ಒಬ್ಬರೇ ಇದ್ದಾಗ ಹೃದಯಾಘಾತವಾದರೇ ಹೇಗೆ ತಿಳಿದುಕೊಳ್ಳಬೇಕು ಹಾಗೂ ಜೀವಕ್ಕೆ ತೊಂದರೆಯಾಗದೇ ಇರಲು ಏನು ಮಾಡಬೇಕು?

ಒಬ್ಬರೇ ಇದ್ದಾಗ ಹೃದಯಾಘಾತವಾದರೇ ಹೇಗೆ ತಿಳಿದುಕೊಳ್ಳಬೇಕು ಹಾಗೂ ಜೀವಕ್ಕೆ ತೊಂದರೆಯಾಗದೇ ಇರಲು ಏನು ಮಾಡಬೇಕು?

ನಮಸ್ಕಾರ ಸ್ನೇಹಿತರೇ, ಈಗಿನ ಡಿಜಿಟಲ್ ಕಾಲದಲ್ಲಿ ಹೃದಯಾಘಾತ ಎಂಬುದು ಸರ್ವೇ ಸಾಮಾನ್ಯವಾಗಿದೆ. ಹಿರಿಯರಿಗಷ್ಟೇ ಅಲ್ಲಾ, ಅತಿ ಚಿಕ್ಕ ವಯಸ್ಸಿನವರಿಗೆ ಕೂಡ ಹೃದಯಾಘಾತವು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಆದರೆ ನೀವು ಒಂದು ಗಮನಿಸಿರಬಹುದು, ಕೆಲವು ವರ್ಷಗಳ ಹಿಂದೆ ಸಾಮಾನ್ಯವಾಗಿ ಹಿರಿಯರಿಗೆ ಮಾತ್ರ ಹೃದಯಾಘಾತವಾಗುತ್ತಿತ್ತು. ಇಂದಿನ ಜೀವನದಲ್ಲಿ ಹೃದಯಾಘಾತಕ್ಕೆ ವಯಸ್ಸಿಗೆ ಸಂಬಂಧವೇ ಇಲ್ಲ ಎನ್ನುವಂತಾಗಿದೆ. ಇದರ ಕುರಿತು ನಾವು ಕಾರಣಗಳನ್ನು ಹುಡುಕುತ್ತ ಹೋದರೇ, ನೂರಾರು ಕಾರಣಗಳು ಸಿಗುತ್ತವೆ, ಅದರಲ್ಲಿ ಪ್ರಮುಖವಾಗಿ ನಮಗೆ ಕಾಣಿಸುವುದು ಆಹಾರ ಪದ್ಧತಿ. ಹೌದು, ಈಗಿನ ಆಹಾರ ಪದ್ಧತಿಯು ಸಹ ಹೃದಯಘಾತಕ್ಕೆ ಒಂದು ಮುಖ್ಯ ಕಾರಣವಾಗಿದೆ. ಏಕೆಂದರೆ ಈಗಿನ ಆಹಾರದಲ್ಲಿ ಹೆಚ್ಚು ಕೊಬ್ಬಿನ ಅಂಶವು ಕಂಡು ಬರುತ್ತದೆ. ಇದರಿಂದ ಹೃದಯದ ನಾಳಗಳಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿ, ಸರಿಯಾದ ಸಮಯಕ್ಕೆ ರಕ್ತವು ಸಂಚಾರವಾಗದಂತೆ ತಡೆಯುತ್ತದೆ ಹಾಗೂ ಇದು ಹೃದಯಾಘಾತಕ್ಕೆ ದಾರಿ ಮಾಡಿಕೊಡುತ್ತದೆ. ಇಂದು ನಾವು ಒಂದು ವೇಳೆ ನಿಮಗೆ ಒಬ್ಬರೇ ಇದ್ದಾಗ ಹೃದಯಾಘಾತ ವಾದರೇ ನೀವು ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕು ಹಾಗೂ ನಿಮಗೆ ಹೃದಯಾಘಾತ ಸಂಭವಿಸಿದೆ ಎಂದು ಹೇಗೆ ತಿಳಿಯುತ್ತದೆ ಎಂಬುದರ ಸಂಪೂರ್ಣ ಮಾಹಿತಿ ನೀಡುತ್ತೇವೆ.

