ಶಿವಸೇನೆಗೆ ಬಿಗ್ ಶಾಕ್ ! ‘ಮಹಾ’ ಬಿರುಕು ! ಬೆನ್ನ ಹಿಂದೆ ಆಟ ಆರಂಭಿಸಿ ಗೆದ್ದ ಎನ್ಸಿಪಿ ! ನಡೆದದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಮಹಾರಾಷ್ಟ್ರ ರಾಜ್ಯದಲ್ಲಿ ಎನ್ಸಿಪಿ, ಕಾಂಗ್ರೆಸ್ ಹಾಗೂ ಶಿವಸೇನೆ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಮೂಲಕ ಸರ್ಕಾರ ರಚಿಸಿವೆ. ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರ ಇಟ್ಟು ಮೂರು ಪಕ್ಷಗಳು ಮೈತ್ರಿ ಮಾಡಿಕೊಂಡಿವೆ.

ಆದರೆ ಇದೀಗ ಈ ಮೈತ್ರಿಯಲ್ಲಿ ಬಹು ದೊಡ್ಡ ಬಿರುಕು ಉಂಟಾಗಿದ್ದು, ಶಿವಸೇನಾ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೌದು ಸ್ನೇಹಿತರೇ, ಸಾಮಾನ್ಯವಾಗಿ ರಾಜಕೀಯದಲ್ಲಿ ವಿಪಕ್ಷಗಳ ನಾಯಕರನ್ನು ಸೆಳೆಯುವುದು ಇಂದಿನ ರಾಜಕೀಯದಲ್ಲಿ ಸಾಮಾನ್ಯವಾಗಿದೆ. ಆದರೆ ಇಲ್ಲಿ ಮೈತ್ರಿ ಪಕ್ಷಗಳ ನಡುವೆಯೇ ರಾಜಕಾರಣಿಗಳನ್ನು ಸೆಳೆಯುವ ತಂತ್ರ ಆರಂಭವಾಗಿದೆ.

ಇಂದು ಶಿವಸೇನಾ ಪಕ್ಷದ ಐದು ಕಾರ್ಪೋರೇಟರ್ ಗಳು ಶಿವಸೇನಾ ಪಕ್ಷವನ್ನು ತೊರೆದು ಎನ್ಸಿಪಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಇವರನ್ನು ಆಹ್ವಾನಿಸಲು ವಿಶೇಷವಾಗಿ ಎನ್ಸಿಪಿ ಪಕ್ಷದ ಪ್ರಮುಖ ನಾಯಕ ಹಾಗೂ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವರ್ ರವರು ಉಪಸ್ಥಿತರಿದ್ದರು. ಇದರಿಂದ ಶಿವಸೇನಾ ಹಾಗೂ ಎನ್ಸಿಪಿ ಪಕ್ಷಗಳ ನಡುವಿನ ಕಾಳಗ ತಾರಕಕ್ಕೇರಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ಕೈವಾಡವಿದೆ ಎಂಬ ಆರೋಪಗಳು ಕೂಡ ಕೇಳಿ ಬಂದಿವೆ. ಕೊರೋನಾ ಸಮಯದಲ್ಲೂ ಕೂಡ ರಾಜಕೀಯ ಚಟುವಟಿಕೆಗಳು ಮುಂದುವರೆದಿದ್ದು, ಶಿವಸೇನಾ ಪಕ್ಷವು ತನ್ನ ರಾಜಕಾರಣಿಗಳನ್ನು ಎನ್ಸಿಪಿ ಪಕ್ಷ ಸೆಳೆಯುತ್ತಿದೆ ಎಂದು ಆರೋಪ ಮಾಡಿದೆ.

Post Author: Ravi Yadav