ತಿಂಗಳು ತಿಳಿದಿತ್ತು, ಇದೀಗ ಡೇಟ್ ಕೂಡ ಫಿಕ್ಸ್ ! ರಫೇಲ್ ಆಗಮನ, ನಿಯೋಜನೆ ಯಾವಾಗ, ಎಲ್ಲಿ ಗೊತ್ತಾ?

ತಿಂಗಳು ತಿಳಿದಿತ್ತು, ಇದೀಗ ಡೇಟ್ ಕೂಡ ಫಿಕ್ಸ್ ! ರಫೇಲ್ ಆಗಮನ, ನಿಯೋಜನೆ ಯಾವಾಗ, ಎಲ್ಲಿ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತೀಯ ವಾಯುಪಡೆಗೆ ಆನೆಬಲ ತುಂಬಲು ಬೇಕಾಗಿದ್ದ ರಫೇಲ್ ಯುದ್ಧ ವಿಮಾನಗಳು ಕೇವಲ ಭಾರತೀಯ ವಾಯುಪಡೆಯ ಕನಸಾಗಿರಲಿಲ್ಲ, ಅದು ಕೋಟ್ಯಂತರ ಭಾರತೀಯರ ಕನಸಾಗಿತ್ತು. ರಫೇಲ್ ಯುದ್ಧ ವಿಮಾನಗಳು ಯಾವಾಗ ಭಾರತಕ್ಕೆ ಆಗಮಿಸಲಿವೆ ಎಂದು ಎಲ್ಲರೂ ತುದಿಗಾಲಲ್ಲಿ ಕಾದು ಕುಳಿತ್ತಿದ್ದೆವು. ಇದು ನಮಗೆ ಕನಸಾಗಿದ್ದರೇ, ನೆರೆಯ ಪಾಕ್ ಹಾಗೂ ಚೀನಾ ದೇಶಗಳಿಗೆ ನ-ಡುಕ ಹುಟ್ಟಿಸಿತ್ತು. ಯಾಕೆಂದರೆ ಮಿಗ್ 21 ಬಳಸಿಕೊಂಡು ಪಾಕ್ ಬತ್ತಳಿಕೆಯಲ್ಲಿದ್ದ ಅಮೇರಿಕಾದ ಅತ್ಯಾಧುನಿಕ ಎಫ್-16 ಅನ್ನು ಉಡಾಯಿಸಿದ ಭಾರತೀಯರ ಕೈಯಲ್ಲಿ ಇನ್ನೂ ರಫೇಲ್ ಸಿಕ್ಕರೇ ಹೇಗಿರುತ್ತದೆ ಎಂಬುದನ್ನು ನೀವೇ ಊಹಿಸಿಕೊಳ್ಳಿ.

ಇಷ್ಟೆಲ್ಲಾ ಆಲೋಚನೆಗಳೊಂದಿಗೆ ಅದರಲ್ಲಿಯೂ ಗಡಿಯಲ್ಲಿ ಚೀನಾ ದೇಶ ಹಾಗೂ ಪಾಕಿಸ್ತಾನ ದೇಶಗಳ ನಡೆಗಳ ನಡುವೆ ಭಾರತಕ್ಕೆ ರಫೇಲ್ ಯುದ್ಧ ವಿಮಾನಗಳು ಅತ್ಯವಶ್ಯಕ ಎನಿಸಿದ್ದವು. ಅದೇ ಕಾರಣಕ್ಕೆ ಫ್ರಾನ್ಸ್ ದೇಶವು ಕೂಡ ತ್ವರಿತಗತಿಯಲ್ಲಿ ಹೆಚ್ಚುವರಿ ಯುದ್ಧ ವಿಮಾನಗಳನ್ನು ಕಳುಹಿಸಲು ಒಪ್ಪಿಕೊಂಡಿತ್ತು. ಜುಲೈ ತಿಂಗಳ ಕೊನೆ ವಾರದಲ್ಲಿ ಭಾರತಕ್ಕೆ ರಫೇಲ್ ಯುದ್ಧ ವಿಮಾನಗಳು ಆಗಮಿಸಲಿವೆ ಎಂಬುದು ತಿಳಿದಿತ್ತಾದರೂ ದಿನಾಂಕ ಅಥವಾ ಅವುಗಳನ್ನು ನಿಯೋಜಿಸುವ ಸ್ಥಳಗಳು ತಿಳಿದಿರಲಿಲ್ಲ.

ಇದೀಗ ಫ್ರಾನ್ಸ್ ದೇಶದಿಂದ ಅಧಿಕೃತ ಮಾಹಿತಿ ಹೊರಬಿದ್ದಿದ್ದು, 5 ರಫೇಲ್ ವಿಮಾನಗಳು ಜುಲೈ 29 ರಂದು ಭಾರತವನ್ನು ತಲುಪಲಿವೆ. ಇದರಲ್ಲಿ 2 ಸಿಂಗಲ್ ಸೀಟರ್ ಮತ್ತು 3 ಟ್ವಿನ್ ಸೀಟರ್ ವಿಮಾನಗಳು ಇರಲಿವೆ. ಈ ವಿಮಾನಗಳು ಜುಲೈ 29 ರಂದು ಅಂಬಾಲಾ ವಾಯುನೆಲೆಯಲ್ಲಿ ಇಳಿಯಲಿವೆ ಹಾಗೂ ಇವುಗಳನ್ನು ಚೀನಾ ದೇಶದ ಗಡಿಯಲ್ಲಿ ನಿಯೋಜನೆ ಮಾಡುವ ಮೂಲಕ ಗಡಿಯಲ್ಲಿ ಸಿದ್ಧವಾಗಿರಲು ತೀರ್ಮಾನಿಸಲಾಗಿದೆ. ಇನ್ನು ಈಗಾಗಲೇ ಸುಖೋಯ್ 30 , ಮಿಗ್ 29 ಹಾಗೂ ಮಿರಾಕ್ 2000 ಯುದ್ಧ ವಿಮಾನಗಳು ಗಡಿಯಲ್ಲಿ ನಿಯೋಜನೆಗೊಂಡಿವೆ. ಇವುಗಳ ಜೊತೆಗೆ ಬಲಾಢ್ಯ ಅಪಾಚೆ ಹಾಗೂ ಭಾರತ ನಿರ್ಮಿತ ಧ್ರುವ ಹೆಲಿಕ್ಯಾಪ್ಟರ್ ಗಳು ಕೂಡ ಗಡಿಯಲ್ಲಿ ಗಸ್ತು ತಿರುಗುತ್ತಿವೆ.