ನಿಮ್ಮ ಕನಸುಗಳನ್ನು ಈಡೇರಿಸಲು ಸೋಮವಾರ ಶಿವನನ್ನು ಮೆಚ್ಚಿಸುವ ಸುಲಭವಾದ ಕ್ರಮಗಳ ಬಗ್ಗೆ ನಿಮಗೆ ಗೊತ್ತೇ?

ನಿಮ್ಮ ಕನಸುಗಳನ್ನು ಈಡೇರಿಸಲು ಸೋಮವಾರ ಶಿವನನ್ನು ಮೆಚ್ಚಿಸುವ ಸುಲಭವಾದ ಕ್ರಮಗಳ ಬಗ್ಗೆ ನಿಮಗೆ ಗೊತ್ತೇ?

ನಮಸ್ಕಾರ ಸ್ನೇಹಿತರೇ, ಹಿಂದೂ ಧರ್ಮದಲ್ಲಿ ಪುರಾಣಗಳ ಪ್ರಕಾರ ಸೋಮವಾರವನ್ನು ಬಹಳ ವಿಶೇಷ ದಿನವಾಗಿ ಪರಿಗಣಿಸಿ ಮಹಾ ಶಿವನನ್ನು ಪೂಜೆ ಮಾಡಲಾಗುತ್ತದೆ. ಎಲ್ಲಾ ದಿನಗಳಲ್ಲಿಯೂ ಶಿವ ಆರಾಧನೆ ಮಾಡಬಹುದಾದರೂ ಸೋಮವಾರ ಬಹಳ ಶುಭ ವೆನಿಸಿದೆ. ಈ ದಿನ ಶಿವನನ್ನು ಆರಾಧಿಸಿದರೇ ಮಹಾಶಿವನು ಭಕ್ತರ ಕೋರಿಕೆ ಗಳನ್ನು ತ್ವರಿತವಾಗಿ ಕೇಳಿ ಈಡೇರಿಸುತ್ತಾನೆ ಎಂಬ ನಂಬಿಕೆ ಪುರಾಣಗಳಲ್ಲಿದೆ. ಆದರೆ ಮಹಾ ಶಿವನನ್ನು ಯಾವ ರೀತಿ ಸೋಮವಾರ ದಿನದಂದು ಸುಲಭ ಕ್ರಮಗಳ ಮೂಲಕ ಹೆಚ್ಚಿಸಬಹುದು, ಯಾವ ರೀತಿಯ ಕನಸುಗಳನ್ನು ಈಡೇರಿಸಿಕೊಳ್ಳಲು ಯಾವ ವಸ್ತುಗಳನ್ನು ಅರ್ಪಿಸಬೇಕು ಹಾಗೂ ಯಾವ ಕಾರಣಕ್ಕಾಗಿ ಸೋಮವಾರವನ್ನು ವಿಶೇಷವಾಗಿ ಶಿವನಿಗೆ ಮೀಸಲಿಡಲಾಗಿದೆ ಎಂಬುದರ ಬಗ್ಗೆ ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ.

ಸ್ನೇಹಿತರೇ, ಸೋಮವಾರ ದಿನದಂದು ಮಹಾ ಶಿವನನ್ನು ಪೂಜಿಸಿದರೇ ನಿಮ್ಮ ಮನಸ್ಸು ಶಾಂತವಾಗಿ ಅದು ಸಮತೋಲನದಲ್ಲಿರುತ್ತದೆ, ನಿಮ್ಮಲ್ಲಿನ ದುಃಖಗಳು ದೂರವಾಗುತ್ತವೆ. ಇದರಿಂದ ನಿಮಗೆ ಅದೃಷ್ಟ ಒಲಿದು ಬರುತ್ತದೆ. ಅಷ್ಟೇ ಅಲ್ಲದೇ ನೀವು ಆಶಿಸುವ ಉದ್ಯೋಗ ಹಾಗೂ ಅಪೇಕ್ಷಿತ ಜೀವನ ಸಂಗಾತಿ ದೊರೆಯುತ್ತಾರೆ ಎಂಬ ನಂಬಿಕೆ ನಮ್ಮಲ್ಲಿದೆ.

ಶಿವನಿಗೆ ಸೋಮವಾರ ಮೀಸಲಿಡಲು ಕಾರಣವಾದ ಪೌರಾಣಿಕ ಕಥೆ ಏನು?

