ರಿಯಾ ಇಂದ ಬಯಲಾಗುತ್ತಿದೆ ಬಾಲಿವುಡ್ ಮತ್ತೊಂದು ಮುಖ ! ದೀಪಿಕಾ ಸೇರಿದಂತೆ ಪ್ರಮುಖರಿಗೆ ಬಿಗ್ ಶಾಕ್ ! ಸುಶಾಂತ್ ಫ್ಯಾನ್ಸ್ ಫುಲ್ ಖುಷ್ ಯಾಕೆ ಗೊತ್ತಾ??

ರಿಯಾ ಇಂದ ಬಯಲಾಗುತ್ತಿದೆ ಬಾಲಿವುಡ್ ಮತ್ತೊಂದು ಮುಖ ! ದೀಪಿಕಾ ಸೇರಿದಂತೆ ಪ್ರಮುಖರಿಗೆ ಬಿಗ್ ಶಾಕ್ ! ಸುಶಾಂತ್ ಫ್ಯಾನ್ಸ್ ಫುಲ್ ಖುಷ್ ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯ ತನಿಖೆಯನ್ನು ಎನ್.ಸಿಬಿ ಹಾಗೂ ಸಿಬಿಐ ಸಂಸ್ಥೆಗಳು ಪ್ರತ್ಯೇಕ ಕೋನದಲ್ಲಿ ವಿಚಾರಣೆ ನಡೆಸುತ್ತಿವೆ. ಈಗಾಗಲೇ ಹಲವಾರು ದಿನಗಳಿಂದ ಕಂಬಿ ಎಣಿಸುತ್ತಿರುವ ರಿಯಾ ಚಕ್ರವರ್ತಿ ರವರಿಗೆ ಇಂದು ಮತ್ತೊಂದು ಶಾಕ್ ಎದುರಾಗಿದ್ದು ಇದೀಗ ರಿಯಾ ಚಕ್ರವರ್ತಿ ರವರ ಬಂ’ಧನದ ಅವಧಿಯನ್ನು ಅಕ್ಟೋಬರ್ ಆರನೇ ತಾರೀಖಿನವರೆಗೆ ವಿಸ್ತರಣೆ ಮಾಡಲಾಗಿದೆ. ಇನ್ನು ಇದೇ ಸಂದರ್ಭದಲ್ಲಿ ರಿಯಾ ಚಕ್ರವರ್ತಿ ರವರು ಬಾಲಿವುಡ್ ಚಿತ್ರರಂಗವನ್ನು ಅಕ್ಷರಸಹ ತಲ್ಲಣಗೊಳಿಸಿದ್ದಾರೆ. ಯಾಕೆಂದರೆ ರಿಯಾ ಚಕ್ರವರ್ತಿ ರವರು ಬಹಿರಂಗಪಡಿಸಿದ ಕೆಲವು ಚಿತ್ರರಂಗದ ಜನರನ್ನು ವಿಚಾರಣೆಗೆ ಒಳಪಡಿಸಿದಾಗ ಮಹತ್ವದ ಮಾಹಿತಿಗಳು ಹೊರಬಂದಿವೆ.

ಹೌದು ಸ್ನೇಹಿತರೇ, KWAN ಎಂಬ ಪ್ರತಿಭಾ ನಿರ್ವಹಣ ಸಂಸ್ಥೆ ಮಾಲೀಕ ಧ್ರುವ್ ಚಿಟಿಗೋಪೇಕರ್ ರವರು ಬಾಲಿವುಡ್ ಡ್ರ’ಗ್ ಕೇಸ್ನಲ್ಲಿ ದೊಡ್ಡ ಪಾತ್ರವಹಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇನ್ನು ಈಗಾಗಲೇ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯರಾದ ಸಾರಾ ಅಲಿ ಖಾನ್ ಹಾಗೂ ಶ್ರದ್ದ ಕಪೂರ್ ರವರಿಗೆ ಎನ್ಸಿಬಿ ಸಂಸ್ಥೆಯು ನೋಟಿಸ್ ನೀಡುವ ಮೂಲಕ ವಿಚಾರಣೆಗೆ ಹಾಜರಾಗುವಂತೆ ತಿಳಿಸಲು ತಯಾರಿ ನಡೆಸಿದೆ ಎಂಬುದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಇದೀಗ ಡ್ರ’ಗ್ ಸಂಬಂಧಿತ ದೀಪಿಕಾ ಪಡುಕೋಣೆ ಅವರು ಕೂಡ ಸಮನ್ಸ್ ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಧ್ರುವ್ ಚಿಟಿಗೋಪೇಕರ್ ರವರ ವಾಟ್ಸಪ್ ಚಾಟ್ ಗಳನ್ನು ತೆಗೆದು ನೋಡಿದಾಗ ಬಾಲಿವುಡ್ ಚಿತ್ರರಂಗದ ಹಲವಾರು ದಿಗ್ಗಜ ನಟರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿದುಬಂದಿದೆ. ಈ ಎಲ್ಲಾ ವಿದ್ಯಮಾನಗಳ ನಡುವೆ ಬಾಲಿವುಡ್ ಚಿತ್ರರಂಗದ 6 ಖ್ಯಾತ ಪುರುಷ ನಟರು ತಮ್ಮ ವಕೀಲರನ್ನು ಕರೆಸಿಕೊಂಡು ಮಹತ್ವದ ಮಾತುಕತೆ ನಡೆಸಲು ಮುಂದಾಗಿದ್ದಾರೆ ಎಂದು ರಿಪಬ್ಲಿಕ್ ಸಂಸ್ಥೆ ವರದಿ ಮಾಡಿದೆ. ದೀಪಿಕಾ ಪಡುಕೋಣೆ ರವರ ಕಾರ್ಯಗಳನ್ನು ನಿರ್ವಹಿಸುವ ಕರಿಷ್ಮಾ ರವರನ್ನು ಕೂಡ ನಾಳೆ ಎನ್ಸಿಬಿ ಸಂಸ್ಥೆಯು ವಿಚಾರಣೆಗೆ ಒಳಪಡಿಸಲು ಇದೆ ಎಂಬುದು ತಿಳಿದುಬಂದಿದೆ. ಒಟ್ಟಿನಲ್ಲಿ ಇದೀಗ ಸುಶಾಂತ್ ಸಿಂಗ್ ರಜಪೂತ್ ರವರ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು ಬಾಲಿವುಡ್ ದಿಗ್ಗಜರ ಕದ ತಟ್ಟಿದೆ. ಇದು ಮುಂದೆ ಇನ್ನು ಯಾವ ರೀತಿಯ ತಿರುವುಗಳನ್ನು ಪಡೆದುಕೊಳ್ಳಲಿದೆ ಹಾಗೂ ಯಾವ್ಯಾವ ದಿಗ್ಗಜರು ಸಿಕ್ಕಿ ಬೀ’ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.