ಆಯುರ್ವೇದ ಟಿಪ್ಸ್: ನೀಲಗಿರಿ ತೈಲ ಬಳಸುವುದರ ಹಿಂದಿರುವ 7 ಅದ್ಭುತ ಪ್ರಯೋಜನಗಳು ಯಾವ್ಯಾವ ಗೊತ್ತಾ??

ಆಯುರ್ವೇದ ಟಿಪ್ಸ್: ನೀಲಗಿರಿ ತೈಲ ಬಳಸುವುದರ ಹಿಂದಿರುವ 7 ಅದ್ಭುತ ಪ್ರಯೋಜನಗಳು ಯಾವ್ಯಾವ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಆಯುರ್ವೇದ ಪದ್ಧತಿಯಲ್ಲಿ ಇಂದಿನ ವಿಜ್ಞಾನಿಗಳು ಹಾಗೂ ನುರಿತ ತಜ್ಞರು ಕಂಡು ಹಿಡಿದಿರುವ ಔಷಧೀಯ ಗುಣಗಳನ್ನು ನಮ್ಮ ಹಿರಿಯರು ಸಾವಿರಾರು ವರ್ಷಗಳ ಹಿಂದೆಯೇ ಕಂಡು ಹಿಡಿದಿದ್ದಾರೆ. ಆಯುರ್ವೇದ ಪದ್ಧತಿಯ ಮೂಲಕ ವಿಶ್ವಕ್ಕೆ ಔಷಧಿ ಗುಣಗಳನ್ನು ತುಂಬಿರುವಂತಹ ಗಿಡಮೂಲಿಕೆಗಳನ್ನು ತೋರಿಸಿಕೊಟ್ಟ ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ನೀಲಗಿರಿ ತೈಲವು ಬಹಳ ಪ್ರಮುಖ ಪಾತ್ರವನ್ನು ಪಡೆದು ಕೊಂಡಿದೆ. ಇಂದು ನಾವು ಈ ನೀಲಗಿರಿ ತೈಲವನ್ನು ಬಳಸಿಕೊಂಡು ಯಾವ್ಯಾವ ರೀತಿಯ ಪ್ರಯೋಜನಗಳನ್ನು ನಾವು ಪಡೆಯಬಹುದು ಎಂಬುದನ್ನು ತೋರಿಸಿ ಕೊಡುತ್ತೇವೆ.

ಸ್ನೇಹಿತರೇ ನೀಲಗಿರಿ ತೈಲವು ಬ್ಯಾಕ್ಟೀರಿಯಾ ಹಾಗೂ ಶಿಲೀಂದ್ರಗಳನ್ನು ತೆಗೆದು ಹಾಕುವಂತಹ ಶಕ್ತಿಯನ್ನು ಹೊಂದಿದೆ. ಆದ ಕಾರಣದಿಂದ ನೀಲಗಿರಿ ತೈಲವನ್ನು ಸು’ಟ್ಟ ಗಾ’ಯಗಳಿಗೆ, ಮೂಗೇಟು ಗಳಿಗೆ ಮತ್ತು ಹುಣ್ಣುಗಳಿಗೆ ಔಷಧಿಯಾಗಿ ಬಳಸಬಹುದಾಗಿದೆ. ನೀವು ಈ ಮೂರು ಗಾ’ಯಗಳಾಗಿರುವ ಸ್ಥಳದಲ್ಲಿ ಆಗಾಗ್ಗೆ ನೀಲಗಿರಿ ತೈಲವನ್ನು ಅನ್ವಯಿಸುವುದರಿಂದ ನಿಮ್ಮ ಗಾ’ಯಗಳು ಬಹು ಬೇಗನೇ ಗುಣವಾಗುತ್ತವೆ. ಮೂಗೇಟು ಗಳ ಮೇಲೆ ಅನ್ವಯಿಸುವುದರಿಂದ ನೋವು ಮತ್ತು ಉರಿಯುತ ಕಡಿಮೆಯಾಗುತ್ತದೆ, ಹುಣ್ಣುಗಳು ಕೂಡ ಬಹುಬೇಗನೆ ಕಡಿಮೆಯಾಗುತ್ತವೆ.