ಇನ್ನು ಸೋಮವಾರ ದಿನವನ್ನು ಯಾವ ಕಾರಣಕ್ಕೆ ಶಿವನಿಗೆ ಮೀಸಲಿಡಲಾಗಿದೇ ಎಂದರೇ ಸೋಮ್ ಎಂದರೇ ಚಂದ್ರ. ಒಮ್ಮೆ ಚಂದ್ರ ದೇವನು ರಾಜ ದಕ್ಷನ ಎಲ್ಲಾ 27 ಹೆಣ್ಣು ಮಕ್ಕಳನ್ನು ಮದುವೆಯಾಗುತ್ತಾನೆ. ಅವರು ಆಕಾಶದಲ್ಲಿ 27 ನಕ್ಷತ್ರಗಳನ್ನು ಪ್ರತಿನಿಧಿಸುತ್ತಾರೆ. ಎಲ್ಲಾ 27 ನಕ್ಷತ್ರಗಳನ್ನು ಮದುವೆಯಾಗಿದ್ದರೂ ಕೂಡ ಚಂದ್ರನು ರೋಹಿಣೀ ರವರಿಗೆ ಹೆಚ್ಚಿನ ಗಮನ ನೀಡುತ್ತಾರೆ. ಇದರಿಂದ ರೋಹಿಣಿ ರವರ ಸಹೋದರಿಯರು ಚಂದ್ರನ ಪಕ್ಷಪಾತದ ಬಗ್ಗೆ ಕುರಿತು ಮಾತನಾಡಲು ಆರಂಭಿಸುತ್ತಾರೆ. ಕ್ರಮೇಣ ಇದು ಹೆಚ್ಚಾದಂತೆ ತಮ್ಮ ತಂದೆಯ ಬಳಿ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಾರೆ. ಇದರ ಕುರಿತು ಅರಿತುಕೊಂಡ ದಕ್ಷನು ಚಂದ್ರನ ಬಳಿ ಈ ಕುರಿತು ಮಾತನಾಡಿ ಇತರ ಹೆಣ್ಣು ಮಕ್ಕಳಿಗೆ ಪಕ್ಷಪಾತ ಮಾಡದಂತೆ ಮನವಿ ಮಾಡುತ್ತಾನೆ.

ಆದರೆ ದಕ್ಷನ ಮನವಿಯ ನಂತರವೂ ಚಂದ್ರನು ರೋಹಿಣೀ ರವರಿಗೆ ಹೆಚ್ಚಿನ ಗಮನ ನೀಡುವುದನ್ನು ಮುಂದುವರಿಸುತ್ತಾನೆ. ಎಷ್ಟೇ ಬಾರಿ ಹೇಳಿದರೂ ಚಂದ್ರ ತನ್ನ ಹೆಚ್ಚಿನ ಗಮನವನ್ನು ರೋಹಿಣಿ ರವರಿಗೆ ನೀಡುವುದನ್ನು ನಿಲ್ಲಿಸುವುದಿಲ್ಲ. ಇದನ್ನು ಕಂಡ ದಕ್ಷನು ನೀನು ನಿನ್ನ ಹೊಳಪನ್ನು ಕ್ರಮೇಣ ಕಳೆದುಕೊಳ್ಳುತ್ತಿಯಾ ಎಂಬ ಶಾಪವನ್ನು ನೀಡುತ್ತಾರೆ ಹಾಗೂ ನಿನ್ನ ಗಾತ್ರ ಕ್ರಮೇಣ ಕಡಿಮೆಯಾಗುತ್ತದೆ ಎಂದು ಶಪಿಸುತ್ತಾರೆ. ಕ್ರಮೇಣ ದಕ್ಷನ ಶಾಪ ಪರಿಣಾಮ ಬೀರಲು ಆರಂಭಿಸುತ್ತದೆ, ಇದನ್ನು ಕಂಡ ಚಂದ್ರ ಬ್ರಹ್ಮ ದೇವನ ಬಳಿ ಸಹಾಯ ಬೇಡಲು ತೆರಳಿದಾಗ ಬ್ರಹ್ಮದೇವನು ನನ್ನ ಕೈಯಲ್ಲಿ ಏನೂ ಮಾಡಲು ಸಾಧ್ಯವಾಗುವುದಿಲ್ಲ ನೀನು ಶಿವನನ್ನು ಪ್ರಾರ್ಥಿಸು ಎಂದು ಸಲಹೆ ನೀಡುತ್ತಾರೆ.

