ಒಂದೆಡೆ ರಿಯಾಗೆ ಸುಪ್ರೀಂ ಶಾಕ್ ! ಮತ್ತೊಂದೆಡೆ ಅಖಾಡಕ್ಕಿಳಿದು ಸರಿಯಾಗಿ ಶಾಕ್ ನಡೆದ ಸಿಬಿಐ ! ನಡೆಯುತ್ತಿರುವುದಾದರೂ ಏನು ಗೊತ್ತಾ??

ಒಂದೆಡೆ ರಿಯಾಗೆ ಸುಪ್ರೀಂ ಶಾಕ್ ! ಮತ್ತೊಂದೆಡೆ ಅಖಾಡಕ್ಕಿಳಿದು ಸರಿಯಾಗಿ ಶಾಕ್ ನಡೆದ ಸಿಬಿಐ ! ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯಲ್ಲಿ ರಿಯಾ ಚಕ್ರವರ್ತಿ ರವರ ಕೈವಾಡವಿದೆ, ಬಾಲಿವುಡ್ ಚಿತ್ರರಂಗದಲ್ಲಿ ಸ್ವಜನ ಪಕ್ಷಪಾತ ನಡೆಸುವ ಹಲವಾರು ದಿಗ್ಗಜರು ಸುಶಾಂತ್ ಸಿಂಗ್ ರವರ ಘಟನೆಗೆ ಕಾರಣರಾಗಿದ್ದಾರೆ ಎಂಬ ಬಲವಾದ ಮಾತುಗಳು ಕೇಳಿ ಬಂದಿದ್ದು ಈಗಾಗಲೇ ರಿಯಾ ಚಕ್ರವರ್ತಿ ರವರು ತಲೆ ಮರೆಸಿಕೊಂಡು ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದಾರೆ. ರಿಯಾ ಚಕ್ರವರ್ತಿ ರವರ ಪರ ವಕೀಲರು ತುರ್ತು ಜಾಮೀನು ಅರ್ಜಿ ಪಡೆಯಲು ಹಾಗೂ ಸಂಪೂರ್ಣ ತನಿಖೆ ಯನ್ನು ಬಿಹಾರ ಪೊಲೀಸರಿಂದ ವಾಪಸು ಪಡೆದುಕೊಂಡು ಮಹಾರಾಷ್ಟ್ರ ರಾಜ್ಯಕ್ಕೆ ವರ್ಗಾಯಿಸುವಂತೆ ಮಾಡಲು ಇನ್ನಿಲ್ಲದ ಕಸರತ್ತು ನಡೆಸುತ್ತಾ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಮತ್ತೊಂದೆಡೆ ಈಗಾಗಲೇ ಬಿಹಾರದಲ್ಲಿ ದಾಖಲಾಗಿದ್ದ ಪ್ರಕರಣದ ಆಧಾರದ ಮೇಲೆ ಸುಶಾಂತ್ ಸಿಂಗ್ ರಜಪೂತ್ ರವರಂತೆ ಘಟನೆಯ ತನಿಖೆ ಸಿಬಿಐ ಸಂಸ್ಥೆಗೆ ವಹಿಸಲಾಗಿದೆ. ಆದರೆ ಇದನ್ನು ರದ್ದುಗೊಳಿಸಲು ರಿಯಾ ಚಕ್ರವರ್ತಿ ರವರ ಪರ ವಕೀಲರು ಪ್ರಯತ್ನಪಡುತ್ತಿರುವ ಸಂದರ್ಭದಲ್ಲಿಯೇ ಸಿಬಿಐ ಸಂಸ್ಥೆ ಅಖಾಡಕ್ಕೆ ಇಳಿದು ರಿಯಾ ಚಕ್ರವರ್ತಿ ರವರಿಗೆ ಶಾಕ್ ನೀಡಿದೆ.

