ಗಡಿಯಲ್ಲಿ ಬಯಲಾಯಿತು ಚೀನಾ ಕು-ತಂತ್ರ ! ಇದರ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಗುಡ್ ನ್ಯೂಸ್ ನೀಡಿದ ಅಮೇರಿಕ !

ಗಡಿಯಲ್ಲಿ ಬಯಲಾಯಿತು ಚೀನಾ ಕು-ತಂತ್ರ ! ಇದರ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಗುಡ್ ನ್ಯೂಸ್ ನೀಡಿದ ಅಮೇರಿಕ !

ನಮಸ್ಕಾರ ಸ್ನೇಹಿತರೇ, ಚೀನಾ ದೇಶವು ಪ್ರತಿಯೊಂದು ಸುತ್ತಿನ ಮಾತುಕತೆಗಳ ನಂತರವು ಕೆಲವೊಂದು ಪ್ರದೇಶಗಳಲ್ಲಿ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳುತ್ತಿದೆ, ಆದರೆ ಗಡಿಯ ಕೆಲವು ಕಿಲೋಮೀಟರ್ಗಳು ದೂರದಲ್ಲಿ ಭಾರಿ ಸಂಖ್ಯೆಯಲ್ಲಿ ಸೇನಾ ಜಮಾವಣೆ ಮಾಡುವ ಮೂಲಕ ಎಂದಿನಂತೆ ತನ್ನ ಬುದ್ಧಿಯನ್ನು ತೋರಿಸುತ್ತಿದೆ. ಅದೇ ಕಾರಣಕ್ಕಾಗಿ ಹಲವಾರು ಸುತ್ತಿನ ಶಾಂತಿ ಮಾತುಕತೆಗಳ ಬಳಿಕವೂ ಕೂಡ ಭಾರತೀಯ ಸೇನೆಯು ಹೈ ಅಲರ್ಟ ನಲ್ಲಿಯೇ ಇದ್ದು ಯಾವುದೇ ಸಮಯದಲ್ಲಿ ಎದುರಾಗಬಹುದಾದ ಚೀನಾ ಸವಾಲುಗಳನ್ನು ಎದುರಿಸಲು ಸಿದ್ಧವಾಗಿ ನಿಂತಿದೆ. ಎರಡು ದಿನಗಳ ಹಿಂದಷ್ಟೇ ಚೀನಾ ದೇಶವು ಕೆಲವೊಂದು ಪ್ರದೇಶಗಳಲ್ಲಿ ತನ್ನ ಸೇನಾ ಜಮಾವಣೆಯನ್ನು ಹೆಚ್ಚು ಮಾಡಿದ ತಕ್ಷಣ ಎಚ್ಚೆತ್ತುಕೊಂಡ ಭಾರತೀಯ ಸೇನೆಯು ಮತ್ತಷ್ಟು ಟಿ-90 ಟ್ಯಾಂಕುಗಳನ್ನು ಸೇನೆಯಲ್ಲಿ ಜಮಾವಣೆ ಮಾಡುವ ಮೂಲಕ ಚೀನಾ ದೇಶಕ್ಕೆ ಮತ್ತೊಮ್ಮೆ ಸ್ಪಷ್ಟ ಸಂದೇಶ ನೀಡಿತ್ತು.

