ಕಿಡ್ನಿಯನ್ನು ಆರೋಗ್ಯವಾಗಿಡಲು ವಿಶೇಷವೇನು ಬೇಡ ! ಜಸ್ಟ್ ಇವುಗಳನ್ನು ನಿಮ್ಮ ಆಹಾರದಲ್ಲಿ ಬಳಸಿ !

ನಿಮ್ಮ ಮೂತ್ರಪಿಂಡವನ್ನು ಆರೋಗ್ಯವಾಗಿಡಲು ವಿಶೇಷವೇನು ಬೇಡ ! ಜಸ್ಟ್ ಇವುಗಳನ್ನು ನಿಮ್ಮ ಆಹಾರದಲ್ಲಿ ಬಳಸಿ !

ನಮಸ್ಕಾರ ಸ್ನೇಹಿತರೇ ಮಾನವನ ದೇಹದ ಒಳಗಿನ ಕೆಲವು ಪ್ರಮುಖ ಕಾರ್ಯಗಳ ಜವಾಬ್ದಾರಿಯನ್ನು ಮೂತ್ರಪಿಂಡಗಳು ನಿರ್ವಹಿಸುತ್ತವೆ. ನಿಮ್ಮ ದೇಹವನ್ನು ಆರೋಗ್ಯವಾಗಿಡಲು, ಮೂತ್ರಪಿಂಡವು ಸರಾಗವಾಗಿ ಕಾರ್ಯನಿರ್ವಹಿಸುವುದು ಅವಶ್ಯಕ, ಕೊಂಚ ಏರುಪೇರಾದರೂ ಖಂಡಿತಾ ಗಣನೀಯ ಪ್ರಭಾವ ಬೀರುತ್ತದೆ. ನಮ್ಮ ದೇಹದಿಂದ ತ್ಯಾಜ್ಯ ದ್ರವವನ್ನು ತೆಗೆದುಹಾಕಲು ಕಿಡ್ನಿಗಳು ಸಹಾಯ ಮಾಡುತ್ತದೆ. ಮೂತ್ರಪಿಂಡದ ಕಾ’ಯಿಲೆ ಬಂದಾಗ, ಮೂತ್ರಪಿಂಡಗಳು ನಮ್ಮ ದೇಹದಿಂದ ಅನಗತ್ಯವಾದ ದ್ರವಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ. ದೇಹದಲ್ಲಿ ತ್ಯಾಜ್ಯ ದ್ರವದ ಸಂಗ್ರಹದಿಂದಾಗಿ, ದೇಹದಲ್ಲಿ ಇರುವ ರಾಸಾಯನಿಕಗಳ ಸಮತೋಲನವು ತೊಂ’ದರೆಗೊಳಗಾಗುತ್ತದೆ ಮತ್ತು ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಇನ್ನು ಈಗಾಗಲೇ ಕಿಡ್ನಿಯ ತೊಂದರೆಗೆ ಒಳಗಾದವರೂ ಹಾಗೂ ನಿಮಗೆ ಯಾವುದೇ ಕಿಡ್ನಿ ತೊಂದರೆ ಇಲ್ಲದಿದ್ದರೂ ಕೂಡ ನೀವು 5 ಆಹಾರಗಳ ಮೂಲಕ ನಿಮ್ಮ ಕಿಡ್ನಿಯನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ಸ್ನೇಹಿತರೇ ಈ ಆಹಾರಗಳನ್ನು ನೀವು ಒಮ್ಮೆ ತಿಂದರೆ ಸಾಕಾಗುವುದಿಲ್ಲ, ನೀವು ನಿಮ್ಮ ಅಡುಗೆ ಮನೆಯಲ್ಲಿ ಹಾಗೂ ನಿಮ್ಮ ದಿನನಿತ್ಯದ ಜೀವನದಲ್ಲಿ ಆಹಾರ ಗಳನ್ನು ಅಳವಡಿಸಿಕೊಂಡರೇ ಖಂಡಿತ ನಿಮಗೆ ಯಾವುದೇ ಮೂತ್ರಪಿಂಡದ ತೊಂದರೆಗಳು ಕಾಣಿಸಿಕೊಳ್ಳುವುದಿಲ್ಲ. ಬನ್ನಿ ಯಾವ ಆಹಾರಗಳು ಯಾವ ರೀತಿಯ ಪ್ರಭಾವವನ್ನು ಬೀರುತ್ತವೆ ಎಂದು ನೋಡಿ, ನಿಮ್ಮ ದೇಹಕ್ಕೆ ತಕ್ಕಂತೆ ಆಹಾರಗಳನ್ನು ಬಳಸಿ.

