ಐಪಿಎಲ್ ನಲ್ಲಿ ಪರ್ಪಲ್ ಕ್ಯಾಪ್ ಗೆಲ್ಲಬಹುದಾದ ಟಾಪ್ 5 ಆಟಗಾರರು ಯಾರ್ಯಾರು ಗೊತ್ತಾ??

ಐಪಿಎಲ್ ನಲ್ಲಿ ಪರ್ಪಲ್ ಕ್ಯಾಪ್ ಗೆಲ್ಲಬಹುದಾದ ಟಾಪ್ 5 ಆಟಗಾರರು ಯಾರ್ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇನ್ನೇನು ಕೆಲವೇ ಕೆಲವು ದಿನಗಳಲ್ಲಿ 13 ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಆರಂಭವಾಗಲಿದೆ. ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಟೂರ್ನಿ ಗಾಗಿ ಕಾದು ಕುಳಿತಿದ್ದಾರೆ. ಪ್ರತಿಯೊಂದು ತಂಡಗಳು ಕೂಡ ಈಗಾಗಲೇ UAE ದೇಶವನ್ನು ತಲುಪಿದ್ದು ಅಭ್ಯಾಸದಲ್ಲಿ ನಿರತವಾಗಿವೆ. ಇನ್ನು ಐಪಿಎಲ್ ಟೂರ್ನಿಯ ಆರಂಭವಾಗುವ ದಿನಾಂಕ ಪ್ರಕಟಣೆಯಾದ ಕ್ಷಣದಿಂದಲೂ ಕ್ರಿಕೆಟ್ ವಿಶ್ಲೇಷಕರ ಲೆಕ್ಕಾಚಾರಗಳು ಗರಿಗೆದರಿವೆ. ಪ್ರತಿಯೊಂದು ಸಂಸ್ಥೆಯ ಕ್ರಿಕೆಟ್ ವಿಶ್ಲೇಷಕರು ಕೂಡ ತಮ್ಮದೇ ಆದ ಲೆಕ್ಕಾಚಾರಗಳೊಂದಿಗೆ ಯಾವ್ಯಾವ ರೀತಿಯ ಆಟಗಾರರು ಯಾವ ರೀತಿ ಪ್ರದರ್ಶನವನ್ನು ನೀಡುತ್ತಾರೆ ಎಂಬುದರ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಯಾವ ಬೌಲರ್ಗಳು ಪರ್ಪಲ್ ಕ್ಯಾಪ್ ಅಂದರೇ ಅತಿ ಹೆಚ್ಚು ವಿಕೆಟ್ ಗಳನ್ನು ಪಡೆಯಬಹುದು ಎಂಬುದರ ಕುರಿತು ಕೂಡ ಲೆಕ್ಕಾಚಾರಗಳು ಆರಂಭವಾಗಿದ್ದು, ಇದೀಗ ಕ್ರಿಕೆಟ್ ವಿಶ್ಲೇಷಕರು ತಮ್ಮದೇ ಆದ ಅಭಿಪ್ರಾಯಗಳ ಮೂಲಕ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಟಾಪ್ 5 ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಪಟ್ಟಿ ಈ ಕೆಳಗಿನಂತಿದ್ದು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

