ಆಕ್ಸ್ಫರ್ಡ್ ಲಸಿಕೆ ಕುರಿತು ಹೊರಬೀಳಲಿದೆ ಮಹತ್ವದ ಸುದ್ದಿ ! ಯಶಸ್ವಿಯಾದರೇ ಭಾರತಕ್ಕೆ ಬಹುದೊಡ್ಡ ಲಾಭ ! ಹೇಗೆ ಗೊತ್ತಾ?

ಆಕ್ಸ್ಫರ್ಡ್ ಲಸಿಕೆ ಕುರಿತು ಹೊರಬೀಳಲಿದೆ ಮಹತ್ವದ ಸುದ್ದಿ ! ಯಶಸ್ವಿಯಾದರೇ ಭಾರತಕ್ಕೆ ಬಹುದೊಡ್ಡ ಲಾಭ ! ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ವಿಶ್ವದ ಎಲ್ಲಾ ದೇಶಗಳು ತಮ್ಮ ಪ್ರಯತ್ನಗಳಷ್ಟೇ ಅಲ್ಲಾ, ವಿಶ್ವದ ಯಾವುದಾದರ ವಿಜ್ಞಾಯಿಗಳ ಪ್ರಯತ್ನ ಸಫಲವಾಗಿ ಕೊರೊನ ಲಸಿಕೆ ಸಿದ್ದವಾದರೆ ಸಾಕು ಎಂದು ಕಾದು ಕುಳಿತಿದ್ದಾರೆ. ಅದರಂತೆಯೇ ಹಲವಾರು ದೇಶಗಳಲ್ಲಿ ವಿಜ್ಞಾನಿಗಳು ತಯಾರಿಸಿರುವ ಲಸಿಕೆಗಳು ಮಾನವನ ಮೇಲೆ ಪ್ರಯೋಗವಾಗುತ್ತಿವೆ. ಇವುಗಳಲ್ಲಿ ಕೆಲವು ಮೊದಲಂತೆ ಹಂತದಲ್ಲಿ ಇದ್ದರೇ, ಇನ್ನು ಕೆಲವು ಹಲವಾರು ಹಂತಗಳನ್ನು ದಾಟಿ ಕೊನೆಯ ಸುತ್ತಿನಲ್ಲಿ ಇವೆ. ಇವುಗಳಲ್ಲಿ ಯಾವುದಾದರೂ ಒಂದು ಲಸಿಕೆ ಯಶಸ್ವಿಗೊಂಡರೆ ಖಂಡಿತಾ ಜಗತ್ತು ನಿಟ್ಟುಸಿರು ಬಿಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಭಾರತದಲ್ಲಿಯೂ ಕೂಡ ಹಲವಾರು ವಿವಿಧ ಲಸಿಕೆಗಳು ಮಾನವನ ಮೇಲೆ ಪ್ರಯೋಗವಾಗುತ್ತಿವೆ. ಇದರ ನಡುವೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ದಿಂದ ಒಳ್ಳೆ ಸುದ್ದಿ ಬರುವ ಸಾಧ್ಯತೆ ಇದೆ.

ಇದೀಗ ಬ್ರೆಜಿಲ್ ನಲ್ಲಿ ಮಾನವರ ಮೇಲೆ ಪ್ರಯೋಗಗಳನ್ನು ನಡೆಸುತ್ತಿದ್ದು ಮೊದಲನೇ ಕ್ಲಿನಿಕಲ್ ಪ್ರಯೋಗದಿಂದಲೂ ಉತ್ತಮ ಫಲಿತಾಂಶವನ್ನು ನೀಡಿವೆ. ಇದೀಗ ಕೊನೆಯ ಹಂತದ ಪ್ರಯೋಗ ಕೂಡ ಮುಗಿದಿದ್ದು, ಇಂದು ಈ ಕುರಿತು ಅಧಿಕೃತ ಫಲಿತಾಂಶ ಪ್ರಕಟಣೆಯಾಗುತ್ತದೆ. ಆದ್ದರಿಂದ ಇದೀಗ ಇಡೀ ವಿಶ್ವದ ಚಿತ್ತ ಇಂಗ್ಲೆಂಡ್ ನತ್ತ ನೆಟ್ಟಿದೆ. ಒಂದು ವೇಳೆ ಕೊನೆಯ ಕ್ಲಿನಿಕಲ್ ಪ್ರಯೋಗದಲ್ಲಿಯೂ ಉತ್ತಮ ಫಲಿತಾಂಶ ಕಂಡು ಬಂದರೇ ಲಸಿಕೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ. ಈ ಲಸಿಕೆ ಯಶಸ್ವಿಗೊಂಡರೆ ಭಾರತಕ್ಕೆ ಬಹುದೊಡ್ಡ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಹಲವಾರು ಕಾರಣಗಳಿಂದ ಈ ಲಸಿಕೆಯ ಫಲಿತಾಂಶ ಭಾರತಕ್ಕೆ ಬಹುಮುಖ್ಯವಾಗಿದೆ.

ಹೌದು ಸ್ನೇಹಿತರೇ, ಇದೀಗ ಈ ಲಸಿಕೆ ಯಶಸ್ವಿಯಾದರೇ, ಭಾರತದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಈ ಆಕ್ಸ್‌ಫರ್ಡ್ ಯೋಜನೆಯಲ್ಲಿ ಪಾಲುದಾರತ್ವವನ್ನು ಪಡೆದುಕೊಂಡಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ವಿಶ್ವದಲ್ಲಿಯೇ ಅತಿ ಹೆಚ್ಚು ಲಸಿಕೆಗಳನ್ನು ತಯಾರಿಸುವ ಕಂಪನಿ ಎಂಬ ಹೆಗ್ಗಳಿಕೆ ಹೊಂದಿದೆ. ಅಷ್ಟೇ ಅಲ್ಲದೇ, ಅಧಿಕೃತವಾಗಿ ತಯಾರಿಸಲು ಆದೇಶ ಬಂದ ಕೆಲವೇ ಕೆಲವು ದಿನಗಳಲ್ಲಿ ಭಾರತದಲ್ಲಿ ಒಮ್ಮೆಲೇ 10 ಕೋಟಿ ಲಸಿಕೆಗಳನ್ನು ಉತ್ಪಾದಿಸಲಾಗುತ್ತದೆ. ಈ ಪೈಕಿ 5 ಕೋಟಿ ಲಸಿಕೆಗಳು ಭಾರತಕ್ಕೆ ಉಳಿದ 5 ಕೋಟಿ ಬಡ ಮತ್ತು ಮಧ್ಯಮ ಆದಾಯದ ದೇಶಗಳಿಗೆ ನೀಡಲಾಗುತ್ತದೆ. ಇನ್ನು ಬೆಲೆಯನ್ನು ನೋಡುವುದಾದರೇ ಯಾವುದೇ ಲಾಭದ ಬಗ್ಗೆ ಆಲೋಚನೆ ಮಾಡದೇ ಕೇವಲ ಲಸಿಕೆಗೆ ತಗುಲುವ ವೆಚ್ಚವನ್ನು ಮಾತ್ರ ತೆಗೆದು ಕೊಳ್ಳಲಾಗುತ್ತದೆ, ಇದರಿಂದ ಪ್ರತಿಯೊಬ್ಬರಿಗೂ ಕೈಗೆಟುವ ಬೆಲೆಯಲ್ಲಿ ನೀಡಲಾಗುತ್ತದೆ ಎಂದು ಸೀರಮ್ ಸಂಸ್ಥೆಯ CEO ತಿಳಿಸಿದ್ದಾರೆ.