ಪಾಕ್ ಮತ್ತು ಚೀನಾ ದೇಶಗಳ ಕು-‘ತಂತ್ರ’ ಅರಿತು ವಾಯುಪಡೆಗೆ ಮಹತ್ವದ ಸಂದೇಶ ರವಾನೆ ಮಾಡಿದ ರಾಜನಾಥ್ !

ಪಾಕ್ ಮತ್ತು ಚೀನಾ ದೇಶಗಳ ಕು-‘ತಂತ್ರ’ ಅರಿತು ವಾಯುಪಡೆಗೆ ಮಹತ್ವದ ಸಂದೇಶ ರವಾನೆ ಮಾಡಿದ ರಾಜನಾಥ್ !

ನಮಸ್ಕಾರ ಸ್ನೇಹಿತರೇ, ಇದೀಗ ನಮ್ಮ ನೆರೆಯ ದೇಶಗಳು ನಮ್ಮ ವಿರುದ್ಧ ಪಿತೂರಿ ನಡೆಸುವುದನ್ನು ನಿಲ್ಲಸಿಲ್ಲ, ಅವರು ಅಂತ್ಯವಾಗುವವರೆಗೂ ನಿಲ್ಲಿಸುವುದಿಲ್ಲ ಬಿಡಿ. ಅದರಲ್ಲಿಯೂ ಇತ್ತೀಚಿಗೆ ಭಾರತ ದೇಶ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ನೀತಿಯನ್ನು ಕಂಡು ಚೀನಾ ಹಾಗೂ ಪಾಕಿಸ್ತಾನ ದೇಶಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಯಾವುದೇ ವಿಚಾರವನ್ನು ಪ್ರಸ್ತಾಪ ಮಾಡಿದರೂ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಗೆಲುವು ಕಟ್ಟಿಟ್ಟ ಬುತ್ತಿಯಾಗಿಬಿಟ್ಟಿದೆ. ಕಾಶ್ಮೀರದ ವಿಚಾರದಿಂದ ಹಿಡಿದು ಗ್ಯಾಲ್ವನ್ ಘಟನೆಯ ವರೆಗೂ ಭಾರತಕ್ಕೆ ಪ್ರತಿಯೊಂದು ಹಂತದಲ್ಲಿಯೂ ಗೆಲುವು ಸಿಕ್ಕಿದೆ. ಅದೇ ಕಾರಣಕ್ಕೆ ಇದೀಗ ಚೀನಾ ದೇಶ ಗಡಿಯಲ್ಲಿ ಹಿಂದೆ ಸರಿದಿದ್ದರೂ ಕೂಡ ತನ್ನ ಮಸಲತ್ತುಗಳನ್ನು ನಿಲ್ಲಿಸಿಲ್ಲ, ನಿಲ್ಲಿಸುವುದಿಲ್ಲ ಎಂಬುದು ತಿಳಿದಿದೆ. ಇನ್ನು ಭಿಕ್ಷುಕ ಪಾ’ಕ್ ಚೀ’ನಾ ಹೇಳಿದಂತೆ ತಲೆಯಾಡಿಸುತ್ತದೆ. ಹೀಗಿರುವಾಗ ಎರಡು ಕಡೆಗಳಿಂದ ಯಾವುದೇ ಕ್ಷಣದಲ್ಲಿ ಬೇಕಾದರೂ ಸವಾಲುಗಳು ಎದುರಾಗಬಹುದು.

