ಬಿಗ್ ನ್ಯೂಸ್: ಮಾತುಕತೆ ವಿಫಲ ! ಇದ್ದಕ್ಕಿದಂತೆ ಬಿಗಡಾಯಿಸಿದ ಪರಿಸ್ಥಿತಿ ! ಮಹತ್ವದ ಹೆಜ್ಜೆ ಇಟ್ಟ ಭಾರತೀಯ ಸೇನೆ

ಬಿಗ್ ನ್ಯೂಸ್: ಮಾತುಕತೆ ವಿಫಲ ! ಇದ್ದಕ್ಕಿದಂತೆ ಬಿಗಡಾಯಿಸಿದ ಪರಿಸ್ಥಿತಿ ! ಮಹತ್ವದ ಹೆಜ್ಜೆ ಇಟ್ಟ ಭಾರತೀಯ ಸೇನೆ

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಹಾಗೂ ಚೀನಾ ದೇಶಗಳ ನಡುವೆ ಗಡಿಯಲ್ಲಿ ಪರಿಸ್ಥಿತಿ ಬಿಗಾಡಿಯಿಸಿತ್ತು. ಆದರೆ ಅಜಿತ್ ದೋವಲ್ ರವರು ಚೀನಾ ದೇಶದ ರಾಯಭಾರಿಗಳ ಜೊತೆ ಮಾತುಕತೆ ನಡೆಸಿದ ನಂತರ ಚೀನಾ ದೇಶವು ಗಾಲ್ವಾನ್ ವ್ಯಾಲಿ, ಹಾಟ್ಸ್‌ಪ್ರಿಂಗ್ಸ್ ಮತ್ತು ಗೋಗ್ರಾದಲ್ಲಿ ದಲ್ಲಿ ಸೇನೆಯನ್ನು ಹಿಂತೆಗೆದುಕೊಳ್ಳಲು ಒಪ್ಪಿಗೆ ಸೂಚಿಸಿ ಹಿಂದೆ ಸರಿದಿತ್ತು. ಇದರ ನಂತರ ಭಾರತ ಸೇನೆ ಕೂಡ ಗಡಿಯಿಂದ ಹಿಂದೆ ಸರಿಯುತಿತ್ತು. ಈ ಎಲ್ಲಾ ವಿದ್ಯಮಾನಗಳ ಬಳಿಕ ಸೈನಿಕರ ಜೊತೆ ಯುದ್ಧ ಭೂಮಿಯಲ್ಲಿ ಮಾತುಕತೆ ನಡೆಸಿ, ಆತ್ಮಸ್ಟೈರ್ಯ ತುಂಬಲು ಹಾಗೂ ಸೇನೆಯ ಅಧಿಕಾರಗಳ ಜೊತೆ ಮಾತುಕತೆ ನಡೆಸಲು ರಾಜನಾಥ್ ಸಿಂಗ್ ರವರು ಸಿದ್ಧತೆ ನಡೆಸಿದ್ದಾರೆ. ಆದರೆ ಚೀನಾ ದೇಶ ಇದೀಗ ಪಂಗೊಂಗ್ ತ್ಸೊದಲ್ಲಿನ ಫಿಂಗರ್ 4 ಪ್ರದೇಶದಿಂದ ಹಿಂದೆ ಸರಿಯಲು ನಿರಾಕರಿಸಿದೆ. ಚೀನಾ ದೇಶದ ನಡೆಗೆ ಕೆಲವೇ ಕ್ಷಣಗಳಲ್ಲಿ ಭಾರತ ದೇಶ ತಕ್ಕ ಉತ್ತರ ನೀಡಿದೆ.

