ಕೊನೆ ಕ್ಷಣದಲ್ಲಿ ಮನಸ್ಸು ಬದಲಾಯಿಸಿ ರೈತರಿಗೆ ಎತ್ತುಗಳನ್ನು ಕಳುಹಿಸದೇ ಮತ್ತೊಂದು ಅದ್ಭುತ ಉಡುಗೊರೆ ಕಳುಹಿಸಿಕೊಟ್ಟ ಸೋನು ಸೂದ್ !

ಕೊನೆ ಕ್ಷಣದಲ್ಲಿ ಮನಸ್ಸು ಬದಲಾಯಿಸಿ ರೈತರಿಗೆ ಎತ್ತುಗಳನ್ನು ಕಳುಹಿಸದೇ ಮತ್ತೊಂದು ಅದ್ಭುತ ಉಡುಗೊರೆ ಕಳುಹಿಸಿಕೊಟ್ಟ ಸೋನು ಸೂದ್ !

ನಮಸ್ಕಾರ ಸ್ನೇಹಿತರೇ, ಸಿನಿಮಾದಲ್ಲಿ ವಿಲನ್, ನಿಜ ಜೀವನದಲ್ಲಿ ಹೀರೋ ಅಲ್ಲ, ಸೂಪರ್ ಹೀರೋ ಆಗಿ ವಿಶ್ವದ ಮೂಲೆ ಮೂಲೆಗಳಿಂದ ಸಹಾಯ ಕೇಳುತ್ತಿರುವ ಜನರಿಗೆ ತಾನಿದ್ದೇನೆ ಎಂಬ ಭರವಸೆ ಮೂಡಿಸಿವೆ ಕೇವಲ ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲರ ಕಷ್ಟವನ್ನು ಆಲಿಸುತ್ತಾ ಸಾಧ್ಯವಾದಷ್ಟು ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಹಸ್ತ ಚಾಚುವ ಮೂಲಕ ಸೋನು ಸೂದ್ ರವರು ಇದೀಗ ಮತ್ತೊಮ್ಮೆ ಇಡೀ ದೇಶದ ಜನರ ಮನ ಗೆದ್ದಿದ್ದಾರೆ. ಇದೀಗ ಮತ್ತೊಮ್ಮೆ ಟ್ವಿಟರ್ನಲ್ಲಿ ಟ್ರೆಂಡಿಂಗ್ ಸೃಷ್ಟಿಸಿರುವ ಸೋನು ಸೂದ್ ರವರು ಆಂಧ್ರ ಪ್ರದೇಶದ ಒಬ್ಬ ಬಡ ರೈತನ ಸಹಾಯಕ್ಕೆ ನಿಲ್ಲುವ ಮೂಲಕ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ.

ಹೌದು ಸ್ನೇಹಿತರೇ, ಕಳೆದ ಬಾರಿ ಬೆಳೆ ಕೈಗೆಟುಕದೆ ಕಂಗಾಲಾಗಿ ಒಬ್ಬ ಆಂಧ್ರ ಪ್ರದೇಶದ ರೈತನು ಈ ಬಾರಿ ಎತ್ತುಗಳನ್ನು ಬಾಡಿಗೆಗೆ ತೆಗೆದು ಕೊಳ್ಳಲು ಕೂಡ ಹಣವಿಲ್ಲದೆ ಬೇರೆ ವಿಧಿಯಿಲ್ಲದಾಗ ತನ್ನ ಹೆಣ್ಣು ಮಕ್ಕಳನ್ನು ಬಳಸಿಕೊಂಡು ತನ್ನ ಹೊಲದಲ್ಲಿ ‌ಉಳುಮೆ ಮಾಡುತ್ತಿರುತ್ತಾನೆ. ಇದನ್ನು ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಬಡ ರೈತನ ಅದೃಷ್ಟವೋ ತಿಳಿದಿಲ್ಲ ಆ ವಿಡಿಯೋ ಸೋನು ಸೂದ್ ಅವರ ಕಣ್ಣಿಗೆ ಕಾಣಿಸಿದೆ. ಟ್ವೀಟ್ ನೋಡಿದ ಕೂಡಲೇ ಎಂದಿನಂತೆ ಸಹಾಯ ಹಸ್ತ ಚಾಚಲು ಮುಂದಾದ ಸೋನು ಸೂದ್ ರವರು ರೈತನಿಗೆ ಎತ್ತುಗಳನ್ನು ಉಡುಗೊರೆಯಾಗಿ ನೀಡಲು ನಿರ್ಧಾರ ಮಾಡಿ, ಇನ್ನು ಕೆಲವೇ ಗಂಟೆಗಳಲ್ಲಿ ನಿಮ್ಮ ಮನೆಯಲ್ಲಿ ಎತ್ತುಗಳು ಬಂದಿಳಿಯುತ್ತವೆ ಎಂದಿದ್ದರು.

