ಜ್ಯೋತಿಷ್ಯ ಶಾಸ್ತ್ರ: ಬುಧ ಗ್ರಹದ ಸ್ಥಾನ ಪಲ್ಲಟದಿಂದ ಬದಲಾಗುವ ನಿಮ್ಮ ರಾಶಿಗಳ ಫಲಾಫಲಗಳ ಬಗ್ಗೆ ತಿಳಿದುಕೊಳ್ಳಿ

ಜ್ಯೋತಿಷ್ಯ ಶಾಸ್ತ್ರ: ಬುಧ ಗ್ರಹದ ಸ್ಥಾನ ಪಲ್ಲಟದಿಂದ ಬದಲಾಗುವ ನಿಮ್ಮ ರಾಶಿಗಳ ಫಲಾಫಲಗಳ ಬಗ್ಗೆ ತಿಳಿದುಕೊಳ್ಳಿ

0

ನಮಸ್ಕಾರ ಸ್ನೇಹಿತರೇ, ಸೆಪ್ಟೆಂಬರ್ 22 ರಂದು ಬುಧ ಗ್ರಹವು ಕನ್ಯಾರಾಶಿಯಿಂದ ತುಲಾವನ್ನು ಪ್ರವೇಶಿಸುತ್ತದೆ. ಈ ಪರಿವರ್ತನೆಯ ಅವಧಿಯಲ್ಲಿ, ಅಕ್ಟೋಬರ್ 14 ರ ವರೆಗೂ ಬುಧ ಚಲಿಸುತ್ತಿರುತ್ತದೆ. ಇದರ ನಂತರ, ನವೆಂಬರ್ 3 ರಂದು ಮಾರ್ಗ ಬದಲಾಯಿಸಿ ವೃಶ್ಚಿಕದಲ್ಲಿ ನವೆಂಬರ್ 28 ರಂದು ಇರುತ್ತದೆ. ಬುಧದ ಈ ರಾಶಿಚಕ್ರ ಚಿಹ್ನೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆಯೂ ಕೂಡ ಪರಿಣಾಮ ಬೀರುತ್ತದೆ. ಈ ಸಾಗಣೆಯು ನಿಮ್ಮ ರಾಶಿಚಕ್ರ ಚಿಹ್ನೆಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ನಿಮಗೆ ತಿಳಿಸಿಕೊಡುತ್ತೇವೆ ಕೇಳಿ.

ಮೇಷ: ಈ ಸಮಯದಲ್ಲಿ ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸುವ ಆಲೋಚನೆ ಇದ್ದರೆ ಸಮಯವು ಬಹಳ ಅನುಕೂಲಕರವಾಗಿರುತ್ತದೆ. ಉದ್ಯೋಗ ಬದಲಾವಣೆ ಮಾಡುವ ಆಲೋಚನೆ ನಿಮ್ಮಲ್ಲಿದ್ದರೆ ಅದಕ್ಕೂ ಕೂಡ ಈ ಸಮಯ ಬಹಳ ಒಳ್ಳೆಯದಾಗಿದೆ. ಮದುವೆಗೆ ಸಂಬಂಧಿಸಿದ ಮಾತುಕತೆ ಯಶಸ್ವಿಯಾಗಲಿದ್ದು ಕಂಕಣ ಬಲ ಕೂಡಿ ಬರಲಿದೆ. ಯಾವುದೇ ಸ’ರ್ಕಾರಿ ವ್ಯವಹಾರವನ್ನು ಕೂಡ ನೀವು ಪೂರ್ಣಗೊಳಿಸಬಹುದಾಗಿದೆ. ವಿದೇಶಿ ಸಂಬಂಧಿತ ವಿಚಾರಗಳಲ್ಲಿ ಯಶಸ್ಸು ಕಾಣಲಿದ್ದೀರಿ. ನಿಮ್ಮ ಆರೋಗ್ಯದ ಕುರಿತು ಜಾಗರೂಕರಾಗಿರಿ.

