ಬಿಗ್ ಬ್ರೇಕಿಂಗ್: ಸುಶಾಂತ್ ಪ್ರಕರಣದಲ್ಲಿ ಮಹತ್ವದ ತಿರುವು ಕೊಡಲಿದ್ದಾರೆಯೇ ಅಮಿತ್ ಶಾ? ನಡೆಯುತ್ತಿರುವುದಾದರೂ ಏನು ಗೊತ್ತಾ?

ಬಿಗ್ ಬ್ರೇಕಿಂಗ್: ಸುಶಾಂತ್ ಪ್ರಕರಣದಲ್ಲಿ ಮಹತ್ವದ ತಿರುವು ಕೊಡಲಿದ್ದಾರೆಯೇ ಅಮಿತ್ ಶಾ? ನಡೆಯುತ್ತಿರುವುದಾದರೂ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆ ಅಕ್ಷರಸಹ ಬಾಲಿವುಡ್ ಅನ್ನು ತಲ್ಲಣ ಗೊಳಿಸಿದೆ. ದಿನಕೊಂದು ತಿರುವು ಪಡೆದುಕೊಳ್ಳುತ್ತಿರುವ ಘಟನೆಯನ್ನು ಪೊಲೀಸರು ಯಾವುದೇ ಸಾಕ್ಷಿ ಇಲ್ಲ, ಅನುಮಾನ ಕಂಡು ಬರುತ್ತಿಲ್ಲ ಎಂದು ತನಿಖೆ ಮುಗಿಸಿ ಅಧಿಕೃತ ಆದೇಶ ಹೊರಡಿಸಲು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೆ ಸುಶಾಂತ್ ಸಿಂಗ್ ಅಭಿಮಾನಿಗಳು ಸೇರಿದಂತೆ ಇನ್ನಿತರ ಕೆಲವು ಸೆಲೆಬ್ರೆಟಿಗಳು ಇದಕೆಲ್ಲ ಕಾರಣ ಬಾಲಿವುಡ್ ನ ಕೆಲವು ಮಂದಿ ಎಂದು ವಾದ ಮಂಡಿಸಿದ್ದಾರೆ. ದೇಶದ ಎಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕೂಡಲೇ ಸಿಬಿಐ ಗೆ ವಹಿಸಬೇಕು ಎಂಬ ಮಾತುಗಳು ಕೇಳಿಬಂದಿವೆ. ಅಷ್ಟೇ ಅಲ್ಲದೇ ಸುಶಾಂತ್ ಸಿಂಗ್ ಅಭಿಮಾನಿಗಳು, ಸಲ್ಮಾನ್ ಖಾನ್ ಸೇರಿದಂತೆ ಕರಣ್ ಜೋಹರ್, ಮಹೇಶ್ ಭಟ್ ಹಾಗೂ ಇನ್ನಿತರ ಕೆಲವರ ಮೇಲೆ ಸ್ವಜನ ಪಕ್ಷಪಾತ ನಡೆಯುತ್ತಿದೆ ಇವರಿಗೆ ಬುದ್ದಿ ಕಲಿಸದೇ ಬಿಡುವುದಿಲ್ಲ ಎಂದು ಅಭಿಯಾನಗಳನ್ನು ನಡೆಸುತ್ತಿದ್ದಾರೆ.

