ಬಿಗ್ ಬ್ರೇಕಿಂಗ್: ವಿಶ್ವವೇ ತುದಿಗಾಲಲ್ಲಿ ಕಾದುಕುಳಿತಿದ್ದ ಆಕ್ಸ್ಫರ್ಡ್ ಲಸಿಕೆಯ ಫಲಿತಾಂಶ ಪ್ರಕಟ ! ಭಾರತಕ್ಕೂ ಭರ್ಜರಿ ಸಿಹಿ ಸುದ್ದಿ

ಬಿಗ್ ಬ್ರೇಕಿಂಗ್: ವಿಶ್ವವೇ ತುದಿಗಾಲಲ್ಲಿ ಕಾದುಕುಳಿತಿದ್ದ ಆಕ್ಸ್ಫರ್ಡ್ ಲಸಿಕೆಯ ಫಲಿತಾಂಶ ಪ್ರಕಟ ! ಭಾರತಕ್ಕೂ ಭರ್ಜರಿ ಸಿಹಿ ಸುದ್ದಿ

ನಮಸ್ಕಾರ ಸ್ನೇಹಿತರೇ, ವಿಶ್ವದ ಎಲ್ಲೆಡೆ ಮಾನವರ ಮೇಲೆ ಮೊದಲನೇ ಕ್ಲಿನಿಕಲ್ ಪ್ರಯೋಗದಿಂದ ಬಾರಿ ಭರವಸೆ ಮೂಡಿಸಿದ್ದ ಆಕ್ಸ್ಫರ್ಡ್ ಲಸಿಕೆಯ ಎರಡನೇ ಹಂತದ ಮಾನವನ ಮೇಲಿನ ಪ್ರಯೋಗಗಳ ಫಲಿತಾಂಶ ಹೊರಬಿದ್ದಿದ್ದು ಇಡೀ ವಿಶ್ವಕ್ಕೆ ಇದೀಗ ಭರ್ಜರಿ ಸಿಹಿ ಸುದ್ದಿಯೊಂದು ಸಿಕ್ಕಿದೆ. ವಿಶ್ವದಲ್ಲಿ ವಿವಿಧ ಹಂತಗಳಲ್ಲಿ ಹಲವಾರು ಲಸಿಕೆಗಳ ಪ್ರಯೋಗ ನಡೆಯುತ್ತಿದ್ದರೂ ಕೂಡ ಆಕ್ಸ್ಫರ್ಡ್ ಲಸಿಕೆ ಭಾರಿ ಸದ್ದು ಮಾಡಿತ್ತು, ಪ್ರಾಣಿಗಳ ಮೇಲಿನ ಪ್ರಯೋಗದ ನಂತರ ಮಾನವರ ಮೇಲಿನ ಕ್ಲಿನಿಕಲ್ ಪ್ರಯೋಗದ ಮೊದಲನೇ ಹಂತದಲ್ಲಿಯೂ ಕೂಡ ಯಶಸ್ವಿ ಕಂಡ ಕಾರಣ ಇಡೀ ವಿಶ್ವವೇ ಆಕ್ಸ್ಫರ್ಡ್ ಲಸಿಕೆಯ ಕುರಿತು ಬಲವಾದ ನಂಬಿಕೆ ಇಟ್ಟಿತ್ತು.

ಇದೀಗ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗದ ಫಲಿತಾಂಶ ಹೊರಬಿದ್ದಿದ್ದು ಶೇಕಡ ನೂರರಷ್ಟು ಫಲಿತಾಂಶ ಹೊರಬಿದ್ದಿದ್ದು, ಪ್ರಯೋಗ ಮಾಡಿದ ಪ್ರತಿಯೊಬ್ಬರ ಮೇಲೆ (1000 ಜನ) ಲಸಿಕೆ ಯಶಸ್ವಿಯಾಗಿದೆ ಎಂದು ಆಕ್ಸ್ಫರ್ಡ್ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಲಸಿಕೆಯನ್ನು ಅಧಿಕೃತವಾಗಿ ಕೊರೋನಾ ಗಾಗಿ ಬಿಡುಗಡೆ ಮಾಡಲು ಇನ್ನೊಂದು ಚಿಕ್ಕ ಹಂತದ ಪ್ರಯೋಗ ಮಾಡುವುದು ಮಾತ್ರ ಬಾಕಿ ಉಳಿದಿದ್ದು ಇಲ್ಲಿಯವರೆಗೆ ಯಾರೋಬ್ಬರ ಮೇಲು ಯಾವುದೇ ಇತರ ಪ್ರಭಾವಗಳು ಬೀರಿಲ್ಲ ಹಾಗೂ ಚಿಕಿತ್ಸೆ ಪಡೆದುಕೊಂಡು ಎಲ್ಲರೂ ಗುಣಮುಖರಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಒಂದು ವೇಳೆ ಕೊನೆ ಹಂತದ ಲಸಿಕೆ ಯಶಸ್ವಿಯಾದರೇ ವಿಶ್ವ ನಿಟ್ಟುಸಿರು ಬಿಡಲಿದೆ ಹಾಗೂ ಭಾರತಕ್ಕೂ ಕೂಡ ಇದರಿಂದ ಲಾಭವಾಗಲಿದೆ.

ಯಾಕೆಂದರೆ ಆಕ್ಸ್ಫರ್ಡ್ ವಿಜ್ಞಾನಿಗಳ ಜೊತೆ ಭಾರತದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪಾಲುದಾರ ತ್ವವನ್ನು ಪಡೆದು ಕೊಂಡಿದ್ದು, ವಿಶ್ವದಲ್ಲಿಯೇ ಅತಿ ಹೆಚ್ಚು ಲಸಿಕೆಗಳನ್ನು ತಯಾರು ಮಾಡುವ ಕಂಪನಿ ಎಂಬ ಹೆಗ್ಗಳಿಕೆಗೆ ಭಾರತದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಭಾಗಿಯಾಗಿದೆ. ಆದ ಕಾರಣ ಒಂದು ವೇಳೆ ಈ ಲಸಿಕೆ ಯಶಸ್ವಿಯಾದ ತಕ್ಷಣ ಭಾರತದಲ್ಲಿ ಉತ್ಪಾದನೆ ಆರಂಭವಾಗಲಿದ್ದು ಮೊದಲ ಹಂತದಲ್ಲಿ ಭಾರತಕ್ಕೆ ಬರೋಬ್ಬರಿ 5 ಕೋಟಿ ಲಸಿಕೆಗಳು ಲಭ್ಯವಾಗಲಿವೆ. ಇನ್ನುಳಿದಂತೆ 5 ಕೋಟಿ ಲಸಿಕೆಗಳನ್ನು ವಿಶ್ವದ ಇತರ ಬಡ ಹಾಗೂ ಮಧ್ಯಮ ಆದಾಯದ ದೇಶಗಳಿಗೆ ನೀಡಲಾಗುತ್ತದೆ ಎಂಬುದು ತಿಳಿದು ಬಂದಿದೆ.