ವೃಷಭ: ಈ ಸಮಯದಲ್ಲಿ ನೀವು ಸಾಲದ ವಹಿವಾಟು ಮಾಡಬೇಕು ಎಂದರೆ ದಯವಿಟ್ಟು ಕೊಂಚ ಎ’ಚ್ಚರಿಕೆಯಿಂದ ಹೆಜ್ಜೆ ಇಡಿ. ಆರೋಗ್ಯದ ಬಗ್ಗೆಯೂ ಕೂಡ ನೀವು ಬಹಳ ಜಾಗರೂಕರಾಗಿರಬೇಕು. ರಹಸ್ಯ ಶ’ತ್ರುಗಳು ಹೆಚ್ಚಾಗಿರುತ್ತಾರೆ. ನಿಮ್ಮ ಸ್ವಂತದ ಜನರು ನಿಮ್ಮನ್ನು ಸೋಲಿಸಲು ಪ್ರಯತ್ನ ಪಡುತ್ತಾರೆ, ಈ ಸಮಯದಲ್ಲಿ ವಿದ್ಯಾರ್ಥಿಗಳು ಯಶಸ್ಸು ಪಡೆಯಬೇಕು ಎಂದರೇ ಬಹಳ ಶ್ರಮಿಸಬೇಕಾಗುತ್ತದೆ. ಮಕ್ಕಳ ಕಾಳಜಿಯ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗುತ್ತದೆ, ನೀವು ಯಾವುದೇ ಪ್ರಯಾಣಗಳನ್ನು ಈ ಸಮಯದಲ್ಲಿ ಮಾಡುವುದನ್ನು ತಪ್ಪಿಸಬೇಕು ಆಗುತ್ತದೆ. ಅಂದರೆ ಸಾಧ್ಯವಾದಷ್ಟು ಕಡಿಮೆ ಪ್ರಯಾಣಿಸಿ.

ಮಿಥುನ: ಈ ಸಮಯದಲ್ಲಿ ಬುಧ ಗ್ರಹದ ಸ್ಥಾನದ ಆಧಾರದ ಮೇರೆಗೆ ವಿದ್ಯಾರ್ಥಿಗಳು ಬಹಳ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಮಗುವಿನ ವಿಚಾರದಲ್ಲಿ ಜವಾಬ್ದಾರಿಗಳು ನೆರವೇರುತ್ತವೆ, ಮಕ್ಕಳನ್ನು ಪಡೆಯುವ ಸಾಧ್ಯತೆಗಳಿವೆ. ನೀವು ಬಾಕಿ ಉಳಿದಿರುವ ಎಲ್ಲಾ ಕೆಲಸ ಕಾಮಗಾರಿಗಳು ಈ ಸಮಯದಲ್ಲಿ ಪೂರ್ಣಗೊಳ್ಳಲಿವೆ. ಧಾರ್ಮಿಕ ವಿಚಾರದಲ್ಲಿ ನಿಮಗೆ ಆಸಕ್ತಿ ಹೆಚ್ಚು ಕಾಣಿಸುತ್ತದೆ, ಹಿರಿಯ ಮಕ್ಕಳಿಗೆ ಆರ್ಥಿಕ ನೆರವು ಸಿಗಲಿದ್ದು ಉತ್ತಮ ಸಮಯವಾಗಿದೆ. ಇನ್ನು ಪ್ರಮುಖವಾಗಿ ನೀವು ಕೆಲಸ ಮಾಡುವ ಸ್ಥಳದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳುವುದು ಮರೆಯಬೇಡಿ.

ಕರ್ಕಾಟಕ: ನೀವು ಮನೆ ಅಥವಾ ವಾಹನವನ್ನು ಖರೀದಿಸುವ ಆಲೋಚನೆಯಲ್ಲಿದ್ದರೆ ನಿಮ್ಮ ಕನಸು ಸಮಯದಲ್ಲಿ ಈಡೇರುತ್ತದೆ. ನಿಮ್ಮ ಪೋಷಕರ ಆರೋಗ್ಯವು ಉತ್ತಮವಾಗಿರಲಿದೆ ಎಂದು ಹಾಗೆಂದು ಕಾಳಜಿ ವಹಿಸುವುದನ್ನು ಮರೆತರೇ ಕೊಂಚ ತೊಂ’ದರೆ ಉಂಟಾಗಬಹುದು. ಈ ಸಮಯದಲ್ಲಿ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರು ನಿಮಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ, ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗುತ್ತದೆ. ಇನ್ನು ಈ ಸಮಯದಲ್ಲಿ ನಿಮಗೆ ಪ್ರಖ್ಯಾತ ವ್ಯಕ್ತಿಗಳು ಹಾಗೂ ಸಮಾಜದ ಉನ್ನತ ವ್ಯಕ್ತಿಗಳೊಂದಿಗೆ ಉತ್ತಮ ಸಂಬಂಧಗಳು ರೂಪುಗೊಳ್ಳಲಿದೆ.

