ಚೀನಾ ಅತಿದೊಡ್ಡ ವ್ಯವಹಾರಕ್ಕೆ ಮೊದಲ ಗುದ್ದು ! ಅಸಲಿ ಆಟ ಶುರು, ಇದು ಆರಂಭವಷ್ಟೇ ! ಚೀನಾಗೆ ಮತ್ತೊಂದು ಬಿಗ್ ಶಾಕ್ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಗಡಿಯಲ್ಲಿ ನಡೆದ ಕಹಿ ಘಟನೆಯಿಂದ ಇದೀಗ ಭಾರತೀಯರು ಎಚ್ಚೆತ್ತುಕೊಂಡು ಚೀನಾ ದೇಶಕ್ಕೆ ತಕ್ಕ ಪಾಠ ಕಲಿಸಲು ನಿರ್ಧಾರ ಮಾಡಿದ್ದಾರೆ. ಚೀನಾ ನಿರ್ಮಿತ ವಸ್ತುಗಳನ್ನು ಬಳಕೆ ಮಾಡುವುದಿಲ್ಲ ಎಂಬ ಕೂಗು ಕೇಳಿ ಬರುತ್ತಿದ್ದು ಈಗಾಗಲೇ ದಿಗ್ಗಜ ಕಂಪನಿಗಳು, ಸಾಮಾನ್ಯರು, ಸೆಲೆಬ್ರೆಟಿಗಳು ಸೇರಿದಂತೆ ಹಲವಾರು ರೀತಿಯಲ್ಲಿ ಅಭಿಯಾನಕ್ಕೆ ಬೆಂಬಲ ಸಿಕ್ಕಿದೆ. ಇದರ ನಡುವೆಯೇ ಚೀನಾ ದೇಶದ ಅತಿದೊಡ್ಡ ವ್ಯವಹಾರದ ಮೊದಲ ಹೆಜ್ಜೆಯಲ್ಲಿ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಈ ಮೂಲಕ ಭಾರತದಲ್ಲಿ ಸ್ವದೇಶೀ ಭಾರತ ಎಂಬ ಕೂಗು ಎಷ್ಟರ ಮಟ್ಟಿಗೆ ಇದೇ ಎಂಬುದು ತಿಳಿದುಬರುತ್ತಿದೆ. ಅಷ್ಟೇ ಅಲ್ಲದೇ, ಇಲ್ಲಿಯೇ ಉದ್ಯೋಗಗಳು ಸೃಷ್ಟಿಯಾಗಿ ಹಣದ ಹರಿವು ಹೆಚ್ಚಲಿದೆ. ಇದೀಗ ಈ ಅಭಿಯಾನಕ್ಕೆ ಮತ್ತೊಂದು ದಿಗ್ಗಜ ಒಕ್ಕೂಟ ಬೆಂಬಲ ನೀಡಿದ್ದು, ಇದರಿಂದ ಚೀನಾ ದೇಶದ ಚಿಕ್ಕದು ಎನಿಸುವ ಬಹುದೊಡ್ಡ ಮಾರುಕಟ್ಟೆಯ ಮೇಲೆ ಕಣ್ಣಿಡಲಾಗಿದೆ.

ಹೌದು ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಚೀನಾ ದೇಶ ಟೆಕ್ನಾಲಜಿ, ಮೊಬೈಲ್ ಫೋನ್, ಎಲೆಕ್ಟ್ರಾನಿಕ್ ವಸ್ತುಗಳು, ಆಟಿಕೆಗಳ ವಿಸ್ತಾರವಾದ ಮಾರುಕಟ್ಟೆಯನ್ನು ಭಾರತದಲ್ಲಿ ಹೊಂದಿದ್ದರೂ ಕೂಡ, ನಮಗೆ ತಿಳಿಯದಂತೆಯೇ ಚೀನಾ ದೇಶಕ್ಕೆ ಬಹುದೊಡ್ಡ ಆದಾಯ ಹರಿದು ಹೋಗುವುದು ಹಬ್ಬಗಳ ಸಮಯ ಬಂದಾಗ, ಒಂದು ಚಿಕ್ಕ ದೀಪಗಳಿಂದ ಹಿಡಿದು ದೇವರ ಮೂರ್ತಿವರೆಗೂ ಎಲ್ಲವನ್ನು ಚೀನಾ ದೇಶದಿಂದಲೇ ಆಮದು ಮಾಡಿಕೊಳ್ಳಾಗುತ್ತಿತ್ತು. ಇಡೀ ದೇಶದ ಮಧ್ಯಮ ವರ್ಗದ ಬಹುಸಂಖ್ಯಾ ಜನರು ಹಬ್ಬ ಬಂದ ತಕ್ಷಣ ಕನಿಷ್ಠ 15 ದಿನಗಳ ದುಡಿಮೆಯನ್ನು ಹಬ್ಬ ಆಚರಿಸಲು ಬಳಸುತ್ತಾರೆ. ಹೀಗಿರುವಾದ ಕೊಂಡು ಕೊಳ್ಳುವ ಪ್ರತಿಯೊಂದು ವಸ್ತುಗಳು ಚೀನಾ ದೇಶದಿಂದ ಆಮದು ಮಾಡಿಕೊಂಡರೇ ಚೀನಾ ದೇಶಕ್ಕೆ ಎಷ್ಟು ಲಕ್ಷ ಕೋಟಿ ಹಣ ಹರಿಯುತ್ತದೆ ಎಂದು ನೀವೇ ಅಂದಾಜು ಮಾಡಿಕೊಳ್ಳಿ.

