ಮಹತ್ವದ ಭವಿಷ್ಯ ನುಡಿದ ತಾಯಿ ಉಜ್ಜಯಿನಿ ಮಹಾಕಾಳಿ ! ಕೊರೊನ ಬಗ್ಗೆ ಕೇಳಿದಾಗ ತಾಯಿಯ ಉತ್ತರವೇನು ಗೊತ್ತಾ??

ಮಹತ್ವದ ಭವಿಷ್ಯ ನುಡಿದ ತಾಯಿ ಉಜ್ಜಯಿನಿ ಮಹಾಕಾಳಿ ! ಕೊರೊನ ಬಗ್ಗೆ ಕೇಳಿದಾಗ ತಾಯಿಯ ಉತ್ತರವೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಸಿಕಂದರಾಬಾದ್ ನಗರದ ಉಜ್ಜಯಿನಿ ತಾಯಿ ಎಂದೇ ಪ್ರಸಿದ್ದವಾಗಿರುವ ಮಹಾಕಾಳಿ (ಅಲ್ಲಿನ ಜನರು ಮಹಾಂಕಾಳಿ ಎನ್ನುತ್ತಾರೆ) ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಉತ್ಸವವನ್ನು ಏರ್ಪಡಿಸಲಾಗಿತ್ತು. ಸಂಪ್ರದಾಯದಂತೆ ಈ ವರ್ಷವೂ ಕೂಡ ರಂಗಮ್ (ಉತ್ಸವದ ಹೆಸರು) ಅನ್ನು ನೆರವೇರಿಸಲಾಯಿತು. ಇದೇ ಸಮಯದಲ್ಲಿ ದೇಶದ ಸಮಸ್ಯೆಗಳ ಹಾಗೂ ಮುಂದಿನ ಹಾದಿಯ ಬಗ್ಗೆ ತಾಯಿಯನ್ನು ಪ್ರಶ್ನಿಸಲಾಯಿತು. ತಾಯಿಯು ಭಕ್ತರ ಪ್ರಶ್ನೆಗಳಿಗೆ ಉತ್ತರ ನೀಡಿದ್ದು, ಮುಂದಿನ ಕರಾಳ ದಿನಗಳ ಕುರಿತು ತಾಯಿ ಮುನ್ಸೂಚನೆ ನೀಡಿದ್ದಾರೆ.

ಹೌದು ಸ್ನೇಹಿತರೇ, ತಾಯಿಯು ತನ್ನ ದೇವಾಲಯದ ಭಕ್ತೆ ಸ್ವರ್ಣಲತಾ ಎಂಬುವವರ ಮೂಲಕ ಭಕ್ತರ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ಎಂಬ ನಂಬಿಕೆ ಇದೆ. ಅದೇ ರೀತಿ ಸ್ವರ್ಣಲತಾ ಎಂಬುವವರ ಮೈಮೇಲೆ ತಾಯಿ ಆವರಿಸಿ ಭಕ್ತರ ಪ್ರಶ್ನೆಗಳಿಗೆ ಉತ್ತರ ನೀಡಿದರು. ದೇಶದ ಅತಿ ದೊಡ್ಡ ಸವಾಲಾಗಿರುವ ಕೊರೋನ ಬಗ್ಗೆ ತಾಯಿಯ ಮುಂದೆ ಪ್ರಶ್ನೆಯಿಟ್ಟಾಗ, ತಾಯಿ ಇದೆಲ್ಲಾ ಜನರು ಮಾಡಿದ ಪ್ರತಿಫಲ, ಅವರು ಮಾಡಿದ್ದನ್ನು ಅವರು ಅನುಭವಿಸಲೇಬೇಕು, ಪ್ರತಿಯೊಬ್ಬರು ಕರ್ಮದ ಫಲಗಳನ್ನು ಅನುಭವಿಸದೇ ಬೇರೆ ವಿಧಿಯಿಲ್ಲ ಎಂದಿದ್ದಾರೆ.

ಸಾಂಕ್ರಾಮಿಕ ರೋಗವಾದ ಕೊರೊನಯಿಂದ ಇನ್ನು ಮುಂದೆ ಕಠಿಣ ಸಮಯಗಳು ಎದುರಾಗುತ್ತವೆ. ಇದು ಇಷ್ಟಕ್ಕೆ ಮುಗಿಯುವುದಿಲ್ಲ ಎಂದು ತಾಯಿ ಭವಿಷ್ಯ ನುಡಿದಿದ್ದಾರೆ. ಇನ್ನು ಉತ್ಸವದ ಸಂಭ್ರಮಾಚರಣೆಯಲ್ಲಿ ಅಸಮಾಧಾನ ತೋರಿದ್ದು, ತನ್ನ ಭಕ್ತರಿಗೆ ವಿಶೇಷವಾದ ಪೂಜೆಯನ್ನು 5 ವಾರಗಳ ಕಾಲ ಮಾಡಿ, ಯಜ್ಞಗಳನ್ನು ನೆರವೇರಿಸಿ ಎಂದು ಸ್ವರ್ಣಲತಾ ಹೇಳಿದ್ದಾರೆ. ಈ ರೀತಿ ಮಹಾಕಾಳಿ ನುಡಿದಿರುವ ಎಲ್ಲಾ ಭವಿಷ್ಯಗಳು ನಿಜವಾಗಿದ್ದು, ಇದನ್ನು ಕಂಡ ಭಕ್ತ ವೃಂದ ಚಿಂತೆಯಲ್ಲಿ ತೊಡಗಿದ್ದಾರೆ. ಈಗಾಗಲೇ ದೇಶದಲ್ಲಿ ಕೊರೋನ ತಾಂಡವವಾಡುತ್ತಿದ್ದು ಮುಂದೆ ಹೆಚ್ಚಾದರೇ ಅದನ್ನು ನಿಯಂತ್ರಿಸುವುದು ಹೆಚ್ಚು ಕಷ್ಟವಾಗಲಿದೆ.