ಬಿಗ್ ನ್ಯೂಸ್: ನ’ಡುಗುತ್ತಿದೆ ಬಾಲಿವುಡ್ ! ಒಂದಾದ ಸುಶಾಂತ್, ಪ್ರಭಾಸ್, ಕಂಗನಾ ಫ್ಯಾನ್ಸ್ ! ನಡೆಯುತ್ತಿರುವುದಾದರೂ ಏನು ಗೊತ್ತಾ?

ಬಿಗ್ ನ್ಯೂಸ್: ನ’ಡುಗುತ್ತಿದೆ ಬಾಲಿವುಡ್ ! ಒಂದಾದ ಸುಶಾಂತ್, ಪ್ರಭಾಸ್, ಕಂಗನಾ ಫ್ಯಾನ್ಸ್ ! ನಡೆಯುತ್ತಿರುವುದಾದರೂ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳನ್ನು ನಡೆಸುವ ಮೂಲಕ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಅದರಲ್ಲಿಯೂ ಸುಶಾಂತ್ ಸಿಂಗ್ ಅಭಿಮಾನಿಗಳು, ಕಂಗನಾ ರಾವತ್ ಅಭಿಮಾನಿಗಳು ಹಾಗೂ ದೇಶದ ಪ-ರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ನೆಟ್ಟಿಗರು ಈಗಾಗಲೇ ಹಲವಾರು ಅಭಿಯಾನಗಳ ಮೂಲಕ ಗೆಲುವು ಕಂಡಿದ್ದಾರೆ. ಚೀನಾ ದೇಶಕ್ಕೆ ಬುದ್ಧಿ ಕಲಿಸಲು ನಡೆಸಿದ ಅಭಿಯಾನಗಳು ದೊಡ್ಡ ದೊಡ್ಡ ಕಂಪನಿಗಳ ಕದತಟ್ಟಿ, ಜಾಹೀರಾತು ಹಿಂಪಡೆದುಕೊಳ್ಳುವಂತೆ ಮಾಡುವುದು, ತಮ್ಮ ಹೊಸ ಫೋನುಗಳ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕುವಂತೆ ಮಾಡುವುದು ಸೇರಿದಂತೆ ಇನ್ನೂ ಹಲವಾರು ರೀತಿಯಲ್ಲಿ ಜಯಗಳಿಸಿದ್ದಾರೆ. ಇನ್ನು ಇವರ ಜೊತೆ ಸುಶಾಂತ್ ಸಿಂಗ್ ಅಭಿಮಾನಿಗಳು ಸೇರಿಕೊಂಡು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಅಭಿಯಾನಗಳನ್ನು ನಡೆಸುವ ಮೂಲಕ ಈಗಾಗಲೇ ಬಾಲಿವುಡ್ ಚಿತ್ರರಂಗವನ್ನು ಶೇಕ್ ಮಾಡಿದ್ದಾರೆ.