ಹೀಗಿರುವಾಗ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಸಾಲು ಸಾಲು ಹಬ್ಬಗಳು ಬರುತ್ತವೆ. ಈ ಸಮಯದಲ್ಲಿ ಚೀನಾ ವಸ್ತುಗಳನ್ನು ಬಳಸಿದರಲೂ ಸಾಧ್ಯವೇ ಎಂಬ ಪ್ರಶ್ನೆ ಮೂಡಿದ್ದು ಸುಳ್ಳಲ್ಲ. ಇದನ್ನು ಅರಿತು ಕೊಂಡಿರುವ CAIT ವ್ಯಾಪಾರಿಗಳ ಒಕ್ಕೂಟವು ಮೊದಲ ಭಾಗವಾಗಿ ಇನ್ನೇನು ಕೆಲವೇ ದಿನಗಳಲ್ಲಿ ಆಚರಿಸಲಾಗುವ ರಾಕಿ ಹಬ್ಬ ಅಥವಾ ರಕ್ಷಾ ಭಂಧನ್ ಹಬ್ಬದ ಕುರಿತು ಆಲೋಚನೆ ಮಾಡಿ, ಚೀನಾ ದೇಶದಿಂದ ರಾಕಿಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ನಿರ್ಧಾರ ಮಾಡಿದೆ. ಸ್ನೇಹಿತರೇ, ಇದು ಚಿಕ್ಕದಲ್ಲ, ಪ್ರತಿವರ್ಷ ಕೇವಲ ರಾಕಿ ಹಬ್ಬಕ್ಕಾಗಿ ಚೀನಾ ದೇಶದಿಂದ 4000 ಕೋಟಿ ಬೆಲೆ ಬಾಳುವ ರಾಕಿಗಳನ್ನು ಭಾರತ ಆಮದು ಮಾಡಿಕೊಳ್ಳುತ್ತಿತ್ತು. ಈ ಬಾರಿ ಬೆಲೆ ಹೆಚ್ಚಾಗಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇತ್ತು. ಆದರೆ ಈಗ ರಾಕಿಗಳನ್ನು ಆಮದು ಮಾಡಿ ಕೊಳ್ಳಬಾರದು ಎಂದು ನಿರ್ಧರಿಸಲಾಗಿದೆ.

ಆದರೆ ಸ್ನೇಹಿತರೇ, ಕೇವಲ ಒಂದು ರಾಕಿ ಹಬ್ಬದಿಂದ 4 ಸಾವಿರ ಕೋಟಿ ಎಂದರೇ, ಇನ್ನು ದಸರಾ, ದೀಪಾವಳಿ ಗಣೇಶ ಹಬ್ಬಗಳ ಸಮಯದಲ್ಲಿ ವಿವಿಧ ಮೂರ್ತಿ, ಬೊಂಬೆ, ಪಟಾಕಿಗಳ ಆಮದು ಮೌಲ್ಯ ಎಷ್ಟಿರಬಹುದು ಎಂದರೇ ನೀವು ಅಂದಾಜು ಮಾಡಿಕೊಳ್ಳಿ. ಅದೇ ಕಾರಣಕ್ಕಾಗಿ ಅಭಿಯಾನದ ಮೊದಲನೇ ಭಾಗವಾಗಿ ರಾಕಿಗಳನ್ನು ಆಮದು ಮಾಡಿಕೊಳ್ಳದೇ ಇರಲು ನಿರ್ಧಾರ ಮಾಡಿದ್ದು, ಮುಂದೆ ಇದೇ ರೀತಿಯ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡು ಪ್ರತಿಯೊಂದು ವಸ್ತುಗಳನ್ನು ಭಾರತದಲ್ಲಿಯೇ ತಯಾರು ಮಾಡುವುದಾಗಿ CAIT ಒಕ್ಕೂಟ ತಿಳಿಸಿದೆ ಹಾಗೂ ಮುಂದಿನ ವರ್ಷದ ವೇಳೆಗೆ ಬರೋಬ್ಬರಿ 13 ಬಿಲಿಯನ್ (ಸರಿ ಸುಮಾರು 1 ಲಕ್ಷ ಕೋಟಿ) ಬೆಲೆ ಬಾಳುವ ವಸ್ತುಗಳ ಆಮದಿಗೆ ಬ್ರೇಕ್ ಹಾಕಲು ನಿರ್ಧಾರ ಮಾಡಿದ್ದೇವೆ ಎಂದು ಒಕ್ಕೂಟ ತಿಳಿಸಿದೆ. ಬರೋಬ್ಬರಿ 40000 ದೊಡ್ಡ ದೊಡ್ಡ ವ್ಯಾಪಾರಿಗಳು ಈ ಒಕ್ಕೂಟದ ಭಾಗವಾಗಿದ್ದು ಎಲ್ಲರೂ ಒಕ್ಕೊರಲ ಧ್ವನಿಯಿಂದ ಸೈನಿಕರಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

Post Author: Ravi Yadav