ಸುಶಾಂತ್ ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ ! ನಿತೀಶ್ ರವರ ಮನವಿಗೆ ಪ್ರತಿಕ್ರಿಯೆ ನೀಡಿದ ಕೇಂದ್ರ, ನಾನಿನ್ನೂ ಹೊರಡಬಹುದೇ ಎಂದ ಸುಬ್ರಹ್ಮಣ್ಯಂ ಸ್ವಾಮಿ !

ಸುಶಾಂತ್ ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ ! ನಿತೀಶ್ ರವರ ಮನವಿಗೆ ಪ್ರತಿಕ್ರಿಯೆ ನೀಡಿದ ಕೇಂದ್ರ, ನಾನಿನ್ನೂ ಹೊರಡಬಹುದೇ ಎಂದ ಸುಬ್ರಹ್ಮಣ್ಯಂ ಸ್ವಾಮಿ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆ ನಡೆದ ದಿನದಿಂದಲೂ ಘಟನೆಯ ಸಂಪೂರ್ಣ ತನಿಖೆ ಸಿಬಿಐ ಸಂಸ್ಥೆಗೆ ವರ್ಗಾಯಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಂಬೈ ಪೊಲೀಸರು ನಡೆದು ಕೊಳ್ಳುತ್ತಿರುವ ರೀತಿಯನ್ನು ಕಂಡು ಹಲವಾರು ಜನ ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ. ಬಿಹಾರ ಪೊಲೀಸರು ತನಿಖೆ ನಡೆಸಲು ಮಹಾರಾಷ್ಟ್ರಕ್ಕೆ ಕಾಲಿಟ್ಟ ಬಳಿಕ ಮುಂಬೈ ಪೊಲೀಸರಿಂದ ಯಾವುದೇ ಸಹಕಾರ ಸಿಗುತ್ತಿಲ್ಲ ಎಂದು ನಿತೀಶ್ ಕುಮಾರ್ ರವರು ಮಾತನಾಡಿ ಸಿಬಿಐ ಸಂಸ್ಥೆಗೆ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯ ತನಿಖೆಯನ್ನು ವರ್ಗಾಯಿಸುವಂತೆ ಶಿಫಾರಸು ಮಾಡಿದ್ದರು.. ಇದಕ್ಕೆ ಇದೀಗ ಕೇಂದ್ರದಿಂದ ಪ್ರತಿಕ್ರಿಯೆ ಬಂದಿದ್ದು, ಪ್ರತಿಕ್ರಿಯೆ ಕಂಡ ಸುಬ್ರಹ್ಮಣ್ಯ ಸ್ವಾಮಿ ರವರು ನಾನು ವಹಿಸಿಕೊಂಡ ಕೆಲಸ ಮುಗಿಯಿತು ನಾನಿನ್ನೂ ಹೊರಡಬಹುದೇ ಎಂದು ಟ್ವಿಟ್ಟರ್ನಲ್ಲಿ ಪ್ರಶ್ನಿಸಿದ್ದಾರೆ.

ಈ ಘಟನೆಯ ತನಿಖಾ ವಿಧಾನಗಳನ್ನು ಕಂಡ ಸುಬ್ರಹ್ಮಣ್ಯ ಸ್ವಾಮಿರವರು ಅಂದೇ ಹೇಳಿದ್ದರು, ಘಟನೆಯ ತನಿಖೆಯನ್ನು ಸಿಬಿಐ ಸಂಸ್ಥೆಗೆ ವಹಿಸಲು ನಾನು ಬೆಂಬಲ ನೀಡುತ್ತೇನೆ, ಸಿಬಿಐ ಸಂಸ್ಥೆಗೆ ಪ್ರಕರಣ ವರ್ಗಾವಣೆ ಆಗುವವರೆಗೂ ನಾನು ಸುಮ್ಮನೆ ಕೂರುವುದಿಲ್ಲ ಎಂದಿದ್ದರು. ಇಂದು ನಿತೀಶ್ ಕುಮಾರ್ ಅವರ ಮನವಿಯನ್ನು ಅನುಮೋದನೆ ಮಾಡಿರುವ ಕೇಂದ್ರವು ಸುಶಾಂತ್ ರವರ ಘಟನೆಯನ್ನು ಸಿಬಿಐ ಸಂಸ್ಥೆಗೆ ವರ್ಗಾಯಿಸಿದೆ ಎಂದು ತಿಳಿದು ಬಂದಿದೆ. ಈ ಕುರಿತು ಸುಪ್ರೀಂ ಕೋರ್ಟ್ ಅಧಿಕೃತ ಮಾಹಿತಿ ಹೊರ ಹಾಕಿದ್ದು ಸುಶಾಂತ್ ಸಿಂಗ್ ರವರ ಘಟನೆಯನ್ನು ಸಿಬಿಐಗೆ ವಹಿಸುವುದಾಗಿ ಕೇಂದ್ರ ಹೇಳಿ ಕೊಂಡಿದೆ ಎಂದು ಅಧಿಕೃತ ಪ್ರಕಟಣೆ ಹೊರಡಿಸಿದೆ.

ಕೇಂದ್ರದ ಈ ನಡೆ ಬಾಲಿವುಡ್ ಅಂಗಳದಲ್ಲಿ ಅಕ್ಷರಸಹ ತಲ್ಲಣವನ್ನು ಸೃಷ್ಟಿಸಿದೆ. ಇದನ್ನು ಕಂಡು ನೆಟ್ಟಿಗರು ಅಸಲಿ ಆಟ ಈಗ ಶುರುವಾಗುತ್ತದೆ ಸುಬ್ರಹ್ಮಣ್ಯಂ ಸ್ವಾಮಿರವರು ಯಾವುದೇ ಕಾರಣಕ್ಕೂ ತಮ್ಮ ಜವಾಬ್ದಾರಿ ಮುಗಿದಿದೆ ಎಂದು ಕೊಳ್ಳಬಾರದು, ಬಾಲಿವುಡ್ ನಲ್ಲಿ ನಡೆಯುತ್ತಿರುವ ಸ್ವಜನ ಪಕ್ಷ ಪಾತವನ್ನು ತೆಗೆದುಹಾಕಿ, ಸುಶಾಂತ್ ಸಿಂಗ್ ರವರ ಘಟನೆಗೆ ಸಂಬಂಧಿಸಿದ ಎಲ್ಲರನ್ನೂ ಕಂಬಿ ಎಣಿಸುವ ಹಾಗೆ ಮಾಡಬೇಕು ಹಾಗೂ ಬಾಲಿವುಡ್ಡನ್ನು ಸ್ವಚ್ಛಗೊಳಿಸಬೇಕು ಎಂಬ ಟ್ವೀಟ್ ಗಳನ್ನು ಮಾಡಿದ್ದಾರೆ. ಒಟ್ಟಿನಲ್ಲಿ ಅದೇನೇ ಆಗಲಿ ಸುಶಾಂತ್ ಸಿಂಗ್ ಅಭಿಮಾನಿಗಳ ಕನಸು ಇಂದು ನನಸಾಗಿದೆ, ಸಿಬಿಐ ಸಂಸ್ಥೆಯು ಇನ್ನು ಮುಂದೆ ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸಲಿದೆ.