ಆಮ್ಲೀಯತೆಯನ್ನು ತೆಗೆದು ಹಾಕಲು ಈ ಸುಲಭ ಮನೆಮದ್ದನ್ನು ಅನುಸರಿಸಿ

ಆಮ್ಲೀಯತೆಯನ್ನು ತೆಗೆದು ಹಾಕಲು ಈ ಸುಲಭ ಮನೆಮದ್ದನ್ನು ಅನುಸರಿಸಿ

ನಮಸ್ಕಾರ ಸ್ನೇಹಿತರೇ, ಆಮ್ಲೀಯತೆ ಎಂಬುದು ಇದೀಗ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಆಧುನಿಕ ಯುಗದಲ್ಲಿ ಹಣಗಳಿಸುವ ಅಥವಾ ಮನರಂಜನೆಯ ಹಾದಿಯಲ್ಲಿ ನಾವು ಆಹಾರ ಸೇವನೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದ ಕಾರಣ ಇದೀಗ ಎಲ್ಲಾ ವಯಸ್ಕರಲ್ಲೂ ಇದು ಸಾಮಾನ್ಯವಾಗಿಬಿಟ್ಟಿದೆ. ಒಂದು ವೇಳೆ ನಿಮಗೂ ಕೂಡ ಈ ಸಮಸ್ಯೆ ಇದ್ದರೇ, ಸ್ವಲ್ಪ ಸಮಸ್ಯೆ ಇರುವವರು ಏನು ಮಾಡಬೇಕು, ಹೆಚ್ಚು ಆಮ್ಲಿಯತೆ ಇರುವವರು ಏನು ಮಾಡಬೇಕು ಎಂಬುದನ್ನು ನಾವು ತಿಳಿಸಿಕೊಡ್ತೇವೆ. ಒಂದು ವೇಳೆ ನಿಮಗೆ ಕೊಂಚ ಆಮ್ಲೀಯತೆಯಂತಹ ಸಮಸ್ಯೆಗಳಿದ್ದರೆ ಕೇವಲ ಒಂದು ಲೋಟ ನೀರನ್ನು ಕುಡಿಯಿರೀ. ಇದರಿಂದ ತಕ್ಷಣವಾಗಿ ಪ್ರಭಾವ ಕೊಂಚ ಕಡಿಮೆಯಾಗುತ್ತದೆ, ಹೀಗೆ ಮಾಡುವುದರಿಂದ ನಿಮ್ಮ ಹೊಟ್ಟೆಯೊಳಗಿನ ಹೆಚ್ಚುವರಿ ಆಮ್ಲವು ಕಡಿಮೆಯಾಗುತ್ತದೆ, ಇದರಿಂದ ನೀವು ಕೊಂಚ ಆರಾಮ ಎನಿಸುತ್ತದೆ. ಆದರೆ ನೀವು ಹೆಚ್ಚು ಆಮ್ಲೀಯತೆಯನ್ನು ಹೊಂದಿದ್ದರೇ ಈ ಕೆಳಗಿನ ಮನೆಮದ್ದುಗಳ ಮೂಲಕ ಆಮೀಯತೆಯನ್ನು ಬಹಳ ಸುಲಭವಾಗಿ ಕಡಿಮೆ ಮಾಡಕೊಳ್ಳಬಹುದಾಗಿದೆ.

ತುಳಸಿ ಎಲೆಗಳು- ಸ್ನೇಹಿತರೇ ನಿಮಗೆ ಆಮ್ಲಿಯತೆ ಹೆಚ್ಚಾಗಿರುವ ಸಂದರ್ಭದಲ್ಲಿ, ಕೂಡಲೇ ಮನೆ ಮುಂದಿರುವ ತುಳಸಿ ಗಿಡದಿಂದ ಕೇವಲ ಮೂರರಿಂದ ನಾಲ್ಕು ತುಳಸಿ ಎಲೆಗಳನ್ನು ಮುರಿದು ನಿಧಾನವಾಗಿ ಅಗಿಯಿರಿ. ಇದರಿಂದ ಗಣನೀಯ ಪ್ರಮಾಣದಲ್ಲಿ ಕೆಲವೇ ನಿಮಿಷಗಳಲ್ಲಿ ಆಮ್ಲಿಯತೆ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲಾ, ಮೂರು ಅಥವಾ ನಾಲ್ಕು ತುಳಸಿ ಎಲೆಗಳನ್ನು ತೆಗೆದುಕೊಂಡು ಒಂದು ಕಪ್ ನೀರಿನೊಂದಿಗೆ ಸೇರಿಸಿ ಕುಡಿಸಿ. ಈ ನೀರಿಗೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ. ನಿಧಾನವಾಗಿ ಕುಡಿಯಿರಿ. ಇದರಿಂದ ಆಮ್ಲಿಯತೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.

