ಮಹಾಭಾರತದಿಂದ ನೀವು ಕಲಿಯಲೇ ಬೇಕಾದ 5 ಪ್ರಮುಖ ಜೀವನ ಪಾಠಗಳು ಯಾವ್ಯಾವು ಗೊತ್ತಾ?

ಮಹಾಭಾರತದಿಂದ ನೀವು ಕಲಿಯಲೇ ಬೇಕಾದ 5 ಪ್ರಮುಖ ಜೀವನ ಪಾಠಗಳು ಯಾವ್ಯಾವು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಮಹಾ ಭಾರತದ ಪ್ರತಿಯೊಂದು ಘಟನೆ ಯಲ್ಲಿಯೂ ನಮಗೆಲ್ಲರಿಗೂ ಒಂದು ಜೀವನ ಪಾಠ ಅಡಗಿರುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದ ಮಾತುಗಳನ್ನು ಬಹುಶಹ ನೀವು ಕೇಳಿರಬಹುದು. ನಮ್ಮ ಜೀವನ ಎಷ್ಟೇ ಆಧುನಿಕರಣ ಗೊಂಡಿದ್ದರೂ ಕೂಡ, ಎಷ್ಟೇ ಇಂಟರ್ನೆಟ್ ನಲ್ಲಿ ಗೂಗಲ್ ಮಾಡಿ ತಿಳಿದು ಕೊಂಡರೂ ಕೂಡ, ಎಷ್ಟೇ ಪುಸ್ತಕ ಬಂಡಾರ ಗಳನ್ನು ಓದಿ, ಎಷ್ಟೇ ಡಿಗ್ರಿಗಳನ್ನು ಪಡೆದುಕೊಂಡರೂ ಕೂಡ ರಾಮಾಯಣ ಹಾಗೂ ಮಹಾ ಭಾರತದ ಪುಣ್ಯ ಕಾವ್ಯಗಳು ನಮಗೆ ನೀಡುವಂತಹ ಜೀವನ ಪಾಠವನ್ನು ಎಲ್ಲಿಯೂ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ರಾಮ, ಕೃಷ್ಣ ಇಬ್ಬರೂ ಮಹಾನ್ ಪುರುಷರು, ನಮಗೆಲ್ಲರಿಗೂ ಹಲವಾರು ನೀತಿ ಪಾಠಗಳನ್ನು ತಿಳಿಸಿ ಹೋಗಿದ್ದಾರೆ. ಬನ್ನಿ ಸ್ನೇಹಿತರೇ, ಇಂದು ಮಹಾ ಭಾರತದಲ್ಲಿ ನೇರಾ ನೇರವಾಗಿ ನಮಗೆ ತಿಳಿಸಿರುವ 5 ಪ್ರಮುಖ ಜೀವನ ಪಾಠಗಳನ್ನು ತಿಳಿಯೋಣ.

ಯೋಜನೆ: ಸ್ನೇಹಿತರೇ ಪ್ರತಿಯೊಂದು ಕೆಲಸಕ್ಕೂ ಯೋಜನೆ ಮುಖ್ಯವಾಗುತ್ತದೆ. ಎಲ್ಲದಕ್ಕೂ ಬಲ ಮುಖ್ಯವಲ್ಲ ಎಂಬುದಕ್ಕೆ ಸ್ಪಷ್ಟ ಉದಾಹರಣೆಯೇ ಮಹಾ ಭಾರತ. ಅಂದು ಕೌರವರಿಗೆ ಮತ್ತು ಪಾಂಡವರಿಗೆ ಶ್ರೀ ಕೃಷ್ಣನು ನಾನು ಒಬ್ಬರ ಪರವಾಗಿ ಯುದ್ಧದಲ್ಲಿ ಪಾಲ್ಗೊಳ್ಳುತ್ತೇನೆ ಉಳಿದಂತೆ ಯಾದವ ಸೈನ್ಯ ಮತ್ತೊಬ್ಬರ ಪರವಾಗಿ ಯುದ್ಧದಲ್ಲಿ ಪಾಲ್ಗೊಳ್ಳುತ್ತದೆ, ನಾನು ಯುದ್ಧದಲ್ಲಿ ಶಸ್ತಾಸ್ತ್ರಗಳನ್ನು ಬಳಸುವುದಿಲ್ಲ ಆಯ್ಕೆ ನಿಮಗೆ ಬಿಟ್ಟದ್ದು