ಮೊದಲಿಗೆ ನಿಮಗೆ ಹೃದಯಾಘಾತವಾದರೇ ಹೇಗೆ ತಿಳಿಯುತ್ತದೆ? ಅದನ್ನು ನೀವು ಹೇಗೆ ಖಚಿತ ಪಡಿಸಿಕೊಳ್ಳಬೇಕು ಎಂಬುದನ್ನು ತಿಳಿದು ಕೊಳ್ಳೋಣ. ಮೊದಲು ನಿಮ್ಮ ದೇಹದ ಎಡಗಡೆಯ ಭಾಗದಲ್ಲಿ ಭಾರವಾದಂತೆ ಅನಿಸುತ್ತದೆ ಹಾಗೂ ಯಾರೋ ಬಿಗಿಯಾಗಿ ಹಿಡಿದು ಕೊಳ್ಳುವ ಹಾಗೆ ಅನುಭವವಾಗುತ್ತದೆ. ನಂತರ ಇದ್ದಕ್ಕಿದ್ದ ಹಾಗೆ ನೋವು ಕಾಣಿಸಿ ಕೊಳ್ಳುತ್ತದೆ. ತಕ್ಷಣವೇ ದೇಹದಲ್ಲಿ ಹೆಚ್ಚಾಗಿ ಬೆವರು ಬರಲು ಪ್ರಾರಂಭವಾಗುತ್ತದೆ. ಅದರ ಜೊತೆಗೆ ಕಣ್ಣುಗಳು ಮಂಜು ಆಗುವಂತೆ ಅನುಭವವಾಗಿ ತಕ್ಷಣ ನೆಲಕ್ಕೆ ಬಿದ್ದ ಹಾಗೆ ಭಾಸವಾಗುತ್ತದೆ. ಈ ರೀತಿ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಈ ಕ್ರಮಗಳನ್ನು ಪಾಲಿಸಿದರೆ ಹೃದಯಾಘಾತದಿಂದ ನಿಮ್ಮ ಜೀವಕ್ಕೆ ಏನು ತೊಂದರೆ ಯಾಗದಂತೆ ತಪ್ಪಿಸಿ ಕೊಳ್ಳಬಹುದು. ಒಂದು ವೇಳೆ ಈ ರೀತಿಯ ಲಕ್ಷಣಗಳು ನಿಮಗೆ ಕಾಣಿಸಿಕೊಂಡರೇ ಶೇಕಡಾ 99.9 ರಷ್ಟು ಸಾಧ್ಯತೆ ನಿಮಗೆ ಹೃದಯಾಘಾತ ಕಾಣಿಸಿ ಕೊಂಡಿದೆ ಎಂದರ್ಥ.

ಇಂತಹ ಸಮಯದಲ್ಲಿ ನೀವು ಈ ಕ್ರಮಗಳನ್ನು ಪಾಲಿಸುವುದನ್ನು ಮರೆಯಬೇಡಿ, ಹಾಗೂ ಇವುಗಳನ್ನು ಸಾಧ್ಯವಾದಷ್ಟು ಜನರಿಗೆ ತಿಳಿಸಿ ಕೊಡಿ. ನೀವು ಮೇಲಿನ ಲಕ್ಷಣಗಳು ಕಂಡು ಬಂದ ತಕ್ಷಣ ಜೋರಾಗಿ ಕೆಮ್ಮಲು ಪ್ರಾರಂಭಿಸಬೇಕು. ಈ ರೀತಿ ಮಾಡುವುದರಿಂದ ನಿಮ್ಮ ದೇಹದಲ್ಲಿ ಆಕ್ಸಿಜನ್ ಪ್ರಮಾಣವು ಏರಿಕೆಯಾಗಿ ಹೃದಯದಲ್ಲಿ ರಕ್ತವು ಸರಾಗವಾಗಿ ಹರಿಯುತ್ತದೆ ಮತ್ತು ಜೊತೆಗೆ ಹೃದಯ ಬಡಿತವು ಯಥಾಸ್ಥಿತಿಗೆ ಬಂದು ತಲುಪುತ್ತದೆ. ನಂತರ ತಕ್ಷಣವೇ ಕೆಳಗೆ ಕುಳಿತುಕೊಳ್ಳಿ ಇಲ್ಲವಾದಲ್ಲಿ ಅಂಗಾತ ಮಲಗಿಕೊಂಡು ದೀರ್ಘವಾಗಿ ಉಸಿರು ತೆಗೆದು ಕೊಳ್ಳಲು ಪ್ರಯತ್ನಿಸಬೇಕು. ಪ್ರತಿ ಎರಡು ಸೆಕೆಂಡಿಗೆ ಒಮ್ಮೆ ಕೆಮ್ಮುತ್ತ ಬೇರೆ ಯಾರನ್ನಾದರೂ ಸಹಾಯಕ್ಕೆ ಕರೆಯಲು ಪ್ರಯತ್ನ ಪಡಬೇಕು. ಈ ರೀತಿ ಮಾಡುವುದರಿಂದ ಹೃದಯಾಘಾತದಿಂದ ನಿಮ್ಮ ಜೀವಕ್ಕೆ ಏನು ತೊಂದರೆಯಾಗುವುದಿಲ್ಲ ಹಾಗೂ ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ಹೋಗಿ ನಿಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು, ವೈದ್ಯರ ಸಲಹೆಗಳನ್ನು ಪಾಲಿಸಿ.