ದಾಲ್ಚಿನ್ನಿ – ಭಾರತೀಯ ಪಾಕ ಪದ್ದತಿಯಲ್ಲಿ ಪ್ರಮುಖ ಮಸಾಲಾ ಪದಾರ್ಥಗಳಲ್ಲಿ ಒಂದಾಗಿರುವ ದಾಲ್ಚಿನ್ನಿಯು ಆಮ್ಲೀಯತೆಗೆ ಉತ್ತಮ ಚಿಕಿತ್ಸಾ ವಸ್ತುವಾಗಿದೆ. ಇನ್ನು ಮಾನವನ ದೇಹದಲ್ಲಿ ಜೀರ್ಣಕ್ರಿಯೆಯನ್ನು ಸರಾಗವಾಗುವಂತೆ ಮಾಡಲಿದೆ, ಇದು ನೈಸರ್ಗಿಕವಾಗಿ ಆಮ್ಲವನ್ನು ತೆಗೆದುಹಾಕುವಲ್ಲ ಪರಿಣಿತ ಎಂದು ವೈದ್ಯ ಶಾಸ್ತ್ರ ಹೇಳುತ್ತದೆ. ನೀವು ಹೆಚ್ಚಿನದು ಏನು ಮಾಡಬೇಕಾಗಿಲ್ಲ, ಒಂದು ಕಪ್ ನೀರು ತೆಗೆದುಕೊಂಡು ಅರ್ಧ ಟೀ ಸ್ಪೂನ್ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಕುಡಿಯಲು ಬಿಡಿ. ಈ ನೀರನ್ನು ದಿನಕ್ಕೆ ಎರಡು ಅಥವಾ ಮೂರು ಬಾರಿ ಕುಡಿದರೇ ದೀರ್ಘ ಕಾಲದ ಪರಿಹಾರ ನೀಡಲಿದೆ. ಹೀಗಷ್ಟೇ ಅಲ್ಲಾ, ನಿಮಗೆ ಸೂಪ್ ಕುಡಿಯುವ ಅಥವಾ ಸಲಾಡ್ ಸೇವಿಸುವ ಅಭ್ಯಾಸವಿದ್ದರೇ, ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಸೇವಿಸಿ.

ಮಜ್ಜಿಗೆ- ಸ್ನೇಹಿತರೇ, ಸರಳ ಹಾಗೂ ಸುಲಭ ವಿದಾನವೆಂದರೇ ಅದುವೇ ಮಜ್ಜಿಗೆ. ಬಹಳ ಸುಲಭವಾಗಿ ತಯಾರು ಮಾಡಬಹುದು, ಹಾಗೂ ಯಾವುದೇ ಅಡ್ಡ ಪರಿಣಾಮ ಕೂಡ ಇರುವುದಿಲ್ಲ. ಹೇಗಿದ್ದರೂ ಎಲ್ಲರೂ ಪ್ರತಿದಿನ ಮೊಸರು ಸೇವಿಸುತ್ತೀರಾ ಅದೇ ರೀತಿ ಮಜ್ಜಿಗೆಯ ಮೊರೆ ಹೋಗಿ, ಇದರಿನ ನಿಮ್ಮ ಹೊಟ್ಟೆಯಲ್ಲಿರುವ ಆಮ್ಲಿಯತೆಯನ್ನು ಬಹಳ ಸುಲಭವಾಗಿ ಇದು ತೆಗೆದು ಹಾಕುತ್ತದೆ.

ಲವಂಗ – ನಿಜಕ್ಕೂ ಇದು ಕೂಡ ಒಂದು ಸರಳ ವಿಧವಾಗಿದೆ. ಲವಂಗ ಬಳಸಿಕೊಂಡು ನೀವು ಆಮ್ಲೀಯತೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅದರಲ್ಲಿಯೂ ಪ್ರಮುಖವಾಗಿ ಹೊಟ್ಟೆಯಲ್ಲಿ ಹಲವಾರು ಬಾರಿ ಕಡಿಮೆ ಆಮ್ಲ ಉತ್ಪತ್ತಿಯಾಗುತ್ತದೆ, ಇದರಿಂದಾಗಿಯೂ ಕೂಡ ನಿಮಗೆ ಆಮ್ಲಿಯತೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಇಂತಹ ಸಂದರ್ಭದಲ್ಲಿ ಲವಂಗ ಉಪಯೋಗಕ್ಕೆ ಬರುತ್ತದೆ. ಕೇವಲ ಎರಡು ಅಥವಾ ಮೂರು ಲವಂಗ ಗಳನ್ನು ಬಾಯಿಗೆ ಹಾಕಿಕೊಂಡು ಚಪ್ಪರಿಸಿದರೆ ಸಾಕು.