ಭಾರತ ಪಬ್ಜಿ ಬ್ಯಾನ್ ಮಾಡಿದ ಬೆನ್ನಲ್ಲೇ ಭಾರತೀಯ ಗೇಮಿಂಗ್ ಇಂಡಸ್ಟ್ರಿಯಲ್ಲಿ ಮಹತ್ವದ ಹೆಜ್ಜೆಯಿಟ್ಟ ಅಕ್ಷಯ್ ಕುಮಾರ್ !

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಆತ್ಮ ನಿರ್ಭರ್ ಎಂಬ ಮಹತ್ವಾಕಾಂಕ್ಷೆಯೊಂದಿಗೆ ಹಾಗೂ ಚೀನಾ ದೇಶ ಗಡಿಯಲ್ಲಿ ಖ್ಯಾತೆ ತೆಗೆಯುತ್ತಿರುವ ಸಂದರ್ಭದಲ್ಲಿ ಚೀನಾ ದೇಶಕ್ಕೆ ಬುದ್ಧಿ ಕಲಿಸಲು ಭಾರತ ದೇಶ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಭಾರತದ ಈ ನಿರ್ಧಾರಗಳು ಚೀನಾ ದೇಶಕ್ಕೆ ಲಕ್ಷಾಂತರ ಕೋಟಿ ನಷ್ಟವನ್ನು ಉಂಟು ಮಾಡಿವೆ. ಅಷ್ಟೇ ಅಲ್ಲದೇ, ಕೇವಲ ನೆನ್ನೆಯಷ್ಟೇ ನೂರಾರು ಕೋಟಿ ನಷ್ಟ ವಾಗುವಂತಹ ಮತ್ತೊಂದು ನಿರ್ಧಾರವನ್ನು ಘೋಷಣೆ ಮಾಡಿ, ಪಬ್ ಜಿ ಗೇಮ್ ಸೇರಿದಂತೆ ಇನ್ನಿತರ 117 ಮೊಬೈಲ್ ಅಪ್ಲಿಕೇಶನ್ಗಳನ್ನು ಭಾರತದಿಂದ ತೆಗೆದು ಹಾಕುವುದಾಗಿ ಘೋಷಣೆ ಮಾಡಿ ಆದೇಶ ಹೊರಡಿಸಿತ್ತು.

ಭಾರತ ಯಾವ ಕಾರಣಕ್ಕೆ ಈ ರೀತಿಯ ಹೆಜ್ಜೆಗಳನ್ನು ಇಡುತ್ತಿದೆ ಎಂದರೆ, ಗಡಿಯಲ್ಲಿ ಚೀನಾ ದೇಶ ನಡೆದುಕೊಳ್ಳುತ್ತಿರುವ ರೀತಿ ಒಂದೆಡೆಯಾದರೆ ಮತ್ತೊಂದೆಡೆ ಭಾರತದಲ್ಲಿ ಆತ್ಮ ನಿರ್ಧಾರ ಎಂಬ ಘೋಷಣೆಯೊಂದಿಗೆ ಸ್ವದೇಶೀ ಭಾರತವನ್ನು ಕಟ್ಟೋಣ ಎಂಬ ಮಹತ್ವಾಕಾಂಕ್ಷೆಯೊಂದಿಗೆ ಭಾರತ ಈ ರೀತಿಯ ಹೆಜ್ಜೆಗಳನ್ನಿಡುತ್ತಿದೆ. ಹೌದು ಸ್ನೇಹಿತರೇ, ಭಾರತ ದೇಶವು ಎಲ್ಲಾ ವಿಭಾಗಗಳಲ್ಲೂ ಛಾಪು ಮೂಡಿಸಿ ಪಾರು’ಪತ್ಯ ಸ್ಥಾಪಿಸಬಲ್ಲ ಪ್ರತಿಭೆಯನ್ನು ಹೊಂದಿದ್ದರೂ ಕೂಡ ಬಹುತೇಕ ವಿಭಾಗಗಳಲ್ಲಿ ಭಾರತ ಇನ್ನೂ ಇತರ ದೇಶಗಳ ಮೇಲೆ ಅವಲಂಬಿತವಾಗಿದೆ. ಭಾರತದಲ್ಲಿ ಪ್ರತಿಭೆಗೆ ಯಾವುದೇ ಕೊರತೆಯಿಲ್ಲ. ಆದರೆ ಸರಿಯಾದ ಅವಕಾಶಗಳು, ಬಂಡವಾಳಗಳು ಸಿಗದೇ ಅದೆಷ್ಟೋ ಜನ ತಮ್ಮ ಪ್ರತಿಭೆಯನ್ನು ತಿಂಗಳಿನ ಸಂಬಳಕ್ಕೆ ಮುಡಿಪಾಗಿಟ್ಟು ಕೆಲಸ ನಿರ್ವಹಿಸುತ್ತಿದ್ದಾರೆ. ಅದೇ ಕಾರಣಕ್ಕೆ ಭಾರತದಲ್ಲಿರುವ ಪ್ರತಿಭೆಗಳನ್ನು ಬಳಸಿಕೊಂಡು ಪ್ರತಿಯೊಂದು ವಿಭಾಗಗಳಲ್ಲಿಯೂ ಬಲಿಷ್ಠವಾಗಲು ಇದು ಸರಿಯಾದ ಸಮಯವಾಗಿದೆ ಎಂಬುದನ್ನು ಎಲ್ಲರೂ ಅರಿತಿದ್ದರೆ.

