ರಾಮ ಮಂದಿರ ನಿರ್ಮಾಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಮಹಮದ್ ಕೈಫ್ ! ನೆಟ್ಟಿಗರ ಮನ ಗೆದ್ದಿದ್ದು ಹೇಗೆ ಗೊತ್ತಾ?

ರಾಮ ಮಂದಿರ ನಿರ್ಮಾಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಮಹಮದ್ ಕೈಫ್ ! ನೆಟ್ಟಿಗರ ಮನ ಗೆದ್ದಿದ್ದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಕೋಟ್ಯಂತರ ಭಾರತೀಯರ ಕನಸು ದಶಕಗಳ ಬಳಿಕ ನನಸಾಗಿದೆ. ಇಂದು ಪುಣ್ಯಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಶಿಲಾನ್ಯಾಸ ಕಾರ್ಯಕ್ರಮ ನಡೆದಿದೆ. ಇಡೀ ದೇಶದ ಮೂಲೆ ಮೂಲೆಯಲ್ಲೂ ಸಂಭ್ರಮ ಮನೆ ಮಾಡಿದೆ. ಕೋಟ್ಯಂತರ ಜನರು ಭಾಗವಹಿಸಬೇಕಾಗಿದ್ದ ಶಿಲಾನ್ಯಾಸ ಕಾರ್ಯಕ್ರಮವು ಕೋರೋನ ಕಾರಣದಿಂದಾಗಿ ಕೆಲವೇ ಕೆಲವು ದಿಗ್ಗಜರೊಂದಿಗೆ ನೆರವೇರಿತು. ಆದ್ದರಿಂದ ಪ್ರತಿಯೊಬ್ಬ ದಿಗ್ಗಜರು ತಮ್ಮದೇ ಆದ ಅಭಿಪ್ರಾಯಗಳ ಮೂಲಕ ಟ್ವಿಟರ್ನಲ್ಲಿ ಶಿಲನ್ಯಾಸ ಕಾರ್ಯಕ್ರಮದ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಉತ್ತರ ಪ್ರದೇಶದವರಾದ ಭಾರತೀಯ ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಕೈಫ್ ರವರು ಈ ಕುರಿತು ಟ್ವೀಟ್ ಮಾಡಿದ್ದಾರೆ ಹಾಗೂ ಈ ಟ್ವೀಟ್ ನೆಟ್ಟಿಗರ ಮನ ಗೆದ್ದಿದೆ.

ವಿವಿಧತೆಯಲ್ಲಿ ಐಕ್ಯತೆ ಕಂಡು ಕೊಳ್ಳುವ ಭಾರತ ಅಸಲಿಗೆ ಕೆಲವು ನಾಯಕರ ಮಾತುಗಳನ್ನು ಪಕ್ಕಕ್ಕಿಟ್ಟು ಗಮನಿಸಿದರೆ ಶಾಂತವಾಗಿಯೇ ಇದೆ. ಕೆಲವು ಮುಖಂಡರು ತಮ್ಮ ತಮ್ಮ ಲಾಭ ಗಳಿಗಾಗಿ ಐಕ್ಯತೆ ಇಲ್ಲ ಎಂಬ ಮಾತುಗಳನ್ನಾಡುತ್ತಾ, ರಾಮ ಮಂದಿರ ನಿರ್ಮಾಣದ ಕಾರ್ಯಕ್ಕೆ ಅಡ್ಡಿಯಾಗಲು ಇನ್ನಿಲ್ಲದ ಕಸರತ್ತು ಗಳನ್ನು ನಡೆಸುತ್ತಿದ್ದಾರೆ ಎಂಬ ಮಾತುಗಳು ಮೊದಲಿನಿಂದಲೂ ಕೇಳಿ ಬರುತ್ತಿವೆ. ಈ ಮಾತುಗಳು ಒಬ್ಬರಲ್ಲ, ಇಬ್ಬರದಲ್ಲ ನೀವು ಸಾಮಾಜಿಕ ಜಾಲತಾಣಗಳನ್ನು ನೋಡುವುದಾದರೆ ಅಲ್ಲಿ ಸಾವಿರಾರು ಈ ರೀತಿ ಅಭಿಪ್ರಾಯಗಳು ವ್ಯಕ್ತವಾಗುತ್ತವೆ. ಇಂದು ಮೊಹಮ್ಮದ್ ಕೈಫ್ ಅವರು ಕೂಡ ಅದೇ ರೀತಿ ಟ್ವೀಟ್ ಮಾಡಿದ್ದು ನೆಟ್ಟಿಗರ ಮನಗೆದ್ದಿದೆ. ಇನ್ನು ಕೆಲವರು ಮೋಹಮ್ಮದ್ ಕೈಫ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಟ್ವಿಟರ್ ನಲ್ಲಿ ಈ ರೀತಿ ಬರೆದು ಕೊಂಡಿದ್ದಾರೆ, ಗಂಗಾ ಜಮುನಾ ಸಂಸ್ಕೃತಿಯ ಜೊತೆಗೆ ಅಲಹಾಬಾದ್ ನಗರದಲ್ಲಿ ಬೆಳೆದ ನಾನು ಸಹನುಭೂತಿ, ಸಹಬಾಳ್ವೆ, ಗೌರವ ಮತ್ತು ಘನತೆಯ ಪ್ರತಿರೂಪವಾದ ಶ್ರೀ ರಾಮನನ್ನು ನೋಡುತ್ತಾ ಬೆಳೆದಿದ್ದೇನೆ. ಭಗವಾನ ಶ್ರೀ ರಾಮನು ಪ್ರತಿಯೊಬ್ಬರಲ್ಲಿಯೂ ಒಳ್ಳೆತನವನ್ನು ಕಂಡನು, ನಮ್ಮ ನಡುವಳಿಕೆ ಅವನ ಪರಂಪರೆಯನ್ನು ಪ್ರತಿ ಬಿಂಬಿಸಬೇಕು. ದಯವಿಟ್ಟು ಕೆಲವು ದ್ವೇಷದ ಏಜೆಂಟುಗಳನ್ನು ನಮ್ಮ ಪ್ರೀತಿ ಮತ್ತು ಏಕತೆಯ ನಡುವೆ ಬರಲು ಅನುಮತಿಸಬೇಡಿ ಎಂದು ಅದ್ಭುತ ಮಾತುಗಳ ಮೂಲಕ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಇದನ್ನು ಕಂಡು ನೆಟ್ಟಿಗರು ವಿವಿಧತೆಯಲ್ಲಿ ಐಕ್ಯತೆ ಎಂದರೇ ಇದೆ ಎಂದು ಹೇಳಿದ್ದಾರೆ ಆದರೆ ಇನ್ನು ಕೆಲವರು ಈ ಮಾತುಗಳಿಗೆ ಅಕ್ಷರಸಹ ಒಪ್ಪಿಕೊಳ್ಳದೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