ಮೊದಲನೇದಾಗಿ ಈರುಳ್ಳಿ, ಸ್ನೇಹಿತರೇ ಸರ್ವೇಸಾಮಾನ್ಯವಾಗಿ ಭಾರತೀಯ ಪಾಕಪದ್ಧತಿಯಲ್ಲಿ ಈರುಳ್ಳಿಯನ್ನು ಬಳಸಲಾಗುತ್ತದೆ. ಆದರೆ ಬಹುತೇಕ ಜನರು ಈರುಳ್ಳಿ ಊಟದಲ್ಲಿ ಸಿಕ್ಕ ತಕ್ಷಣ ಅದನ್ನು ಎತ್ತಿ ಪಕ್ಕಕ್ಕೆ ಇಡುತ್ತಾರೆ. ಆದರೆ ಸ್ನೇಹಿತರೇ, ನಿಮ್ಮ ಮೂತ್ರಪಿಂಡಗಳು ಆರೋಗ್ಯವಾಗಿರಲು ನಿಮ್ಮ ದೇಹಕ್ಕೆ ಕಡಿಮೆ ಸೋಡಿಯಂ ಅಗತ್ಯವಿದೆ. ಇನ್ನು ಈರುಳ್ಳಿಯಲ್ಲಿ ಸೋಡಿಯಂ ಪ್ರಮಾಣವು ಬಹಳ ಕಡಿಮೆ ಇರುವ ಕಾರಣ ನೀವು ಈರುಳ್ಳಿಯನ್ನು ಪಾಕಪದ್ಧತಿಯಲ್ಲಿ ಅಳವಡಿಸಿಕೊಂಡರೇ ಬಹಳ ಉತ್ತಮ ಎಂದು ವೈದ್ಯಶಾಸ್ತ್ರ ಹೇಳುತ್ತದೆ. ಇನ್ನು ಸಾಧ್ಯವಾದರೇ ಹಸಿ ಈರುಳ್ಳಿಯನ್ನು ನೀವು ಸೇವಿಸಿದರೇ ಅದು ನಿಮ್ಮ ಮೂತ್ರಪಿಂಡಗಳಿಗೆ ಬಹಳ ಸಹಕಾರಿ ಎಂಬುದು ತಿಳಿದುಬಂದಿದೆ.

ಎರಡನೆಯದಾಗಿ ಬೆಳ್ಳುಳ್ಳಿ, ಸ್ನೇಹಿತರೇ ಬೆಳ್ಳುಳ್ಳಿಯನ್ನು ಪ್ರತಿಯೊಬ್ಬರು ಬಳಸುತ್ತಾರೆ. ಬೆಳ್ಳುಳ್ಳಿಯು ಅಡುಗೆಯ ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೇ ಅನೇಕ ಔಷಧೀಯ ಗುಣಗಳಿಂದ ಕೂಡಿರುವುದರಿಂದ ಇದು ನಮ್ಮಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಇದು ಸೋಡಿಯಂ, ಪೊಟ್ಯಾಶಿಯಂ ಮತ್ತು ರಂಜಕವನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಹೊಂದಿರುವ ಕಾರಣ ಇದು ನಿಮ್ಮ ಮೂತ್ರಪಿಂಡಕ್ಕೆ ಅತ್ಯಗತ್ಯವಾದ ಶಕ್ತಿಯನ್ನು ನೀಡುತ್ತದೆ. ಆದ ಕಾರಣದಿಂದ ನಿಮ್ಮ ದಿನನಿತ್ಯದ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಬಳಸುವುದು ಮರೆಯಬೇಡಿ.

