ರಿಯಾ ಚಕ್ರವರ್ತಿ ರವರಿಗೆ ಬಿಗ್ ಶಾಕ್ ನೀಡಿದ ಪಾಟ್ನಾ ಪೊಲೀಸ್ ! ಮೊದಲ ಜಯ ಎಂದ ಸುಶಾಂತ್ ಫ್ಯಾನ್ಸ್ !

ರಿಯಾ ಚಕ್ರವರ್ತಿ ರವರಿಗೆ ಬಿಗ್ ಶಾಕ್ ನೀಡಿದ ಪಾಟ್ನಾ ಪೊಲೀಸ್ ! ಮೊದಲ ಜಯ ಎಂದ ಸುಶಾಂತ್ ಫ್ಯಾನ್ಸ್ !

ನಮಸ್ಕಾರ ಸ್ನೇಹಿತರೇ, ಸ್ವಜನ ಪಕ್ಷಪಾತ ಎಂಬ ಹೆಸರು ಇದೀಗ ಬಾಲಿವುಡ್ ಅಂಗಳದಲ್ಲಿ ಅಕ್ಷರಶಃ ತಲ್ಲಣವನ್ನು ಸೃಷ್ಟಿಸುತ್ತಿದೆ. ಹಲವಾರು ಸೆಲೆಬ್ರಿಟಿಗಳು ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಗೆ ಪಕ್ಷಪಾತವೇ ಕಾರಣ ಹಾಗೂ ಈ ಘಟನೆಯ ಹಿಂದೆ ಬಾಲಿವುಡ್ ಚಿತ್ರರಂಗದಲ್ಲಿ ದಿಗ್ಗಜರು ಅನಿಸಿಕೊಂಡಿರುವ ಹಲವಾರು ನಿರ್ಮಾಪಕ, ನಾಯಕ ನಟರು ಹಾಗೂ ನಟಿಮಣಿಯರ ಕೈವಾಡವಿದೆ. ಅವರೆಲ್ಲರ ಸ್ವಜನ ಪಕ್ಷಪಾತ ನೀತಿಯಿಂದಲೇ ಸುಶಾಂತ್ ರವರು ಈ ರೀತಿಯ ನಿರ್ಧಾರ ಕೈಗೊಂಡರು. ಇಲ್ಲವಾದಲ್ಲಿ ಖಂಡಿತ ಅವರೇ ಸುಶಾಂತ್ ರವರಿಗೆ ಏನೋ ಮಾಡಿರುತ್ತಾರೆ ಎಂಬ ವಾದಗಳನ್ನು ಮಂಡಿಸುತ್ತಿದ್ದಾರೆ. ಮತ್ತೊಂದೆಡೆ ಬಾಲಿವುಡ್ನ ಕೆಲವು ಸೆಲೆಬ್ರಿಟಿಗಳು, ನಡೆದಿರುವ ಘಟನೆ ವಿಷಾದನೀಯ ಆದರೆ ‌ಇದು ಸುಶಾಂತ್ ರವರ ವೈಯಕ್ತಿಕ ನಿರ್ಧಾರ ಇದರಲ್ಲಿ ಬಾಲಿವುಡ್ ಚಿತ್ರರಂಗದ ಯಾವುದೇ ಹಸ್ತ ಕ್ಷೇಪವಿಲ್ಲ ಎಂದು ಹೇಳುತ್ತಿದ್ದಾರೆ.

ಈ ಎಲ್ಲಾ ವಾದ-ವಿವಾದಗಳ ನಡುವೆ ಸುಶಾಂತ್ ಸಿಂಗ್ ರವರ ಅಧಿಕೃತ ಬ್ಯಾಂಕ್ ಅಕೌಂಟ್ ನಿಂದ ರಿಯಾ ಚಕ್ರವರ್ತಿ ಹಾಗೂ ಅವರ ಸಹೋದರನ ಅಕೌಂಟಿಗೆ 40ಕ್ಕೂ ಹೆಚ್ಚು ಕೋಟಿ ವರ್ಗಾವಣೆ ನಡೆದಿರುವ ಕಾರಣ ಹಾಗೂ ಇತ್ತೀಚೆಗೆ ಸುಶಾಂತ್ ರವರ ಜೊತೆ ರಿಯಾ ರವರು ನಡೆದು ಕೊಂಡಿರುವ ರೀತಿಯನ್ನು ಕಂಡು ರಿಯಾ ಚಕ್ರವರ್ತಿ ರವರು ಏನೋ ತಪ್ಪು ಮಾಡಿದ್ದಾರೆ ಎಂಬ ಅನುಮಾನಗಳು ಬಲವಾಗಿ ಕಂಡು ಬಂದಿವೆ. ಅದೇ ಕಾರಣಕ್ಕಾಗಿ ತನಿಖೆ ತೀವ್ರಗೊಳಿಸಿ ಪೋಲಿಸರು ಒಂದೆಡೆ ಸಾಕ್ಷಿ ಹುಡುಕುವ ಕೆಲಸದಲ್ಲಿ ನಿರತರಾಗಿದ್ದರೇ, ಮತ್ತೊಂದು ಕಡೆ ಇಡಿ ಅಧಿಕಾರಿಗಳು ಸುಶಾಂತ್ ಸಿಂಗ್ ರಜಪೂತ್ ರವರ ಬ್ಯಾಂಕ್ ಅಕೌಂಟಿನ ಸಂಪೂರ್ಣ ಹಣದ ಲೆಕ್ಕಗಳನ್ನು ತೆಗೆಯಲು ಸಾಕ್ಷಿಗಳನ್ನು ಕಲೆಹಾಕುತ್ತಿದ್ದಾರೆ. ಯುಪಿ ಪೇಮೆಂಟ್, ಬ್ಯಾಂಕ್ ಹಣ ವರ್ಗಾವಣೆಯ ಸಂಪೂರ್ಣ ಮಾಹಿತಿ ಗಳನ್ನು ಕಲೆಹಾಕುತ್ತಿದ್ದಾರೆ. ಮತ್ತೊಂದೆಡೆ ಮಹಾರಾಷ್ಟ್ರ ಪೊಲೀಸರು ಹಾಗೂ ಬಿಹಾರ ಪೊಲೀಸರ ನಡುವೆ ನಡೆದ ಕೆಲವು ಘಟನೆಗಳು ರಾಷ್ಟ್ರೀಯ ಮಟ್ಟದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿವೆ.