ಎಂದಾಗ ಕೌರವರು ಯಾದವ ಸೈನ್ಯವನ್ನು ಆಯ್ಕೆ ಮಾಡಿ ಕೊಳ್ಳುತ್ತಾರೆ. ಅರ್ಜುನನು ಶ್ರೀ ಕೃಷ್ಣನು ಶಸ್ತ್ರಾಸ್ತ್ರ ಬಳಸುವುದಿಲ್ಲ ಎಂದರೂ ಕೂಡ ಸಂತೋಷದಿಂದ ತನ್ನ ಪರವಾಗಿ ಬರುವಂತೆ ಸ್ವಾಗತಿಸುತ್ತಾನೆ. ಇನ್ನು ಯುದ್ಧದಲ್ಲಿ ಶ್ರೀ ಕೃಷ್ಣನ ತಂತ್ರ/ಯೋಜನೆ ಇಲ್ಲದಿದ್ದರೇ ಖಂಡಿತಾ ಪಾಂಡವರು ಯುದ್ಧ ಗೆಲ್ಲಲ್ಲು ಸಾಧ್ಯವೇ ಇರಲಿಲ್ಲ. ಆದ ಕಾರಣ ಸ್ನೇಹಿತರೇ, ಜೀವನದ ಯಾವುದೇ ಕ್ಷೇತ್ರದಲ್ಲಿ ಉತ್ತಮ ತಂತ್ರವು ನಿಮ್ಮ ಜೀವನವನ್ನು ಯಶಸ್ವಿಗೊಳಿಸಬಹುದು ಮತ್ತು ಯಾವುದೇ ಯೋಜನೆ ಅಥವಾ ಕಾರ್ಯತಂತ್ರವಿಲ್ಲದಿದ್ದರೆ, ಯಶಸ್ಸಿನ ಖಾತರಿಯಿಲ್ಲದೆ ಅಸ್ತವ್ಯಸ್ತವಾಗಿರುವ ಭವಿಷ್ಯದಲ್ಲಿ ಜೀವನವು ಮುಂದುವರಿಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ.

ತಾಳ್ಮೆ, ಸಂಯಮ ಹಾಗೂ ಮಾತಿನ ಮೇಲೆ ಹಿಡಿತ: ಹೌದು ಸ್ನೇಹಿತರೇ, ತಾಳ್ಮೆ, ಸಂಯಮದಿಂದ ವರ್ತಿಸಿ ನಾವು ನಮ್ಮ ಜೀವನದಲ್ಲಿ ಮಾತಿನ ಮೇಲೆ ಹಿಡಿತ ಸಾಧಿಸುವುದು ಬಹಳ ಮುಖ್ಯವೆನಿಸಿದೆ. ಮಹಾ ಭಾರತದ ಕಾಲದಿಂದಲೂ ಎಲ್ಲ ವ್ಯಾಜ್ಯಗಳು ಕೇವಲ ಮಾತುಗಳಿಂದ ಆರಂಭವಾಗಿವೆ. ಒಂದು ವೇಳೆ ದ್ರೌಪದಿಯು ದುರ್ಯೋಧನನನ್ನು ಕುರುಡನ ಮಗನು ಕೂಡ ಅಂಧನೇ ಎನ್ನದಿದ್ದರೇ ಮಹಾ ಭಾರತ ಸಂಭವಿಸುವ ಸಾಧ್ಯತೆಗಳು ತೀರಾ ಕಡಿಮೆ. ಇನ್ನು ಶಿಶುಪಾಲ ಮತ್ತು ಶಕುನಿಯು ಕೇವಲ ತಮ್ಮ ಕುಟುಕುವ ಮಾತುಗಳಿಂದಲೇ ಎಲ್ಲಾ ವಿಷಯಗಳನ್ನು ತಿಳಿಸುತ್ತಿದ್ದ ಕಾರಣ ಅವರಿಗೆ ಮಹಾ ಭಾರತದ ಯುದ್ಧದ ಸಂದರ್ಭದಲ್ಲಿ ಏನಾಯಿತು ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ. ಆದ ಕಾರಣ ನಮ್ಮಲ್ಲಿ ತಾಳ್ಮೆ ಮತ್ತು ಸಂಯಮ ದೊಂದಿಗೆ ಮಾತಿನ ಮೇಲೆ ಹಿಡಿತ ಸಾಧಿಸಿದರೇ ಖಂಡಿತ ನಮಗೆ ಯಾವುದೇ ಸಮ’ಸ್ಯೆಗಳು ಎದುರಾಗುವುದಿಲ್ಲ.

ಅತಿಯಾದ ಆಸೆ ತಪ್ಪಿಸಿ: ಸ್ನೇಹಿತರೇ ಅತಿಯಾದ ಆಸೆಯನ್ನು ತಪ್ಪಿಸುವುದರಿಂದ ನೀವು ನಿಮ್ಮ ಜೀವನದಲ್ಲಿ ಶಾಂತಿ ಪಡೆಯಬಹುದು ಎಂಬುದನ್ನು ಮಹಾ ಭಾರತ ಹೇಳುತ್ತದೆ. ಹೌದು ಸ್ನೇಹಿತರೇ ನೀವು ಇಲ್ಲಿ ಕೇವಲ ಬದುಕಲು ಮಾತ್ರ ನಿಮಗೆ ಆಸ್ತಿ-ಪಾಸ್ತಿ ಆಸೆ ಎಲ್ಲವೂ ಮುಖ್ಯ, ನೀವು ಇಲ್ಲಿಂದ ಹೊರಡುವಾಗ ಏನನ್ನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಇದು ಮಹಾ ಭಾರತದಲ್ಲಿ ಕೌರವರಿಗೆ ಈ ವಿಷಯ ತಿಳಿದಿದ್ದರೂ ಕೂಡ ಪಾಂಡವರ ರಾಜ್ಯ, ಆಸ್ತಿ ಎಲ್ಲವೂ ತಮಗೆ ಬೇಕು ಎಂಬ ದುರಾಸೆ ಅವರದಾಗಿತ್ತು ಹಾಗೂ ದುರಾಸೆ ಪಟ್ಟಿದ್ದಕ್ಕಾಗಿ ಮುಂದೆ ಅವರು ತಮ್ಮದೆಲ್ಲವನ್ನೂ ಕಳೆದು ಕೊಂಡು ಜೀವನವನ್ನು ಅಂತ್ಯಗೊಳಿಸಿದರು.

ಧರ್ಮದ ಹಾದಿ: ಸ್ನೇಹಿತರೇ ಧರ್ಮದ ಹಾದಿಯಲ್ಲಿ ನಡೆಯ ಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ನೀವು ಎಷ್ಟೇ ದಾನ ಧರ್ಮಗಳನ್ನು ಮಾಡಿ ಎಷ್ಟೇ ಮಹಾನ್ ಪರಾಕ್ರಮಿಯಾಗಿ ಇದ್ದರೂ ಕೂಡ ನಿಮ್ಮ ಹಿಂದಿನ ಜೀವನ ಹಾಗೂ ಈಗಿನ ಜೀವನದ ಪುಣ್ಯ ಹಾಗೂ ಪಾಪಗಳ ಮೇಲೆ ನಿಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ಉದಾಹರಣೆಗೆ ಕರ್ಣ, ಕರ್ಣನೂ ಒಬ್ಬ ಮಹಾನ್ ದಾನಿಯಾಗಿದ್ದನು. ಆದರೆ ಆತನ ಜೀವನದಲ್ಲಿ ಹಲವಾರು ಸಮಸ್ಯೆಗಳು ಕೂಡ ಇದ್ದವು. ಕರ್ಣನ ಜೀವನದಲ್ಲಿ ಕಷ್ಟ ಬಂತು ಎಂದ ಮಾತ್ರಕ್ಕೆ ಆತ ಅಧರ್ಮದ ಪರವಾಗಿ ಯುದ್ಧದಲ್ಲಿ ಪಾಲ್ಗೊಂಡ, ಶ್ರೀ ಕೃಷ್ಣ ಕರ್ಣನನ್ನು ಧರ್ಮದ ಹಾದಿಯಲ್ಲಿ ನಡೆ ಎಂದು ಹೇಳಿದರೂ ಕೂಡ ಕರ್ಣ ಕೇಳಲಿಲ್ಲ. ಇನ್ನು ಯಾರು ತಾನೆ ಏನು ಮಾಡಲು ಸಾಧ್ಯ, ಅಲ್ಲಿರುವ ಶ್ರೀ ಕೃಷ್ಣ ಧರ್ಮದ ಹಾದಿಯಲ್ಲಿ ನಡೆಯದವರನ್ನು ಅಂತ್ಯಗೊಳಿಸಿದೆ ಬಿಡುತ್ತಿರಲಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಸ್ವತಹ ಕರ್ಣನಿಗೂ ಕೂಡ ಈ ವಿಷಯ ತಿಳಿದಿತ್ತು. ಆದ ಕಾರಣದಿಂದ ನಾವು ಧರ್ಮದ ಹಾದಿಯಲ್ಲಿ ನಡೆದರೇ ಕಷ್ಟಗಳು ಬಂದರೂ ಕೂಡ ಕೊನೆಯಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ.