5. ಪ್ಯಾಟ್ ಕಮ್ಮಿನ್ಸ್: ವಿಶ್ವ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಮೊದಲನೇ ಸ್ಥಾನ ಪಡೆದುಕೊಂಡು ಇತ್ತೀಚಿನ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಐಪಿಎಲ್ ನಲ್ಲಿ ಬರೋಬ್ಬರಿ 15.5 ಕೋಟಿಗೆ ಕೆಕೆಆರ್ ತಂಡದ ಪಾಲಾಗಿರುವ ಪ್ಯಾಟ್ ಕಮ್ಮಿನ್ಸ್ ರವರು ಈ ಬಾರಿಯ ಐಪಿಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆಯುವ ಐದನೇ ಆಟಗಾರನಾಗಿ ಕ್ರಿಕೆಟ್ ವಿಶ್ಲೇಷಕರ ಪಟ್ಟಿಯಲ್ಲಿ ಸ್ಥಾನ ಪಡೆದು ಕೊಂಡಿದ್ದಾರೆ. ಇವರು ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರಬಹುದು, ಆದರೆ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಚಾಕಚಕ್ಯತೆ ಅಗತ್ಯವಿದೆ, ಅದೇ ಕಾರಣಕ್ಕೆ ಐಸಿಸಿ ವಿಶ್ವ ರ್ಯಾಂಕಿಂಗ್ನಲ್ಲಿ ಮೊದಲನೇ ಸ್ಥಾನದಲ್ಲಿ ಇದ್ದರೂ ಕೂಡ ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಇಂದು ಕ್ರಿಕೆಟ್ ವಿಶ್ಲೇಷಕರು ವಿವರಣೆ ನೀಡಿದ್ದಾರೆ.

4. ಭುವನೇಶ್ವರ್ ಕುಮಾರ್: ಭಾರತ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ರವರು ಪ್ರತಿ ಬಾರಿಯ ಐಪಿಎಲ್ ನಲ್ಲಿ ಯು ಉತ್ತಮ ಪ್ರದರ್ಶನ ನೀಡುತ್ತಾ ಹಲವಾರು ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆಲ್ಲಿಸಿ ಕೊಟ್ಟಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ವೇಗದ ಬೌಲರ್ ಗಳಲ್ಲಿ ಒಬ್ಬರಾಗಿರುವ ಭುವನೇಶ್ವರ್ ಕುಮಾರ್ ರವರು ಈ ಬಾರಿಯೂ ಕೂಡ ಐಪಿಎಲ್ ನಲ್ಲಿ ಕಳೆದ ವೃತ್ತಿಗಳಂತೆ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಪ್ರಮುಖವಾಗಿ ಭುವನೇಶ್ವರ್ ಕುಮಾರ್ ರವರು ಕೊನೆಯ ಓವರ್ ಗಳಲ್ಲಿ ಬೌಲಿಂಗ್ ಮಾಡಲು ಹೆಚ್ಚು ಅವಕಾಶ ಪಡೆಯುವ ಕಾರಣ ವಿವಿಧ ಶೈಲಿಯಲ್ಲಿ ಬಾಲ್ ಗಳನ್ನು ಮಾಡಿ ವಿಕೆಟ್ ಪಡೆಯಲಿದ್ದಾರೆ ಎಂದು ಕ್ರಿಕೆಟ್ ವಿಶ್ಲೇಷಕರು ಅಂದಾಜಿಸಿದ್ದಾರೆ.

3. ಇಮ್ರಾನ್ ತಾಹೀರ್: UAE ದೇಶದಲ್ಲಿ ಸ್ಪಿನ್ನರ್ ಗಳು ಅತಿ ಹೆಚ್ಚು ವಿಕೆಟ್ ಗಳನ್ನು ಪಡೆಯಲಿದ್ದಾರೆ ಎಂದು ಹಲವಾರು ಕ್ರಿಕೆಟ್ ದಿಗ್ಗಜರು ಹಾಗೂ ವಿಶ್ಲೇಷಕರು ಅಭಿಪ್ರಾಯವನ್ನು ಮಂಡಿಸಿರುವುದು ಬಹುಶಃ ನಿಮಗೆಲ್ಲರಿಗೂ ತಿಳಿದಿರಬಹುದು. ಹೀಗಿರುವಾಗ ಸೌತ್ ಆಫ್ರಿಕಾ ತಂಡದ ಲೆಗ್ ಸ್ಪಿನ್ನರ್ ಹಾಗೂ ಕಳೆದ ಐಪಿಎಲ್ ಆವೃತ್ತಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಾವೊಬ್ಬ ಉತ್ತಮ ಬೌಲರ್ ಎಂದು ಸಾಬೀತು ಪಡಿಸಿರುವ ಇಮ್ರಾನ್ ತಾಹೀರ್ ಈ ಬಾರಿಯ ಐಪಿಎಲ್ ನಲ್ಲಿಯು ಕೂಡ ವಿಕೆಟ್ಗಳನ್ನು ಪಡೆಯುವುದರಲ್ಲಿ ಯಶಸ್ವಿಯಾಗುತ್ತಾರೆ ಎಂದು ಕ್ರಿಕೆಟ್ ವಿಶ್ಲೇಷಕರು ಅಂದಾಜಿಸಿದ್ದಾರೆ.