ಸಿಂಹ: ನೀವು ಈ ಸಮಯದಲ್ಲಿ ಅನೇಕ ಅನಿರೀಕ್ಷಿತ ಫಲಿತಾಂಶಗಳನ್ನು ಕಾಣಬಹುದು, ನಿಮ್ಮ ಧೈರ್ಯ ಮತ್ತು ಶಕ್ತಿ ಹೆಚ್ಚಾಗಿರುತ್ತದೆ. ನೀವು ಮಾಡಿರುವ ಕೆಲಸಕ್ಕೆ ತಕ್ಕಂತೆ ಪ್ರತಿಫಲ ಸಿಗುತ್ತದೆ. ಇತರರು ನಿಮ್ಮ ಕಾರ್ಯವನ್ನು ಶ್ಲಾಘಿಸುತ್ತಾರೆ. ಎಂತಹ ಸವಾಲುಗಳು ಎದುರಾದರೂ ನೀವು ನಿಮ್ಮ ಕೆಲಸವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿರೀ, ಸ್ನೇಹಿತರು ಹಾಗೂ ಇನ್ನಿತರ ವ್ಯಕ್ತಿಗಳು ನಿಮಗೆ ಹೊಸದಾಗಿ ಪರಿಚಯವಾಗುತ್ತಾರೆ. ನೀವು ವಿದೇಶಕ್ಕೆ ಹೋಗುವ ಆಸೆ ಇದ್ದರೆ ಈ ಸಮಯದಲ್ಲಿ ನೆರವೇರಲಿದೆ.

ಕನ್ಯಾ: ಈ ಸಮಯದಲ್ಲಿ ನಿಮ್ಮ ಆರ್ಥಿಕತೆ ಬಹಳ ಬಲವಾಗಿರಲಿದ್ದು ವಿವಿಧ ಮೂಲಗಳಿಂದ ಹಣ ಬರುತ್ತದೆ. ಸಾಕಷ್ಟು ಸಮಯದಿಂದ ವಾಪಸ್ಸು ಬರದ ಸಾಲ ಈ ಸಮಯದಲ್ಲಿ ನಿಮಗೆ ವಾಪಸ್ಸು ಬರುತ್ತದೆ. ನೀವು ಈ ಸಮಯದಲ್ಲಿ ದುಬಾರಿ ವಸ್ತುಗಳನ್ನು ಖರೀದಿ ಮಾಡುತ್ತೀರಿ, ಮನೆ ಅಥವಾ ವಾಹನಗಳನ್ನು ಕೂಡ ಖರೀದಿ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಆದರೆ ನೀವು ಆರೋಗ್ಯದ ಬಗ್ಗೆ ಹೆಚ್ಚು ಜಾಗೃತವಾಗಿರಬೇಕು, ಅಷ್ಟೇ ಅಲ್ಲದೆ ನೀವು ಯಾವುದೇ ವಾದ ವಿವಾದ ಗಳಿಂದ ದೂರವಿರಬೇಕು. ಇನ್ನು ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳು ಮಾಡುವ ಪಿತೂರಿಯಿಂದ ದೂರವಿರಿ.

