ಬಿಗ್ ನ್ಯೂಸ್: ಮಹತ್ವದ ವಿದ್ಯಮಾನದಲ್ಲಿ ರಿಯಾ ವಿರುದ್ಧ ತನಿಖೆಗೆ ಹೊಸ ಅಸ್ತ್ರ ನೀಡಿದ ರಿಯಾ ಸಹೋದರ ! ಏನು ಗೊತ್ತಾ?

ಬಿಗ್ ನ್ಯೂಸ್: ಮಹತ್ವದ ವಿದ್ಯಮಾನದಲ್ಲಿ ರಿಯಾ ವಿರುದ್ಧ ತನಿಖೆಗೆ ಹೊಸ ಅಸ್ತ್ರ ನೀಡಿದ ರಿಯಾ ಸಹೋದರ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಸುಶಾಂತ್ ಸಿಂಗ್ ರಜಪುತ್ ರವರ ಘಟನೆಯಲ್ಲಿ ಒಂದೆಡೆ ಸಿಬಿಐ ಸಂಸ್ಥೆಯು ರಿಯಾ ಚಕ್ರವರ್ತಿ ರವರನ್ನು ಹಲವಾರು ಬಾರಿ ತನಿಖೆಗೆ ಕರೆದು ವಿಚಾರಣೆ ನಡೆಸುತ್ತಿದೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಸಿಬಿಐ ಸಂಸ್ಥೆಯೂ ರಿಯಾ ಚಕ್ರವರ್ತಿ ರವರನ್ನು ತನ್ನ ಕಸ್ಟಡಿಗೆ ಪಡೆಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ರಿಯಾ ಚಕ್ರವರ್ತಿ ರವರು ನೀಡುತ್ತಿರುವ ಕೆಲ ಗೊಂದಲದ ಹೇಳಿಕೆಗಳು ಸಿಬಿಐ ಸಂಸ್ಥೆಗೆ ಮಹಾ ಅಸ್ತ್ರ ಆಗಬಹುದು ಎಂದು ಮಾಧ್ಯಮ ಸಂಸ್ಥೆಗಳು ಅಂದಾಜು ಮಾಡಿವೆ. ಹೀಗಿರುವಾಗ ಇದೀಗ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯನ್ನು‌ ಮತ್ತೊಂದು ದೃಷ್ಟಿಕೋನದಲ್ಲಿ ತನಿಖೆ ನಡೆಸಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ವಿಚಾರಣೆ ಆರಂಭಿಸಿರುವುದು ನಿಮಗೆಲ್ಲರಿಗೂ ತಿಳಿದಿದೆ.

ಸಿಬಿಐ ಹಾಗೂ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಂಸ್ಥೆಗಳು ಒಂದೇ ಘಟನೆಯನ್ನು ಎರಡು ದೃಷ್ಟಿಕೋನದಲ್ಲಿ ತನಿಖೆ ನಡೆಸುವ ಮೂಲಕ ಅಸಲಿಗೆ ಅಲ್ಲಿ ನಡೆದದ್ದೇನು ಹಾಗೂ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಗೆ ಕಾರಣ ಏನು ಎಂಬುದರ ಕುರಿತು ಸಂಪೂರ್ಣ ತನಿಖೆ ನಡೆಸುತ್ತಿವೆ. ಇದರ ಬೆನ್ನಲ್ಲೇ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಂಸ್ಥೆಯು ಒಂದು ಹೆಜ್ಜೆ ಮುಂದಿಟ್ಟು ಡ್ರ – ಗ್ಸ್ ದೃಷ್ಟಿಕೋನದಲ್ಲಿ ತನಿಖೆ ನಡೆಸುವಾಗ ಮಹತ್ವದ ಬೆಳವಣಿಗೆಯೊಂದರಲ್ಲಿ ರಿಯಾ ಚಕ್ರವರ್ತಿ ರವರ ಸಹೋದರ ಶೋಯಿಕ್ ಚಕ್ರವರ್ತಿ ರವರು ತನ್ನ ಸಹೋದರಿ ಕುರಿತು ಮಹತ್ವದ ಮಾಹಿತಿಗಳನ್ನು ಹೊರಹಾಕಿ ತಪ್ಪೊಪ್ಪಿಕೊಂಡಿದ್ದಾರೆ. ಈ ಹೇಳಿಕೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಂಸ್ಥೆಗೆ ಮಹಾ ಅಸ್ತ್ರವಾಗಲಿದೆ ಹಾಗೂ ಈ ಹೇಳಿಕೆ ನೀಡಿದ ಬೆನ್ನಲ್ಲೇ ಶೋಯಿಕ್ ಚಕ್ರವರ್ತಿ ಹಾಗೂ ಸ್ಯಾಮ್ಯುಯೆಲ್ ಮಿರಾಂಡಾ ರವರನ್ನು ಬಂಧಿಸಿದೆ.

ಹೌದು ಸ್ನೇಹಿತರೇ, ಶೋಯಿಕ್ ಚಕ್ರವರ್ತಿ ರವರು ನಾನು ನನ್ನ ಸಹೋದರಿ ರಿಯಾ ಚಕ್ರವರ್ತಿ ರವರ ಸೂಚನೆಯ ಮೇರೆಗೆ ಡ್ರ – ಗ್ಸ್ ಔಷಧಿಗಳನ್ನು ಸಂಗ್ರಹ ಮಾಡಿದ್ದೇನೆ ಹಾಗೂ ಖರೀದಿಸಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಈ ಹೇಳಿಕೆ ನೀಡಿದ ಕೆಲವೇ ಕೆಲವು ಕ್ಷಣಗಳಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಂಸ್ಥೆಯು ತಡಮಾಡದೇ ಶೋಯಿಕ್ ಚಕ್ರವರ್ತಿ ಹಾಗೂ ಸ್ಯಾಮ್ಯುಯೆಲ್ ಮಿರಾಂಡಾ ರವರನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡು ಸಂಪೂರ್ಣ ವಿಚಾರಣೆ ನಡೆಸಲು ಮುಂದಾಗಿದೆ ಹಾಗೂ ಶೋಯಿಕ್ ಚಕ್ರವರ್ತಿ ರವರು ತಪ್ಪೊಪ್ಪಿಕೊಂಡಿರುವ ಕಾರಣ ಇದೀಗ ರಿಯಾ ಚಕ್ರವರ್ತಿ ರವರಿಗೆ ಮತ್ತೊಂದು ನೋಟಿಸ್ ಕಳುಹಿಸಲು ಚಿಂತನೆ ನಡೆಸಿದೆ. ಅಷ್ಟೇ ಅಲ್ಲದೆ ಶೋಯಿಕ್ ಚಕ್ರವರ್ತಿ ರವರ ಮಾತುಗಳ ಆಧಾರದ ಮೇಲೆ ತಮ್ಮ ಕಸ್ಟಡಿಗೆ ತೆಗೆದುಕೊಳ್ಳಬಹುದೇ ಎಂಬ ಆಲೋಚನೆಯಲ್ಲಿ ತೊಡಗಿಕೊಂಡಿದೆ. ಇನ್ನು ಇದೇ ಸಮಯದಲ್ಲಿ ಶೋಯಿಕ್ ಚಕ್ರವರ್ತಿ ರವರ ಮನೆ ಮೇಲೆ ರೈಡ್ ಆರಂಭಿಸಿದ NCB, ರಿಯಾ ಚಕ್ರವರ್ತಿ ರವರಿಗೆ ಸಂಬಂಧಿಸಿದ ಕಾರು, ಫೋನು ಮತ್ತು ಲ್ಯಾಪ್ ಟಾಪ್ ಗಳಲ್ಲಿ ಮಾಹಿತಿಗಳನ್ನು ಕಲೆಹಾಕಲು ಸಂಪೂರ್ಣ ಸರ್ಚ್ ಮಾಡಿದೆ ಎಂಬ ಮಾಹಿತಿ ಸಿಕ್ಕಿದೆ. ಒಟ್ಟಿನಲ್ಲಿ ಇದೀಗ ಒಂದೆಡೆ ಸಿಬಿಐ ಸಂಸ್ಥೆಯು ನೋಟಿಸ್ ಗಳ ಮೇಲೆ ನೋಟಿಸ್ಗಳನ್ನೂ ಜಾರಿ ಮಾಡಿ ವಿಚಾರಣೆಗೆ ಒಳಪಡಿಸುತ್ತಿರುವ ಸಂದರ್ಭದಲ್ಲಿ ಮತ್ತೊಂದೆಡೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಇದೀಗ ರಿಯಾ ಚಕ್ರವರ್ತಿ ರವರ ‌ಕದ ತಟ್ಟಿದೆ.