ಸಿಬಿಐ ಜೊತೆಗೆ ಸುಪ್ರೀಂ ಕೋರ್ಟ್ ಕೂಡ ತನ್ನ ನಿರ್ಧಾರ ಪ್ರಕಟಣೆ ಮಾಡಿದ್ದು, ರಿಯಾ ರವರಿಗೆ ಬಿಗ್ ಶಾಕ್ ಎದುರಾಗಿದೆ. ಹೌದು ಸ್ನೇಹಿತರೇ, ಸುಪ್ರೀಂ ಕೋರ್ಟ್ ಅಂಗಳದಲ್ಲಿ ನೆನ್ನೆ ರಿಯಾ ಚಕ್ರವರ್ತಿ ರವರ ವಕೀಲರು ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯ ತನಿಖೆಯನ್ನು ಸಂಪೂರ್ಣ ಮಹಾರಾಷ್ಟ್ರ ರಾಜ್ಯಕ್ಕೆ ಹಸ್ತಾಂತರಿಸಬೇಕು ಹಾಗೂ ರಿಯಾ ಚಕ್ರವರ್ತಿ ರವರಿಗೆ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿದರು. ಆದರೆ ಸುಪ್ರೀಂಕೋರ್ಟ್ ಪ್ರತಿಯೊಬ್ಬರ ಜವಾಬ್ದಾರಿಯನ್ನು ನಿಭಾಯಿಸಲಿ, ಮಹಾರಾಷ್ಟ್ರ ರಾಜ್ಯದ ಪೊಲೀಸರಿಗೆ ಮೂರು ದಿನಗಳ ಕಾಲಾವಕಾಶ ನೀಡುತ್ತಿದ್ದೇವೆ. ಅಷ್ಟೇ ಅಲ್ಲದೇ ರಿಯಾ ಚಕ್ರವರ್ತಿ ರವರಿಗೆ ಯಾವುದೇ ವಿಶೇಷ ಭದ್ರತೆಯಾಗಲೀ ಅಥವಾ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದ ರಿಯಾ ಚಕ್ರವರ್ತಿ ರವರು ಯಾವುದೇ ಸಮಯದಲ್ಲಿ ಬೇಕಾದರೂ ಬಂಧನವಾಗುವ ಸಾಧ್ಯತೆ ಹೆಚ್ಚಾಗಿದೆ.

ಮತ್ತೊಂದೆಡೆ ರಿಯಾ ಪರ ವಕೀಲರು ಸಿಬಿಐಗೆ ವರ್ಗಾಯಿಸಿರುವ ಪ್ರಕರಣವನ್ನು ಪ್ರಶ್ನಿಸಿ ಮಹಾರಾಷ್ಟ್ರ ಪೊಲೀಸರ ತನಿಖೆ ಮಾಡಲು ಅವಕಾಶ ನೀಡಬೇಕು ಎಂದು ಅರ್ಜಿ ಸಲ್ಲಿಸುವ ಸಾಧ್ಯತೆಗಳು ಇರುವ ಕಾರಣ ಸಿಬಿಐ ಸಂಸ್ಥೆಯು ಹೊಸ ಆಲೋಚನೆ ಮಾಡಿ ಸುಶಾಂತ್ ಸಿಂಗ್ ರಜಪೂತ್ ರವರ ಪ್ರಕರಣವನ್ನು ಉನ್ನತ ಪ್ರಕರಣವನ್ನಾಗಿ ಪರಿಗಣಿಸಿ ಈಗಾಗಲೇ ದಾಖಲಾಗಿರುವ ಪ್ರಕರಣವನ್ನು ಗಣನೆಗೆ ತೆಗೆದುಕೊಳ್ಳದೆ ತಾನೇ ಸ್ವತಹ ಹೊಸ ಪ್ರಕರಣ ದಾಖಲು ಮಾಡಿಕೊಂಡು ಔಪಚಾರಿಕವಾಗಿ ಮಹಾರಾಷ್ಟ್ರ ಹಾಗೂ ಬಿಹಾರ ಪೊಲೀಸರಿಂದ ತನಿಖೆಗೆ ಸಂಬಂಧಿಸಿದ ಎಲ್ಲಾ ಫೈಲುಗಳ ವರ್ಗಾವಣೆ ಮಾಡಿಸಿಕೊಂಡು ತನಿಖೆ ಮುಂದುವರಿಸಲು ಆಲೋಚನೆ ನಡೆಸುವುದಾಗಿ ಸಿಬಿಐ ಸಂಸ್ಥೆಯ ಮುಖ್ಯಸ್ಥ ತಿಳಿಸಿದ್ದಾರೆ. ಇದರಿಂದ ಒಂದು ವೇಳೆ ರಿಯಾ ಚಕ್ರವರ್ತಿ ರವರ ವಕೀಲರು ಮಹಾರಾಷ್ಟ್ರ ಪೊಲೀಸರು ಪ್ರಕರಣದ ಆಧಾರದ ಮೇಲೆ ಸಿಬಿಐಗೆ ವಹಿಸಬಾರದು ಹಾಗೂ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಪೊಲೀಸರು ನಡೆಸಲು ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಲ್ಲಿ ಯಾವುದೇ ಉಪಯೋಗಗಳು ಇರುವುದಿಲ್ಲ. ಯಾಕೆಂದರೆ ಸಿಬಿಐ ಸಂಸ್ಥೆಯು ಹೊಸ ಪ್ರಕರಣವನ್ನು ದಾಖಲಿಸಿ ಕೊಳ್ಳುವ ಮೂಲಕ ಇದರಲ್ಲಿ ಮಹಾರಾಷ್ಟ್ರ ಪೊಲೀಸರಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸಾಂವಿಧಾನಿಕವಾಗಿ ಸ್ಪಷ್ಟಪಡಿಸಿದಂತೆ ಆಗುತ್ತದೆ.