ವಾಟ್ಸಪ್ ನಲ್ಲಿ ನಿಮ್ಮ ಕೆಲವು ಸಂದೇಶಗಳನ್ನು ಡಿಲೀಟ್ ಮಾಡದೇ ರಹಸ್ಯವಾಗಿಡುವುದು ಹೇಗೆ ಎಂಬುದು ನಿಮಗೆ ಗೊತ್ತೇ??

ವಾಟ್ಸಪ್ ನಲ್ಲಿ ನಿಮ್ಮ ಕೆಲವು ಸಂದೇಶಗಳನ್ನು ಡಿಲೀಟ್ ಮಾಡದೇ ರಹಸ್ಯವಾಗಿಡುವುದು ಹೇಗೆ ಎಂಬುದು ನಿಮಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಹೀಗಿನ ಕಾಲದಲ್ಲಿ ಎಲ್ಲರೂ ವಾಟ್ಸಪ್ ಬಳಸುತ್ತಾರೆ. ಹೀಗೆ ಸರ್ವೇ ಸಾಮಾನ್ಯವಾಗಿ ಬಳಕೆಯಾಗುವ ವಾಟ್ಸಪ್ ಅಪ್ಲಿಕೇಶನ್ ನಲ್ಲಿ ಇರುವ ವೈಶಿಷ್ಟ ಫೀಚರ್ ಕುರಿತು ಇಂದು ನಿಮಗೆ ತಿಳಿಸಿಕೊಡುತ್ತೇವೆ. ಸ್ನೇಹಿತರೇ ಸಾಮಾನ್ಯವಾಗಿ ನೀವು ಕೆಲವರ ಜೊತೆ ವೈಯಕ್ತಿಕ ಸಂದೇಶಗಳನ್ನು ಹಂಚಿಕೊಂಡಾಗ ಆ ಸಂದೇಶಗಳನ್ನು ಇತರರು ನೋಡದಂತೆ ಕಾಪಾಡಿಕೊಳ್ಳುವುದು ಹಲವಾರು ಸಂದರ್ಭದಲ್ಲಿ ಅಗತ್ಯವಾಗಿರುತ್ತದೆ. ಹಾಗೆಂದು ಆ ಮೆಸೇಜ್ ಗಳನ್ನು ಡಿಲೀಟ್ ಮಾಡಲು ಕೂಡ ನಿಮಗೆ ಸಾಧ್ಯವಿರುವುದಿಲ್ಲ, ಬಹಳ ಮುಖ್ಯದ ಅಥವಾ ಪ್ರೀತಿಪಾತ್ರರೊಂದಿಗೆ ಮಾತನಾಡಿದ್ದ ಸಂದೇಶಗಳನ್ನು ಡಿಲೀಟ್ ಮಾಡಿದಯೇ ನೀವು ಇತರರಿಗೆ ಕಾಣಿಸಬಾರದು ಹಾಗೂ ನಿಮಗೆ ಬೇಕು ಎಂದಾಗ ಮತ್ತೊಮ್ಮೆ ನೋಡಲು ಅವಕಾಶ ಇರಬೇಕು ಎನ್ನುವಂತಹ ಸನ್ನಿವೇಶ ಸಾಮಾನ್ಯವಾಗಿ ಬಹುತೇಕರಿಗೆ ಸೃಷ್ಟಿಯಾಗಿರುತ್ತದೆ.