ಇನ್ನು ಇದೇ ನಿಟ್ಟಿನಲ್ಲಿ ಸದಾ ದೇಶದ ಪರ ನಿಂತು ಹಲವಾರು ಬಾರಿ ದೇಶದ ಜನರಿಗೆ ಸಹಾಯ ಹಸ್ತ ಚಾಚಿ, ಅದರಲ್ಲಿಯೂ ಭಾರತೀಯ ಸೇನೆಯ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ ಅಕ್ಷಯ್ ಕುಮಾರ್ ಅವರು ಇದೀಗ ಪಬ್ ಜಿ ಗೇಮ್ ಭಾರತದಿಂದ ಹೊರ ಹೋದ ಮರುದಿನವೇ ಹೊಸದೊಂದು ಆದೇಶ ಹೊರಡಿಸಿದ್ದು, FAU G ಎಂಬ ಗೇಮ್ ಅನ್ನು ತಯಾರಿ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ವಿಶೇಷವೆಂದರೆ ಈ ಗೇಮ್ ನಲ್ಲಿ ಬರುವ ಶೇಕಡ 20 ರಷ್ಟು ಲಾಭವನ್ನು ಸೈನಿಕರ ಟ್ರಸ್ಟ್ ನೀಡಲಾಗುವುದು ಎಂದು ಕೂಡ ಘೋಷಣೆ ಮಾಡಿದ್ದಾರೆ. ಪಬ್ಜಿ ಗೇಮ್ ಗಿಂತ ಅತ್ಯುತ್ತಮವಾದ ಗ್ರಾಫಿಕ್ಸ್ ಬಳಸಿಕೊಂಡು ಹೊಸ ಮಲ್ಟಿಪ್ಲೇಯರ್ ಗೇಮ್ ತಯಾರು ಮಾಡುತ್ತಿರುವುದಾಗಿ ಹೇಳಿರುವ ಅಕ್ಷಯ್ ಕುಮಾರ್ ರವರು ಭಾರತದ ಗೇಮಿಂಗ್ ಇಂಡಸ್ಟ್ರಿಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ ಎಂದರೆ ತಪ್ಪಾಗಲಾರದು. ಒಟ್ಟಿನಲ್ಲಿ ಅದೇನೇ ಆಗಲಿ ಭಾರತದಲ್ಲಿಯೇ ತಯಾರಾಗಿ, ಬರುವ ಲಾಭದಲ್ಲಿ ಶೇಕಡ ೨೦ ರಷ್ಟು ಹಣವನ್ನು ಸೈನಿಕರಿಗೆ ನೀಡುತ್ತಾರೇ ಎಂದರೇ ಯಾರೇ ಆದರೂ ಅವರಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಹಾಗೂ ನಿಮ್ಮ ಬೆಂಬಲ ಕೂಡ ನೀಡುತ್ತೀರಾ ಎಂದು ಭಾವಿಸುತ್ತೇವೆ.

Post Author: Ravi Yadav