ತೆಲುಗು ಚಿತ್ರರಂಗದಲ್ಲಿಯೂ ಗೆದ್ದು ಆಲಿಯಾಗೆ ಬಿಗ್ ಶಾಕ್ ನೀಡಿದ ಸುಶಾಂತ್ ಫ್ಯಾನ್ಸ್ ! ಹೇಗೆ ಗೊತ್ತಾ?

ತೆಲುಗು ಚಿತ್ರರಂಗದಲ್ಲಿಯೂ ಗೆದ್ದು ಆಲಿಯಾಗೆ ಬಿಗ್ ಶಾಕ್ ನೀಡಿದ ಸುಶಾಂತ್ ಫ್ಯಾನ್ಸ್ ! ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಬಾಲಿವುಡ್ನಲ್ಲಿ ಸ್ವಜನಪಕ್ಷಪಾತ ಎಂಬ ಪದ ಭಾರಿ ಸದ್ದು ಮಾಡುತ್ತಿದೆ. ಹಲವಾರು ವರ್ಷಗಳಿಂದ ಬಾಲಿವುಡ್ನಲ್ಲಿ ಸ್ವಜನಪಕ್ಷಪಾತ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ ಅಷ್ಟಾಗಿ ಅಭಿಮಾನಿಗಳು ಇದರ ಕುರಿತು ಗಮನ ಹರಿಸಿರಲಿಲ್ಲ, ಕೆಲವು ಸಾಮಾಜಿಕ ಜಾಲತಾಣಗಳ ಫೇಸ್ಬುಕ್ ಪೇಜ್ ಗಳು ಮಾತ್ರ ಕೆಲವು ನಟರಿಗೆ ಸೂಕ್ತ ಅವಕಾಶ ಸಿಗುತ್ತಿಲ್ಲ ಎಂದು ಧ್ವನಿ ಎತ್ತುತ್ತಿದ್ದವು, ಯಾವುದೇ ಅಭಿಮಾನಿಗಳು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ಗಣನೀಯ ಪ್ರಮಾಣದಲ್ಲಿ ವ್ಯಕ್ತಪಡಿಸಿರಲಿಲ್ಲ. ಆದರೆ ಸುಶಾಂತ್ ಸಿಂಗ್ ರಜಪೂತ್ ರವರು ಇಹಲೋಕ ತ್ಯಜಿಸಿದ ಬಳಿಕ ಬಾಲಿವುಡ್ ನಲ್ಲಿ ಅಕ್ಷರಸಹ ತಲ್ಲಣ ಆರಂಭವಾಗಿದೆ. ಸುಶಾಂತ್ ಸಿಂಗ್ ಅಭಿಮಾನಿಗಳು ಬಾಲಿವುಡ್ ದಿಗ್ಗಜರ ವಿರುದ್ಧ ಹಾಗೂ ಸ್ವಜನ ಪಕ್ಷಪಾತ ನಡೆಸುತ್ತಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿರುವ ಎಲ್ಲಾ ಸೆಲೆಬ್ರಿಟಿಗಳಿಗೆ ಬುದ್ದಿಕಲಿಸಿ ತೀರುತ್ತೇವೆ ಎಂದು ನಿರ್ಧಾರ ಮಾಡಿದ್ದಾರೆ.

ಈಗಾಗಲೇ ಸುಶಾಂತ್ ಸಿಂಗ್ ಅಭಿಮಾನಿಗಳು ಹಾಗೂ ಇತರ ಹಲವಾರು ನಟ-ನಟಿಯರ ಅಭಿಮಾನಿಗಳು ಬಾಲಿವುಡ್ನಲ್ಲಿ ಸ್ವಜನಪಕ್ಷಪಾತದ ಅಭಿಯಾನಗಳಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದಾರೆ. ಮೊದಲಿಗೆ ಕರಣ್ ಜೋಹರ್ ರವರ ವಿ-ರುದ್ಧ ಅಭಿಯಾನಗಳನ್ನು ಆರಂಭಿಸಿದ ಸುಶಾಂತ ಸಿಂಗ್ ಅಭಿಮಾನಿಗಳು ದೇಶದ ಎಲ್ಲೆಡೆ ಭಾರಿ ಸದ್ದು ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಂತೂ ಎಲ್ಲಿ ನೋಡಿದರೂ ಕರಣ್ ಜೋಹರ್ ಅವರ ವಿ-ರುದ್ಧ ಅಭಿಯಾನಗಳು ಕೇಳಿಬಂದಿದ್ದವು. ಈ ಅಭಿಮಾನಗಳಿಂದ ಕರಣ್ ಜೋಹರ್ ರವರು ಬಾಲಿವುಡ್ ಚಿತ್ರರಂಗದಲ್ಲಿ ನನ್ನ ಪರವಾಗಿ ಯಾರೂ ಧ್ವನಿ ಎತ್ತಿಲ್ಲ, ಬಾಲಿವುಡ್ ಚಿತ್ರರಂಗ ನನ್ನ ಕೈ ಬಿಟ್ಟಿದೆ ಎಂದು ಹೇಳಿ ಮುಂಬೈ ನಗರದ ನಿರ್ದೇಶಕರ ಸಂಘದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಅಷ್ಟೇ ಅಲ್ಲದೆ ಭಾರಿ ಟಿಆರ್ಪಿ ಪಡೆದುಕೊಳ್ಳುತ್ತಿದ್ದ ಕಾಫಿ ವಿತ್ ಕರಣ್ ರಿಯಾಲಿಟಿ ಶೋ ಅನ್ನು ಇನ್ನು ಮುಂದೆ ನಡೆಸದೆ ಇರಲು ನಿರ್ಧಾರ ಮಾಡಿ ಸ್ಟಾರ್ ವರ್ಲ್ಡ್ ಸಂಸ್ಥೆ ಆದೇಶ ಹೊರಡಿಸಿತು, ಇದು ಕರಣ್ ಜೋಹರ್ ಅವರಿಗೆ ನುಂಗಲಾರದ ತುತ್ತಾಗಿತ್ತು.

ಇಷ್ಟೆಲ್ಲಾ ಆದ ಬಳಿಕ ಮಹೇಶ್ ಭಟ್ ರವರು ನಿರ್ದೇಶನ ಮಾಡಿದ್ದ ಸಡಕ್ 2 ಚಿತ್ರದ ಟ್ರೈಲರ್ ಗೆ ಹಾಗೂ ಸಿನಿಮಾಗೆ ಪಾಠ ಕಲಿಸುವ ಸಲುವಾಗಿ ಮೊದಲಿಗೆ ಟ್ರೈಲರ್ ಗೆ ಡಿಸ್ ಲೈಕ್ ಮಾಡಿ, ತದನಂತರ ಸಿನಿಮಾ ಆನ್ಲೈನ್ ನಲ್ಲಿ ರಿಲೀಸ್ ಆದ ಬಳಿಕ ರೇಟಿಂಗ್ ಕಡಿಮೆ ನೀಡಿ ವಿಶ್ವದಲ್ಲಿಯೇ ಅತಿ ಕಡಿಮೆ ರೇಟಿಂಗ್ ಪಡೆದ ಚಿತ್ರ ಎಂಬ ಕು’ಖ್ಯಾತಿ ಪಡೆದುಕೊಳ್ಳುವಂತೆ ಮಾಡಿದ್ದರು. ಈ ಚಿತ್ರದಲ್ಲಿ ಸಂಜಯ್ ದತ್, ಆಲಿಯಾ ಭಟ್ ಇದ್ದರೂ ಹಾಗೂ ಎರಡು ದಶಕಗಳ ನಂತರ ಮಹೇಶ್ ಭಟ್ ಅವರು ನಿರ್ದೇಶಕರಾಗಿ ವಾಪಸಾದರೂ ಕೂಡ ಯಾವುದೇ ಲಾಭವಾಗಿರಲಿಲ್ಲ, ಇಲ್ಲಿಯೂ ಕೂಡ ಸುಶಾಂತ್ ಅಭಿಮಾನಿಗಳು ಮತ್ತೊಮ್ಮೆ ಗೆದ್ದು ಬೀಗಿದ್ದರು. ಇಷ್ಟೆಲ್ಲಾ ಅಭಿಯಾನಗಳ ಮೂಲಕ ಗೆಲುವು ಕಾಣುತ್ತಿರುವ ಸುಶಾಂತ್ ಸಿಂಗ್ ಅಭಿಮಾನಿಗಳು ಇದೀಗ ಯಾವುದೇ ಅಭಿಯಾನ ಇಲ್ಲದೆಯೂ ಕೂಡ ಆಲಿಯಾ ಭಟ್ ರವರಿಗೆ ಶಾಕ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು ಸ್ನೇಹಿತರೇ, ಇಡೀ ದೇಶದ ಮೂಲೆ ಮೂಲೆಯಲ್ಲಿಯೂ ಆಲಿಯಾ ಭಟ್ ರವರ ಚಿತ್ರಗಳನ್ನು ನೋಡಬಾರದು ಎಂಬ ಅಭಿಯಾನಗಳು ನಡೆಯುತ್ತಿರುವ ಕಾರಣ, ತೆಲುಗು ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ವಾದ RRR ಚಿತ್ರದ ನಾಯಕಿಯಾಗಿ ಆಯ್ಕೆಗೊಂಡಿದ್ದ ಆಲಿಯಾ ಭಟ್ ರವರನ್ನು ಭಾರತದ ಚಿತ್ರರಂಗದ ಕಡೆ ಇಡಿ ವಿಶ್ವವೇ ತಿರುಗಿ ನೋಡುವ ಹಾಗೇ ಬಾಹುಬಲಿ ಚಿತ್ರವನ್ನು ನಿರ್ದೇಶನ ಮಾಡಿದ್ದ ರಾಜಮೌಳಿ ರವರು ಚಿತ್ರದಿಂದ ಹೊರಗುಳಿಯುವಂತೆ ಮಾಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಆಲಿಯಾ ಭಟ್ ಅಭಿಮಾನಿಗಳು ದಿನಾಂಕ ಸರಿಹೊಂದದೇ ಚಿತ್ರದಿಂದ ಹೊರನಡೆದಿದ್ದಾರೆ ಎಂದು ಹೇಳುತ್ತಿದ್ದರೂ ಕೂಡ ಒಂದು ವರ್ಷದ ಹಿಂದೆ ನಡೆದ ಒಪ್ಪಂದದಿಂದ ರಾಜಮೌಳಿ ರವರು ಹಿಂದೆ ಸರಿಯುವುದು ಸಾಮಾನ್ಯದ ಮಾತಲ್ಲ. ಆಲಿಯಾ ಭಟ್ ರವರು ಕೂಡ ರಾಜಮೌಳಿ ರವರ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳುವಷ್ಟು ದಡ್ಡರಲ್ಲ ಎಂದು ಎಲ್ಲರಿಗೂ ತಿಳಿದಿದೆ ಎಂದು ಸುಶಾಂತ್ ಸಿಂಗ್ ಅಭಿಮಾನಿಗಳು ಟಾಂಗ್ ನೀಡಿದ್ದಾರೆ. ಇನ್ನು ಈ ಕುರಿತು ಅಧಿಕೃತ ಕಾರಣವನ್ನು ಎಲ್ಲೂ ರಾಜಮೌಳಿ ರವರು ಬಹಿರಂಗಪಡಿಸದೆ ಇರುವ ಕಾರಣ ಖಂಡಿತ ಇದು ಸುಶಾಂತ್ ಸಿಂಗ್ ಅಭಿಮಾನಿಗಳ ಅಭಿಯಾನದ ಫಲ ಎಂಬ ಮಾಹಿತಿ ಟಾಲಿವುಡ್ ನಲ್ಲಿ ಕೇಳಿ ಬಂದಿದೆ, ಒಂದು ವೇಳೆ ದಿನಾಂಕ ಸರಿಹೊಂದದೆ ಇದ್ದಲ್ಲಿ ಬಹಿರಂಗವಾಗಿ ರಾಜಮೌಳಿ ರವರು ಖಂಡಿತಾ ಘೋಷಣೆ ಮಾಡುತ್ತಿದ್ದರು. ಈ ಹಿಂದೆಯೂ ಹಲವಾರು ಬಾರಿ ಈ ರೀತಿಯ ಘೋಷಣೆಗಳನ್ನು ಕೇಳಿದ್ದೇವೆ ಎಂದು ತೆಲುಗು ಚಿತ್ರರಂಗದ ಚಿತ್ರ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಅದೇನೇ ಆಗಲಿ ಇದೀಗ ಸುಶಾಂತ್ ಸಿಂಗ್ ರಜಪೂತ್ ರವರ ಅಭಿಮಾನಿಗಳ ಹವಾ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು ಹಾಗೂ ದಿನೇ ದಿನೇ ಈ ಅಭಿಯಾನಗಳು ಹೆಚ್ಚಾಗುತ್ತಿದ್ದು, ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.