ತುಲಾ: ಈ ಸಮಯ ವಿದ್ಯಾರ್ಥಿಗಳಿಗೆ ಉತ್ತಮವಾಗಿರುತ್ತದೆ, ಪ್ರೀತಿ ಸಂಬಂಧಿತ ವಿಚಾರಗಳಲ್ಲಿ ಮಾಧುರ್ಯ ಇರುತ್ತದೆ. ಕೌಟುಂಬಿಕವಾಗಿ ಈ ಸಮಯ ಬಹಳ ಉತ್ತಮವಾಗಿದೆ, ಮಗುವಿನ ಜವಾಬ್ದಾರಿ ನಿಮ್ಮ ಹೆಗಲಿಗೆ ಹೇರುವ ಸಾಧ್ಯತೆ ಇದೆ. ನಿಮಗೆ ಈ ಸಮಯದಲ್ಲಿ ಧರ್ಮ ಹಾಗೂ ಆಧ್ಯಾತ್ಮಿಕತೆಯ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಇನ್ನು ಹಣದ ಹರಿವು ಸಂಪೂರ್ಣವಾಗಿ ನಿಮ್ಮ ಶ್ರಮದ ಮೇಲೆ ಅವಲಂಬಿತವಾಗಿದ್ದು ಹೆಚ್ಚು ಶ್ರಮಪಟ್ಟರೇ ಆರ್ಥಿಕತೆ ಬಲವಾಗಿ ಇರಲಿದೆ.

ವೃಶ್ಚಿಕ: ಈ ಸಮಯದಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ, ಪ್ರಯಾಣವು ಹೆಚ್ಚು ಮಾಡುವ ಸಾಧ್ಯತೆಯಿದೆ. ವಿದೇಶಿ ಪ್ರಯಾಣದ ಸಾಧ್ಯತೆಗಳು ಕೂಡ ಇದ್ದು ಅವಕಾಶ ಒದಗಿ ಬರಲಿದೆ. ನೀವು ವಾದ ವಿ’ವಾದಗಳಿಂದ ಈ ಸಮಯದಲ್ಲಿ ಬಹಳ ದೂರವಿರಬೇಕು, ನಿಮ್ಮ ರಹಸ್ಯ ಶ’ತ್ರುಗಳು ಹೆಚ್ಚಾಗಬಹುದು ಹಾಗೂ ನೀವು ಮಾಡುವ ಆರ್ಥಿಕತೆಯ ಮಾತುಕತೆ ಹಾಗೂ ನಿರ್ಧಾರಗಳಲ್ಲಿ ಬಹಳ ಜಾಗರೂಕರಾಗಿರಬೇಕು.

ಧನಸ್ಸು: ಕೆಲಸದ ವ್ಯವಹಾರದಲ್ಲಿ ಸ್ವಲ್ಪ ಅಡಚಣೆಯಾದ ನಂತರವೇ ನಿಮಗೆ ಯಶಸ್ಸು ಕಾಣಸಿಗುತ್ತದೆ. ಇನ್ನು ಈ ಸಮಯದಲ್ಲಿ ನಿಮ್ಮ ಕುಟುಂಬದ ಹಿರಿಯ ಸದಸ್ಯರು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಏರ್ಪಡಿಸಿಕೊಳ್ಳಲು ಪ್ರಯತ್ನಪಡಿ. ಇನ್ನು ಈ ಸಮಯದಲ್ಲಿ ದಿನನಿತ್ಯದ ವ್ಯಾಪಾರಿಗಳಿಗೆ ಸಮಯ ಬಹಳ ಅನುಕೂಲಕರವಾಗಿರುತ್ತದೆ. ಮದುವೆಗೆ ಸಂಬಂಧಿಸಿದ ಮಾತುಕತೆಗಳು ಯಶಸ್ವಿಯಾಗಲಿವೆ, ಸೋದರ ಸಂಬಂಧಿಗಳಿಂದ ಸಿಹಿ ಸುದ್ದಿ ಬರುವ ಸಾಧ್ಯತೆಗಳು ಹೆಚ್ಚಾಗಿವೆ ಹಾಗೂ ಅವರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ವಿದ್ಯಾರ್ಥಿಗಳಿಗೆ ಈ ಸಮಯ ಬಹಳ ಉತ್ತಮವಾಗಿದ್ದು ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುತ್ತಾರೆ. ಪ್ರೇಮ ಸಂಬಂಧಗಳು ಬಲಗೊಳ್ಳಲಿದ್ದು ಪ್ರೇಮ ವಿವಾಹಗಳಾಗುವ ಸಾಧ್ಯತೆ ಹೆಚ್ಚಿದೆ.