ಆದರೆ ಇದ್ದಕ್ಕಿದ್ದ ಹಾಗೆ ಮನಸ್ಸು ಬದಲಾಯಿಸಿದ ಸೋನು ಸೂದ್ ರವರು, ನೀವು ಎತ್ತುಗಳನ್ನು ಪಡೆಯಲು ಅರ್ಹರಲ್ಲ, ನೀವು ನಿಜವಾಗಲೂ ಟ್ಯಾಕ್ಟರ್ ಪಡೆಯಲು ಅರ್ಹವಾಗಿದ್ದೀರಿ, ಆದಕಾರಣ ನಿಮಗೆ ಒಂದು ಟ್ಯಾಕ್ಟರ್ ಕಳುಹಿಸುತ್ತಿದ್ದೇನೆ, ಸಂಜೆಯ ಹೊತ್ತಿಗೆ ನಿಮಗೆ ಟ್ಯಾಕ್ಟರ್ ಬಂದು ಸೇರುತ್ತದೆ ಎಂದು ಟ್ವೀಟ್ ಮಾಡಿದ್ದರು. ಮಾತು ನೀಡಿದಂತೆ ಇದೀಗ ಆಂಧ್ರ ಪ್ರದೇಶದ ರೈತನ ಮನೆಗೆ ಟ್ಯಾಕ್ಟರ್ ತಲುಪಿದೆ. ಸೋನು ಸೂದ್ ರವರ ಈ ನಡೆಯನ್ನು ಕಂಡ ನೆಟ್ಟಿಗರು ಹಾಡಿ ಹೊಗಳಿದ್ದು, ಸಿನಿಮಾ ಚಿತ್ರರಂಗದಲ್ಲಿ ಸಾವಿರಾರು ಕೋಟಿ ಗಳಿಸಿ ದೇಶದ ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಮನೆಯಲ್ಲಿ ಕುಳಿತು ಅಡುಗೆ ಮಾಡಿ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಮನರಂಜನೆಯಲ್ಲಿ ತೊಡಗಿರುವ ಸೆಲೆಬ್ರಿಟಿಗಳಿಗೆ ನೀವು ಮಾದರಿಯಾಗಿದ್ದೀರೀ, ನೀವು ಸಿನಿಮಾದಲ್ಲಿ ಮಾತ್ರ ವಿಲ್ಲನ್, ನಿಜ ಜೀವನದಲ್ಲಿ ಅಸಲಿ ಹೀರೋ ಎಂದು ಹಾಡಿ ಹೊಗಳಿದ್ದಾರೆ. ಒಟ್ಟಿನಲ್ಲಿ ಅದೇನೇ ಆಗಲಿ ಈ ರೀತಿಯ ಮಾನವೀಯತೆ ಕೆಲಸಗಳನ್ನು ಮಾಡುತ್ತಿರುವ ಸೋನು ಸೂದ್ ರವರಿಗೆ ಕನ್ನಡಿಗರ ಪರವಾಗಿ ಅನಂತ ಅನಂತ ವಂದನೆಗಳು.