟ ಮಕ್ಕಳು ಕೂಡ ಕಣ್ಣಿಗೆ ಕನ್ನಡಕ ಹಾಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಆದರೆ ನಾವು ಕೊಂಚ ಮುಂಜಾಗ್ರತೆ ವಹಿಸಿ ಈ ಕೆಳಗಿನ ಪದ್ಧತಿಗಳ ಮೂಲಕ ನಾವು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಹೌದು ಸ್ನೇಹಿತರೇ ನೀವು ಸಾಮಾನ್ಯವಾಗಿ ಕಂಪ್ಯೂಟರ್ ಅಥವಾ ಮೊಬೈಲ್ ಬಳಸುತ್ತಿರುವ ಸಂದರ್ಭದಲ್ಲಿ ಕಣ್ಣು ರೆಪ್ಪೆಗಳು ಕಡಿಮೆ ಬಾರಿ ಮಿಟಿಕಿಸುತ್ತೀರಾ. ಇದರಿಂದ ನಿಮ್ಮ ಕಣ್ಣುಗಳು ಒಣಗುತ್ತವೆ, ಅಷ್ಟೇ ಅಲ್ಲದೆ ಕಂಪ್ಯೂಟರ್ ಅಥವಾ ಮೊಬೈಲ್ ನಿಂದ ಬರುವ ಬೆಳಕು ನಿಮ್ಮ ಕಣ್ಣಿನ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ದಿನ ಕೊಳ್ಳುವಷ್ಟರಲ್ಲಿ ನಿಮ್ಮ ಕಣ್ಣುಗಳು ಸುಸ್ತಾಗಿರುತ್ತದೆ ಕೆಲವೊಮ್ಮೆ ನೀವು ಹೆಚ್ಚಾಗಿ ಸ್ಕ್ರೀನ್ ನೋಡಿದ ತಕ್ಷಣ ನಿಮಗೆ ಕಣ್ಣು ಉರಿ ಕೂಡ ಪ್ರಾರಂಭವಾಗುತ್ತದೆ. ನೀವು ಇದಕ್ಕಾಗಿ ಆಸ್ಪತ್ರೆಗೆ ತೆರಳಿದರೇ ಅವರು ಕನ್ನಡಕ ನೀಡಿ ನಿಮಗೆ ಕನಿಷ್ಠವೆಂದರೂ ಎರಡು ಸಾವಿರ ರೂಪಾಯಿಗಳಷ್ಟು ಬಿಲ್ ಮಾಡಿ ನೀವು ಜೀವನಪೂರ್ತಿ ಕನ್ನಡಕ ಹಾಕುವಂತೆ ಸಲಹೆ ನೀಡುತ್ತಾರೆ. ಆದರೆ ಸ್ನೇಹಿತರೇ ಈ ಸುಲಭ ಮನೆಮದ್ದುಗಳಿಂದ ನೀವು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು.

ನೀವು ಒಂದು ವೇಳೆ ಕಣ್ಣಿನ ಆರೋಗ್ಯದ ಕುರಿತು ಗಮನಹರಿಸುವುದಾದರೇ ಆಗಾಗ್ಗೆ ನೆಲ್ಲಿಕಾಯಿಯನ್ನು ಸೇವಿಸುತ್ತಿರಿ, ಇದರಲ್ಲಿ ವಿಟಮಿನ್ ಸಿ ಹೆಚ್ಚಿರುವ ಕಾರಣ ಉತ್ಕರ್ಷಣ ನಿರೋಧಕಗಳು ಹಾಗೂ ಅನೇಕ ಪೋಷಕಾಂಶಗಳು ನಿಮ್ಮ ಕಣ್ಣಿನ ದೃಷ್ಟಿ ಹೆಚ್ಚಿಸಲು ಮತ್ತು ಕಣ್ಣಿನಲ್ಲಿರುವ ಸಮಸ್ಯೆಗಳನ್ನು ತೆಗೆದುಹಾಕಲು ಪ್ರಯೋಜನಕಾರಿಯಾಗಿದೆ. ಒಂದು ವೇಳೆ ನಿಮಗೆ ನೆಲ್ಲಿಕಾಯಿ ಪ್ರತಿನಿತ್ಯ ಸೇವನೆ ಮಾಡಲು ಸಾಧ್ಯವಾದರೇ ಅರ್ಧ ಕಪ್ ನೀರಿನಲ್ಲಿ ಒಂದೆರಡು ಸ್ಪೂನ್ ಗಳಷ್ಟು ನೆಲ್ಲಿಕಾಯಿ ರಸವನ್ನು ಬೆರೆಸಿ ದಿನಕ್ಕೆ 2 ಬಾರಿ ಕುಡಿಯಿರಿ. ಇನ್ನು ಸ್ನೇಹಿತರೆ ಸೋಂಪು ಕಾಳುಗಳು ಕೂಡ ಕಣ್ಣುಗಳಿಗೆ ಬಹಳ ಸಹಕಾರಿಯಾಗಿವೆ, ಇದರಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ಕಣ್ಣಿನ ಪೊರೆ ಗಳ ವೇಗವನ್ನು ಕಡಿಮೆ ಮಾಡಿ ನಿಮಗೆ ದೃಷ್ಟಿ ದೋಷ ಬರದಂತೆ ಕಾಪಾಡುತ್ತವೆ. ಒಂದು ವೇಳೆ ಈಗಾಗಲೇ ಕಣ್ಣಿನ ಸಮಸ್ಯೆ ಇದ್ದರೂ ಕೂಡ ಸೋಂಪುಕಾಳು ಗಳನ್ನು ನಿಯಮಿತವಾಗಿ ಬಳಸುವುದರಿಂದ ಕ್ರಮೇಣ ಕಣ್ಣುಗಳ ಸಮಸ್ಯೆಗಳು ಮಾಯವಾಗುತ್ತವೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ಸೋಂಪು ಕಾಳುಗಳನ್ನು ಸಕ್ಕರೆ ಮತ್ತು ಬಾದಾಮಿಯ ಜೊತೆ ಪುಡಿಮಾಡಿ ಪ್ರತಿದಿನ ಮಲಗುವ ಮುನ್ನ 1 ಟೀಚಮಚ ಈ ಪುಡಿಯನ್ನು ಹಾಲಿನ ಜೊತೆ ಸೇವಿಸಿ. ಒಂದು ತಿಂಗಳ ನಂತರ ನಿಮಗೆ ಪಲಿತಾಂಶ ಕಾಣಿಸುತ್ತದೆ.

ಇಷ್ಟೇ ಅಲ್ಲದೆ ಇನ್ನೂ ವಿವಿಧ ರೀತಿಯಲ್ಲಿಯೂ ಕೂಡ ಕಣ್ಣಿನ ಆರೋಗ್ಯ ಕಾಪಾಡಿ ಕೊಳ್ಳಬಹುದಾಗಿದ್ದು ನೀವು ಬಾದಾಮಿ ತಿನ್ನುವುದರಿಂದ ನಿಮ್ಮ ಮೆಮೊರಿ ಶಕ್ತಿಯನ್ನು ಹೆಚ್ಚಿಸಿಕೊಂಡು, ಅದರಲ್ಲಿ ಕಂಡುಬರುವ ಒಮೆಗಾ-3 ಕೊಬ್ಬಿನ ಆಮ್ಲಗಳು, ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ ಗಳು ನಿಮ್ಮ ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತವೆ. ಇದಕ್ಕಾಗಿ ನೀವು ರಾತ್ರಿಯಲ್ಲಿ ಬಾದಾಮಿಯನ್ನು ನೀರಿನಲ್ಲಿ ನೆನೆಸಿ, ಬೆಳಗ್ಗೆ ಇದನ್ನು ತಿಂದರೆ ನಿಮ್ಮ ದೃಷ್ಟಿಯಲ್ಲಿ ಸುಧಾರಣೆ ಕಾಣುತ್ತದೆ. ಈ ಎಲ್ಲಾ ವಿಧಾನಗಳಿಂದ ಹೆಚ್ಚುತ್ತಿರುವ ಕಣ್ಣಿನ ಸಮಸ್ಯೆಗಳಿಗೆ ಬ್ರೇಕ್ ಹಾಕಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಹಾಗೂ ಕನ್ನಡಕದಿಂದ ನಾವು ದೂರ ಉಳಿಯಬಹುದಾಗಿದೆ.