ಕೆ ಎಲ್ ರಾಹುಲ್ ಗೆ ಮಹತ್ವದ ಜವಾಬ್ದಾರಿ ನೀಡಲು ಸಿದ್ದವಾಗುತ್ತಿದೆಯೇ ಬಿಸಿಸಿಐ?? ಕ್ರಿಕೆಟ್ ದಿಗ್ಗಜರು ಹೇಳಿದ್ದು ಹೀಗೆ

ಕೆ ಎಲ್ ರಾಹುಲ್ ಗೆ ಮಹತ್ವದ ಜವಾಬ್ದಾರಿ ನೀಡಲು ಸಿದ್ದವಾಗುತ್ತಿದೆಯೇ ಬಿಸಿಸಿಐ?? ಕ್ರಿಕೆಟ್ ದಿಗ್ಗಜರು ಹೇಳಿದ್ದು ಹೀಗೆ

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಕೆ ಎಲ್ ರಾಹುಲ್ ರವರು ತಮ್ಮ ಜೀವನದ ಅತ್ಯುತ್ತಮ ಫಾರ್ಮ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅದರಲ್ಲಿಯೂ ಕಳೆದ ನ್ಯೂಜಿಲೆಂಡ್ ಸರಣಿಯಲ್ಲಿ ಯಾವುದೇ ಕ್ರಮಾಂಕದಲ್ಲಿ ಬೇಕಾದರೂ ತಾನು ಬ್ಯಾಟಿಂಗ್ ಮಾಡಿ ಪಂದ್ಯ ಗೆಲ್ಲಿಸಿ ಕೊಡಬಲ್ಲೆ ಎಂಬುದನ್ನು ಸಾಬೀತು ಮಾಡಿದ್ದರು. ಆರಂಭಿಕ ಕ್ರಮಾಂಕ ದಿಂದ ಹಿಡಿದು 4ನೇ ಕ್ರಮಾಂಕದ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಸೈ ಎನಿಸಿ ಕೊಂಡಿದ್ದರು. ಈ ಮೂಲಕ ಭಾರತೀಯ ಕ್ರಿಕೆಟ್ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳುವುದು ಖಚಿತವಾಗಿದೆ. ಆದರೆ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಈಗಾಗಲೇ ಉತ್ತಮ ಪ್ರದರ್ಶನ ನೀಡುತ್ತಿರುವ ಕಾರಣ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ ಎಂಬುದು ಇನ್ನು ಪ್ರಶ್ನೆಯಾಗಿ ಉಳಿದುಕೊಂಡಿದೆ, ಆದರೆ ಸ್ಥಾನ ಮಾತ್ರ ಖಚಿತವಾಗಿದೆ.

ಇನ್ನು ಇದೀಗ ಭಾರತದ ಚಿತ್ತ ಮುಂದಿನ ವಿಶ್ವಕಪ್ ಹಾಗೂ ವಿಶ್ವಕಪ್ ನಂತರದ ದಿನಗಳ ಕುರಿತು ನೆಟ್ಟಿರುವ ಸಂದರ್ಭದಲ್ಲಿ ಮುಂದಿನ ವರ್ಷಗಳಲ್ಲಿ ಭಾರತ ತಂಡ ಹೇಗೆ ರಚನೆಯಾಗಲಿದೆ, ಯಾವ ಆಟಗಾರರು ಇಂದಿನಿಂದ ಖಾಯಂ ಸ್ಥಾನ ಪಡೆದುಕೊಂಡು ಈಗ ತಂಡದಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಿರುವ ಆಟಗಾರರ ಸ್ಥಾನ ತುಂಬಲಿದ್ದಾರೆ ಎಂಬ ಲೆಕ್ಕಾಚಾರಗಳು ಆರಂಭವಾಗಿವೆ. ಯಾಕೆಂದರೆ ಮುಂದಿನ ವಿಶ್ವಕಪ್ ವೇಳೆಗೆ ಬಹುತೇಕ ಆಯಗಾರರಿಗೆ 33ಕ್ಕೂ ಹೆಚ್ಚು ವಯಸ್ಸಾಗಿರುತ್ತದೆ, ಒಂದು ವೇಳೆ ಮುಂದಿನ ವಿಶ್ವಕಪ್ ನಲ್ಲಿ ಹಲವಾರು ಆಟಗಾರರು ಪಾಲ್ಗೊಂಡರೂ ಕೂಡ ವಿಶ್ವಕಪ್ ನಂತರ ಯುವ ಆಟಗಾರರಿಗೆ ಅನುವು ಮಾಡಿಕೊಡಲು ಇಂದಿನ ಆಟಗಾರರು ತಂಡದಿಂದ ದೂರ ಸರಿಯ ಬೇಕಾದದ್ದು ಅನಿವಾರ್ಯವಾಗುತ್ತದೆ. ಇದೀಗ ಈ ಲೆಕ್ಕಾಚಾರಗಳ ಕುರಿತು ಮಾತನಾಡಿರುವ ಸುನಿಲ್ ಗವಾಸ್ಕರ್ ಹಾಗೂ ಮಾಜಿ ಕ್ರಿಕೆಟ್ ಆಟಗಾರ ಆಕಾಶ್ ಚೋಪ್ರಾ ರವರು ತಮ್ಮದೇ ಆದ ಅಭಿಪ್ರಾಯಗಳನ್ನು ಕೆಎಲ್ ರಾಹುಲ್ ಅವರ ವಿಷಯದಲ್ಲಿ ಹೊರಹಾಕಿದ್ದಾರೆ.