ಅದೇ ಕಾರಣಕ್ಕೆ ಇದೀಗ ಗಡಿಯಲ್ಲಿ ಪರಿಸ್ಥಿತಿ ತಿಳಿಗೊಂಡ ಕೆಲವು ದಿನಗಳ ಬಳಿಕ ರಾಜನಾಥ್ ಸಭೆ ಕರೆದು ಎಲ್ಲಾ ಮೂರು ಪಡೆಗಳ ಮುಖ್ಯಸ್ಥರು ಹಾಗೂ ಸೇನೆಯ ಮಹಾ ದಂಡ ನಾಯಕ ಬಿಪಿನ್ ರಾವತ್ ರವರ ಜೊತೆ ಮಾತುಕತೆ ನಡೆಸಿದರು. ಇದೇ ಸಮಯದಲ್ಲಿ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ನಮ್ಮ ನೆರೆಯ ರಾಷ್ಟ್ರಗಳಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದೀರಿ, ಏರ್ ಹಾಗೂ ಸರ್ಜಿಕಲ್ ಸ್ಟ್ರೈಕ್ ಗಳನ್ನೂ ಯಶಸ್ವಿಯಾಗಿ ಮುಗಿಸಿದ್ದೀರಿ. ಈ ಬಾರಿಯೂ ಕೂಡ ಗಡಿಯಲ್ಲಿ ಸರ್ವ ಸನ್ನದ್ಧವಾಗಿದ್ದ ರೀತಿ ರಾಷ್ಟ್ರದ ಸಾರ್ವಭೌಮತ್ವವನ್ನು ಕಾಪಾಡುವ ಸಂಕಲ್ಪವನ್ನು ಸಾರಿದಂತೆ ಇತ್ತು. ಗಡಿಯಲ್ಲಿ ತ್ವರಿತ ಗತಿಯಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಂಡ ರೀತಿಯಂತೂ ಅದ್ಭುತ, ಇದರಿಂದ ಸ್ಪಷ್ಟ ಸಂದೇಶ ರವಾನೆಯಾಗಿದೆ. ಇನ್ನು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ವಾಯುಪಡೆಯ ಕೊಡುಗೆ ಅದ್ಭುತ, ನಾವು ಇನ್ನು ಮುಂದೆ ಸ್ವದೇಶ ಭಾರತವನ್ನು ಬಲಪಡಿಸಲಿದ್ದೇವೆ. ವಾಯುಸೇನೆಯಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯ ತಂತ್ರಜ್ಞಾನದ ಬಳಕೆ ಹೆಚ್ಚಾಗಲಿದೆ.

ಮಾತನ್ನು ಮುಂದುವರೆಸಿದ ರಾಜನಾಥ್ ಸಿಂಗ್ ರವರು, ಭಾರತೀಯ ವಾಯುಪಡೆಯು ಇನ್ನು ಮುಂದೆ ಮತ್ತಷ್ಟು ಎಚ್ಚರವಾಗಿರಬೇಕು. ಗಡಿಯಲ್ಲಿ ಪರಿಸ್ಥಿತಿ ಶಾಂತವಾಗಿರುವಂತೆ ಕಾಣುತ್ತದೆ ಅಷ್ಟೇ, ಆದರೆ ಚೀನಾ ಮತ್ತು ಪಾಕ್ ಯಾವ ಕ್ಷಣದಲ್ಲಿ ಬೇಕಾದರೂ ಒಂದಾಗಿ ನಮ್ಮ ಮೇಲೆ ಯುದ್ಧ ಮಾಡಬಹುದು. ಕಡಿಮೆ ಅವಧಿಯ ಸವಾಲುಗಳು ಸೇರಿದಂತೆ ದೀರ್ಘ ಪ್ರಮಾಣದ ಯುದ್ಧಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಿ. ಇನ್ನು ವಾಯುಪಡೆಯಷ್ಟೇ ಅಲ್ಲದೇ ಇನ್ನೆರಡು ಪಡೆಗಳು ಕೂಡ ಸರ್ವ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿರ ಬೇಕು ಎಂದು ಹೇಳಿದರು. ಇದೇ ಸಮಯದಲ್ಲಿ ಮಾತನಾಡಿದ ಸೇನಾ ಮುಖ್ಯಸ್ಥರು ನಮ್ಮ ಸೇನೆ ಯಾವುದೇ ಕ್ಷಣದಲ್ಲಿ ಬೇಕಾದರೂ ಯಾವ ನಿರ್ಧಾರ ತೆಗೆದುಕೊಂಡರೂ ಪರಿಸ್ಥಿತಿ ನಿಭಾಯಿಸಲು ಸಿದ್ದವಾಗಿರುತ್ತದೆ ಎಂದರು.