ಪೆಟ್ರೋಲ್ ಬಂಕ್ ಗಳಲ್ಲಿ ವಂಚನೆಯಿಂದ ಪಾರಾಗುವುದು ಹೇಗೆ? ಸುಲಭ ಕ್ರಮಗಳು ಇಲ್ಲಿವೆ.

ಪೆಟ್ರೋಲ್ ಬಂಕ್ ಗಳಲ್ಲಿ ವಂಚನೆಯಿಂದ ಪಾರಾಗುವುದು ಹೇಗೆ? ಸುಲಭ ಕ್ರಮಗಳು ಇಲ್ಲಿವೆ.

ನಮಸ್ಕಾರ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಆಧುನಿಕ ಬದುಕಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕಡ್ಡಾಯವಾಗಿ ಬಿಟ್ಟಿದೆ. ಬಹುತೇಕರು ಕನಿಷ್ಠ 2 ವೀಲರ್ ಗಾಡಿಯನ್ನು ಆದರೂ ಇಟ್ಟುಕೊಂಡಿರುತ್ತಾರೆ. ಇದನ್ನೇ ಬಂಡವಾಳವನ್ನಾಗಿಸಿ ಕೊಳ್ಳುವ ಕೆಲವು ಪೆಟ್ರೋಲ್ ಬಂಕುಗಳು ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟದಲ್ಲಿ ಇರುವ ಕೆಲವು ಅಂಶಗಳನ್ನು ಬಳಸಿಕೊಂಡು ಪ್ರತಿ ಲೀಟರ್ ನಲ್ಲಿ ಇಷ್ಟ ಎಂದು ಲಪಟಾಯಿಸಿ ಹೆಚ್ಚಿನ ಲಾಭಗಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಪೆಟ್ರೋಲ್ ಹಾಗೂ ಡೀಸಲ್ ಬಂಕುಗಳಲ್ಲಿ ಸಾಮಾನ್ಯ ಜನರಿಗೆ ತಿಳಿಯದ ಕೆಲವೊಂದು ಮಾಹಿತಿಗಳನ್ನು ಬಳಸಿಕೊಂಡು ಇವರು ಅದನ್ನು ಲಾಭವನ್ನು ಆಗಿ ಪರಿವರ್ತಿಸಿ ಕೊಳ್ಳುತ್ತಿದ್ದಾರೆ. ನಾವು ಇಂದು ನೀವು ಈ ರೀತಿಯ ಪೆಟ್ರೋಲ್ ಪಂಪು ಗಳಲ್ಲಿ ಯಾವ ರೀತಿ ವಂಚನೆಯಿಂದ ಪಾರಾಗಬಹುದು ಎಂಬ ಸುಲಭ ಕ್ರಮಗಳನ್ನು ತಿಳಿಸಿಕೊಡುತ್ತೇವೆ ಕೇಳಿ. ಬಹುಶಹ ನೀವು ಕೆಲವನ್ನು ಈಗಾಗಲೇ ಕೇಳಿರಬಹುದು, ಇನ್ನು ಕೇಳದೆ ಇರಬಹುದು.

ಪೆಟ್ರೋಲ್ ತುಂಬಿಸಿಕೊಳ್ಳುವಾಗ ನಿಮ್ಮ ಗಮನವೂ ಕೇವಲ ಮೀಟರ್ ಇರಬಾರದು. ನೀವು ಪ್ರಮುಖವಾಗಿ ಮೀಟರ್ ಹಾಗೂ ತುಂಬಿಸುವ ವ್ಯಕ್ತಿಯ ಕೈ ನ ಚಲನವಲನಗಳ ಮೇಲೆ ಗಮನ ಹರಿಸಿ, ಆತ ಪೆಟ್ರೋಲ್ ತುಂಬಿಸುವ ವೇಳೆಯಲ್ಲಿ ಸ್ಟಾರ್ಟ್ ಮಾಡುವುದು, ಸ್ಟಾಪ್ ಮಾಡುವುದು, ಸ್ಟಾರ್ಟ್ ಮಾಡುವುದು, ಸ್ಟಾಪ್ ಮಾಡುವುದು, ಟ್ರಿಕ್ ಗಳನ್ನು ಬಳಸುತ್ತಾರೆಯೇ ಎಂಬುದನ್ನು ಗಮನಿಸಿ. ಯಾಕೆಂದರೆ ಪೆಟ್ರೋಲ್ ಹಾಕುದ ಸಾಧನವನ್ನು ಹಿಡಿದು ಬಿಡುವುದು, ಹಿಡಿದು ಬಿಡುವುದು, ಮಾಡಿದರೇ ಆತ ನಿಮಗೆ ಅಳತೆಯ ಲೆಕ್ಕದಲ್ಲಿ ಟೋಪಿ ಹಾಕಲು ಪ್ರಯತ್ನ ನಡೆಸುತ್ತಿದ್ದಾನೆ ಎಂದರ್ಥ. ಒಮ್ಮೆಲೆ ಪೆಟ್ರೋಲ್ ಹಾಕುದ ಸಾಧನವನ್ನು ಹಿಡಿದರೆ ತುಂಬುವವರೆಗೂ ಬಿಡದಂತೆ ನೋಡಿಕೊಳ್ಳಿ.

ಇನ್ನು ಎರಡನೆಯದಾಗಿ ಸಾಮಾನ್ಯವಾಗಿ ನೀವು ಪೆಟ್ರೋಲ್ ತುಂಬಿಸಿದ ದಿನ ಅಥವಾ ಮರುದಿನ ನಿಮ್ಮ ಗಾಡಿಯ ಮೈಲೇಜ್ ನ ಆಧಾರದಲ್ಲಿ ಏರುಪೇರಾಗಿ ರುವುದು ಕಂಡುಬಂದಲ್ಲಿ ಕೂಡಲೇ ಪೆಟ್ರೋಲ್ ಬಂಕಿಗೆ ತೆರಳಿ, ಅಲ್ಲಿ 5 ಲೀಟರ್ ಮಾಪನ ಪರೀಕ್ಷೆ ಮಾಡಿ ಎಂದು ಆಗ್ರಹ ಮಾಡಿ. ಯಾವ ಗ್ರಾಹಕರೇ ಕೇಳಿದರೂ ಪೆಟ್ರೋಲ್ ಬಂಕ್ ಗಳಲ್ಲಿ ತೂಕ ಮತ್ತು ಅಳತೆಯ ಇಲಾಖೆಯಿಂದ ಪ್ರಮಾಣೀಕರಿಸಲ್ಪಟ್ಟ 5 ಲೀಟರ್ ಮಾಪನ ಸಾಧನ ಇಟ್ಟಿರಲೇ ಬೇಕು. ಈ ಯಂತ್ರಕ್ಕೆ 5 ಲೀಟರ್ ಇಂಧನವನ್ನು ತುಂಬಿಸಿ ಎಂದು ಆದೇಶಿಸಿ. ಇಂಧನವನ್ನು ಯಂತ್ರದಲ್ಲಿ ತುಂಬಿಸಿದಾಗ ಸರಿಯಾಗಿ 5 ಲೀಟರ್ಗೆ ಬಂದು ನಿಂತುಕೊಳ್ಳಬೇಕು ಇಲ್ಲವಾದಲ್ಲಿ ಆ ಪೆಟ್ರೋಲ್ ಬಂಕಿನಲ್ಲಿ ಅಳತೆಯಲ್ಲಿ ಮೋಸ ನಡೆಯುತ್ತಿದೆ ಎಂದರ್ಥ.