ಮಕರ: ಈ ಸಮಯದಲ್ಲಿ ಸಮಾಜದಲ್ಲಿ ನಿಮ್ಮ ಗೌರವ ಹಾಗೂ ಸ್ಥಾನದ ಪ್ರತಿಷ್ಠೆ ಹೆಚ್ಚಾಗುತ್ತದೆ. ಕೆಲಸಗಳಲ್ಲಿ ಯಶಸ್ಸು ಸಿಗಲಿದೆ, ಉನ್ನತ ಅ’ಧಿಕಾರಿಗಳು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ನಿಮ್ಮ ಪೋಷಕರ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಿ. ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದಂತೆ ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ವಾಹನ ಖರೀದಿಗೆ ಉತ್ತಮ ಸಮಯವಾಗಿದ್ದು ನೀವು ಖರೀದಿ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡಲು ಅರ್ಜಿ ಹಾಕುವ ಆಲೋಚನೆ ನೀವು ಮಾಡುತ್ತಿದ್ದರೇ ಖಂಡಿತ ಇದು ಒಳ್ಳೆಯ ಸಮಯ. ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಉತ್ತಮ ಸಂಬಂಧಗಳು ರೂಪುಗೊಳ್ಳುತ್ತವೆ.

ಕುಂಭ: ನೀವು ಕೆಲಸದಲ್ಲಿ ಯಶಸ್ವಿಯಾಗಬೇಕೆಂದರೆ ಹಲವಾರು ಸವಾಲು ಎ’ದುರಾಗುತ್ತವೆ, ಆದರೆ ಅವುಗಳು ಕೊನೆಯಲ್ಲಿ ಯಶಸ್ವಿಯಾಗುತ್ತವೆ. ವಿದ್ಯಾರ್ಥಿಗಳಿಗೆ ಈ ಸಮಯ ಬಹಳ ಅನುಕೂಲಕರವಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಾರೆ. ಮಕ್ಕಳ ಬಗ್ಗೆ ಇರುವ ಕಳವಳವು ದೂರವಾಗುತ್ತದೆ, ಧಾರ್ಮಿಕತೆಯ ವಿಚಾರದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಕೆಲಸಗಳನ್ನು ಇತರರೂ ಪ್ರಶಂಸಿಸುತ್ತಾರೆ, ಈ ಸಮಯದಲ್ಲಿ ನೀವು ಒಳ್ಳೆಯ ಕೆಲಸ ಮಾಡಲು ನಿಮ್ಮ ಸಂಪೂರ್ಣ ಶಕ್ತಿಯನ್ನು ಬಳಸುವುದನ್ನು ಮರೆಯಬೇಡಿ.

ಮೀನ: ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತವಾಗಿರಬೇಕು. ಈ ಸಮಯದಲ್ಲಿ ನಿಮ್ಮ ಖ್ಯಾತಿ ಮತ್ತು ಪ್ರಭಾವ ಹೆಚ್ಚಾಗುತ್ತದೆ. ಕೆಲಸದ ಸ್ಥಳಗಳಲ್ಲಿ ಸಹದ್ಯೋಗಿಗಳು ನಡೆಸುವ ಪಿ’ತೂರಿಯಿಂದ ದೂರವಿರಿ ಹಾಗೂ ಜಾಗರೂಕರಾಗಿರಿ. ನೀವು ದುಬಾರಿ ವಸ್ತುಗಳನ್ನು ಪ್ರೀತಿಸುವ ಸಾಧ್ಯತೆಗಳು ಹೆಚ್ಚಾಗಿದ್ದು ನೀವು ಹಲವಾರು ವರ್ಷಗಳ ಹಿಂದೆ ನೀಡಿರುವ ಸಾಲ ಈ ಸಮಯದಲ್ಲಿ ನಿಮಗೆ ವಾಪಸ್ ಆಗಬಹುದು.