ಇನ್ನು ಮೂರನೆಯದಾಗಿ ದೊಡ್ಡ ಮೆಣಸಿನಕಾಯಿ ಅಥವಾ ಕ್ಯಾಪ್ಸಿಕಂ, ಸ್ನೇಹಿತರೇ ದೊಡ್ಡ ಮೆಣಸಿನ ಕಾಯಿಯಲ್ಲಿ ನೀವು ಊಹಿಸದಷ್ಟು ಉತ್ಕರ್ಷಣ ನಿರೋಧಕ ಶಕ್ತಿ ಇದೆ. ಇದರಲ್ಲಿ ವಿಟಮಿನ್ ಸಿ ಕೂಡ ಸಾಕಷ್ಟು ಪ್ರಮಾಣದಲ್ಲಿ ಇದ್ದು, ಇದು ಕೇವಲ ನಿಮ್ಮ ಮೂತ್ರಪಿಂಡಕಷ್ಟೇ ಅಲ್ಲದೇ ನಿಮ್ಮ ದೇಹದ ಇತರ ಭಾಗಗಳಿಗೂ ಕೂಡ ಶಕ್ತಿ ತುಂಬುವ ಕೆಲಸ ಮಾಡುತ್ತದೆ.

ಇನ್ನು ನಾಲ್ಕನೆಯದಾಗಿ ಪೈನಾಪಲ್, ಹೌದು ಸ್ನೇಹಿತರೇ ಪೈನಾಪಲ್ ಹಣ್ಣಿನಲ್ಲಿ ಮು’ಳ್ಳುಗಳು ಇರುವ ಕಾರಣ ಬಹುತೇಕ ಜನರು ಪೈನಾಪಲ್ ಹಣ್ಣುಗಳನ್ನು ಸೇವಿಸುವುದಿಲ್ಲ. ಕೆಲವರು ಸೇವಿಸಿದರೂ ಕೂಡ ವರ್ಷಕ್ಕೋ ಅಥವಾ ಆರು ತಿಂಗಳಿಗೊಮ್ಮೆ ಪೈನಾಪಲ್ ಹಣ್ಣನ್ನು ಸೇವಿಸುತ್ತಾರೆ. ಆದರೆ ಸ್ನೇಹಿತರೇ ವೈದ್ಯಶಾಸ್ತ್ರದ ಪ್ರಕಾರ ಕನಿಷ್ಠ ವಾರದಲ್ಲಿ ಎರಡರಿಂದ ಮೂರು ಬಾರಿ ನೀವು ಪೈನಾಪಲ್ ಹಣ್ಣನ್ನು ಸೇವಿಸುತ್ತಾ ಬಂದರೇ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚುವುದಷ್ಟೇ ಅಲ್ಲದೆ ನಿಮ್ಮ ಜೀರ್ಣಕ್ರಿಯೆಗೆ ಇದು ಬಹಳ ಪ್ರಯೋಜನಕಾರಿಯಾಗಿದೆ. ಇದು ಬಹಳ ಕಡಿಮೆ ಪೊಟಾಶಿಯಂ ಮತ್ತು ಹೆಚ್ಚು ಫೈಬರ್ ಹೊಂದಿರುವ ಕಾರಣ ನಿಮ್ಮ ಮೂತ್ರಪಿಂಡಗಳಿಗೆ ಇದು ಬಹಳ ಸಹಕಾರಿಯಾಗಲಿದೆ.

ಇನ್ನು ಕೊನೆಯದಾಗಿ ಹಣ್ಣುಗಳು, ಸ್ನೇಹಿತರೇ ಹಣ್ಣುಗಳು ಉತ್ಕರ್ಷಣ ನಿರೋಧಕ ಶಕ್ತಿಯ ಕೇಂದ್ರಗಳಾಗಿವೆ. ಹಣ್ಣುಗಳು ಕೇವಲ ರುಚಿಯಷ್ಟೇ ಅಲ್ಲದೆ ನಿಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲ ಪೌಷ್ಟಿಕಾಂಶಗಳನ್ನು ನೀಡುತ್ತವೆ. ಬಹುತೇಕ ಹಣ್ಣಿನಲ್ಲಿ ಸಣ್ಣ ಪ್ರಮಾಣದ ಸೋಡಿಯಂ ಕಂಡುಬರುವುದರಿಂದ ನಿಮ್ಮ ಮೂತ್ರಪಿಂಡಗಳಿಗೆ ಇದು ಸ್ನೇಹಪರವಾಗಿರುತ್ತದೆ. ಇದಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ನಿಮ್ಮ ಹೃದಯವನ್ನು ಬಲಪಡಿಸಲು ಹಣ್ಣುಗಳು ಸಹಕಾರಿಯಾಗಿವೆ.