ಈ ಎಲ್ಲಾ ವಿದ್ಯಮಾನಗಳ ಬಳಿಕ ಭಾರತಕ್ಕೆ ಅಮೇರಿಕ ದೇಶವು ಸಿಹಿ ಸುದ್ದಿ ನೀಡಿದೆ, ಭಾರತದ ಮನವಿಗೆ ಅಸ್ತು ಎಂದಿದ್ದು ಸೇನೆ ಮತ್ತಷ್ಟು ಬಲಿಷ್ಠವಾಗಲಿದೆ. ಹೌದು, ದಕ್ಷಿಣ ಚೀನಾ ಸಮುದ್ರ ದಲ್ಲಿ ಸೇರಿದಂತೆ ವಿವಿಧ ದೇಶಗಳ ಗಡಿಗಳಲ್ಲಿ ಚೀನಾ ದೇಶದ ಚಲನ ವಲನಗಳನ್ನು ಸ್ಪಷ್ಟವಾಗಿ ಗಮನಿಸುತ್ತಿರುವ ಅಮೇರಿಕಾ ದೇಶವು ಚೀನಾ ದೇಶವು ಭಾರತೀಯ ಗಡಿಯಲ್ಲಿ ಹೆಚ್ಚುವರಿ ಸೈನಿಕರನ್ನು ಜಮಾವಣೆ ಮಾಡಿದ ಕೆಲವೇ ಕೆಲವು ಗಂಟೆಗಳಲ್ಲಿ ಮಹತ್ವದ ಸಭೆ ನಡೆಸಿ ಭಾರತಕ್ಕೆ ಮತ್ತಷ್ಟು ಬೆಂಬಲ ನೀಡಲು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಒಪ್ಪಿಗೆ ಸೂಚಿಸಿದೆ. ಭಾರತವು ಹಲವಾರು ದಿನಗಳಿಂದ ಈ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳಲು ಚರ್ಚೆ ನಡೆಸುತ್ತಿತ್ತು, ಆದರೆ ಅಮೇರಿಕಾ ದೇಶದ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಒಪ್ಪುತ್ತದೆಯೇ ಎಂಬ ಅನುಮಾನ ಎಲ್ಲರಲ್ಲೂ ಮೂಡಿತ್ತು. ಯಾಕೆಂದರೆ, ಅಮೇರಿಕ ದೇಶವು ಕೆಲವೊಂದು ಅತ್ಯಾಧುನಿಕ ಮಿಲಿಟರಿ ಉಪಕರಣಗಳನ್ನು ರಕ್ಷಣಾ ಒಪ್ಪಂದ ಹೊಂದಿರುವ ರಾಷ್ಟ್ರಗಳಿಗೆ ಮಾತ್ರ ಕಳುಹಿಸಿ ಕೊಡುತ್ತದೆ.

ಆದರೆ ಇದೀಗ ಅಮೇರಿಕ ದೇಶವು ಮತ್ತೊಂದು ನಿರ್ಣಯ ತೆಗೆದುಕೊಂಡಿದ್ದು, ಗಡಿಯಲ್ಲಿ ನಡೆಯುತ್ತಿರುವ ಈ ಘಟನೆಗಳಿಂದ ಅತ್ಯಾಧುನಿಕ MQ-1 ಪ್ರಿಡೇಟರ್ ಡ್ರೋನ್ ಗಳನ್ನು ಭಾರತಕ್ಕೆ ರಫ್ತು ಮಾಡಲು ಒಪ್ಪಿಕೊಂಡಿದೆ. ಈ ಅತ್ಯಾಧುನಿಕ ಡ್ರೋನ್ ಗಳು ಬರೋಬ್ಬರಿ ಸಾವಿರ ಪೌಂಡ್ ಗಳಿಗಿಂತ ಹೆಚ್ಚು ತೂಕವಿರುವ ಕ್ಷಿಪಣಿಗಳನ್ನು ಹೊತ್ತುಕೊಂಡು ಗಡಿಯಲ್ಲಿ ಕಾವಲು ಕಾಯುತ್ತವೆ. ಅಷ್ಟೇ ಅಲ್ಲದೇ ಕೇವಲ ಅಮೇರಿಕಾ ದೇಶದ ಜೊತೆ ಇರುವ ರಕ್ಷಣ ಒಪ್ಪಂದಗಳನ್ನು ಮಾಡಿ ಕೊಂಡಿರುವ ದೇಶಗಳಿಗೆ ಮಾರಾಟ ಮಾಡುವ ಇನ್ನೂ ಕೆಲವು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ನೀಡಲು ಅಮೇರಿಕಾ ದೇಶ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಈಗಾಗಲೇ ಚೀನಾ ಗಡಿಯಲ್ಲಿ ಹಲವಾರು ಡ್ರೋನ್ ಗಳನ್ನು ನಿಯೋಜಿಸಿರುವ ಕಾರಣ, ಭಾರತಕ್ಕೆ ಡ್ರೋನ್ ಗಳ ಅವಶ್ಯಕತೆ ಹೆಚ್ಚಾಗಿದೆ ಎಂದು ಭಾರತ ಕೂಡ ಆಲೋಚನೆ ನಡೆಸಿತ್ತು, ಅಷ್ಟರಲ್ಲಿ ಅಮೇರಿಕಾ ದೇಶ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿರುವ ಕಾರಣ ಭಾರತ ಸೇನೆಗೆ ಇದು ಬಹಳ ಸಹಕಾರಿಯಾಗಲಿದೆ.