ಸ್ವಜನಪಕ್ಷಪಾತ ಎಂಬ ಕೂಗು ಕೇಳಿ ಬಂದ ಮೇಲೆ ಬಾಲಿವುಡ್ ಖ್ಯಾತ ನಿರ್ದೇಶಕ ಮಹೇಶ್ ಭಟ್ ಹಾಗೂ ಹಿರಿಯ ನಟ ಸಂಜಯ್ ದತ್ ರವರು ಸೇರಿದಂತೆ ಆಲಿಯಾ ಭಟ್, ಪೂಜಾ ಭಟ್ ರವರು ಒಂದಾಗಿದ್ದ ಸಡಕ್ 2 ಚಿತ್ರದ ಕಥೆ ಇವರೆಲ್ಲರೂ ಸೇರಿ ನಡೆಸಿದ ಅಭಿಯಾನದಿಂದ ಏನಾಯಿತು ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ. ವಿಶ್ವದಲ್ಲಿಯೇ ಅತಿ ಕಡಿಮೆ ರೇಟಿಂಗ್ ಪಡೆದುಕೊಂಡ ಚಿತ್ರ ಎಂಬ ಹೆಸರು ಪಡೆದುಕೊಂಡಿದೆ. ಮಹೇಶ್ ಭಟ್ ರವರು ಎರಡು ದಶಕಗಳ ನಂತರ ನಿರ್ದೇಶನಕ್ಕೆ ಮರಳಿದ್ದರೂ ಕೂಡ ಯಾವುದೇ ಲಾಭವಾಗಿರಲಿಲ್ಲ. ಇನ್ನು ಈ ಅಭಿಯಾನಗಳಲ್ಲಿ ಕರಣ್ ಜೋಹರ್ ಅವರ ಹೆಸರು ಕೇಳಿ ಬಂದ ಕಾರಣ ಕಾಫಿ ವಿಥ್ ಕರಣ್ ಶೋ ಇನ್ನು ಮುಂದೆ ನಡೆಸುವುದಿಲ್ಲ ಎಂದು ಚಾನಲ್ ಘೋಷಣೆ ಮಾಡಿದೆ. ಅಷ್ಟೇ ಯಾಕೆ ಇದೀಗ ಸಲ್ಮಾನ್ ಖಾನ್ ರವರು ನಡೆಸುವ ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ನಿಲ್ಲಿಸಲು ಕೂಡ ನಿಧಾನವಾಗಿ ಅಭಿಯಾನಗಳು ಆರಂಭವಾಗುತ್ತಿವೆ. ಇದಕ್ಕೆಲ್ಲ ಕಾರಣ ಸುಶಾಂತ್ ಸಿಂಗ್ ಅಭಿಮಾನಿಗಳ ಜೊತೆ ನೆಟ್ಟಿಗರು ಭಾರಿ ಸಂಖ್ಯೆಯಲ್ಲಿ ಕೈಜೋಡಿಸಿದ್ದು ಎಂದರೇ ತಪ್ಪಾಗಲಾರದು. ಒಟ್ಟಿನಲ್ಲಿ ಈ ಎಲ್ಲಾ ಅಭಿಯಾನ ಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಅಭಿಯಾನಗಳು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತವೆ ಎಂದು ಎಲ್ಲರಿಗೂ ಅರ್ಥವಾಗಿದೆ.

ಹೀಗಿರುವಾಗ ಇಷ್ಟೆಲ್ಲ ಜನರ ಅಭಿಯಾನಗಳ ಜೊತೆ ಬಾಹುಬಲಿ ಚಿತ್ರದ ಮೂಲಕ ಇಡೀ ದೇಶದ ಎಲ್ಲೆಡೆ ಸದ್ದು ಮಾಡಿರುವ ಪ್ರಭಾಸ್ ರವರ ಅಭಿಮಾನಿಗಳು ಸೇರಿಕೊಂಡರೆ ಏನಾಗಬಹುದು ಎಂಬ ಊಹೆ ನಿಮಗೆ ಬಿಟ್ಟದ್ದು. ಹೌದು, ಇದೀಗ ಕಂಗನಾ, ಸುಶಾಂತ್, ಪ್ರಭಾಸ್ ಫ್ಯಾನ್ಸ್ ಹಾಗೂ ನೆಟ್ಟಿಗರು ಒಂದಾಗಿದ್ದಾರೆ. ಇದೀಗ ಬಂದಿರುವ ಲೇಟೆಸ್ಟ್ ಮಾಹಿತಿಯ ಪ್ರಕಾರ ಪ್ರಭಾಸ್ ಅಭಿಮಾನಿಗಳು, ಸುಶಾಂತ್ ಸಿಂಗ್, ಕಂಗನಾ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಒಂದಾಗಿ ಹೊಸದೊಂದು ಅಭಿಯಾನ ಆರಂಭಿಸಿದ್ದಾರೆ. ಆದರೆ ಇವರೆಲ್ಲರೂ ನಡೆಸುತ್ತಿರುವ ಅಭಿಯಾನ ಬೇರೆ ಚಿತ್ರದ ಕುರಿತು ಅಲ್ಲಾ, ಬದಲಾಗಿ ಘೋಷಣೆಯಾದ ತಕ್ಷಣವೇ ಇಡೀ ದೇಶದಲ್ಲಿ ಸದ್ದು ಮಾಡಿದ್ದ ಆದಿ ಪುರುಷ್ ಚಿತ್ರ ತಂಡಕ್ಕೆ ಖಡಕ್ ಸಂದೇಶ ರವಾನೆ ಮಾಡಲು.

