ಬಿಗ್ ನ್ಯೂಸ್: ಸುಶಾಂತ್ ತನಿಖೆಯಲ್ಲಿ ಸಲ್ಮಾನ್, ಕರುಣ್ ಕದ ತಟ್ಟಲು ಒಂದೇ ಮೆಟ್ಟಿಲು ಬಾಕಿ ! ನಡೆತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಎನ್ಸಿಬಿ ಸಂಸ್ಥೆಯು ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯನ್ನು ಮತ್ತೊಂದು ಕೋನದಲ್ಲಿ ತನಿಖೆ ನಡೆಸುತ್ತಿದೆ. ಒಂದೆಡೆ ಸಿಬಿಐ ಸಂಸ್ಥೆಯು ಹಲವಾರು ಜನರನ್ನು ವಿಚಾರಣೆ ಮಾಡುವ ಮೂಲಕ ಸಾಕ್ಷಿ ಸಂಗ್ರಹ ಮಾಡುವ ಕೆಲಸದಲ್ಲಿ ನಿರತರಾಗಿದ್ದರೇ ಮತ್ತೊಂದೆಡೆ ಎನ್ಸಿಬಿ ಸಂಸ್ಥೆಯು ಕೂಡ ಈಗಾಗಲೇ ಹಲವಾರು ಜನರಿಗೆ ನೋಟಿಸ್ ಜಾರಿ ಮಾಡಿ ಬಾಲಿವುಡ್ ಚಿತ್ರರಂಗದ ಡ್ರ’ಗ್ ವಿಚಾರದಲ್ಲಿ ಮಹತ್ವದ ಮಾಹಿತಿ ಕಲೆ ಹಾಕಿ, ಈಗಾಗಲೇ ಹಲವರಿಗೆ ನೋಟಿಸ್ ಜಾರಿ ಮಾಡಿದೆ. ಈಗಾಗಲೇ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯರಾದ ದೀಪಿಕಾ ಪಡುಕೋಣೆ, ರಾಕುಲ್ ಪ್ರೀತ್ ಸಿಂಗ್, ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿ ಖಾನ್ ರವರಿಗೆ ಸಮನ್ಸ್ ನೀಡಲಾಗಿದೆ.

ಈ ಎಲ್ಲಾ ವಿದ್ಯಮಾನಗಳ ನಡುವೆ ಮೊದಲಿನಿಂದಲೂ ಸುಶಾಂತ್ ಸಿಂಗ್ ರಜಪೂತ್ ರವರ ಅಭಿಮಾನಿಗಳು ಬಾಲಿವುಡ್ ಚಿತ್ರರಂಗದಲ್ಲಿ ನಡೆಯುತ್ತಿರುವ ಸ್ವಜನ ಪಕ್ಷಪಾತಕ್ಕೆ ಸಲ್ಮಾನ್ ಖಾನ್ ಹಾಗೂ ನಿರ್ದೇಶಕ ಕರಣ್ ಜೋಹರ್ ರವರು ಪ್ರಮುಖ ಕಾರಣರಾಗಿದ್ದಾರೆ ಎಂದು ವಾದ ಮಂಡಿಸುತ್ತಿದ್ದರು. ಒಂದೆಡೆ ಸ್ವಜನಪಕ್ಷಪಾತದ ಕುರಿತು ಮಾಹಿತಿಗಳನ್ನು ಸಿಬಿಐ ಸಂಸ್ಥೆಯು ಕಲೆ ಹಾಕುತ್ತಿರುವ ಸಂದರ್ಭದಲ್ಲಿ ಡ್ರ’ಗ್ ಗೆ ಸಂಬಂಧಪಟ್ಟಂತೆ ಎನ್ಸಿಬಿ ಸಂಸ್ಥೆಯು ಕೂಡ ಕರಣ್ ಜೋಹರ್ ಹಾಗೂ ಸಲ್ಮಾನ್ ಖಾನ್ ಅವರ ಬಾಗಿಲು ತಟ್ಟಲು ಇನ್ನೊಂದೇ ಮೆಟ್ಟಲು ಬಾಕಿ ಇದೆ. ಯಾವ ಕ್ಷಣದಲ್ಲಿ ಬೇಕಾದರೂ ಇವರಿಬ್ಬರಿಗೆ ಸಮನ್ಸ್ ಜಾರಿಯಾಗಬಹುದು ಎಂಬ ಮಾಹಿತಿ ತಿಳಿದು ಬಂದಿದೆ. ಹೇಗೆ ಎನ್ನುತ್ತೀರಾ? ಇಲ್ಲಿದೆ ನೋಡಿ ಮಾಹಿತಿ.