ಹೌದು ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ತಂಡವನ್ನು ವಿರಾಟ್ ಕೊಹ್ಲಿ ರವರು ಅತ್ಯುತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಇನ್ನು ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ರವರು ಕೂಡ ಅತ್ಯುತ್ತಮವಾದ ಪ್ರದರ್ಶನ ನೀಡುತ್ತಾ ಪಂದ್ಯಗಳನ್ನು ಗೆಲ್ಲಿಸಿ ಕೊಡುತ್ತಿದ್ದಾರೆ. ಒಂದು ವೇಳೆ ಮುಂದಿನ ವಿಶ್ವಕಪ್ ಅಥವಾ ಮುಂದಿನ ವಿಶ್ವಕಪ್ ನಂತರದ ದಿನಗಳನ್ನು ಗಮನಿಸಿದರೇ ಆರಂಭಿಕರ ಸ್ಥಾನಕ್ಕೆ ಹಾಗೂ ವಿರಾಟ್ ಕೊಹ್ಲಿ ರವರ ಕ್ಯಾಪ್ಟನ್ ಸ್ಥಾನಕ್ಕೆ ಯಾವ ಆಟಗಾರ ಆಯ್ಕೆಯಾಗಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿವೆ.

ಇದೀಗ ಆಕಾಶ್ ಚೋಪ್ರಾ ಹಾಗೂ ಸುನೀಲ್ ಗವಾಸ್ಕರ್ ಅವರು ಪ್ರತ್ಯೇಕ ಸಂದರ್ಶನಗಳಲ್ಲಿ ಮಾತನಾಡಿ ಕೆ ಎಲ್ ರಾಹುಲ್ ರವರು ಭಾರತದ ಮುಂದಿನ ಕ್ಯಾಪ್ಟನ್ ಆಗಬಹುದು. ಎಲ್ಲರೂ ವಿರಾಟ್ ಕೊಹ್ಲಿ ಅವರ ನಂತರ ರೋಹಿತ್ ಶರ್ಮಾ ನಾಯಕನ ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂಬ ಮಾತುಗಳನ್ನು ಹೇಳುತ್ತಿದ್ದಾರೆ. ಆದರೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ರವರು ಬಹುತೇಕ ಸಮಾನ ವಯಸ್ಕರು, ಆದ ಕಾರಣದಿಂದ ಒಬ್ಬರು ನಿವೃತ್ತಿ ತೆಗೆದುಕೊಳ್ಳುವ ವೇಳೆಗೆ ಮತ್ತೊಬ್ಬರು ಬಹುತೇಕ ನಿವೃತ್ತಿಯ ಅಂಚಿನಲ್ಲಿ ಇರುತ್ತಾರೆ. ಆದ ಕಾರಣ ಸಾಧ್ಯವಾದಷ್ಟು ಬೇಗ ಮುಂದಿನ ನಾಯಕ ಯಾರು ಎಂಬುದರ ಕುರಿತು ಬಿಸಿಸಿಐ ಆಲೋಚನೆ ಮಾಡಲಿದೆ.

ಸದ್ಯದ ಲೆಕ್ಕಾಚಾರಗಳ ಪ್ರಕಾರ ಕೆ ಎಲ್ ರಾಹುಲ್ ಅವರು ಭಾರತೀಯ ಕ್ರಿಕೆಟ್ ತಂಡದ ಮುಂದಿನ ನಾಯಕರಾಗಬಹುದು. ಐಪಿಎಲ್ ಮುಗಿದ ಬಳಿಕ ಕೆಎಲ್ ರಾಹುಲ್ ರವರನ್ನು ಭಾರತ ತಂಡದ ಉಪನಾಯಕನಾಗಿ ಆಯ್ಕೆ ಮಾಡಬಹುದು ಎಂದು ಸುನಿಲ್ ಗವಾಸ್ಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಯಕರ ಸ್ಥಾನದ ಸಾಲಿನಲ್ಲಿ ಶ್ರೇಯಸ್ ಅಯ್ಯರ್ ರವರು ಸ್ಥಾನಪಡೆದಿದ್ದಾರಾದರೂ ಅವರು ನಾಲ್ಕನೇ ಕ್ರಮಾಂಕದಲ್ಲಿ ಗಟ್ಟಿಯಾಗಿ ಬೇರೊರಿಲ್ಲ ಎಂಬ ಮಾತುಗಳು ಕೆಲವರಿಂದ ಕೇಳಿ ಬರುತ್ತಿವೆ. ಆದ ಕಾರಣ ಬಿಸಿಸಿಐ ಚಿತ್ತ ಇದೀಗ ಕೆಎಲ್ ರಾಹುಲ್ ಅವರತ್ತ ನೆಟ್ಟಿದೆ ಎಂಬುದು ಸ್ಪಷ್ಟವಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.