ಕೇವಲ ಒಂದು ಟ್ವೀಟ್ ನೋಡಿ, ಬೀದಿಗೆ ಬಿದ್ದವರ ನೆರವಿಗೆ ನಿಂತ ಸೋನು ಸೂದ್ ! ಮತ್ತೊಮ್ಮೆ ಮಾನವೀಯತೆ ಮೆರೆದಿದ್ದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ದೇಶದ ಜನರು ಸಂಕಷ್ಟ ಪಡುತ್ತಿರುವ ಸಂದರ್ಭದಲ್ಲಿ, ಸೋನು ಸೂದ್ ರವರು ಹಲವಾರು ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಮೊದಲಿಗೆ ಲಾಕ್ ಡೌನ್ ಸಮಯದಲ್ಲಿ ಕೆಲವು ಜನರಿಗೆ ಆಹಾರ ವಿತರಣೆ ಮಾಡುವುದರಿಂದ ಆರಂಭವಾದ ಇವರ ಕೆಲಸ ತದನಂತರ ಸಾವಿರಾರು ಜನರನ್ನು ಮನೆಗೆ ತಲುಪಿಸುವುದು, ಕೊರೊನ ವಾರಿಯರ್ಸ್ ಗಳಿಗೆ ಅಗತ್ಯವಾದ ವಸ್ತುಗಳ ಪೂರೈಕೆ ಸೇರಿದಂತೆ ಇನ್ನು ವಿವಿಧ ರೀತಿಯಲ್ಲಿ ಜನ ಸಾಮಾನ್ಯರ ಕೈ ಹಿಡಿದು, ನಿಮ್ಮ ಜೊತೆ ನಾನಿದ್ದೇನೆ ಎಂದು ನಿರೂಪಿಸಿದ್ದಾರೆ.

ಇವರು ಇತರ ಪ್ರಸಿದ್ಧ ನಟರಂತೆ ಮನೆಯಲ್ಲಿಯೇ ಕುಳಿತು ಅಡುಗೆ ಮಾಡಿದ ವಿಡಿಯೋಗಳು, ವರ್ಕ್ ಔಟ್ ವಿಡಿಯೋ ಗಳನ್ನು ಶೇರ್ ಮಾಡುವುದು ದೊಡ್ಡ ವಿಷಯವಾಗಿರಲಿಲ್ಲ, ಆದರೆ ಜನರ ಕಷ್ಟವನ್ನು ನೋಡಿ ತಾವೇ ಕುದ್ದು ಎಲ್ಲಾ ವ್ಯವಸ್ಥೆಗಳಲ್ಲಿಯೂ ಭಾಗಿಯಾಗಿ ಅದೆಷ್ಟೋ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ಹೌದು ಸ್ನೇಹಿತರೇ, ಬಸ್ ವ್ಯವಸ್ಥೆ, ರೈಲು ಟಿಕೆಟ್ ಗಳು, ಆಹಾರ ವ್ಯವಸ್ಥೆ, ರೇಷನ್ ವಿತರಣೆ, ಮಾಸ್ಕ್ ಹಾಗೂ ಸ್ಯಾನಿಟೈಝೆರ್ ವಿತರಣೆ, ಪೊಲೀಸರಿಗೆ ಫೇಸ್ ಶೀಲ್ಡ್ ಸೇರಿದಂತೆ ಹಲವಾರು ರೀತಿಯ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಮನೆ ಮಾತಾಗಿದ್ದರು.

ಅದೇ ರೀತಿ ಇದೀಗ ಮತ್ತೊಮ್ಮೆ ಮಾನವೀಯತೆ ಮೆರೆದಿರುವ ಸೋನು ಸೂದ್ ರವರು, ನೆಟ್ಟಿಗರೊಬ್ಬರು ಮಹಿಳೆ ತನ್ನ ಮಕ್ಕಳೊಂದಿಗೆ ಫುಟ್ಪಾತ್ ನಲ್ಲಿ ಆಶ್ರಯ ಪಡೆದು ಕೊಂಡಿರುವ ಫೋಟೋ ಹಾಕಿ, ಈಕೆ ತನ್ನ ಪತಿಯನ್ನು ಕಳೆದು ಕೊಂಡಳು, ತದ ನಂತರ ಈಕೆಯನ್ನು ಮನೆಯ ಮಾಲೀಕ ಹೊರ ಹಾಕಿದ್ದಾನೆ, ಬೇರೆ ವಿಧಿಯಿಲ್ಲದೇ ಈಕೆ ಫುಟ್ಪಾತ್ ಮೇಲೆ ಆಶ್ರಯ ಪಡೆದಿದ್ದಾರೆ ಎಂದು ಬರೆದುಕೊಂಡು ಸೋನು ಸೂದ್ ರವರನ್ನು ಟ್ಯಾಗ್ ಮಾಡಿದ್ದರು. ಕೂಡಲೇ ನೆಟ್ಟಿಗರೊಬ್ಬರ ಟ್ವೀಟ್ ಕಂಡು ಪ್ರತಿಕ್ರಿಯೆ ನೀಡಿರುವ ಸೋನು ಸೂದ್ ರವರು, ಕೇವಲ ಒಂದು ದಿನದಲ್ಲಿ ಅವರ ತಲೆ ಮೇಲೆ ಛಾವಣಿಯನ್ನು ಹೊಂದಿರುತ್ತಾರೆ (ಮನೆಯ ಛಾವಣಿ), ಈ ಸಣ್ಣ ಮಕ್ಕಳು ತಮ್ಮ ಮನೆಯನ್ನು ಹೊಂದಿರುತ್ತಾರೆ ಎಂದು ಭರವಸೆ ನೀಡಿದ್ದಾರೆ. ಈ ಪ್ರತಿಕ್ರಿಯೆ ಬರುತ್ತದೆ ಎಂದು ಯಾರು ಊಹಿಸಿರಲಿಲ್ಲ, ಆದ ಕಾರಣ ಈ ಉತ್ತರವನ್ನು ಕಂಡ ನೆಟ್ಟಿಗರು ಮತ್ತೊಮ್ಮೆ ಸೋನು ಸೂದ್ ರವರನ್ನು ಹಾಡಿ ಹೊಗಳಿದ್ದಾರೆ.

Post Author: Ravi Yadav