ಶಿವನನ್ನು ಪ್ರಾರ್ಥಿಸಲು ಆರಂಭಿಸಿದ ಚಂದ್ರನು ಶಿವನು ಸಂತಸಗೊಳ್ಳುವ ವರೆಗೂ ಪ್ರಾರ್ಥನೆ ಮಾಡುತ್ತಾನೆ. ಚಂದ್ರನ ಭಕ್ತಿಗೆ ಸ್ಪಂದಿಸಿದ ಮಹಾಶಿವನು ಚಂದ್ರನಿಗೆ ನಾನು ನಿನ್ನ ಶಾಪವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ ನೀನು ಕ್ರಮೇಣ ನಿನ್ನ ಸ್ವರೂಪವನ್ನು ಉಳಿಸಿಕೊಳ್ಳುವ ಶಕ್ತಿ ನಿನಗೆ ನೀಡುತ್ತಿದ್ದೇನೆ ಎಂದು ಆಶೀರ್ವದಿಸುತ್ತಾನೆ. ಸ್ನೇಹಿತರೇ ಅದೇ ಕಾರಣಕ್ಕಾಗಿ ಹುಣ್ಣಿಮೆ ದಿನದಂದು ಸಂಪೂರ್ಣವಾಗಿ ಕಾಣುವ ಚಂದ್ರನು ನಿಧಾನವಾಗಿ ಮುಂದಿನ 15 ದಿನಗಳಲ್ಲಿ ತನ್ನ ಗಾತ್ರ ಕಳೆದುಕೊಂಡು ಸಂಪೂರ್ಣವಾಗಿ ಸಣ್ಣಗಾಗುತ್ತಾನೆ, ಅದನ್ನು ನಾವು ಅಮಾವಾಸ್ಯೆ ದಿನ ಎಂದು ಕರೆಯುತ್ತೇವೆ. ಇನ್ನು ಚಂದ್ರನನ್ನು ಉಳಿಸಿದ ಕಾರಣಕ್ಕಾಗಿ ಶಿವನನ್ನು ಸೋಮನಾಥ ಎಂದು ಕರೆಯಲಾಗುತ್ತದೆ. ಆದ್ದರಿಂದ ಸೋಮವಾರದಂದು ಶಿವನನ್ನು ಪೂಜಿಸುವವರು ತಮ್ಮ ಎಲ್ಲಾ ಸಮಸ್ಯೆಗಳಿಂದ ದೂರವಾಗಬಹುದು ಎಂದು ಪುರಾಣಗಳು ಹೇಳುತ್ತವೆ.

ಶಿವನನ್ನು ಸೋಮವಾರ ಮೆಚ್ಚಿಸುವುದು ಹೇಗೆ?

ಇನ್ನು ಸೋಮವಾರ ಶಿವನನ್ನು ಹೇಗೆ ಒಲಿಸಿಕೊಳ್ಳುವುದು ಎಂಬುದನ್ನು ಹೇಳುವುದಾದರೇ, ಸೋಮವಾರದಂದು ಸ್ವಚ್ಛ ಮನಸ್ಸಿನಿಂದ ಹಾಗೂ ದೇಹದಿಂದ ನೀವು ಶಿವ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ. ಸ್ಥಾನ ಮಾಡಿದ ನಂತರ ಶಿವನಿಗೆ ಹಾಲು ಮತ್ತು ಜೇನುತುಪ್ಪವನ್ನು ಅರ್ಪಿಸಿ. ಹೀಗೆ ಹಾಲು ಮತ್ತು ಜೇನು ತುಪ್ಪವನ್ನು ಅರ್ಪಿಸುವುದರಿಂದ ಜೀವನೋಪಾಯ, ಉದ್ಯೋಗ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಇನ್ನು ಸಾಧ್ಯವಾದರೇ ಶಿವಲಿಂಗಕ್ಕೆ ಬ’ಸ್ಮಾ ಮತ್ತು ನೀರಿನಿಂದ ಅಭಿಷೇಕ ಮಾಡಿ. ಅಭಿಷೇಕದ ನಂತರ ಶ್ರೀಗಂಧವನ್ನು ಅರ್ಪಿಸಿ, ಹೀಗೆ ಶ್ರೀಗಂಧವನ್ನು ಅರ್ಪಿಸುವುದರಿಂದ ಶ್ರೀಗಂಧದ ಸ್ವರೂಪವು ತಂಪಾಗಿರುತ್ತದೆ ಮತ್ತು ಇದರಿಂದ ನಿಮ್ಮ ಜೀವನವೂ ಕೂಡ ಶಾಂತಿ ಮತ್ತು ಸಂತೋಷದಿಂದ ಕೂಡಿರುತ್ತದೆ. ಇನ್ನು ಈ ಸಮಯದಲ್ಲಿ “ಓಂ ಮಹಾಶಿವಯ್ ಸೋಮಯಾ ನಮಃ” ಎಂಬ ಮಂತ್ರವನ್ನು ಜಪಿಸುತ್ತಲೇ ಇರಿ. ಇನ್ನು ಶಿವನಿಗೆ ಹೂವು ಮತ್ತು ಹಣ್ಣುಗಳನ್ನು ಅರ್ಪಿಸುವುದನ್ನು ಮರಿಯಬೇಡಿ ಹಾಗೂ ಆರತಿ ಮಾಡಿ. ನೀವು ಪ್ರಾರ್ಥನೆ ಮಾಡುವಾಗ ಶುದ್ಧ ಹೃದಯ ಮತ್ತು ನಂಬಿಕೆಯಿಂದ ಪ್ರಾರ್ಥಿಸುವುದನ್ನು ಮರೆಯಬೇಡಿ.