ಸ್ನೇಹಿತರೇ ಇದೀಗ ಬಂದಿರುವ ಲೇಟೆಸ್ಟ್ ಮಾಹಿತಿಯ ಪ್ರಕಾರ ಅಂತ ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ ಕಂಪನಿಯ ಸಿಬ್ಬಂದಿ ರವಿ ಪ್ರಸಾದ್ ರವರಿಗೆ ಸಮನ್ಸ್ ಜಾರಿಯಾಗಿದೆ. ಇದೇ ಸಂದರ್ಭದಲ್ಲಿ ಕರಣ್ ಜೋಹರ್ ಅವರ ಮನೆಯಲ್ಲಿ ಪಾರ್ಟಿ ನಡೆದ ವಿಚಾರ ಬಹಿರಂಗವಾಗಿದ್ದು ಪಾರ್ಟಿಯಲ್ಲಿ ಡ್ರ’ಗ್ ತೆಗೆದುಕೊಳ್ಳಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ಇದೇ ಕಾರಣಕ್ಕಾಗಿ ಕರಣ್ ಜೋಹರ್ ಅವರಿಗೆ ಸಮನ್ಸ್ ಜಾರಿ ಮಾಡುವುದು ಬಹುತೇಕ ಖಚಿತ ಎನಿಸಿದೆ. ಮತ್ತೊಂದೆಡೆ ಖ್ಯಾತ ಸೆಲೆಬ್ರಿಟಿಗಳಿಗೆ ಡ್ರ’ಗ್ ಸರಬರಾಜು ಮಾಡುವ ಕೆಲಸವನ್ನು ಕ್ವಾನ್ ಸಂಸ್ಥೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದ ತಕ್ಷಣ ಪೊಲೀಸರು ಕ್ವಾನ್ ಸಂಸ್ಥೆಯ ಸಿಇಓ ಧ್ರುವ ರವರಿಗೆ ಸಮನ್ಸ್ ಜಾರಿ ಮಾಡಿದ್ದರು, ಈ ಸಂಸ್ಥೆಯಲ್ಲಿ ಸಲ್ಮಾನ್ ಖಾನ್ ರವರು ಅತಿದೊಡ್ಡ ಪ್ರಮಾಣದ ಷೇರುಗಳನ್ನು ಹೊಂದಿರುವುದಾಗಿ ಮಾಹಿತಿ ಕೇಳಿ ಬಂದಿದೆ. ಇದೇ ಕಾರಣಕ್ಕಾಗಿ ಇದೀಗ ಸಲ್ಮಾನ್ ಖಾನ್ ಅವರಿಗೂ ಕೂಡ ನೋಟಿಸ್ ಜಾರಿ ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ಈ ಮಾಹಿತಿ ಹೊರಬಿದ್ದ ತಕ್ಷಣವೇ ಕೇವಲ ಸಲ್ಮಾನ್ ಖಾನ್ ರವರಷ್ಟೇ ಅಲ್ಲದೆ ಇನ್ನೂ ಬಾಲಿವುಡ್ ಚಿತ್ರರಂಗದ ಖ್ಯಾತ ನಟರು ತಮ್ಮ ವಕೀಲರನ್ನು ಕರೆಸಿಕೊಂಡು ಮುಂದೆ ಯಾವ ರೀತಿಯ ಹೆಜ್ಜೆಗಳನ್ನು ಇಡಬೇಕು ಎಂದು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Post Author: Ravi Yadav