ಐಪಿಎಲ್ ನಲ್ಲಿ ಯಾರಿಗೆ ಬೌಲಿಂಗ್ ಮಾಡುವುದು ಕಷ್ಟ ಎಂದು ವಿವರಣೆ ನೀಡಿದ ಜೋಪ್ರಾ ! ಆಯ್ಕೆಯಾದ ಭಾರತೀಯ ಯಾರು ಗೊತ್ತಾ?

ಐಪಿಎಲ್ ನಲ್ಲಿ ಯಾರಿಗೆ ಬೌಲಿಂಗ್ ಮಾಡುವುದು ಕಷ್ಟ ಎಂದು ವಿವರಣೆ ನೀಡಿದ ಜೋಪ್ರಾ ! ಆಯ್ಕೆಯಾದ ಭಾರತೀಯ ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಕೆಲವೇ ಕೆಲವು ದಿನಗಳಲ್ಲಿ ಇಂಗ್ಲೆಂಡ್ ತಂಡದ ಪ್ರಮುಖ ಬೌಲರ್ ಗಳ ಸಾಲಿನಲ್ಲಿ ಕಂಡು ಬರುವ ಜೋಪ್ರಾ ರವರು ಯಾವ ರೀತಿಯ ಬೌಲಿಂಗ್ ಮಾಡುತ್ತಾರೆ ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ. ಇವರ ಅದ್ಭುತ ಬೌಲಿಂಗ್ ನೋಡಿದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಕೆಲವೇ ಕೆಲವು ಪಂದ್ಯಗಳನ್ನು ಇಂಗ್ಲೆಂಡ್ ದೇಶದ ಪರ ಆಟವಾಡಿದ್ದರೂ ಕೂಡ ಮರು ಆಲೋಚನೆ ಮಾಡದೇ ಇತರ ವೇಗದ ಬೌಲರ್ ಗಳನ್ನು ಪಕ್ಕಕ್ಕೆ ಸರಿಸಿ ಇವರನ್ನು ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಿತ್ತು. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ನಂಬಿಕೆಯನ್ನು ಹುಸಿ ಮಾಡದೇ ಜೋಪ್ರಾ ರವರು ಅತ್ಯುತ್ತಮ ಪ್ರದರ್ಶನ ನೀಡಿದ್ದರು.

ಇದಾದ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಭವಿಷ್ಯದ ಬೌಲರ್ ಎಂಬ ಭರವಸೆ ಮೂಡಿರುವ ಜೋಪ್ರಾ ರವರು ಬಲಾಡ್ಯ ಬ್ಯಾಟ್ಸ್ಮನ್ ಗಳನ್ನು ಕೂಡ ಕಂಗಾಲಾಗುವಂತೆ ಮಾಡುತ್ತಾರೆ. ಇಷ್ಟೆಲ್ಲಾ ಉತ್ತಮ ಪ್ರದರ್ಶನ ನೀಡುತ್ತಿರುವ ಜೋಪ್ರಾ ರವರಿಗೆ ಈ ಒಬ್ಬ ಭಾರತೀಯನಿಗೆ ಐಪಿಎಲ್ ಟೂರ್ನಿಯಲ್ಲಿ ಬೌಲಿಂಗ್ ಮಾಡಲು ಸುಲಭ ಎನಿಸುತ್ತಿಲ್ಲ ವಂತೆ. ಈ ಮಾತನ್ನು ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಹೌದು ಸ್ನೇಹಿತರೇ ನಾನು ಐಪಿಎಲ್ ಟೂರ್ನಿ ಸೇರಿದಂತೆ ಇನ್ನು ವಿವಿಧ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸಿದ್ದೇನೆ. ಹಲವಾರು ಬ್ಯಾಟ್ಸ್ ಮನ್ ಗಳಿಗೆ ಬೌಲಿಂಗ್ ಮಾಡಿದ್ದೇನೆ, ವಿಶ್ವದ ಬಲಿಷ್ಠ ಬ್ಯಾಟ್ಸ್ಮನ್ ಗಳನ್ನು ನಾನು ಕೆಲವು ಬಾಲ್ ಗಳಲ್ಲಿ ಆದರೂ ಕೊಂಚ ತಡೆಯಬಲ್ಲೆ ಆದರೆ ಪವರ್ ಪ್ಲೇ ನಲ್ಲಿ ಕಿಂಗ್ಸ್ ಇಲೆವೆನ್ ತಂಡದ ಪರ ಬ್ಯಾಟಿಂಗ್ ಮಾಡುವ ಕೆಎಲ್ ರಾಹುಲ್ ರವರಿಗೆ ಬೌಲಿಂಗ್ ಮಾಡುವುದು ಸುಲಭದ ಮಾತಲ್ಲ, ನಾನು ಯಾವುದೇ ರನ್ ನೀಡಬಾರದು ಎಂದು ಬೌಲಿಂಗ್ ಮಾಡಿದ ಬಾಲ್ ಗಳೆಲ್ಲವನ್ನು ಬೌಂಡರಿ ಗೆರೆ ದಾಟಿಸಿದ್ದಾರೆ. ಬಹಳ ಚಾಕಚಕ್ಯತೆಯಿಂದ ಬ್ಯಾಟಿಂಗ್ ಮಾಡುತ್ತಾರೆ ಎಂದು ಹಾಡಿ ಹೊಗಳಿದ್ದಾರೆ.