ಮೊದಲಿಗೆ ಗಾಲ್ವಾನ್ ವ್ಯಾಲಿ, ಹಾಟ್ಸ್‌ಪ್ರಿಂಗ್ಸ್ ಮತ್ತು ಗೊಗ್ರಾ ಪ್ರದೇಶಗಳಿಂದ ಎರಡು ದೇಶಗಳು ಸೇನೆ ಹಿಂತೆದುಕೊಳ್ಳಲು ಒಪ್ಪಿಕೊಂಡಿದ್ದವು. ಆದರೆ ಇದೀಗ ಭಾರತ ದೇಶ ಸಂಪೂರ್ಣ ಗಡಿಯುದ್ದಕ್ಕೂ ಚೀನಾ ಸೇನೆ ಹಿಂದೆ ಸರಿಯಬೇಕು ಎಂದು ಒತ್ತಾಯ ಮಾಡಿದೆ. ಇದರ ಕುರಿತು ಭಾರತ ಮತ್ತು ಚೀನಾ ನಡುವಿನ 14 ಗಂಟೆಗಳ ಸುದೀರ್ಘ ನಾಲ್ಕನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಬುಧವಾರ ಕೊನೆಗೊಂಡಿತು. ಇದೇ ಸಮಯದಲ್ಲಿ ಶಾಂತಿ ಸ್ಥಾಪನೆ ಮಾಡುತ್ತೇವೆ ಎಂಬುದನ್ನು ಮರೆತು ಚೀನಾ ದೇಶ ಫಿಂಗರ್ 4( ಪಂಗೊಂಗ್ ತ್ಸೊ ಪ್ರದೇಶ) ನಿಂದ ಹಿಂದೆ ಸರಿಯುವುದಿಲ್ಲ ಎಂದು ಉದ್ದಟತನ ಮೆರೆದಿದೆ. ಇದರಿಂದ ಭಾರತೀಯ ಸೇನೆಯು ಪೂರ್ವ ಲಡಾಕ್ ನಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ.

ಹೌದು, ಚೀನಾ ದೇಶದ ಜೊತೆ ಮಾತುಕತೆ ಕೊನೆಗೊಂಡ ಕೂಡಲೇ ಎಚ್ಚೆತ್ತುಕೊಂಡಿರುವ ಭಾರತೀಯ ಸೇನೆಯು ಚೀನಾದ ಸೈನ್ಯದ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಹೈ ಅಲರ್ಟ್ ಘೋಷಣೆ ಮಾಡಿದೆ. ತಕ್ಷಣವೇ ಪೂರ್ವ ಲಡಾಖ್‌ನಲ್ಲಿ ಸುಮಾರು 60,000 ಸೈನಿಕರನ್ನು ನಿಯೋಜಿಸಿ, ಭೀಮ್ ಟ್ಯಾಂಕ್‌ಗಳು, ಅಪಾಚೆ ಹೆಲಿಕಾಪ್ಟರ್‌ಗಳು, ಸುಖೋಯ್ ಫೈಟರ್ ಜೆಟ್‌ಗಳು, ಚಿನೂಕ್ ಮತ್ತು ರುದ್ರ ಹೆಲಿಕಾಪ್ಟರ್‌ಗಳನ್ನು ಎಲ್‌ಎಸಿ ಬಳಿ ನಿಯೋಜಿಸಿದೆ ಎಂದು ಜಿ ನ್ಯೂಸ್ ವರದಿ ಮಾಡಿದೆ. ಒಟ್ಟಿನಲ್ಲಿ ಚೀನಾ ದೇಶ ಈ ನಡೆಯಿಂದಾಗಿ ತಿಳಿಯಾಗಿದ್ದ ಗಡಿ, ಇದೀಗ ಮತ್ತೊಮೆ ಕಾವು ಏರತೊಡಗಿದೆ. ಈಗಾಗಲೇ ಹಲವಾರು ದೇಶಗಳ ಜೊತೆ ಖ್ಯಾತೆ ತೆಗೆದು, ಯುದ್ಧದ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದ್ದರೂ ಕೂಡ ಚೀನಾ ದೇಶಕ್ಕೆ ಇನ್ನು ಬುದ್ದಿ ಬಂದಂತೆ ಕಾಣುತಿಲ್ಲ. ಒಂದು ವೇಳೆ ಇದು ಹೀಗೆ ಮುಂದುವರೆದರೇ ಚೀನಾ ದೇಶಕ್ಕೆ ಭಾರತೀಯ ಸೇನೆಯು ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.