ಈ ಅಭಿಯಾನದಿಂದ ಕರಣ್ ಜೋಹರ್ ರವರ ಪ್ರತಿಷ್ಠಿತ ಕಾರ್ಯಕ್ರಮವಾದ ಕಾಫಿ ವಿಥ್ ಕರಣ್ ಶೋ ಕೂಡ ಇನ್ನು ಮುಂದೆ ನಡೆಸುವುದಿಲ್ಲ ಎಂದು ಚಾನೆಲ್ ಅಧಿಕೃತ ಘೋಷಣೆ ಮಾಡಿದೆ. ಅಷ್ಟೇ ಅಲ್ಲದೇ, ಕರಣ್ ಜೋಹರ್ ರವರು ಅಭಿಯಾನಗಳಿಂದ ಮನನೊಂದು ನನ್ನ ಬೆಂಬಲಕ್ಕೆ ಬಾಲಿವುಡ್ ನಿಂತಿಲ್ಲ ಎಂದು ಹೇಳಿ ಪ್ರತಿಷ್ಠಿತ ಮಾಮಿ ನಿರ್ದೇಶಕ ಮಂಡಳಿಯ ಸ್ಥಾನದಿಂದ ನಿರ್ಗಮಿಸಿದ್ದಾರೆ. ಸ್ವತಃ ಈ ಮಂಡಳಿಯ ಅಧ್ಯಕ್ಷೆ ದೀಪಿಕಾ ಪಡುಕೋಣೆರವರು ಮನವಿ ಮಾಡಿದರೂ ಕೂಡ ಕರಣ್ ಜೋಹರ್ ರವರು ಒಪ್ಪದೇ ರಾಜೀನಾಮೆ ನೀಡಿದ್ದಾರೆ. ಅಂದಿನಿಂದ ಎಲ್ಲೂ ಕರಣ್ ಜೋಹರ್ ಹೊರ ಬರುತಿಲ್ಲ ಎಂದು ಅವರ ಆಪ್ತರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ಈ ಪ್ರಕರಣದಲ್ಲಿ ಸುಬ್ರಮಣ್ಯನ್ ಸ್ವಾಮಿ ರವರು ಕೂಡ ಎಂಟ್ರಿ ಕೊಟ್ಟಿದ್ದು, ಸಿಬಿಐ ಗೆ ವಹಿಸಲು ಸಾಧ್ಯವೇ ಎಂಬುದರ ಕುರಿತು ಇದೀಗ ಸ್ವಾಮಿ ರವರ ತಂಡ ಮಾಹಿತಿಗಳನ್ನು ಕಲೆಹಾಕುತ್ತಿದೆ.

ಈ ಎಲ್ಲಾ ವಿದ್ಯಮಾನಗಳ ನಡುವೆ ಸುಶಾಂತ್ ಸಿಂಗ್ ರಜಪೂತ್ ರವರ ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿ ಅವರು ಇದ್ದಕ್ಕಿದ್ದಂತೆ ಸುಶಾಂತ್ ಸಿಂಗ್ ರವರ ಘಟನೆಯ ಕುರಿತು ಹೊಸ ಮನವಿ ಮುಂದಿಟ್ಟಿದ್ದಾರೆ. ಹೌದು ಇದೀಗ ಅಮಿತ್ ಶಾ ರವರಿಗೆ ಹೊಸ ಮನವಿ ಮಾಡಿರುವ ರಿಯಾ ಚಕ್ರವರ್ತಿ ಅವರು, ಕೂಡಲೇ ಈ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕು, ಸುಶಾಂತ್ ಸಿಂಗ್ ರವರಿಗೆ ಈ ರೀತಿಯ ಹೆಜ್ಜೆ ಇಡಲು ಯಾವ ಒತ್ತಡವು ಪ್ರೇರಿಪಿಸಿತು ಎಂಬುದರ ಕುರಿತು ಸಂಪೂರ್ಣ ತನಿಖೆ ನಡೆಯಬೇಕು ಎಂದಿದ್ದಾರೆ. ಈಗಾಗಲೇ ಕೇಂದ್ರ ಕೂಡ ಇದರ ಕುರಿತು ಆಸಕ್ತಿ ತೋರಿದೆ ಎನ್ನಲಾಗುತ್ತಿದೆ. ಯಾಕೆಂದರೆ ಇದು ಕೋಟ್ಯಂತರ ಜನ ಕೂಗಾಗಿದ್ದು, ಸಾಂವಿಧಾನಿಕವಾಗಿ ಅನುವು ಮಾಡಿದರೇ ಖಂಡಿತಾ ಅಮಿತ್ ಶಾ ಬಿಡುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಒಟ್ಟಿನಲ್ಲಿ ಇಷ್ಟು ದಿವಸಗಳ ಬಳಿಕ ಅಮಿತ್ ಶಾ ರವರ ಹೆಸರು ಕೇಳಿ ಬಂದಿದ್ದು ಇವರು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ ಎಂದು ಎಲ್ಲರಿಗೂ ತಿಳಿದಿದೆ. ಒಂದು ವೇಳೆ ಅದೇ ನಡೆದು, ಸ್ವಾಮಿ ಹಾಗೂ ರಿಯಾ ಚಕ್ರವರ್ತಿ ಅವರ ಮನವಿಯಂತೆ CBI ಗೆ ವಹಿಸಿದಲ್ಲಿ ಸ್ವಜನ ಪಕ್ಷಪಾತದ ಮುಖವಾಡಗಳು ಹೊರಬೀಳಲಿವೆ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ.