ಪೌರಾಣಿಕ ಘಟನೆಗಳ ಆಧಾರದ ಮೇಲೆ ಚಿತ್ರೀಕರಣ ಮಾಡಿದರೇ ಜನರು ನೋಡುವುದಿಲ್ಲ ಎಂದವರಿಗೆ ಇಲ್ಲಿದೆ ಜನರೇ ನೀಡಿದ ಉತ್ತರ !

ಪೌರಾಣಿಕ ಘಟನೆಗಳ ಆಧಾರದ ಮೇಲೆ ಚಿತ್ರೀಕರಣ ಮಾಡಿದರೇ ಜನರು ನೋಡುವುದಿಲ್ಲ ಎಂದವರಿಗೆ ಇಲ್ಲಿದೆ ಜನರೇ ನೀಡಿದ ಉತ್ತರ !

ನಮಸ್ಕಾರ ಸ್ನೇಹಿತರೇ, ಕಳೆದ ಕೆಲವು ದಿನಗಳ ಹಿಂದೆ ಇಡೀ ಭಾರತದಲ್ಲಿ ಎಲ್ಲಿ ನೋಡಿದರೂ ರಾಮಾಯಣ ಹಾಗೂ ಮಹಾಭಾರತ ಧಾರವಾಹಿಗಳ ಮರು ಪ್ರಸಾರ ಕಾರ್ಯಕ್ರಮಗಳು ಭಾರಿ ಸದ್ದು ಮಾಡಿದ್ದವು‌. ಹಲವಾರು ವರ್ಷಗಳ ನಂತರ ಮರು ಪ್ರಸಾರವಾದರೂ ಕೂಡ ರಾಮಾಯಣ ಇಡೀ ವಿಶ್ವದಲ್ಲಿಯೇ ಅತಿಹೆಚ್ಚು ವೀಕ್ಷಣೆ ಯಾದ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಬರೋಬರಿ ಒಮ್ಮೆಲೆ 7 ಕೋಟಿಗೂ ಅಧಿಕ ಜನ ಟಿವಿಯಲ್ಲಿ ವೀಕ್ಷಣೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಚಿತ್ರೀಕರಣ ಮಾಡಲಾಗುವ ದೊಡ್ಡ ದೊಡ್ಡ ಹಾಲಿವುಡ್ ಸಿರೀಸ್ ಗಳ ದಾಖಲೆಗಳು ರಾಮಾಯಣದ ಟಿಆರ್ಪಿ ಮುಂದೆ ಮಕಾಡೆ ಮಲಗಿದ್ದವು. ಅದರಲ್ಲಿಯೂ ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಭಾರತದಲ್ಲಿ ಸಾಮಾನ್ಯವಾಗಿ ಬಹುತೇಕರ ಮನೆಯಲ್ಲಿ ಕೇವಲ ಒಂದು ಟಿವಿ ಇರುತ್ತದೆ. ಅದರಲ್ಲಿಯೇ ಮನೆಮಂದಿಯೆಲ್ಲಾ ಕೂತು ಒಟ್ಟಿಗೆ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ. ಅಂದರೆ ಅಂದಾಜು ನೀವೇ ಮಾಡಿಕೊಳ್ಳಿ 7 ಕೋಟಿಗೂ ಹೆಚ್ಚು ಟಿವಿಗಳಲ್ಲಿ ರಾಮಾಯಣ ವೀಕ್ಷಿಸಲಾಗಿದೆ ಎಂದರೇ ಎಷ್ಟು ಕೋಟಿ ಜನ ಒಮ್ಮೆಲೆ ರಾಮಾಯಣವನ್ನು ವೀಕ್ಷಿಸಿರಬಹುದು ಎಂದು.

ಹೀಗೆ ಮರು ಪ್ರಸಾರವಾದ ಧಾರವಾಹಿಗಳು ದಾಖಲೆಗಳ ಮೇಲೆ ದಾಖಲೆಯನ್ನು ಸೃಷ್ಟಿ ಮಾಡಿದ್ದವು. ಅದೇ ರೀತಿ ಇದೀಗ ಕನ್ನಡದಲ್ಲಿ ಒಂದು ಘಟನೆ ನಡೆದಿದ್ದು ಇದೇ ಮೊದಲ ಬಾರಿಗೆ ಡಬ್ಬಿಂಗ್ ಧಾರಾವಾಹಿಗಳು ಅತಿ ಹೆಚ್ಚು ಟಿಆರ್ಪಿ ಪಡೆದುಕೊಂಡು ಸದ್ದು ಮಾಡಿವೆ. ಮೊದಲಿನಿಂದಲೂ ಧಾರವಾಹಿಗಳು ಡಬ್ಬಿಂಗ್ ಮಾಡಿದರೇ ಜನ ನೋಡುವುದಿಲ್ಲ, ಪ್ರಮುಖವಾಗಿ ಪೌರಾಣಿಕ ಘಟನೆಗಳ ಧಾರಾವಾಹಿಗಳನ್ನು ಯಾರು ನೋಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದ ಕಾರಣ ಇತರ ಭಾಷೆಗಳ ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡಿರಲಿಲ್ಲ. ಆದರೆ ಲಾಕ್ಡೌನ್ ಆದ ಕಾರಣ ಚಿತ್ರೀಕರಣ ನಿಂತು ಹೋಗಿದ್ದಾಗ ಕನ್ನಡಕ್ಕೆ ಧಾರಾವಾಹಿಗಳು ಡಬ್ ಆಗಲು ಆರಂಭಿಸಿದವು. ಇದೀಗ ಎಲ್ಲರ ಊಹಾ ಪೋಹಗಳು ಸುಳ್ಳಾಗಿವೆ, ಪೌರಾಣಿಕ ಡಬ್ಬಿಂಗ್ ಧಾರವಾಹಿಗಳನ್ನು ಕನ್ನಡದ ಜನರು ಒಪ್ಪಿಕೊಂಡಿದ್ದಾರೆ.

ಹೌದು ಸ್ನೇಹಿತರೇ, ಪೌರಾಣಿಕ ಡಬ್ಬಿಂಗ್ ಧಾರವಾಹಿಗಳನ್ನು ಕನ್ನಡಿಗರು ಒಪ್ಪಿಕೊಂಡ ಕಾರಣ ಮಹಾಭಾರತ ಹಾಗೂ ರಾಧಾಕೃಷ್ಣ ಧಾರವಾಹಿಗಳು ಉತ್ತಮ ಟಿಆರ್ಪಿ ದಾಖಲೆಗಳೊಂದಿಗೆ ಮುನ್ನುಗ್ಗುತ್ತಿವೆ. ಕಳೆದ ವಾರ ಇತರ ಡಬ್ಬಿಂಗ್ ಧಾರವಾಹಿಗಳಿಗೆ ಹೋಲಿಸಿದರೆ ಮಹಾಭಾರತ ಧಾರವಾಹಿ ಬರೋಬರಿ 6.6 ರೇಟಿಂಗ್ ಪಡೆದು ಕೊಂಡಿದೆ ಇನ್ನು ರಾಧಾಕೃಷ್ಣ ಧಾರವಾಹಿ ಕೂಡ ಆರರ ಗಡಿದಾಟಿ 6.4 ಟಿಆರ್ ಪಿ ರೇಟಿಂಗ್ ಪಡೆದು ಕೊಂಡಿದೆ. ಈ ಮೂಲಕ ಎರಡು ಧಾರವಾಹಿಗಳು ಸ್ಟಾರ್ ಸುವರ್ಣ ವಾಹಿನಿಯ ಟಾಪ್ ಸ್ಥಾನಗಳನ್ನು ಪಡೆದು ಕೊಂಡಿವೆ. ಪೌರಾಣಿಕ ಧಾರವಾಹಿಗಳನ್ನು ಜನರು ನೋಡುವುದಿಲ್ಲ ಎಂಬ ಬಲವಾದ ಮಾತುಗಳ ನಡುವೆ ಹಿಂದಿಯಲ್ಲಿ ರಾಮಾಯಣ ಹಾಗೂ ಮಹಾಭಾರತದ ಟಿಆರ್ ಪಿ ರೇಟಿಂಗ್ ಹಾಗೂ ಕನ್ನಡದಲ್ಲಿ ಡಬ್ಬಿಂಗ್ ಧಾರವಾಹಿಗಳ ಟಿಆರ್ ಪಿ ರೇಟಿಂಗ್ ಗಳನ್ನು ನೋಡಿದರೇ ಖಂಡಿತ ಅವರ ವಿತಂಡ ವಾದ ಅಕ್ಷರಸಹ ಸುಳ್ಳು ಎಂದೆನಿಸುವುದುರಲ್ಲಿ ಯಾವುದೇ ಅನುಮಾನವಿಲ್ಲ. ಏನಂತೀರಾ??