ಇನ್ನು ಈ ಪೆಟ್ರೋಲ್ ಬಂಕ್ ಅಲ್ಲಿ ಪೈಸೆ ಪೈಸೆ ಲೆಕ್ಕದಲ್ಲಿ ಮೋಸ ನಡೆಯುತ್ತದೆ. ಯಾಕೆಂದರೆ ಸ್ನೇಹಿತರೆ ನೀವೇ ಅಂದಾಜು ಮಾಡಿಕೊಳ್ಳಿ ದಿನಕ್ಕೆ ಕೆಲವೊಂದು ಬಂಕುಗಳಲ್ಲಿ ಕನಿಷ್ಠ 10 ಸಾವಿರ ಲೀಟರುಗಳಿಂದ ಹಿಡಿದು ಎರಡು ಲಕ್ಷ ಲೀಟರ್ ಗಳವರೆಗೆ ಪೆಟ್ರೋಲ್ ಅಥವ ಡೀಸೆಲ್ ಮಾರಲಾಗುತ್ತದೆ. ಪೆಟ್ರೋಲ್ ಬೆಲೆ 77 ರೂಪಾಯಿ ಇದ್ದರೇ ಆತ 77.10 ಎಂದು ಬೋರ್ಡ್ ಹಾಕಿ ಮಾರಾಟ ಮಾಡಿದರೇ ನಾವು 10 ಪೈಸದ ಕುರಿತು ಗಮನಹರಿಸಲು ಹೋಗುವುದಿಲ್ಲ ಆದರೆ ಪ್ರತಿ ಲೀಟರ್ ಗೆ ಪೈಸೆಯಂತೆ ದಿನಕ್ಕೆ ಒಂದು ಲಕ್ಷ ಲೀಟರ್ ಪೆಟ್ರೋಲ್ ಮಾರಾಟ ಮಾಡಿದರೇ ಅದರಿಂದ ಆತನಿಗೆ ಆಗುವ ಲಾಭದ ಲೆಕ್ಕಾಚಾರ ನೀವೇ ಊಹಿಸಿಕೊಳ್ಳಿ. ಅದೇ ಕಾರಣಕ್ಕೆ ನೀವು ಪೆಟ್ರೋಲ್ ಬಂಕಿಗೆ ತೆರಳುವ ಮುನ್ನ ಇಂಟರ್ನೆಟ್ ಅಥವಾ ನ್ಯೂಸ್ ಪೇಪರ್ ಗಳಲ್ಲಿ ಸರಿಯಾದ ಮಾರಾಟ ದರ ಖಚಿತಪಡಿಸಿಕೊಳ್ಳಿ.

ಇನ್ನು ಕೊನೆಯದಾಗಿ ಫಿಲ್ಟರ್ ಪೇಪರ್ ಟೆಸ್ಟ್, ಸ್ನೇಹಿತರೇ ಇದು ಪ್ರಮುಖವಾಗಿ ಕಲುಷಿತ ಪೆಟ್ರೋಲ್ ಕಂಡುಹಿಡಿಯುವ ವಿಧಾನವಾಗಿದೆ. ಒಂದು ವೇಳೆ ಪೆಟ್ರೋಲ್ ಬಂಕ್ ನವರು ಕೇವಲ ಅಳತೆಯಲ್ಲಿ ಲಾಭ ಮಾಡಿಕೊಳ್ಳಲು ಪ್ರಯತ್ನಪಡದೆ ಅಶುದ್ಧ ಪೆಟ್ರೋಲ್ ನೀಡಲು ಆರಂಭಿಸಿದರೇ, ಖಂಡಿತ ನಿಮ್ಮ ವಾಹನಗಳಿಗೆ ಅದು ಒಳ್ಳೆಯದಲ್ಲ. ಆದ ಕಾರಣ ನಿಮ್ಮ ವಾಹನದ ಇದ್ದಕ್ಕಿದ್ದಂತೆ ವಿಚಿತ್ರ ಶಬ್ದ ಅಥವಾ ತರಂಗಗಳನ್ನು ಹೊರ ಹಾಕಿದ್ದಲ್ಲಿ ಕೂಡಲೇ ಫಿಲ್ಟರ್ ಪೇಪರ್ ತೆಗೆದುಕೊಂಡು ಪೆಟ್ರೋಲ್ ಹನಿಗಳನ್ನು ಅದರ ಮೇಲೆ ಹಾಕಿ. ಒಂದು ವೇಳೆ ಪೆಟ್ರೋಲ್ ಅಶುದ್ದವಾಗಿರದೇ ಇದ್ದರೇ ಅದು ಫಿಲ್ಟರ್ ಪೇಪರ್ ಮೇಲೆ ಕೆಲವೊಂದು ಕಲೆಗಳನ್ನು ಉಳಿಸುತ್ತದೆ. ಅದೇ ಶುದ್ಧವಾಗಿದ್ದರೆ ಯಾವುದೇ ಕಲೆಗಳು ಅಲ್ಲಿರುವುದಿಲ್ಲ.