2. ಜಸ್ವಿತ್ ಬುಮ್ರಾ: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಜಸ್ವಿತ್ ಬುಮ್ರಾ ರವರು ಯಾವ ರೀತಿಯಲ್ಲಿ ಪಂದ್ಯಗಳನ್ನು ಗೆಲ್ಲಿಸಿ ಕೊಡಬಹುದು ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಮುಂಬೈ ತಂಡದ ಪರವಾಗಿ ಐಪಿಎಲ್ ನಲ್ಲಿ ಭಾಗವಹಿಸುವ ಜಸ್ವಿತ್ ಬುಮ್ರಾ ರವರು, ಮೊದಲಿನಿಂದಲೂ ತಮ್ಮ ಆಯ್ಕೆಯನ್ನು ಸಮರ್ಥನೆ ಮಾಡಿಕೊಳ್ಳುವಂತಹ ಪ್ರದರ್ಶನ ನೀಡಿ ಹಲವಾರು ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಈ ಬಾರಿ ಲಸಿತ್ ಮಾಲಿಂಗ ರವರು ಐಪಿಎಲ್ ಟೂರ್ನಿಯಿಂದ ಹೊರಗುಳಿದಿರುವ ಕಾರಣ ಖಂಡಿತ ಅವರ ಜವಾಬ್ದಾರಿಯನ್ನು ಜಸ್ವಿತ್ ಬುಮ್ರಾ ರವರು ಹೆಗಲಿಗೆ ಹೇರಿಸಿಕೊಂಡು ಉತ್ತಮ ಪ್ರದರ್ಶನ ನೀಡಿ ಪರ್ಪಲ್ ಕ್ಯಾಪ್ ಗೆಲ್ಲಬಹುದು ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

1. ಯುಜೇಂದ್ರ ಚಹಲ್: ಇತ್ತೀಚೆಗೆ ಟಿ-20 ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಯುಜೇಂದ್ರ ಚಹಲ್ ರವರು, UAE ದೇಶದಲ್ಲಿ ತಮ್ಮ ಬೌಲಿಂಗ್ ಮೂಲಕ ಕಮಾಲ್ ಮಾಡಲಿದ್ದಾರೆ ಎಂಬುದು ಕ್ರಿಕೆಟ್ ವಿಶ್ಲೇಷಕರ ಲೆಕ್ಕಾಚಾರವಾಗಿದೆ. ಟಿ-ಟ್ವೆಂಟಿ ಪಂದ್ಯಗಳಲ್ಲಿ ಸದಾ ಉತ್ತಮ ಪ್ರದರ್ಶನ ನೀಡುತ್ತಿರುವ ಚಹಲ್ ರವರು ಯುಎಇ ದೇಶದಲ್ಲಿ ಬಾಲ್ ಗಳನ್ನು ಸುಲಭವಾಗಿ ಟರ್ನ್ ಮಾಡಬಹುದಾಗಿದೆ, ಬಾಲ್ ಗಳು ಟರ್ನ್ ಪಡೆದುಕೊಳ್ಳುವ ಕ್ರೀಡಾಂಗಣದಲ್ಲಿ ಚಾಹಲ್ ರವರು ಅತ್ಯುತ್ತಮ್ಮ ಪ್ರದರ್ಶನ ನೀಡಲಿದ್ದಾರೆ. ಆದಕಾರಣ ಈ ಟಾಪ್ 5 ಆಟಗಾರರ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದುಕೊಳ್ಳುವ ಅರ್ಹತೆಯನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.