ರೋಹಿತ್ ಶರ್ಮ ರವರ ಸ್ಥಾನವನ್ನು ಮುಂದಿನ ವಿಶ್ವಕಪ್ ನಲ್ಲಿ ತುಂಬುವ ಸಾಮರ್ಥ್ಯವುಳ್ಳ ಟಾಪ್ 5 ಆಟಗಾರರು !

ರೋಹಿತ್ ಶರ್ಮ ರವರ ಸ್ಥಾನವನ್ನು ಮುಂದಿನ ವಿಶ್ವಕಪ್ ನಲ್ಲಿ ತುಂಬುವ ಸಾಮರ್ಥ್ಯವುಳ್ಳ ಟಾಪ್ 5 ಆಟಗಾರರು !

ನಮಸ್ಕಾರ ಸ್ನೇಹಿತರೇ, ಜಾಗತಿಕ ಕ್ರಿಕೆಟ್ ನಲ್ಲಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿರುವ ರೋಹಿತ್ ಶರ್ಮ ರವರು, ಭಾರತದ ಆರಂಭಿಕ ಆಟಗಾರನಾಗಿ ಹಲವಾರು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಉತ್ತಮ ಪ್ರದರ್ಶನ ನೀಡುತ್ತಾ ಭರವಸೆಯ ಆಟಗಾರ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಕ್ರಿಕೆಟ್ ಪಂಡಿತರ ಪ್ರಕಾರ, ಮುಂದಿನ ವಿಶ್ವಕಪ್ ವೇಳೆ ರೋಹಿತ್ ಶರ್ಮ ರವರ ವಯಸ್ಸು 36 ಆಗಿರುತ್ತದೆ. ಆದ ಕಾರಣ ಈಗ ಬ್ಯಾಟಿಂಗ್ ಮಾಡುವಷ್ಟು ಸರಾಗವಾಗಿ ಬ್ಯಾಟಿಂಗ್ ನಡೆಸಲು ಸಾಧ್ಯವಿಲ್ಲ, ಆದ ಕಾರಣ ರೋಹಿತ್ ಶರ್ಮ ರವರ ಸ್ಥಾನವನ್ನು ತುಂಬಬಲ್ಲ 5 ಆಟಗಾರರನ್ನು ಹೆಸರಿಸಿದ್ದಾರೆ.

ಕೆ ಎಲ್ ರಾಹುಲ್: ರೋಹಿತ್ ಶರ್ಮ ರವರಂತಹ ಕ್ಲಾಸ್ ಬ್ಯಾಟಿಂಗ್ ಮಾಡಲು ಮತ್ತೊಬ್ಬ ಆರಂಭಿಕ ಆಟಗಾರನಿಗೆ ಸಾಧ್ಯವಾಗುತ್ತದೆ ಎಂದರೇ ಅವರು ಮತ್ಯಾರು ಅಲ್ಲ, ನಮ್ಮ ಕನ್ನಡಿಗ ಕೆ ಎಲ್ ರಾಹುಲ್. ಬ್ಯಾಟ್‌ನೊಂದಿಗಿನ ಅವರ ಸಾಮರ್ಥ್ಯವು ಎಂದಿಗೂ ಪ್ರಶ್ನಾರ್ಹವಾಗಿಲ್ಲ, ಅದರಲ್ಲಿಯೂ ಇತ್ತೀಚಿನ ಬ್ಯಾಟಿಂಗ್ ಪ್ರದರ್ಶನವನ್ನು ನೋಡಿದರೇ ಖಂಡಿತಾ ರೋಹಿತ್ ಶರ್ಮ ರವರ ಸ್ಥಾನವನ್ನು ತುಂಬಲು ರಾಹುಲ್ ರವರು ಅರ್ಹ ವ್ಯಕ್ತಿಯಾಗಿ ಕಾಣುತ್ತಾರೆ. ಯಾವುದೇ ಕ್ರಮಾಂಕದಲ್ಲಿ ಅಗತ್ಯ ಬಂದಾಗ ಬ್ಯಾಟಿಂಗ್ ಮಾಡುವ ಕಾರಣ ಇನ್ನು ತಮ್ಮ ಮೂಲ ಸ್ಥಾನವಾದ ಆರಂಭಿಕರಾದರೇ ಮತ್ತಷ್ಟು ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ.