ಹೆಣ್ಣಿನ ಮೇಲೆ ಗೌರವ: ಸ್ನೇಹಿತರೇ ಮಹಾ ಭಾರತ ಯುದ್ಧದಲ್ಲಿ ಕೌರವರ ಪರವಾಗಿ ಪಾಲ್ಗೊಂಡ ಹಲವಾರು ಮಹಾನ್ ವ್ಯಕ್ತಿಗಳು ಸೋಲನ್ನು ಕಂಡು ಜೀವನವನ್ನು ಅಂತ್ಯಗೊಳಿಸಿದರು, ಭೀಷ್ಮ ಪಿತಾಮಹ, ದ್ರೋಣಾಚಾರ್ಯರು ಕೂಡ ಮಹಾ ಭಾರತ ಯುದ್ಧದಲ್ಲಿ ಸೋಲನ್ನು ಕಾಣಬೇಕಾಗಿತ್ತು. ಅರೇ ಅವರೇನು ತಪ್ಪು ಮಾಡಿದ್ದಾರೆ ಎಂದು ಆಲೋಚನೆ ಮಾಡುತ್ತಿದ್ದೀರಾ, ಸ್ನೇಹಿತರೇ ತುಂಬು ಸಭೆಯಲ್ಲಿ ದ್ರೌಪದಿ ವಸ್ತ್ರಾಭರಣ ಮಾಡಲು ಪ್ರಯತ್ನ ಪಡುವಾಗ ಅಲ್ಲೇ ಇದ್ದ ಭೀಷ್ಮ ಪಿತಾಮಹ ರಿಗೆ ವಸ್ತ್ರಾಭರಣ ವನ್ನು ತಡೆಯುವುದು ದೊಡ್ಡ ವಿಷಯವಾಗಿರಲಿಲ್ಲ. ಭೀಷ್ಮ ಪಿತಾಮಹರ ಮಾತನ್ನು ಯಾರು ತಿರಸ್ಕಾರ ಮಾಡುವ ಸಾಧ್ಯತೆಯೂ ಕೂಡ ತೀರಾ ಕಡಿಮೆ. ಭೀಷ್ಮ ಪಿತಾಮಹ ಕರ್ಣ ಎಲ್ಲರೂ ಮೌನವಾಗಿ ಕುಳಿತಿದ್ದರು, ಇನ್ನು ಕೆಲವು ಮಹಾನ್ ವ್ಯಕ್ತಿಗಳು ಎನಿಸಿಕೊಂಡ ಯೋಧರು ನಗುತ್ತಿದ್ದರು. ತಡೆಯದೇ ಇರುವುದು ಹಾಗೂ ನಗುತ್ತಾ ಕುಳಿತಿರುವುದು ಕೂಡ ಅಧರ್ಮವೇ ಸರಿ.. ಅದೇ ಕಾರಣಕ್ಕಾಗಿ ಮಹಾ ಭಾರತದಲ್ಲಿ ಹೆಣ್ಣಿಗೆ ಗೌರವ ನೀಡಿ ಎಂದು ಹೇಳಲಾಗುತ್ತದೆ. ಹೀಗೆ ಹೇಳುತ್ತಾ ಹೋದರೆ ಇನ್ನೂ ಸಾವಿರಾರು ಜೀವನ ಪಾಠಗಳು ನಮಗೆ ಮಹಾ ಭಾರತದಿಂದ ಸಿಗುತ್ತವೆ. ಮುಂದೆ ಮತ್ತಷ್ಟು ಜೀವನ ಪಾಠಗಳೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇವೆ ಧನ್ಯವಾದಗಳು.