ಹೌದು ಸ್ನೇಹಿತರೆ, ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರಭಾಸ್ ಅವರು ಆದಿಪುರುಷ್ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ ಎಂದ ತಕ್ಷಣ ಇಡೀ ದೇಶದಲ್ಲಿ ಬಾಹುಬಲಿ ಚಿತ್ರಕ್ಕಿಂತ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡು ಸಿನಿಮಾ ನೋಡುವುದಾಗಿ ಅಭಿಮಾನಿಗಳು ಟ್ರೆಂಡಿಂಗ್ ಸೃಷ್ಟಿಸಿದ್ದರು. ಈ ಕ್ಷಣಕ್ಕಾಗಿ ನಾವು ಕಾದು ಕುಳಿತಿದ್ದೇವೆ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಆದರೆ ಇಡೀ ದೇಶದ ಎಲ್ಲೆಡೆ ಸ್ವಜನಪಕ್ಷಪಾತ ಎಂಬ ಕೂಗು ಸದ್ದು ಮಾಡುತ್ತಿರುವಾಗ ಸ್ವಜನ ಪಕ್ಷಪಾತದ ವಿಚಾರಗಳಲ್ಲಿ ಕರೀನಾ ಕಪೂರ್ ಹಾಗೂ ಸೈಫ್ ಅಲಿಖಾನ್ ರವರ ಹೆಸರು ಮೊದಲಿನಿಂದಲೂ ಕೇಳಿ ಬರುತ್ತಿತ್ತು. ಇಷ್ಟೆಲ್ಲ ಅಭಿಯಾನಗಳು ನಡೆಯುತ್ತಿದ್ದರೂ ಕೂಡ ಆದಿಪುರುಷ್ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಸೈಫ್ ಅಲಿಖಾನ್ ಅವರನ್ನು ಆಯ್ಕೆ ಮಾಡಿರುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು.

ಈ ನಿರ್ಧಾರ ಘೋಷಣೆ ಮಾಡಿದ್ದ ಕ್ಷಣದಿಂದಲೂ ಕೊಂಚ ಕೊಂಚ ಆರಂಭವಾಗಿದ್ದ ಅಭಿಯಾನಗಳು ಇದೀಗ ಬಾರಿ ಸಂಖ್ಯೆಯಲ್ಲಿ ಆರಂಭವಾಗಿವೆ. ಪ್ರಭಾಸ್ ಹಾಗೂ ಸುಶಾಂತ್ ಆರಂಭಿಸಿದ ಅಭಿಯಾನಕ್ಕೆ ಇದೀಗ ಕಂಗನಾ ರಾವತ್ ಫ್ಯಾನ್ಸ್ ಕೂಡ ಕೈ ಜೋಡಿಸಿದ್ದು, ನೆಟ್ಟಿಗರು ಕೂಡ ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಈ ಕೂಡಲೇ ಸೈಫ್ ಅಲಿ ಖಾನ್ ರವರನ್ನು ಚಿತ್ರದಿಂದ ಕೈ ಬಿಡಬೇಕು ಇಲ್ಲವಾದರೆ ನಾವು ಪ್ರಭಾಸ್ ಅಭಿಮಾನಿಗಳೇ ಆಗಿರಬಹುದು ಆದರೆ ನಮಗೆ ಸ್ವಜನಪಕ್ಷಪಾತ ಎಲ್ಲಿರುತ್ತದೆಯೋ ಆ ಚಿತ್ರವನ್ನು ನೋಡುವುದಿಲ್ಲ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಒಂದು ವೇಳೆ ಚಿತ್ರ ತಂಡ ತನ್ನ ನಿರ್ಧಾರ ಬದಲಿಸದೇ ಇದ್ದಲ್ಲಿ, ಮುಂದೇನಾಗುತ್ತದೆ ಎಂಬುದು ನಿಮಗೆ ಹೇಳುವ ಅವಶ್ಯಕತೆ ಇಲ್ಲ. ಒಮ್ಮೆ ಸಡಕ್ 2 ಚಿತ್ರದ ಪರಿಸ್ಥಿತಿ ನೋಡಿ ಎಂದಿದ್ದಾರೆ. ಈ ಎಲ್ಲಾ ಅಭಿಯಾನಗಳನ್ನು ಕಂಡು ಈಗಾಗಲೇ ಬಾಲಿವುಡ್ ನಲ್ಲಿ ಬಾರಿ ಚರ್ಚೆ ಆರಂಭವಾಗಿದೆ ಒಂದು ವೇಳೆ ಈ ರೀತಿಯ ಅಭಿಯಾನಗಳು ಹೆಚ್ಚಾಗಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಕಂಡರೇ ಮುಂದೇನು ಎಂಬ ಆಲೋಚನೆಯಲ್ಲಿ ಬಾಲಿವುಡ್ ಚಿತ್ರ ರಂಗ ನಿರತವಾಗಿದೆ.