ಕೀಲು ಮತ್ತು ಸ್ನಾಯು ನೋವು ಇರುವವರು ನೋವು ಇರುವ ಪ್ರದೇಶದಲ್ಲಿ ನೀಲಗಿರಿ ತೈಲವನ್ನು ಹಚ್ಚಿ ಮಸಾಜ್ ಮಾಡಿದರೇ ನೋವಿನಿಂದ ಬಹುಬೇಗನೆ ಪರಿಹಾರ ಪಡೆಯಬಹುದಾಗಿದೆ. ಅತಿಸಾರದಿಂದ ಬಳಲುತ್ತಿರುವ ಜನರು ಹೊಟ್ಟೆಯ ಮೇಲ್ಭಾಗದಲ್ಲಿ ಸ್ವಲ್ಪ ನೀಲಗಿರಿ ತೈಲವನ್ನು ಹಚ್ಚಿ ಹೊಟ್ಟೆಯ ಸುತ್ತ ನಿಧಾನವಾಗಿ ಮಸಾಜ್ ಮಾಡಿದರೇ ಬಹುಬೇಗನೆ ಪರಿಹಾರ ಕಂಡು ಕೊಳ್ಳಬಹುದಾಗಿದೆ. ಇನ್ನು ಅಷ್ಟೇ ಅಲ್ಲದೆ ನಿಮಗೆ ಶೀತವಾಗಿ ಮೂಗು ಕಟ್ಟಿಕೊಂಡಿದ್ದರೇ ನೀವು ಬಿಸಿ ನೀರಿನ ಆವಿಯಲ್ಲಿ ನೀಲಗಿರಿ ತೈಲವನ್ನು ಹಾಕಿ ತೆಗೆದುಕೊಂಡರೇ ಅಥವಾ ನೇರವಾಗಿ ನೀಲಗಿರಿ ಎಣ್ಣೆಯ ಪರಿಮಳವನ್ನು ತೆಗೆದುಕೊಂಡರೇ ನಿಮಗೆ ಬಹುಬೇಗನೆ ಪರಿಹಾರ ಸಿಗುತ್ತದೆ.

ನೀವು ನಿಯಮಿತವಾಗಿ ಬಳಸುವ ಪೇಸ್ಟಿನಲ್ಲಿ ನೀಲಗಿರಿ ಎಣ್ಣೆಯನ್ನು ಬೆರೆಸಿ ನೀವು ಹಲ್ಲು ಉಜ್ಜುವುದರಿಂದ ನಿಮ್ಮ ವಸಡುಗಳು ಗಟ್ಟಿಯಾಗುತ್ತವೆ. ಹಲ್ಲುಗಳ ಮೇಲಿನ ಹಳದಿ ಬಣ್ಣವು ಕಣ್ಮರೆಯಾಗುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಹುಸಿರು ದುರ್ವಾಸನೆ ಬರುತ್ತಿದ್ದರೆ ಅದು ಕೂಡ ಕಡಿಮೆಯಾಗುತ್ತದೆ ಹಾಗೂ ಹಲ್ಲುಗಳು ಪ್ರಕಾಶಮಾನವಾಗಿ ಹೊಳೆಯುತ್ತವೆ. ಇನ್ನು ನೀವು ಒಂದು ವೇಳೆ ಕೂದಲು ಉದುರುವಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನೀವು ನೀಲಗಿರಿ ಎಣ್ಣೆಯನ್ನು ಸಣ್ಣ ಪ್ರಮಾಣದಲ್ಲಿ ತೆಗೆದುಕೊಂಡು ಕೂದಲಿಗೆ ಮಸಾಜ್ ಮಾಡಿ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಕೂದಲು ದಪ್ಪ ಹಾಗೂ ಗಟ್ಟಿಯಾಗಿ ಬೆಳೆಯುತ್ತದೆ. ತಲೆಹೊಟ್ಟಿನ ಸಮಸ್ಯೆ ಕೂಡ ನೀಲಗಿರಿ ತೈಲವನ್ನು ಬಳಸುವುದರಿಂದ ಕಡಿಮೆಯಾಗುತ್ತದೆ. ಇನ್ನು ನೀಲಗಿರಿ ತೈಲದ ವಾಸನೆ ನೋಡಿದರೇ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ. ನೀವು ಒಂದು ವೇಳೆ ಬಹಳ ಆಯಾಸಗೊಂಡಿದ್ದರೇ ನೀಲಗಿರಿ ತೈಲ ಪರಿಮಳದಿಂದ ನಿಮ್ಮ ದೇಹ ಹಾಗೂ ಮನಸ್ಸಿಗೆ ಉತ್ಸಾಹ ವಾಪಸ್ಸು ಬರುತ್ತದೆ. ಇದು ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ.