ಭಾರತದಿಂದ ಮತ್ತೊಂದು ಮಾಸ್ಟರ್ ಪ್ಲಾನ್ ! ಪಾಕ್ ಚೀನಾ ಕಣ್ತಪ್ಪಿಸಲು ಮಹತ್ವದ ಹೆಜ್ಜೆ ಇಟ್ಟ ಭಾರತ ಏನು ಗೊತ್ತಾ?

ಭಾರತದಿಂದ ಮತ್ತೊಂದು ಮಾಸ್ಟರ್ ಪ್ಲಾನ್ ! ಪಾಕ್ ಚೀನಾ ಕಣ್ತಪ್ಪಿಸಲು ಮಹತ್ವದ ಹೆಜ್ಜೆ ಇಟ್ಟ ಭಾರತ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ದೇಶವು ತನ್ನ ಗಡಿಯಲ್ಲಿ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳು ಭಾರತೀಯ ಸೇನೆಗೆ ಯುದ್ಧದ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅನುಕೂಲ ಮಾಡಿಕೊಡಲಿದೆ. ಇದರಿಂದ ಕಂಗೆಟ್ಟಿರುವ ಚೀನಾ ದೇಶವು ಭಾರತ ದೇಶವು ಗಡಿಯಲ್ಲಿ ಯಾವುದೇ ರೀತಿಯ ರಸ್ತೆ ಕಾಮಗಾರಿ ಆಗಲಿ ಅಥವಾ ಸೇತುವೆ ನಿರ್ಮಾಣ ಕಾಮಗಾರಿ ಆಗಲಿ ಮಾಡಬಾರದು ಎಂದು ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣ ಮಾಡಿ ಹಲವಾರು ಕಹಿ ಘಟನೆಗಳು ನಡೆಯುವಂತೆ ಮಾಡಿತ್ತು. ಗಡಿಯಲ್ಲಿ ಭಾರತದ ಜೊತೆ ಯುದ್ಧಕ್ಕೆ ಸಿದ್ಧ ಎನ್ನುವ ಮಟ್ಟಕ್ಕೆ ಚೀನಾ ದೇಶ ಸೇನೆ ರವಾನೆ ಮಾಡಿತ್ತು, ಆದರೆ ಭಾರತದ ಕಡೆಯಿಂದ ತಕ್ಕ ಪ್ರತ್ಯುತ್ತರವನ್ನು ನೋಡಿದ ಚೀನಾ ದೇಶವು ಊಹಿಸಿ ಕೊಳ್ಳದ ರೀತಿಯಲ್ಲಿ ಪ್ರತ್ಯುತ್ತರ ಬಂದ ಕಾರಣ ರಾಜಿಯಾಗದೇ ಬೇರೆ ದಾರಿ ಇರಲಿಲ್ಲ.

ಇಷ್ಟೆಲ್ಲಾ ವಿದ್ಯಮಾನಗಳು ನಡೆದ ಬಳಿಕ ಭಾರತ ದೇಶವು ಚೀನಾ ದೇಶದ ನಡೆಯನ್ನು ಸವಾಲಾಗಿ ತೆಗೆದುಕೊಂಡು ಗಡಿಯಲ್ಲಿ ಬಾಕಿ ಉಳಿದಿದ್ದ ಎಲ್ಲ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಿತು, ಇನ್ನು ಕೆಲವು ಕಾಮಗಾರಿಗಳು ಇದೀಗ ನಡೆಯುತ್ತಿದ್ದು ಅತಿ ವೇಗವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಭಾರತ ಶ್ರಮಿಸುತ್ತಿದೆ. ಹೆಚ್ಚುವರಿ ಸೇನೆ ಜೊತೆ ಹೆಚ್ಚುವರಿ ಕೆಲಸಗಾರರನ್ನು ಕಳುಹಿಸಿ, ಎಲ್ಲಾ ಕಾಮಗಾರಿಗಳನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲು ಆದೇಶ ನೀಡಿ ಅಗತ್ಯವಿರುವ ಹಣ ಬಿಡುಗಡೆ ಮಾಡಲಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಮಾಸ್ಟರ್ ಪ್ಲಾನ್ ನಡೆಸಿರುವ ಭಾರತ ದೇಶವು ಇದೀಗ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದೆ. ಭಾರತದ ಈ ನಡೆ ಚೀನಾ ಹಾಗೂ ಪಾಕಿಸ್ತಾನ ದೇಶಗಳಿಗೆ ಹೊಸ ತಲೆನೋವಾಗಿ ಪರಿಣಮಿಸುವುದು ಖಚಿತ.

ಹೌದು ಸ್ನೇಹಿತರೇ, ಇದೀಗ ಭಾರತೀಯ ಸೇನೆಯು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆ ಹಾಗೂ ಟ್ಯಾಂಕರ್ ಗಳನ್ನು ಲಡಕ್ ಪ್ರದೇಶಕ್ಕೆ ಅತಿ ವೇಗವಾಗಿ ರವಾನೆ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಕನಿಷ್ಠ ಮನಾಲಿಯಿಂದ ಲೇಹ್ ಗೆ ತೆರಳುವ ಸಮಯ ಮೂರರಿಂದ ನಾಲ್ಕು ಗಂಟೆಗಳಷ್ಟು ಕಡಿಮೆಯಾಗುವುದಷ್ಟೇ ಅಲ್ಲದೇ, ಸೇನೆಯನ್ನು ಸಾಗಿಸುವಾಗ ಪಾಕ್ ಅಥವಾ ಚೀನಾ ದೇಶಗಳ ಕಣ್ಣು ತಪ್ಪಿಸಬಹುದು.‌ ಕಳೆದ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಇಂದು ಬಳಸುತ್ತಿರುವ ರಸ್ತೆಗಳನ್ನು ಬಳಸುತ್ತಿದ್ದ ಕಾರಣ ಪಾಕಿಸ್ತಾನ ದೇಶದ ಸೈನಿಕರು ಭಾರತೀಯ ಸೇನಾ ವಾಹನಗಳನ್ನು ಬಹಳ ಸುಲಭವಾಗಿ ಗುರುತಿಸಿ ತಮ್ಮ ಎತ್ತರದ ಭೂ ಪ್ರದೇಶಗಳಿಂದ ಸೇನಾ ವಾಹನಗಳ ಮೇಲೆ ದಾ — ಳಿ ಮಾಡಿದ್ದರು. ಈ ಎಲ್ಲ ಅಂಶಗಳನ್ನು ಗಮನಿಸಿರುವ ಈ ಭಾರತ ದೇಶವು, ಇದೀಗ ಯಾವುದೇ ಸಂದರ್ಭದಲ್ಲಿ ಬೇಕಾದರೂ ಪಾಕಿಸ್ತಾನ, ಚೀನಾ ದೇಶಗಳ ಕಣ್ತಪ್ಪಿಸಿ ಗಡಿಗೆ ತಲುಪಿಸಲು ಹೊಸ ಯೋಜನೆ ರೂಪಿಸಿ ಕಾಮಗಾರಿ ಆರಂಭಿಸಲಿದೆ. ಒಟ್ಟಿನಲ್ಲಿ ದಿನೇ ದಿನೇ ಗಡಿಯಲ್ಲಿ ಭಾರತ ದೇಶವು ಮತ್ತಷ್ಟು ಕಾಮಗಾರಿಗಳ ಮೂಲಕ ದೇಶದ ಭದ್ರತೆಯ ಕುರಿತು ಹೆಚ್ಚು ಗಮನ ಹರಿಸುತ್ತಿರುವುದು ಒಳ್ಳೆಯ ಸಂಗತಿಯಾಗಿದೆ.