ಈ ಎಲ್ಲಾ ವಿದ್ಯಮಾನಗಳ ನಡುವೆ ಇದೀಗ ಪಾಟ್ನಾ ಪೊಲೀಸರು ಈಗಾಗಲೇ ತಲೆಮರೆಸಿಕೊಂಡಿರುವ ರಿಯಾ ಚಕ್ರವರ್ತಿ ರವರ ವಿರುದ್ಧ ಅರೆಸ್ಟ್ ವಾರೆಂಟ್ ಪಡೆದುಕೊಳ್ಳಲು ಬರೋಬ್ಬರಿ 48 ಪುಟಗಳ ಸಾಕ್ಷಿಯನ್ನು ಕಲೆ ಹಾಕಿದ್ದಾರೆ ಎಂಬುದು ತಿಳಿದು ಬಂದಿದೆ. 13 ಪುಟಗಳಲ್ಲಿ ರಿಯಾ ಚಕ್ರವರ್ತಿ, ನಟಿ ಅಂಕಿತ ಲೋಖಂಡೆ ರವರ ವಾಟ್ಸಪ್ ಚಾಟ್ ಹಿಸ್ಟರಿಯನ್ನು ಕಲೆಹಾಕಿ, ಸುಶಾಂತ್ ಸಿಂಗ್ ರಜಪೂತ್ ರವರ ಮೊಬೈಲ್ ಕರೆಗಳು ಸೇರಿದಂತೆ ಘಟನೆಗೆ ಸಂಬಂಧಿಸಿದ ಹಲವಾರು ವ್ಯಕ್ತಿಗಳ ಫೋನ್ ಕರೆಗಳ ಮಾಹಿತಿಯನ್ನು ಕಲೆಹಾಕಿರುವ ಪಾಟ್ನಾ ಪೊಲೀಸರು ರಿಯಾ ಚಕ್ರವರ್ತಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸುವಂತೆ ಪೊಲೀಸರು ಮನವಿ ಮಾಡಿಕೊಳ್ಳಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿರುವುದಾಗಿ ಹೇಳಿಕೆ ನೀಡುವ ಮೂಲಕ ರಿಯಾ ಚಕ್ರವರ್ತಿ ರವರಿಗೆ ಬಿಗ್ ಶಾಕ್ ನೀಡಿದ್ದಾರೆ. ಒಂದೆಡೆ ಮುಂಬೈ ಪೊಲೀಸರು ಏನು ಇಲ್ಲಾ ಅನ್ನುತ್ತಿದ್ದರೂ ಖ್ಯಾರೇ ಎನ್ನದ ಪಾಟ್ನಾ ಪೊಲೀಸರು ಸಾಕ್ಷಿ ಕಲೆಹಾಕಿ ಅರೆಸ್ಟ್ ವಾರೆಂಟ್ ಪಡೆದುಕೊಳ್ಳಲು ನಿರ್ಧಾರ ಮಾಡಿದ್ದಾರೆ. ಇದನ್ನು ಕಂಡ ಸುಶಾಂತ್ ಸಿಂಗ್ ಅಭಿಮಾನಿಗಳು ಮೊದಲು ರಿಯಾ ಚಕ್ರವರ್ತಿ ತದನಂತರ ಬಾಲಿವುಡ್ ದಿಗ್ಗಜರು ಸಿದ್ಧರಾಗಬೇಕಿದೆ, ಇದು ನಮಗೆ ಸಿಕ್ಕ ಮೊದಲ ಜಯ ಎಂದು ಭಾವಿಸುತ್ತೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.