ಧೋನಿ ಮುಂದಿನ ಜೀವನದ ಬಗ್ಗೆ ಸಲಹೆ ನೀಡಿದ ಸ್ವಾಮಿ ! ಟ್ರೆಂಡಿಂಗ್ ಸೃಷ್ಟಿಸಿದ ಬಿಜೆಪಿ ಬೆಂಬಲಿಗರು ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ ಇದೀಗ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರವರು ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇವರ ಬೆನ್ನಲ್ಲೇ ಸಹ ಆಟಗಾರ ಸುರೇಶ್ ರೈನಾ ರವರು ಕೂಡ ಮಹೇಂದ್ರ ಸಿಂಗ್ ಧೋನಿ ರವರ ಮುಂದಿನ ಹಾದಿಯಲ್ಲಿ ನಾನು ಜೊತೆಗೆ ಸಾಗುತ್ತೇನೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಎಲ್ಲಾ ನಿವೃತ್ತಿಗಳ ಮಾತುಗಳ ನಡುವೆ ಇದೀಗ ಸುರೇಶ್ ರೈನಾ ಹಾಗೂ ಮಹೇಂದ್ರ ಸಿಂಗ್ ಧೋನಿ ರವರ ಮುಂದಿನ ಹಾದಿ ಏನು ಎಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಅದೇ ಸಮಯದಲ್ಲಿ ಮತ್ತೊಮ್ಮೆ ರಾಜಕೀಯ ಲೆಕ್ಕಾಚಾರಗಳು ಗರಿಗೆದರಿವೆ, ಇದಕ್ಕೆ ಪೂರಕವೆಂಬಂತೆ ಸುಬ್ರಮಣ್ಯನ್ ಸ್ವಾಮಿ ರವರು ಮಾಡಿರುವ ಟ್ವೀಟ್ ಬಾರಿ ಸದ್ದು ಮಾಡಿದೆ.

ಹೌದು, ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಬಿಜೆಪಿ ಪಕ್ಷದಿಂದ ಅಖಾಡಕ್ಕೆ ಇಳಿಯುತ್ತಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿದ್ದವು. ಆದರೆ ಅದ್ಯಾಕೋ ತಿಳಿದಿಲ್ಲ ಆ ಸುದ್ದಿ ಅಲ್ಲಿಗೇ ನಿಂತು ಹೋಯಿತು. ಆದರೂ ಕೂಡ
ಮಹೇಂದ್ರ ಸಿಂಗ್ ಧೋನಿ ರವರು ಮೊದಲಿನಿಂದಲೂ ನರೇಂದ್ರ ಮೋದಿ ನೇತೃತ್ವದ ಮೇಲೆ ಬಲವಾದ ನಂಬಿಕೆ ಇಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ಸುರೇಶ್ ರೈನಾ ರವರು ಕೂಡ ಬಿಜೆಪಿ ಪಕ್ಷದ ಆತ್ಮೀಯರ ಜೊತೆಯಲ್ಲಿ ಕಾಣಿಸಿಕೊಂಡು ಬಿಜೆಪಿ ಪಕ್ಷಕ್ಕೆ ಪರೋಕ್ಷ ಬೆಂಬಲ ನೀಡಿದ್ದರು ಎಂಬ ಮಾಹಿತಿಗಳು ಕೂಡ ಕೇಳಿ ಬಂದಿದ್ದವು. ಆದರೆ ಇಬ್ಬರು ಆಟಗಾರರು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಕ್ರಿಯರಾಗಿರುವ ಕಾರಣ ರಾಜಕೀಯ ವಿಚಾರದಲ್ಲಿ ತಮ್ಮ ಅಭಿಪ್ರಾಯಗಳನ್ನು ಎಲ್ಲೂ ಬಹಿರಂಗವಾಗಿ ವ್ಯಕ್ತಪಡಿಸಿಲ್ಲ ಎಂಬ ಮಾಹಿತಿ ಸಿಕ್ಕಿತ್ತು. ಈ ಎಲ್ಲಾ ಮಾಹಿತಿಗಳನ್ನು ರಾಷ್ಟ್ರೀಯ ಮಾಧ್ಯಮಗಳು ಕೂಡ ವರದಿ ಮಾಡಿದ್ದವು.

ಈ ಎಲ್ಲಾ ಮಾತು ಹಾಗೂ ಮಾಹಿತಿಗಳ ನಡುವೆ ಮಹೇಂದ್ರ ಸಿಂಗ್ ಧೋನಿ ರವರು ನಿವೃತ್ತಿ ಘೋಷಣೆಯಾದ ಮೇಲೆ ಸುಬ್ರಹ್ಮಣ್ಯಂ ಸ್ವಾಮಿ ರವರು ಮಾಡಿರುವ ಟ್ವೀಟ್ ಬಾರಿ ವೈರಲ್ ಆಗಿದೆ, ಮಹೇಂದ್ರ ಸಿಂಗ್ ಧೋನಿ ರವರ ನಿವೃತ್ತಿಗೆ ಪ್ರತಿಕ್ರಿಯೆ ನೀಡಿರುವ ಸುಬ್ರಹ್ಮಣ್ಯಂ ಸ್ವಾಮಿ ರವರು ಮಹೇಂದ್ರ ಸಿಂಗ್ ಧೋನಿ ರವರು ನಿವೃತ್ತಿ ಯಾಗುತ್ತಿರುವುದು ಕ್ರಿಕೆಟ್ನಿಂದ, ಆದರೆ ಬೇರೆ ಯಾವುದರಿಂದಲೂ ಅಲ್ಲ, ವಿಲಕ್ಷಣಗಳ ವಿರುದ್ಧ ಹೋರಾಡುವ ಮಹೇಂದ್ರ ಸಿಂಗ್ ಧೋನಿ ಅವರ ಪ್ರತಿಭೆ ಮತ್ತು ಕ್ರಿಕೆಟ್‌ನಲ್ಲಿ ಅವರು ಪ್ರದರ್ಶಿಸಿದ ತಂಡದ “ಸ್ಪೂರ್ತಿದಾಯಕ ನಾಯಕತ್ವ” ಸಾರ್ವಜನಿಕ ಜೀವನಕ್ಕೆ ಅಗತ್ಯವಿದೆ. ಆದ್ದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದಿದ್ದಾರೆ. ಸುಬ್ರಹ್ಮಣ್ಯಂ ಸ್ವಾಮಿ ರವರು ಈ ಟ್ವೀಟ್ ಮಾಡಿದ ಕೂಡಲೇ ಬಿಜೆಪಿ ಬೆಂಬಲಿಗರು, ಇದನ್ನು ಬಾರಿ ವೈರಲ್ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಸೃಷ್ಟಿಸಿದ್ದಾರೆ.

Post Author: Ravi Yadav