ಪೃಥ್ವಿ ಷಾ: 19 ವರ್ಷದೊಳಗಿನ ವಿಶ್ವಕಪ್ ವಿಜೇತ ತಂಡದ ನಾಯಕನಾಗಿ ಕಾರ್ಯ ನಿರ್ವಹಣೆ ಮಾಡಿ, ಕಡಿಮೆ ಅವಧಿಯಲ್ಲಿಯೇ ಉತ್ತಮ ಹೆಸರು ಗಳಿಸಿರುವ ಪೃಥ್ವಿ ಷಾ ರವರು, ರೋಹಿತ್ ಶರ್ಮ ರವರ ಸ್ಥಾನವನ್ನು ತುಂಬುವ ಎರಡನೇ ಆಟಗಾರನಾಗಿ ಕಂಡು ಬರುತ್ತಾರೆ. ಆರಂಭದಲ್ಲಿ ರಾಹುಲ್ ದ್ರಾವಿಡ್ ರವರ ಗರಡಿಯಲ್ಲಿ ಪಳಗಿದ ಬಳಿಕ ಇದೀಗ ರಿಕ್ಕಿ ಪಾಂಟಿಂಗ್ ರವರ ಮಾರ್ಗ ದರ್ಶನದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಪೃಥ್ವಿ ಷಾ ರವರ ಅಂಕಿ ಅಂಶಗಳನ್ನು ನೋಡಿದರೇ ಖಂಡಿತ ಈತ ಮುಂದೊಂದು ದಿನ ಕಾಯಂ ಆರಂಭಿಕ ಆಟಗಾರನಾಗುತ್ತಾನೆ ಎಂದು ಕ್ರಿಕೆಟ್ ಪಂಡಿತರು ಹೇಳಿದ್ದಾರೆ.

ಶುಬ್ಮನ್ ಗಿಲ್: ಮೂರಾದನೆಯದಾಗಿ ಮತ್ತೊಬ್ಬ ಅಂಡರ್ 19 ವಿಶ್ವಕಪ್ ನ ಹೀರೋ ಶುಬ್ಮನ್ ಗಿಲ್ ರವರ ಹೆಸರು ರೋಹಿತ್ ಶರ್ಮ ಸ್ಥಾನವನ್ನು ತುಂಬಲು ಹೆಸರಿಸಲಾಗಿದೆ. ವಿಶೇಷವೇನೆಂದರೆ, ಇನ್ಯಾವುದೇ ಇತರ ಅಂಡರ್-19 ಆಟಗಾರನಿಗೆ ಇವರಷ್ಟು ಗಮನ ಹಾಗೂ ಮಹತ್ವ ಸಿಕ್ಕಿಲ್ಲ. ಇವರು ವಿಶ್ವಕಪ್ ನಲ್ಲಿ ಬ್ಯಾಟಿಂಗ್ ಮಾಡಿದ ರೀತಿ ಬಾರಿ ಸದ್ದು ಮಾಡಿತ್ತು. ಅಂದೇ ಕ್ರಿಕೆಟ್ ಪಂಡಿತರು ಇವರು ಮುಂದೆ ಭಾರತೀಯ ತಂಡದಲ್ಲಿ ಉತ್ತಮ ಆಟಗಾರನಾಗಿ ಹೊರ ಹೊಮ್ಮುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಇನ್ನು ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ನಾಗಿ ಹೊರಹೊಮ್ಮಿದರು. ವಿಶ್ವಕಪ್ ಬಳಿಕ, ಕೂಡಲೇ KKR ತಂಡದಲ್ಲಿ ಸ್ಥಾನ ಪಡೆದುಕೊಂಡರು. KKR ತಂಡದಲ್ಲಿ ಬ್ಯಾಟಿಂಗ್ ಮಾಡಲು ಸಾಕಷ್ಟು ಅವಕಾಶಗಳು ಸಿಗಲಿಲ್ಲವಾದರೂ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಪ್ರದರ್ಶನ ನೀಡಿದರು. ಸದ್ಯದ ಪರಿಸ್ಥಿತಿಯಲ್ಲಿ ಅತಿ ಹೆಚ್ಚು ಭರವಸೆ ಮೂಡಿಸಿರುವಂತಹ ಯುವ ಆಟಗಾರನಾಗಿದ್ದಾರೆ.