ಅದೇ ಕಾರಣಕ್ಕಾಗಿ ವಾಟ್ಸಪ್ ನಲ್ಲಿ ಒಂದು ವಿಶಿಷ್ಟ ಫೀಚರ್ ಇದೆ. ಅದುವೇ ಆರ್ಕೈವ್ ಎಂಬ ಆಯ್ಕೆ. ಹೌದು ಸ್ನೇಹಿತರೇ ಈ ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಕೆಲವೊಂದು ರಹಸ್ಯ ಸಂದೇಶಗಳನ್ನು ಇತರರಿಂದ ಮರೆಮಾಚಬಹುದು ಹಾಗೂ ನಿಮಗೆ ಅಗತ್ಯವಿದೆ ಎನಿಸಿದಾಗ ವಾಪಸ್ಸು ಕಾಣಿಸುವಂತೆ ಕೂಡ ಮಾಡಬಹುದಾಗಿದೆ. ಇದನ್ನು ಹೇಗೆ ಮಾಡುವುದು ಎಂದರೇ ಒಂದು ವೇಳೆ ನೀವು ಆಂಡ್ರಾಯ್ಡ್ ಮೊಬೈಲ್ ಅನ್ನು ಬಳಸುತ್ತಿದ್ದರೇ ಮೊದಲು ನೀವು ವಾಟ್ಸಪ್ ಗೆ ಹೋಗಿ. ನೀವು ಮರೆಮಾಚಲು ಬಯಸುವ ಚಾಟ್ ನ ಮೇಲೆ ಲಾಂಗ್ ಪ್ರೆಸ್ ಮಾಡಿರಿ. ಕೆಲವು ಸೆಕೆಂಡುಗಳ ಬಳಿಕ ನಿಮ್ಮ ವಾಟ್ಸಪ್ ಅಪ್ಲಿಕೇಶನ್ ನ ಮೇಲ್ಭಾಗದಲ್ಲಿ ನಿಮಗೆ ಆರ್ಕೈವ್ ಎಂಬ ಆಯ್ಕೆ ಕಾಣಿಸುತ್ತದೆ. (ಇದು ಒಂದೊಂದು ಆವೃತ್ತಿ ಯಲ್ಲಿ ಒಂದೊಂದು ರೀತಿ ಕಾಣುತ್ತದೆ) ಸಾಮಾನ್ಯವಾಗಿ ಆರ್ಕೈವ್ ಅಥವಾ ಕೆಳಗೆ ಮುಖಮಾಡಿರುವ ಬಾಣದ ಗುರುತು ಇರುವ ಒಂದು ಐಕಾನ್ ಕಾಣಿಸುತ್ತದೆ.

ಈ ಬಾಣದ ಗುರುತು ಅಥವಾ ಆರ್ಕೈವ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೇ ನೀವು ಅವರೊಂದಿಗೆ ಮಾಡಿರುವ ಸಂದೇಶಗಳು ಸಾಮಾನ್ಯವಾಗಿ ವಾಟ್ಸಪ್ ಓಪನ್ ಮಾಡಿದರೇ ಕಾಣಿಸುವುದಿಲ್ಲ. ಒಂದು ವೇಳೆ ನೀವು ಮತ್ತೆ ಸಂದೇಶಗಳನ್ನು ನೋಡಬೇಕು ಎನಿಸಿದರೇ ನೀವು ನಿಮ್ಮ ಎಲ್ಲಾ ಸಂದೇಶಗಳನ್ನು ದಾಟಿ ಕೆಳಗಡೆ ಹೋದರೆ ಅಲ್ಲಿ ಆರ್ಕೈವ್ಡ್ (Archived) ಎಂಬ ಆಯ್ಕೆ ಇರುತ್ತದೆ ಅದನ್ನು ಕ್ಲಿಕ್ ಮಾಡಿದರೇ ನಿಮಗೆ ನೀವು ಮರೆಮಾಚಿರುವ ಎಲ್ಲಾ ಸಂದೇಶಗಳು ಕಾಣಿಸುತ್ತವೆ. ಒಂದು ವೇಳೆ ಇವನ್ನು ಮತ್ತೆ ನೀವು ಸಾಮಾನ್ಯ ರೀತಿಗೆ ತರಬೇಕು ಎನಿಸಿದರೇ, ಮತ್ತೊಮ್ಮೆ ಲಾಂಗ್ ಪ್ರೆಸ್ ಮಾಡಿ ಅನ್ ಆರ್ಕೈವ್(ಉಂ Archive) ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೇ ಮೊದಲಿನಂತೆ ನಿಮ್ಮ ಸಂದೇಶಗಳು ಮೇಲ್ಭಾಗಕ್ಕೆ ಬರಲಿವೆ.