ಮಾಯಾಂಕ್ ಅಗರ್ವಾಲ್: ಚೆಂಡನ್ನು ನೋಡಿ, ಸರಿಯಾಗಿ ಬೌಂಡರಿ ಗೆರೆ ದಾಟಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಮಾಯಾಂಕ್ ಅಗರ್ವಾಲ್ ರವರು, ರೋಹಿತ್ ಶರ್ಮ ರವರ ಸ್ಥಾನವನ್ನು ತುಂಬುವ ಆಟಗಾರನಾಗಿ ಕಂಡು ಬರುತ್ತಾರೆ. 2017-18 ರ ರಣಜಿ ಕ್ರಿಕೆಟ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಅಂತಾರಾಷ್ಟ್ರೀಯ ಭಾರತ ಕ್ರಿಕೆಟ್ ತಂಡದ ಕದ ತಟ್ಟಿದ್ದರು. ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರನ್ನು ಒಮ್ಮೆಲೇ ಆಶ್ಚರ್ಯ ಚಕಿತರನ್ನಾಗಿ ಮಾಡಿದ್ದರು. 2019 ರ ವಿಶ್ವಕಪ್ ನಲ್ಲಿ ವಿಜಯ್ ಶಂಕರ್ ರವರ ಬದಲಿ ಆಟಗಾರನಾಗಿ ಆಯ್ಕೆಯಾದರೂ ಕೂಡ ರಾಹುಲ್ ಹಾಗೂ ರೋಹಿತ್ ರವರ ಆಟದಿಂದಾಗಿ ಇವರಿಗೆ ಅವಕಾಶ ಸಿಗಲಿಲ್ಲ. ಆದರೆ ಅವಕಾಶ ಸಿಕ್ಕರೆ ನಿರೂಪಿಸಿ ಖಂಡಿತಾ ಕಾಯಂ ಸ್ಥಾನ ಪಡೆಯುತ್ತಾರೆ ಎಂದು ಕ್ರಿಕೆಟ್ ವಿಶ್ಲೇಷಕರು ತಿಳಿಸಿದ್ದಾರೆ.

ಇಶಾನ್ ಕಿಶನ್: ಬಹಳ ವೇಗವಾಗಿ ರನ್ ಗಳಿಸಲು ಪ್ರಯತ್ನ ಪಡುವ ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ ರವರು 5 ನೇ ಆಟಗಾರನಾಗಿ ಕಂಡು ಬರುತ್ತಾರೆ. ಇಶಾನ್ ಕಿಶನ್ ರವರು ಇತ್ತೀಚಿಗೆ ಕೆಲವೊಂದು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೂ ಕೂಡ ಸ್ಥಿರತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾದ ಸಂಗತಿಯಾಗಿದೆ. ಅಂತಾಷ್ಟ್ರೀಯ ತಂಡದಲ್ಲಿ ಕಾಯಂ ಸದ್ಯಸ್ಯತ್ವ ಪಡೆದುಕೊಳ್ಳಲು ಬೇಕಾದ ಎಲ್ಲಾ ಅರ್ಹತೆಗಳನ್ನು ಈತ ಹೊಂದಿದ್ದಾನೆ. ಆದರೆ ಇನ್ನು ಹೆಚ್ಚಿನ ಅಭ್ಯಾಸ ನಡೆಸಿ, ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಮಾಡುವುದನ್ನು ಅಭ್ಯಾಸ ಮಾಡಿಕೊಂಡರೇ ಖಂಡಿತಾ ಭವಿಷ್ಯದ ತಾರೆಯಾಗಿ, ಭಾರತ ತಂಡದಲ್ಲಿ ಆರಂಭಿಕನ ಸ್ಥಾನವನ್ನು ತುಂಬುತ್ತಾರೆ ಎಂದು ವಿಶ್ಲೇಷಿಸಲಾಗಿದೆ.